ಬೆಂಗಳೂರು: ದ್ವಿತೀಯ ಪಿಯು ಪೂರಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಶೇ.41.28ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕೆಲ ವಿದ್ಯಾರ್ಥಿಗಳಿಗೆ ಕೊರೊನಾ ನಡುವೆ ವಾರ್ಷಿಕ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಪೂರಕ ಪರೀಕ್ಷೆಯಲ್ಲಿ ಬರೋಬ್ಬರಿ 2,12,678 ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ 87,784 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸೆಪ್ಟೆಂಬರ್ 7 ರಿಂದ 19ರವರೆಗೆ ಒಟ್ಟು 305 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಮೌಲ್ಯಮಾಪನವು 11 ಶಿಬಿರದಲ್ಲಿ 3,162 ಮೌಲ್ಯಮಾಪಕರಿಂದ ಬೆಂಗಳೂರಿನಲ್ಲಿ ನಡೆದಿತ್ತು.
ಇನ್ನು ಫಲಿತಾಂಶವನ್ನು www.karresults.nic.in ನಲ್ಲಿ ಪ್ರಕಟಿಸಲಾಗಿದೆ. ಪೂರಕ ಪರೀಕ್ಷೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಶೇ.45ರಷ್ಟು ಫಲಿತಾಂಶ ಗಳಿಸಿದ್ದಾರೆ. ಇನ್ನು ಬಾಲಕರು ಶೇ. 38.30ರಷ್ಟು ಪಾಸ್ ಆಗಿದ್ದಾರೆ. ಗ್ರಾಮಾಂತರ ಜಿಲ್ಲೆಯಲ್ಲಿ 45.78%, ನಗರದಲ್ಲಿ 39.95%ರಷ್ಟು ಫಲಿತಾಂಶ ಬಂದಿದೆ.
ವಿಭಾಗ | ಹಾಜರು | ಪಾಸು | ಶೇಕಡವಾರು | |
ಕಲಾ | 90,637 | 40,911 | 45.14% | |
ವಾಣಿಜ್ಯ | 74,477 | 29,062 | 39.02% | |
ವಿಜ್ಞಾನ | 47,564 | 17,811 | 37.45% |
ಮಾಧ್ಯಮವಾರು ಮಾಹಿತಿ
ಮಾಧ್ಯಮ | ಹಾಜರು | ಪಾಸು | ಶೇಕಡವಾರು |
ಕನ್ನಡ | 1,20,262 | 54,613 | 45.41% |
ಇಂಗ್ಲಿಷ್ | 92,416 | 33,171 | 35.89% |
ಉತ್ತರ ಪತ್ರಿಕೆ ಸ್ಕ್ಯಾನಿಂಗ್ ಪ್ರತಿಗಾಗಿ ಅಕ್ಟೋಬರ್ 10ರಿಂದ 16ರವರೆಗೆ ಅರ್ಜಿ ಸಲ್ಲಿಸಬಹುದು. ಸ್ಕ್ಯಾನಿಂಗ್ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ ರೂ.530 ಹಾಗೂ ಮರುಮೌಲ್ಯಮಾಪನದ ಶುಲ್ಕ ಪ್ರತಿ ವಿಷಯಕ್ಕೆ 1,670 ನಿಗದಿ ಮಾಡಲಾಗಿದೆ. ಅಂಕಗಳ ಮರುಎಣಿಕೆಗೆ ಶುಲ್ಕ ಇರುವುದಿಲ್ಲ.