ETV Bharat / state

ಪ್ರಿಂಟಿಂಗ್ ಪ್ರೆಸ್ ಮಾಲೀಕ ಹತ್ಯೆ ಪ್ರಕರಣ: ಆರೋಪಿ ಜೊತೆಗಿದ್ದ ಸಲಿಂಗಕಾಮವೇ ಹತ್ಯೆಗೆ ಕಾರಣವಾಯ್ತಾ ?

author img

By

Published : Mar 6, 2023, 9:52 PM IST

ಪ್ರಿಂಟಿಂಗ್ ಪ್ರೆಸ್ ಮಾಲೀಕ ಲಿಯಾಕತ್ ಆಲಿಖಾನ್ ಕೊಲೆ ಪ್ರಕರಣ ಸಂಬಂಧ ಆರೋಪಿ ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದು, ಇಬ್ಬರ ನಡುವಿದ್ದ ಸಲಿಂಗಕಾಮವೇ ಕೊಲೆಗೆ ಕಾರಣ ಎಂಬುದನ್ನು ಪತ್ತೆ ಹಚ್ಚಿದ್ದಾರೆ.

ಲಿಯಾಕತ್ ಖಾನ್ ದೇಹ ಸಾಗಿಸುತ್ತಿರುವುದು
ಲಿಯಾಕತ್ ಖಾನ್ ದೇಹ ಸಾಗಿಸುತ್ತಿರುವುದು

ಬೆಂಗಳೂರು: ಚಂದ್ರಾ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಫೆಬ್ರವರಿ 28ರಂದು ನಡೆದಿದ್ದ ಪ್ರಿಂಟಿಂಗ್ ಪ್ರೆಸ್ ಮಾಲೀಕ ಲಿಯಾಕತ್ ಆಲಿಖಾನ್ ಕೊಲೆ ಪ್ರಕರಣ ಸಂಬಂಧ ಆರೋಪಿಯನ್ನ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಇಬ್ಬರ ನಡುವಿದ್ದ ಸಲಿಂಗಕಾಮವೇ ಕಾರಣ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಚಂದ್ರಾಲೇಔಟ್ ಒಂದನೇ ಹಂತದ ನಿವಾಸವೊಂದರಲ್ಲಿ ವಾಸವಾಗಿದ್ದ ಲಿಯಾಕತ್ ಎಂಬಾತನ ಪರಿಚಯಸ್ಥನಾಗಿದ್ದ ಇಲಿಯಾಸ್ ಹತ್ಯೆ ಮಾಡಿದ ಆರೋಪದಡಿ ಬಂಧಿಸಲಾಗಿತ್ತು. ಬಂಧನ ಭೀತಿಯಿಂದ ಹತ್ಯೆ ಬಳಿಕ ಥೈರಾಯಿಡ್ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಇಂದು ಡಿಸ್ಚಾರ್ಜ್ ಆಗುತ್ತಿದ್ದಂತೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ 43 ವರ್ಷದ ಲಿಯಾಕತ್ ಹಾಗೂ 26 ವರ್ಷದ ಇಲಿಯಾಸ್ ನಡುವೆ ಎರಡು ವರ್ಷಗಳಿಂದ ಹೋಮೋ ಸೆಕ್ಸ್ ಸಂಬಂಧ ಹೊಂದಿದ್ದರು‌. ಲಿಯಾಕತ್ ಗೆ ಮದುವೆ ಆಗಿ ಎರಡು ಮಕ್ಕಳಿದ್ದರೂ ಕೊಲೆಯಾಗುವ ಎರಡು ದಿನಗಳ ಹಿಂದಷ್ಟೇ ಮುಸ್ಕಾನ್ ಎಂಬಾಕೆ ಜೊತೆ ಎರಡನೇ ಮದುವೆಯಾಗಿದ್ದ. ಮತ್ತೊಂದೆಡೆ ಇಲಿಯಾಸ್​ಗೆ ನಿಗದಿಯಾಗಿದ್ದ ಎಂಗೇಜ್​ಮೆಂಟ್​ ರದ್ದಾಗಿತ್ತು‌. ಲಿಯಾಕತ್ ಸಹ ಎರಡನೇ‌ ಮದುವೆ ಮಾಡಿಕೊಂಡಿರುವ ಬಗ್ಗೆ ಅಸಮಾಧಾನಗೊಂಡಿದ್ದ. ಸಲಿಂಗಕಾಮದ ಬಗ್ಗೆ ಎಲ್ಲರಿಗೂ ಗೊತ್ತಾದರೆ ಕಷ್ಟವಾಗಲಿದೆ. ಅಲ್ಲದೇ ತನ್ನ ಜೀವನ ಮುಂದೆ ಹೇಗೆ ಎಂಬುದರ ಬಗ್ಗೆ ಚಿಂತಾಕ್ರಾಂತನಾಗಿದ್ದ‌.

ಈ ಮಧ್ಯೆ ಎರಡನೇ ಮದುವೆಯಾದ ಎರಡು ದಿನಗಳ ಬಳಿಕ‌ ಅಂದರೆ ಫೆಬ್ರುವರಿ 28 ರಂದು ನಾಯಂಡಹಳ್ಳಿ ಬಳಿಯ ಮತ್ತೊಂದು ಮನೆಗೆ ಕರೆಯಿಸಿಕೊಂಡಿದ್ದ. ಅದರಂತೆ ಇಲಿಯಾಸ್ ಭೇಟಿಯಾಗಿ ಆತನೊಂದಿಗೆ ದೈಹಿಕ‌ ಸಂಪರ್ಕ ಬೆಳೆಸಿದ್ದ. ಅನಂತರ ತನ್ನನ್ನ‌ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದ ಕ್ಯಾತೆ ತೆಗೆದಿದ್ದ. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಜಗಳ ತಾರಕಕ್ಕೇರಿ ಕೋಪದಿಂದ ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದ. ಬಳಿಕ ಥೈರಾಯಿಡ್ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : ದೇವರ ದರ್ಶನ ಮುಗಿಸಿ ವಾಪಸ್​ ಆಗುತ್ತಿದ್ದ ವೇಳೆ ಮರಕ್ಕೆ ಡಿಕ್ಕಿ ಹೊಡೆದ ಕಾರು: ಇಬ್ಬರ ಸಾವು

ಪತ್ನಿ ಹಾಗೂ ಇಬ್ಬರ ಮಕ್ಕಳೊಂದಿಗೆ ವಾಸವಾಗಿದ್ದ ಲಿಯಾಕತ್ ಖಾನ್ ಹಲವು ವರ್ಷಗಳಿಂದ ಗಂಗೊಂಡನಹಳ್ಳಿಯಲ್ಲಿ ರಾಯಲ್‌ ಕಮ್ಯೂನಿಕೇಷನ್ ಎಂಬ ಹೆಸರಿನ ಪ್ರಿಂಟಿಂಗ್ ಪ್ರೆಸ್​ಗೆ ಮಾಲೀಕನಾಗಿದ್ದ. ಜೋಹರ್, ವಸೀಂ ಹಾಗೂ‌ ಇಲಿಯಾಜ್ ಖಾನ್​ನೊಂದಿಗೆ ಆರ್ಥಿಕ ಪಾಲುದಾರರಾಗಿದ್ದರು. ಕೆಲಸ ಮುಗಿಸಿ ಪ್ರತಿದಿನ ನಾಗರಭಾವಿಯಲ್ಲಿರುವ ಜಿಮ್ ತೆರಳಿ ನಂತರ ಮನೆಗೆ ಹೋಗುತ್ತಿದ್ದರು.‌ ಫೆ. 28ರ ಸಂಜೆ ಜಿಮ್​ಗೆ ತೆರಳಿದ ಲಿಯಾಕತ್ ರಾತ್ರಿ 11 ಗಂಟೆಯಾದರೂ ಮನೆಗೆ ತೆರಳಿರಲಿಲ್ಲ. ಆತಂಕಗೊಂಡ ಪುತ್ರ ಕುಟುಂಬಸ್ಥರು ನಾಯಂಡಹಳ್ಳಿ ಚೆಟ್ಟಿಸ್ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿರುವ ಮನೆಗೆ ಹೋಗಿ ತೆರಳಿದಾಗ ಬರ್ಬರವಾಗಿ ಹತ್ಯೆಯಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಇದನ್ನೂ ಓದಿ : ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್: ಎರಡೂವರೆ ತಿಂಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಶಂಕಿತ ಉಗ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.