ETV Bharat / state

ಅಂಧ ದಂಪತಿಯ ಮಗು ಕಿಡ್ನಾಪ್​ ಕೇಸ್​: ಕಂದ ಪೋಷಕರ ಮಡಿಲು ಸೇರಿದ್ದೇಗೆ?

ಬೆಂಗಳೂರಿನ ಮೆಜೆಸ್ಟಿಕ್​ನಲ್ಲಿ ಕಿಡ್ನಾಪ್​ ಆಗಿದ್ದ ಅಂಧ ದಂಪತಿ ಮಗು ಮರಳಿ ಅಮ್ಮನ ಮಡಿಲು ಸೇರಿದೆ. ಪತ್ರಿಕೆಯಲ್ಲಿ ಪ್ರಕಟವಾದದ್ದನ್ನು ನೋಡಿದ ಮಹಿಳೆವೋರ್ವಳು ಪೊಲೀಸ್​ ಠಾಣೆಗೆ ತಂದು ಕಂದನನ್ನು ಒಪ್ಪಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಮಗುವನ್ನು ಅದರ ಅಪ್ಪ-ಅಮ್ಮನ ಮಡಿಲು ಸೇರಿಸಲಾಗಿದೆ ಎಂದು ಡಿಸಿಪಿ ರವಿ ಡಿ ಚೆನ್ನಣ್ಣವರ್​ ತಿಳಿಸಿದ್ದಾರೆ.

author img

By

Published : Apr 30, 2019, 7:15 PM IST

Updated : May 1, 2019, 10:40 AM IST

ಕೊನೆಗೂ ಪೋಷಕರ ಮಡಿಲು ಸೇರಿದ ಕಂದ

ಬೆಂಗಳೂರು: ಮೆಜೆಸ್ಟಿಕ್​ನಲ್ಲಿ ಅಂಧ ದಂಪತಿಯ ಮಗುವಿನ ಕಿಡ್ನಾಪ್ ಪ್ರಕರಣ ಪೊಲೀಸರ ಸಹಕಾರದಿಂದ ಸುಖಾಂತ್ಯ ಕಂಡಿದೆ.

ಮೆಜೆಸ್ಟಿಕ್​ನಲ್ಲಿ ರಾಯಚೂರು ಮೂಲದ ಬಸವಾರಾಜ್ ಹಾಗೂ ಚಿನ್ನು ಎಂಬ ಅಂಧ ದಂಪತಿಯ ಮಗುವನ್ನು ಕಿಡ್ನಾಪ್ ಮಾಡಲಾಗಿದೆ ಎಂದು ದೂರು ದಾಖಲಾಗಿತ್ತು.

ಕೊನೆಗೂ ಪೋಷಕರ ಮಡಿಲು ಸೇರಿದ ಕಂದ

ಈ ಸಂಬಂಧ ಡಿಸಿಪಿ ರವಿ ಡಿ ಚೆನ್ನಣ್ಣನವರ ಮಾತನಾಡಿ, ಈ ಪ್ರಕರಣವನ್ನ ನಾವು ಗಂಭೀರವಾಗಿ ಪರಿಗಣಿಸಿದ್ದೆವು. ಎಸಿಪಿ, ಇನ್ಸ್​ಪೆಕ್ಟರ್​, ಸಬ್ ಇನ್ಸ್​ಪೆಕ್ಟರ್ ತಂಡ ರಚನೆ ಮಾಡಿದ್ದೆವು. ಆದ್ರೆ, ‌ನಿನ್ನೆ ಮಹಿಳೆವೋರ್ವಳು ಠಾಣೆಗೆ ಹಾಜರಾಗಿ‌, ನನ್ನ ತಂಗಿ ಪಾರ್ವತಮ್ಮಗೆ ಈ‌ ಮಗು ಸಿಕ್ಕಿದ್ದು, ಮಗು ತಮ್ಮ ಬಳಿ ಇದೆ ಎಂದು ತಿಳಿಸಿದ್ದರು.

ಆ ಮಹಿಳೆಯ ತಂಗಿ ಶೌಚಾಲಯಕ್ಕೆ ಹೋಗುವಾಗ ಅವರ ಕೈಗೆ ಇನ್ನೋರ್ವ ಮಹಿಳೆ ಮಗುವನ್ನು ಕೊಟ್ಟಿದ್ದರಂತೆ. ನಂತರ ಪತ್ರಿಕೆಯಲ್ಲಿ ಪ್ರಕಟವಾದ್ದದ್ದನ್ನು ನೋಡಿ ಮಹಿಳೆ ಪೊಲೀಸರಿಗೆ ಮಗು ಒಪ್ಪಿಸಿದ್ದಾರೆ. ಆ ಮಹಿಳೆಯ ಕಾರ್ಯಕ್ಕೆ ಚೆನ್ನಣ್ಣನವರ ಶ್ಲಾಘನೆ ವ್ಯಕ್ತಪಡಿಸಿದರು. ಆದ್ರೆ ಅನುಮಾನದ ಹಿನ್ನೆಲೆ ತನಿಖೆ ಕೂಡ ಮುಂದುವರೆದಿದೆ ಎಂದು ಮಾಹಿತಿ ನೀಡಿದರು.

Intro:ಅಂಧ ದಂಪತಿಯ ಮಗು ಕಿಡ್ನಾಪ್ ಪ್ರಕರಣ
ತಂದೆ ತಾಯಿ‌ ಮಡಿಲಿಗೆ ಸೇರಿಸಿದ ಪೊಲೀಸರು

ನಿನ್ನೆ ಭರತ್ ವಿಶುವಲ್ ಹಾಕಿದ್ರು ಬಳಸಿ

ಭವ್ಯ

ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ರಾಯಚೂರು ಮೂಲದ ಬಸವಾರಾಜ್ ಹಾಗೂ ಚಿನ್ನು ಅಂಧ ದಂಪತಿಯ ಮಗು ಕಿಡ್ನಾಪ್ ಪ್ರಕರಣ ಸುಖಾಂತ್ಯ ಕಂಡಿದೆ.‌ಉಪ್ಪಾರಪೇಟೆ ಪೊಲೀಸರ‌ ತಂಡ ಮಗು ವನ್ನ ಪತ್ತೆ ಹಚ್ಚಿ ತಾಯಿ ತಂದೆ ಮಡಿಲಿಗೆ ಸೇರಿಸಿದ್ದಾರೆ.
ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ಮಗುವಿಗೆ ನೀರು ಕುಡಿಸೋ ನೆಪದಲ್ಲಿ ಮಗು ಕಿಡ್ನಾಪ್ ಮಾಡಲಾಗಿತ್ತು...

ಇನ್ನು ಪಶ್ಚಿಮ ವಿಭಾಗ ರವಿಡಿ ಚೆನ್ನಣವರು ಮಾತಡಿ ಈ ಪ್ರಕರಣವನ್ನ ನಾವು ಗಂಭೀರವಾಗಿ ಪರಿಗಣಿಸಿ ಎಸಿಪಿ, ಇನ್ಸ್ಪೆಕ್ಟರ್ , ಸಬ್ ಇನ್ಸ್ಪೆಕ್ಟರ್ ತಂಡ ರಚನೆ ಮಾಡಿದ್ವಿ. ಆದ್ರೆ‌ನಿನ್ನೆ ಮಹಿಳೆಯೊಬ್ಬರು ಠಾಣೆಗೆ ಹಾಜರಾಗಿ‌ನನ್ನ ತಂಗಿ ಪಾರ್ವತಮ್ಮಗೆ ಈ‌ಮಗು ಸಿಕ್ಕಿದ್ದು ಮಗು ನನ್ಮ ಬಳಿ ಇದೆ. ನನ್ನ ತಂಗಿ ಮೆಜೆಸ್ಟಿಕ್ ಬಳಿ ಟಾಯ್ಲೇಟ್ ಹೋಗುವ ಸಂಧರ್ಭದಲ್ಲಿ‌ ಮಗುವನ್ನ ಮಹಿಳೆಯೊಬ್ಬಳು ನನ್ನ ತಂಗಿ ಕೈಗೆ ಕೊಟ್ಟಿದ್ದಾರೆ. ಹಾಗಾಗಿ‌ನಾನು ಪತ್ರಿಕೆಯಲ್ಲಿ ನೋಡಿ ಈ ಮಗುವನ್ನು ಕೊಡ್ತಿದ್ದಿನಿ ಎಂದ್ರು. ಇನ್ನು ಇವ್ರ ಕಾರ್ಯಕ್ಕೆ ಪೊಲೀಸರು ಶ್ಲಾಘನೀಯ ವ್ಯಕ್ತಪಡಿಸಿದ್ದಾರೆ. ಮತ್ತೋಂದೆಡೆ ಪೊಲೋಸರಿಗೆ ಅನುಮಾನ ಕೂಡ ಇದ್ದು ತನಿಖೆ ಮುಂದುವರೆಸಿದ್ದಾರೆ.

Body:KN_BNG_11_30_DCPWEST_7204498-BHAVYA_Conclusion:KN_BNG_11_30_DCPWEST_7204498-BHAVYA_
Last Updated : May 1, 2019, 10:40 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.