ETV Bharat / state

ನೈರುತ್ಯ ರೈಲ್ವೆ ವತಿಯಿಂದ ನಾಡ ಹಬ್ಬ ದಸರಾಗೆ ಸುವಿಧಾ ವಿಶೇಷ ರೈಲು ಸೇವೆ - ಇತ್ತೀಚಿನ ಬೆಂಗಳೂರು ಸುದ್ದಿ

ದಸರಾ ಅಂಗವಾಗಿ ನೈರುತ್ಯ ರೈಲ್ವೆ ವತಿಯಿಂದ ವಿಶೇಷ ರೈಲು ಸೇವೆ ಕಲ್ಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ‌ಕೆಲವು ಮಾರ್ಗದಲ್ಲಿ ವಿಶೇಷ ರೈಲು ಕಲ್ಪಿಸಿದ್ದರೆ, ಮತ್ತೆ ಕೆಲವು ಕಡೆ ಮಾರ್ಗ ವಿಸ್ತರಿಸಲಾಗಿದೆ.

ನೈರುತ್ಯ ರೈಲ್ವೇ ವತಿಯಿಂದ ನಾಡಹಬ್ಬಕ್ಕೆ ಸುವಿಧಾ ವಿಶೇಷ ರೈಲು ಸೇವೆ
author img

By

Published : Sep 28, 2019, 4:49 PM IST

ಬೆಂಗಳೂರು: ನಾಡ ಹಬ್ಬ ದಸರಾ ಅಂಗವಾಗಿ ನೈರುತ್ಯ ರೈಲ್ವೆ ವತಿಯಿಂದ ವಿಶೇಷ ರೈಲು ಸೇವೆ ಕಲ್ಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.

ಮೈಸೂರು-ವಿಜಯಪುರ-ಮೈಸೂರು ನಡುವೆ ದಸರಾ ಅಂಗವಾಗಿ ವಿಶೇಷ ರೈಲು ಸೇವೆ ಕಲ್ಪಿಸಲಾಗಿದೆ. ಅಕ್ಟೋಬರ್ 4ರಂದು ಮೈಸೂರಿನಿಂದ ಮಧ್ಯಾಹ್ನ 12-50ಕ್ಕೆ ಹೊರಡಲಿರುವ ರೈಲು ಮರು ದಿನ ಬೆಳಗ್ಗೆ 9-55ಕ್ಕೆ ವಿಜಯಪುರ ತಲುಪಲಿದೆ.‌ ತುಮಕೂರು-ಚಿತ್ರದುರ್ಗ-ಹೊಸಪೇಟೆ-ಬಾದಾಮಿ-ಆಲಮಟ್ಟಿ ಮಾರ್ಗವಾಗಿ ಸಂಚರಿಸಲಿರುವ ರೈಲು ಅದೇ ಮಾರ್ಗದಲ್ಲಿ ಅಕ್ಟೋಬರ್ 8ರಂದು ಸಂಜೆ ಆರು ಗಂಟೆಗೆ ವಿಜಯಪುರದಿಂದ ಹೊರಟು ಮರು ದಿನ ಮಧ್ಯಾಹ್ನ 1:05ಕ್ಕೆ ಮೈಸೂರು‌ ತಲುಪಲಿದೆ‌‌.

ರೈಲು ಸಂಖ್ಯೆ 82661 ಯಲಹಂಕ- ಕಲಬುರಗಿ ಮಾರ್ಗದ ನಡುವೆ ಸುವಿಧಾ ವಿಶೇಷ ರೈಲು ಸೇವೆ ಕಲ್ಪಿಸಿದ್ದು, ಅಕ್ಟೋಬರ್ 4 ಮತ್ತು 7ರಂದು ಯಲಹಂಕದಿಂದ ಕಲಬುರಗಿಗೆ ಗೌರಿಬಿದನೂರು, ಹಿಂದೂಪುರ, ಧರ್ಮವರಂ, ಅನಂತಪುರ, ಗುಂಟ್ಕಲ್, ಮಂತ್ರಾಲಯ, ರಾಯಚೂರು, ಯಾದಗಿರಿ ಮಾರ್ಗದ ಮೂಲಕ ಸಂಚರಿಸಲಿದೆ.‌ ಅದೇ ಮಾರ್ಗದ ಮೂಲಕ ರೈಲು ಕಲಬುರಗಿಯಿಂದ ಅಕ್ಟೋಬರ್ 5 ಮತ್ತು 8ರಂದು ಯಲಹಂಕಕ್ಕೆ ಸೇವೆ ನೀಡಲಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಯಶವಂತಪುರ-ಮಂಗಳೂರು ನಡುವಿನ ರೈಲು ಸಂಚಾರವನ್ನ ಕಾರವಾರದವರೆಗೆ ವಿಸ್ತರಣೆ ಮಾಡಲಾಗಿದೆ. ಅಕ್ಟೋಬರ್ 4ರಂದು ರಾತ್ರಿ 10:20ಕ್ಕೆ ಯಶವಂತಪುರ ರೈಲು ನಿಲ್ದಾಣದಿಂದ ಸುವಿಧಾ ಸಂಚರಿಸಲಿದ್ದು, ಸುಬ್ರಹ್ಮಣ್ಯ, ಮಂಗಳೂರು, ಮುರುಡೇಶ್ವರ ಮಾರ್ಗವಾಗಿ ಮರುದಿನ ಮಧ್ಯಾಹ್ನ 2:30ಕ್ಕೆ ಕಾರವಾರ ತಲುಪಲಿದೆ. ‌ಅದೇ ಮಾರ್ಗವಾಗಿ ಅಕ್ಟೋಬರ್ 8ರಂದು ಸಂಜೆ 5:15ಕ್ಕೆ ಕಾರವಾರದಿಂದ ಹೊರಡಲಿರುವ ರೈಲು ಮರು ದಿನ ಬೆಳಗ್ಗೆ 8 ಗಂಟೆಗೆ ಯಶವಂತಪುರ ನಿಲ್ದಾಣ ತಲುಪಲಿದೆ.‌

ಅದೇ ರೀತಿ ರಾಜ್ಯದ ಇತರೆ ಭಾಗದಿಂದ ರೈಲು ಮೂಲಕ ಮೈಸೂರು ತಲುಪಲು ಸುವಿಧಾ ಸೇವೆಗಳನ್ನ ಒದಗಿಸಲು ನೈರುತ್ಯ ರೈಲ್ವೆ ಮುಂದಾಗಿದೆ. ‌ಕೆಲವು ಮಾರ್ಗದಲ್ಲಿ ವಿಶೇಷ ರೈಲು ಕಲ್ಪಿಸಿದ್ದರೆ, ಮತ್ತೆ ಕೆಲವು ಕಡೆ ಮಾರ್ಗವನ್ನು ವಿಸ್ತರಿಸಲಾಗಿದೆ.

Intro:ನೈರುತ್ಯ ರೈಲ್ವೇ ವತಿಯಿಂದ ನಾಡಹಬ್ಬಕ್ಕೆ ಸುವಿಧಾ ವಿಶೇಷ ರೈಲು ಸೇವೆ...

ಬೆಂಗಳೂರು: ನಾಡ ಹಬ್ಬ ದಸರಾ ಅಂಗವಾಗಿ ನೈರುತ್ಯ ರೈಲ್ವೇ ವತಿಯಿಂದ ವಿಶೇಷ ರೈಲು ಸೇವೆ ಕಲ್ಪಿಸಲಾಗಿದೆ.. ಮೈಸೂರು- ವಿಜಯಪುರ- ಮೈಸೂರು ನಡುವೆ ವಿಶೇಷ ದಸರಾ ಅಂಗವಾಗಿ ರೈಲು ಸೇವೆ ಕಲ್ಪಿಸಲಾಗಿದೆ.. ಅಕ್ಟೋಬರ್ 4 ರಂದು ಮೈಸೂರಿನಿಂದ ಮಧ್ಯಾಹ್ನ 12-50ಕ್ಕೆ ಮೈಸೂರಿನಿಂದ ಹೊರಡಲಿರುವ ರೈಲು ಮರು ದಿನ ಬೆಳಗ್ಗೆ 9-55ಕ್ಕೆ ವಿಜಯಪುರ ತಲುಪಲಿದೆ.‌
ತುಮಕೂರು-ಚಿತ್ರದುರ್ಗ-ಹೊಸಪೇಟೆ-ಬಾದಮಿ-ಆಲಮಟ್ಟಿ ಮಾರ್ಗವಾಗಿ ಸಂಚಾರಿಲಿರುವ ರೈಲು ಅದೇ ಮಾರ್ಗದಲ್ಲಿ ಅಕ್ಟೋಬರ್ 8 ರಂದು ಸಂಜೆ ಆರು ಗಂಟೆಗೆ ವಿಜಯಪುರ ದಿಂದ ಹೊರಟು ಮರು ದಿನ ಮಧ್ಯಾಹ್ನ 1:05 ಕ್ಕೆ ಮೈಸೂರು‌ ತಲುಪಲಿದೆ‌‌..

ರೈಲು ಸಂಖ್ಯೆ 82661 ಯಲಹಂಕ- ಕಲರ್ಬುಗಿ ಮಾರ್ಗದ ನಡುವೆ ಸುವಿಧಾ ವಿಶೇಷ ರೈಲ್ವೇ ಸೇವೆ ಕಲ್ಪಿಸಿದ್ದು, ಅಕ್ಟೋಬರ್ 4 ಮತ್ತು 7 ರಂದು ಯಲಹಂಕ ದಿಂದ ಕಲರ್ಬುಗಿಗೆ ಗೌರಿಬಿದನೂರು, ಹಿಂದೂಪುರ, ಧರ್ಮವರಂ, ಅನಂತಪುರ, ಗುಂಟ್ಕಲ್, ಮಂತ್ರಾಲಯ, ರಾಯಚೂರು, ಯದಗಿರಿ ಮಾರ್ಗದ ಮೂಲಕ ಸಂಚಾರಿಸಲಿದೆ.‌
ಅದೇ ಮಾರ್ಗದ ಮೂಲಕ ರೈಲು ಕರ್ಲಬುಗಿಯಿಂದ ಅಕ್ಟೋಬರ್ 5 ಮತ್ತು 8 ರಂದು ಯಲಹಂಕಕ್ಕೆ ಸೇವೆ ನೀಡಲಿದೆ..

ಇನ್ನು ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದಿಂದ ಕಾರವಾರ ಕ್ಕೆ ಅಕ್ಟೋಬರ್ 7 ರಂದು ರಾತ್ರಿ 11;55ಕ್ಕೆ ಸುವಿದಾ ವಿಶೇಷ ರೈಲು ವ್ಯವಸ್ಥೆ ಕಲ್ಪಿಸಲಾಗಿದೆ.. ಕುಣಿಗಲ್, ಶ್ರವಣಬೆಳಗೊಳ, ಸಕಲೇಶಪುರ, ಸುಬ್ರಹ್ಮಣ್ಯ, ಮಂಗಳೂರು, ಉಡುಪಿ, ಬೈಂದೂರು, ಮಾರ್ಗದ ಮೂಲಕ ವಿಶೇಷ ರೈಲು ಕಾರವಾರ ತಲುಪಲಿದೆ..
ಅಕ್ಟೋಬರ್ 5 ರಂದು ಸಂಜೆ 5 ಗಂಟೆಗೆ ಕಾರವಾರದಿಂದ ಯಲಹಂಕಕ್ಕೆ ವಿಶೇಷ ರೈಲು ಸೌಲಭ್ಯ ಕಲ್ಪಿಸಲಾಗಿದೆ..

ಪ್ರಯಾಣಿಕರ ಅನುಕೂಲಕ್ಕಾಗಿ ಯಶವಂತಪುರ- ಮಂಗಳೂರು ನಡುವಿನ ರೈಲು ಸಂಚಾರವನ್ನ ಕಾರವಾರ ದವರೆಗೆ ವಿಸ್ತರಣೆ ಮಾಡಲಾಗಿದೆ.. ಅಕ್ಟೋಬರ್ 4 ರಂದು ರಾತ್ರಿ 10;20ಕ್ಕೆ ಯಶವಂತಪುರ ರೈಲು ನಿಲ್ದಾಣದಿಂದ ಸುವಿಧಾ ಸಂಚಾರಿಸಲಿದ್ದು, ಸುಬ್ರಹ್ಮಣ್ಯ, ಮಂಗಳೂರು, ಮುರುಡೇಶ್ವರ ಮಾರ್ಗವಾಗಿ ಮರುದಿನ ಮಧ್ಯಾಹ್ನ 2;30ಕ್ಕೆ ಕಾರವಾರ ತಲುಪಲಿದೆ..‌
‌ಅದೇ ಮಾರ್ಗವಾಗಿ ಅಕ್ಟೋಬರ್ 8 ರಂದು ಸಂಜೆ 5-15 ಕ್ಕೆ ಕಾರವಾರ ದಿಂದ ಹೊರಡಲಿರುವ ರೈಲು ಮರು ದಿನ ಬೆಳಗ್ಗೆ 8 ಗಂಟೆಗೆ ಯಶವಂತಪುರ ನಿಲ್ದಾಣ ತಲುಪಲಿದೆ.‌

ಅದೇ ರೀತಿ ರಾಜ್ಯದ ಇತರೆ ಭಾಗದಿಂದ ರೈಲು ಮೂಲಕ ಮೈಸೂರು ತಲುಪಲು ಸುವಿಧಾ ಸೇವೆಗಳನ್ನ ಒದಗಿಸಲು ನೈರುತ್ಯ ರೈಲ್ವೆ
ಮುಂದಾಗಿದೆ.‌ಕೆಲವು ಮಾರ್ಗದಲ್ಲಿ ವಿಶೇಷ ರೈಲು ಕಲ್ಪಿಸಿದ್ದರೆ, ಮತ್ತೆ ಕೆಲವು ಕಡೆ ಮಾರ್ಗವನ್ನು ವಿಸ್ತರಿಸಲಾಗಿದೆ..

KN_BNG_2_SUVIDHA_SPECIAL_DASARA_SCRIPT_7201801
Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.