ಬೆಂಗಳೂರು: ಬಿಬಿಎಂಪಿಯ ಎರಡು ತ್ಯಾಜ್ಯ ಸಂಸ್ಕರಣಾ ಘಟಕ ಮುಚ್ಚಿರುವುದಕ್ಕೆ ಹಾಗೂ ಸಗಟು ತ್ಯಾಜ್ಯ ಉತ್ಪಾದಕರಿಂದ ಬಿಬಿಎಂಪಿ ಮಿಶ್ರ ತ್ಯಾಜ್ಯ ಸಂಗ್ರಹಿಸುತ್ತಿರುವುದಕ್ಕೆ ಬಿಬಿಎಂಪಿ ಆಯುಕ್ತರಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ನೋಟಿಸ್ ಜಾರಿ ಮಾಡಿದೆ.
![Pollution Control Board Noticed BBMP](https://etvbharatimages.akamaized.net/etvbharat/prod-images/kn-bng-05-kspcb-letter-7202707_31102020233514_3110f_1604167514_944.jpg)
ನೋಟಿಸ್ ಜಾರಿ ಮಾಡಿದ 30 ದಿನಗಳೊಳಗೆ ಸಮರ್ಪಕ ಯೋಜನೆ ರೂಪಿಸಿ ವರದಿ ನೀಡುವಂತೆ ತಿಳಿಸಿದೆ. ವಾಣಿಜ್ಯ ಉದ್ದಿಮೆಗಳು, ಮಳಿಗೆಗಳು, ಬೃಹತ್ ವಸತಿ ಸಮುಚ್ಚಯಗಳು, ಮಾಲ್‌ಗಳಿಂದ ಮಿಶ್ರ ಕಸ ಸಂಗ್ರಹಿಸುತ್ತಿರುವುದಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ.
![Pollution Control Board Noticed BBMP](https://etvbharatimages.akamaized.net/etvbharat/prod-images/kn-bng-05-kspcb-letter-7202707_31102020233514_3110f_1604167514_927.jpg)
ಹಾಗೇಯೇ ಸ್ಥಳೀಯರ ವಿರೋಧದಿಂದ ಸುಬ್ಬರಾಯನಪಾಳ್ಯ ಹಾಗೂ ಸೀಗೆಹಳ್ಳಿ ಘಟಕ ಮುಚ್ಚಿದ್ದು, ಹಸಿ ಕಸ ಸಂಸ್ಕರಣೆಗೆ ಆಡ್ಡಿಯಾಗುತ್ತಿದ್ದು, ಘಟಕಗಳ ಶೀಘ್ರ ಆರಂಭಕ್ಕೆ ಕ್ರಮವಹಿಸಲು ಸೂಚಿಸಿದೆ.