ಬೆಂಗಳೂರು: ಲಾಕ್ಡೌನ್ ತೆರವು ಬೆನ್ನಲ್ಲೇ ಗೌಪ್ಯವಾಗಿ ಮಾದಕ ವಸ್ತು ಮಾರಾಟದ ಮಾಹಿತಿ ಮೇರೆಗೆ ಸಿಟಿ ಮಾರುಕಟ್ಟೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಆರೋಪಿಯನ್ನು ಬಂಧಿಸಿದ್ದಾರೆ.
ಸಿವಿ ಗಾರ್ಡನ್ನ ಬೇರಾರಾಮ್ (33) ಬಂಧಿತ ವ್ಯಕ್ತಿ. ಈತನಿಂದ 1 ಕೆ.ಜಿ 50 ಗ್ರಾಂ ಅಫೀಮು, ನಗದು, ಮೊಬೈಲ್ ಫೋನ್, ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ವಿರುದ್ಧ 130/2021 ಕಲಂ 17b 21b ಎನ್.ಡಿ.ಪಿ.ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.