ETV Bharat / state

ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಹಗರಣ: ಪ್ರಕರಣಕ್ಕೆ 2 ವರ್ಷ, ಠೇವಣಿದಾರರಿಂದ ಪತ್ರ ಚಳವಳಿ

ಶ್ರೀ ಗುರು ರಾಘವೇಂದ್ರ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್‌ ಹಗರಣ ಬೆಳಕಿಗೆ ಬಂದು ಇಂದಿಗೆ 2 ವರ್ಷ ಕಳೆದಿದೆ. ಈ ಹಿನ್ನೆಲೆ ಠೇವಣಿದಾರರು ಪ್ರತಿಭಟನೆ ನಡೆಸಿದ್ದಾರೆ.

ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಹಗರಣ
ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಹಗರಣ
author img

By

Published : Jan 10, 2022, 5:54 PM IST

ಬೆಂಗಳೂರು: ಶ್ರೀ ಗುರು ರಾಘವೇಂದ್ರ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್‌ ವಂಚನೆ ಹಗರಣ ಬೆಳಕಿಗೆ ಬಂದು ಇಂದಿಗೆ ಎರಡು ವರ್ಷ ಕಳೆದಿರುವ ಹಿನ್ನೆಲೆ, ಬ್ಯಾಂಕ್‌ ನ ಷೇರುದಾರರು ಮತ್ತು ಠೇವಣಿದಾರರ ಹಿತರಕ್ಷಣಾ ವೇದಿಕೆಯಿಂದ ಬಸವನಗುಡಿಯ ನೆಟ್ಟಕಲ್ಲಪ್ಪ ಸರ್ಕಲ್ ಬಳಿ ಇರುವ ಶ್ರೀ ಗುರು ರಾಘವೇಂದ್ರ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್‌ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.

ಠೇವಣಿದಾರರ ಸಂಪೂರ್ಣ ಹಣ ವಾಪಸ್‌ ನೀಡುವಂತೆ, ನ್ಯಾಯ ಕೊಡಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುವ ಮೂಲಕ ಪತ್ರ ಚಳವಳಿ ನಡೆಸಿದರು. ಜೊತೆಗೆ ಹರಿ ಗೋವಿಂದಾ ಎಂದು ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿ ಸುಬ್ರಹ್ಮಣ್ಯ ಅವರ ಹೆಸರನ್ನೂ ಸೇರಿಸಿ ವ್ಯಂಗ್ಯವಾಗಿ ಸಂಕಷ್ಟ ಕೀರ್ತನೆ ಹಾಡಿದರು.

ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಹಗರಣ

ಇದನ್ನೂ ಓದಿ: ಆನ್​ಲೈನ್​ ಲೋನ್ ಕರೆ ಬಂದ್ರೆ ಸತ್ತಿದ್ದಾನೆ ಎಂದು ಹೇಳಿ: ಮಂಗಳೂರಲ್ಲಿ ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ

ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್​​​ನ ಷೇರುದಾರರು ಮತ್ತು ಠೇವಣಿದಾರರ ಹಿತರಕ್ಷಣಾ ವೇದಿಕೆಯ ಮಹಾ ಪೋಷಕರಾದ ಡಾ. ಶಂಕರ್ ಗುಹಾ ದ್ವಾರಕನಾಥ್ ಬೆಳ್ಳೂರು ಮಾತನಾಡಿ, ಇಂದು ಅತ್ಯಂತ ಕರಾಳ ದಿನ. ಇವತ್ತು ಸಾವಿರಾರು ಜನ ಯುವಕರು ಬಲವಂತವಾಗಿ ಓದುವುದನ್ನ ಬಿಟ್ಟು ಕೆಲಸಕ್ಕೆ ಬರಲಿಕ್ಕೆ ನಾಂದಿ ಹಾಡಿದಂತಹ ದಿನ. ನೂರು ಜನರಿಗೆ ಸಾವನ್ನು ಕೊಟ್ಟಂತಹ ದಿನ. ಸಾವಿರಾರು ಮಂದಿಯ ಬದುಕು ಶೂನ್ಯವಾದ ದಿನ. ವಿದ್ಯಾರ್ಥಿಗಳು ಓದುವುದನ್ನು ಬಿಟ್ಟು ಕೆಲಸಕ್ಕೆ ಸೇರಿದ ದಿನ. ಇಂದಿಗೆ ಶ್ರೀ ಗುರು ರಾಘವೇಂದ್ರ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ಹಗರಣ ಬೆಳಕಿಗೆ ಬಂದು ಎರಡು ವರ್ಷಗಳಾಯ್ತು. ನೂರು ಜನ ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಜನರ ಬದುಕು ಬೀದಿಗೆ ಬಂದಿದೆ. ದೈನಂದಿನ ಜೀವನ ನಿರ್ವಹಣೆ ನಡೆಸಲಾಗದೆ ಹಲವರು ಪರದಾಡುತ್ತಿದ್ದಾರೆ ಎಂದು ಹೇಳಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.