ETV Bharat / state

ಬೇಡಿಕೆ ಈಡೇರಿಸಿದ ಪಿಎಂಗೆ ಸಿಎಂ ಧನ್ಯವಾದ.. ರಾಜ್ಯದ ಜನತೆಗೆ ಪ್ರಧಾನಿ ಸಂಕ್ರಾಂತಿ ಶುಭಾಶಯ

ರಾಷ್ಟ್ರೀಯ ಪ್ರಗತಿಗೆ ಅಭೂತಪೂರ್ವ ಕೊಡುಗೆಗಳನ್ನು ನೀಡುತ್ತಿರುವ ಕರ್ನಾಟಕದ ನನ್ನ ಸಹೋದರ, ಸಹೋದರಿಯರಿಗೆ ಮಕರ ಸಂಕ್ರಾಂತಿಯ ಶುಭಾಶಯಗಳು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜ್ಯದ ಜನರ ಸಬಲೀಕರಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತವೆ ಎಂದು ಪ್ರಧಾನಿ ಮೋದಿ ಟ್ವೀಟ್​ ಮಾಡಿದ್ದಾರೆ.

pm-narendra-modi wishes on makara-sankranti
ರಾಜ್ಯದ ಜನತೆಗೆ ಪ್ರಧಾನಿ ಸಂಕ್ರಾಂತಿ ಶುಭಾಶಯ
author img

By

Published : Jan 15, 2022, 4:47 PM IST

ಬೆಂಗಳೂರು: ಗ್ರಾಮೀಣ ಭಾಗದ ವಸತಿ ರಹಿತರ ಸಿಂಕ್ರೊನೈಸೇಶನ್‌ ಬಹುದಿನದ ಬೇಡಿಕೆ ಈಡೇರಿಸಿದ್ದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅಭಿನಂದಿಸಿದ್ದಾರೆ.

ಈ ಟ್ವೀಟ್ ಮಾಡಿರುವ ಸಿಎಂ, ಪಿಎಂಎವೈ-ಜಿ ಅಡಿಯಲ್ಲಿ ಕರ್ನಾಟಕದ ಗ್ರಾಮೀಣ ಬಡ ವರ್ಗದ 18,78,671 ವಸತಿ ರಹಿತ, 6,61,535 ನಿವೇಶನ ರಹಿತರ ಸಿಂಕ್ರೊನೈಸೇಶನ್​​ನ ಬಹುದಿನಗಳ ಬೇಡಿಕೆಯನ್ನು ಅನುಮೋದಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ಇದು ನಿಜವಾಗಿ ಆ ಎಲ್ಲ ಜನರ ಜೀವನದಲ್ಲಿ ಹೊಸ ಸಂತೋಷವನ್ನು ತರುವುದರ ಜೊತೆಗೆ ಮಕರ ಸಂಕ್ರಾಂತಿಯನ್ನು ಇನ್ನಷ್ಟು ವಿಶೇಷವಾಗಿಸಿದೆ ಎಂದು ಹೇಳಿದ್ದಾರೆ.

  • Makar Sankranti wishes to my sisters and brothers of Karnataka, a state which makes unprecedented contributions to national progress.

    The Centre and State Government will keep working for the empowerment of the people of the state. https://t.co/0OquZrKy6W

    — Narendra Modi (@narendramodi) January 15, 2022 " class="align-text-top noRightClick twitterSection" data=" ">

ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಪ್ರಗತಿಗೆ ಅಭೂತಪೂರ್ವ ಕೊಡುಗೆಗಳನ್ನು ನೀಡುತ್ತಿರುವ ಕರ್ನಾಟಕದ ನನ್ನ ಸಹೋದರ, ಸಹೋದರಿಯರಿಗೆ ಮಕರ ಸಂಕ್ರಾಂತಿಯ ಶುಭಾಶಯಗಳು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜ್ಯದ ಜನರ ಸಬಲೀಕರಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತವೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಪರಸ್ಪರ ಅಭಿನಂದಿಸಿಕೊಂಡಿದ್ದು, ಕೇಂದ್ರದ ಸಹಕಾರಕ್ಕೆ ಸಿಎಂ ಅಭಿನಂದನೆ ಸಲ್ಲಿಸಿದ್ದರೆ, ನಾಡಿನ ಸಮಸ್ತ ಜನತೆಗೆ ಪ್ರಧಾನಿ ಮಕರ ಸಂಕ್ರಾಂತಿ ಶುಭಾಶಯ ತಿಳಿಸಿದ್ದಾರೆ.

ಇದನ್ನೂ ಓದಿ: 'ಯೋಗಿ ಗೋರಖ್​ಪುರ್​​ದಲ್ಲೇ ಇರಬೇಕು' ಅಲ್ಲೇ ಇರಿ ಎಂದು ಸಿಎಂ ಆದಿತ್ಯನಾಥ್​ ಕಾಲೆಳೆದ ಅಖಿಲೇಶ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.