ETV Bharat / state

ಕ್ಷುಲ್ಲಕ ಕಾರಣಕ್ಕೆ ರೌಡಿಶೀಟರ್ ಕೊಲೆ: ಇಬ್ಬರು ಆರೋಪಿಗಳ ಬಂಧನ​

ಯಲಹಂಕದ ಮಾರುತಿ ನಗರದಲ್ಲಿನ ರೌಡಿ ಶೀಟರ್​ ದಿಲೀಪ್‌ ಎಂಬುವವರ ಮೇಲೆ ಕೊಂಡಪ್ಪ ಲೇಔಟ್ ಮುಖ್ಯರಸ್ತೆಯ ಬಳಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

accused
author img

By

Published : Sep 28, 2019, 4:18 AM IST

ಬೆಂಗಳೂರು: ರೌಡಿಶೀಟರ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದರು ಎನ್ನಲಾದ ಮೂವರು ಆರೋಪಿಗಳನ್ನು ಯಲಹಂಕ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಚಾಂದ್‌ಪಾಷ, ಧನಂಜಯ್ ಹಾಗೂ ನವೀನ್ ಯಾದವ್ ಬಂಧಿತ ಆರೋಪಿಗಳು. ಸೆಪ್ಟೆಂಬರ್ 23ರಂದು ಯಲಹಂಕದ ಮಾರುತಿ ನಗರದಲ್ಲಿನ ರೌಡಿ ಶೀಟರ್​ ದಿಲೀಪ್‌ ಎಂಬುವವರ ಮೇಲೆ ಕೊಂಡಪ್ಪ ಲೇಔಟ್ ಮುಖ್ಯರಸ್ತೆಯ ಬಳಿ ದುಷ್ಕರ್ಮಿಗಳು ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಯಲಹಂಕ ಪೊಲೀಸರು ಖಚಿತ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆಪಾದಿತರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

Intro:Body:ಕ್ಷುಲ್ಲಕ ಕಾರಣಕ್ಕಾಗಿ ರೌಡಿಶೀಟರ್ ನನ್ನೇ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳ ಸೆರೆ ಹಿಡಿದ ಸೆರೆ

ಬೆಂಗಳೂರು: ರೌಡಿಶೀಟರ್ ಕೊಲೆ ಪ್ರಕರಣ ಭಾಗಿಯಾಗಿದ್ಧ ಮೂವರು ಆರೋಪಿಗಳನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಯಲಹಂಕದ ಚಾಂದ್‌ಪಾಷ, ಧನಂಜಯ್ ಹಾಗೂ ನವೀನ್ ಯಾದವ್ ಬಂಧಿತ ಆರೋಪಿಗಳು.
ಯಲಹಂಕದ ಮಾರುತಿ ನಗರದ ರೌಡಿ ದಿಲೀಪ್‌ನನ್ನು ಸೆ.23ರ ತಡರಾತ್ರಿ ಕೊಂಡಪ್ಪ ಲೇಔಟ್ ಮುಖ್ಯರಸ್ತೆಯ ಸಾಯಿ ಕಾಂಡಿಮೆಂಟ್ಸ್ ಬೇಕರಿ ಬಳಿ ದುಷ್ಕರ್ಮಿಗಳು ಹಲ್ಲೆ ನಡೆಸಿ, ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಯಲಹಂಕ ಪೊಲೀಸರು ಖಚಿತ ಮಾಹಿತಿಯಾಧರಿಸಿ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲೆ ಕೃತ್ಯವೊಂದರಲ್ಲಿ ಭಾಗಿಯಾಗಿ, ಜೈಲಿಗೆ ಹೋಗಿ ಬಿಡುಗಡೆಯಾಗಿ ಬಂದಿದ್ದ ರೌಡಿ ದಿಲೀಪ್ ಆರೋಪಿ ಚಾಂದ್‌ಪಾಷನಿಂದ ಬಾಡಿಗೆಗೆ ಆಟೊ ಪಡೆದುಕೊಂಡಿದ್ದ, ಹಲವು ದಿನಗಳು ಕಳೆದರೂ ಬಾಡಿಗೆಗೆ ಪಡೆದ ಹಣ ನೀಡದೆ ಸತಾಯಿಸಿದ್ದ. ಹಣ ಕೇಳಲು ಹೋದರೆ ತಕರಾರು ಮಾಡುತ್ತಿದ್ದು, ನೀನು ಯಾವಾಗಲೂ ಬಾಡಿಗೆ ಹಣ ಕೇಳಿದರೆ ಕೊಲೆ ಮಾಡುವುದಾಗಿ ಚಾಂದ್‌ಪಾಷನಿಗೆ ಬೆದರಿಕೆ ಹಾಕಿದ್ದ ಎಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.