ETV Bharat / state

ಪರಿಸರ ಉಳಿಸಿ ಅಂತಿದೆ ಚಿತ್ರಕಲೆ.... ಕುಂಚದಲ್ಲಿ ಅರಳಿದ  ಅದ್ಬುತ ಕಲೆ...!! - undefined

ಇತ್ತೀಚಿನ ದಿನಗಳಲ್ಲಿ ಅರಣ್ಯ ಪ್ರದೇಶಗಳು ಅಳಿವಿನಂಚಿನಲ್ಲಿದ್ದು, ಪರಿಸರ ಕಾಳಜಿ ಕುರಿತು ಜನರಲ್ಲಿ ಅರಿವು ಮೂಡಿಸುವ ಫೋಟೋಗಳ ಪ್ರದರ್ಶನ ಕಾರ್ಯಕ್ರಮ ನಗರದ ಚಿತ್ರಕಲಾ ಪರಿಷತ್​ನಲ್ಲಿ ನಡೆಸಲಾಯಿತು.

ಫೋಟೋ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗಣ್ಯರು
author img

By

Published : Apr 25, 2019, 9:12 AM IST

ಬೆಂಗಳೂರು: ನಗರದ ಚಿತ್ರಕಲಾ ಪರಿಷತ್​ನಲ್ಲಿ ಶ್ರೀಧರ ತುಮರಿ ಕ್ಲಿಕ್ಕಿಸಿದ ಫೋಟೋಗಳ ಪ್ರದರ್ಶನ ಕಾರ್ಯಕ್ರಮವನ್ನು ಹಿರಿಯ ನಟ, ಪರಿಸರವಾದಿ ಸುರೇಶ್ ಹೆಬ್ಳೀಕರ್ ಉದ್ಘಾಟಿಸಿದರು.

ನಗರದ ಚಿತ್ರಕಲಾ ಪರಿಷತ್​ನಲ್ಲಿ ಶ್ರೀಧರ ತುಮರಿ ಅವರು ತೆಗೆದಿರುವಂತಹ ಫೋಟೋಗಳ ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಅಥಿತಿಗಳಾಗಿ ಆಗಮಿಸಿದ್ದ ಹಿರಿಯ ನಟ, ಪರಿಸರವಾದಿ ಸುರೇಶ್ ಹೆಬ್ಳೀಕರ್, ಬಿ. ಎಸ್.ಶಂಕರ್, ಸೇರಿದಂತೆ ಇತರರು ಉದ್ಘಾಟನೆ ಮಾಡಿದರು.

ಫೋಟೋ ಪ್ರದರ್ಶನ ಕಾರ್ಯಕ್ರಮ

ಪರಿಸರದ ಕಾಳಜಿ ಹೊಂದಿರುವ ಶ್ರೀಧರ್​ ತಮರಿ ಅವರು ಮನುಷ್ಯನಿಂದ ಪರಿಸರಕ್ಕೆ ಆಗುತ್ತಿರುವ ಹಾನಿ, ಅಣುಬಾಂಬ್ ದಾಳಿಗೆ ಒಳಗಾದ ಪ್ರದೇಶದಲ್ಲಿನ‌ ಜನರ ನೋವು- ನರಳಾಟ, ಭೂಮಿಯನ್ನೇ ಛಿದ್ರಗೊಳಿಸುವ ಆಘಾತಕಾರಿ ಆವಿಷ್ಕಾರ, ಮುಂದೆ ಆಗಬಹುದಾದ ಪರಿಣಾಮ, ಕೇವಲ ಬಾಹ್ಯ ಸೌಂದರ್ಯಕ್ಕೆ ಸೀಮಿತವಾಗಿರದೇ ವೈಚಾರಿಕ ಚಿಂತನೆಗೆ ನೂಕುವ ಪರಿಣಾಮಕಾರಿ ದೃಶ್ಯಗಳನ್ನು ಕಲಾತ್ಮಕವಾಗಿ ಸೆರೆ ಹಿಡಿದಿದ್ದು, ತಮ್ಮದೇ ಆದ ರೀತಿಯಲ್ಲಿ ಛಾಯಾಚಿತ್ರದ ಮೂಲಕ ಬಿಂಬಿಸಿದ್ದಾರೆ.

ಈ ಛಾಯಾಚಿತ್ರ ಪ್ರದರ್ಶನ ಕುರಿತು ಮಾತಾನಾಡಿದ ಹಿರಿಯ ನಟ ಸುರೇಶ್ ಹೆಬ್ಳೀಕರ್​ , ಪಶ್ಚಿಮ ಘಟ್ಟಗಳ ಮರಗಳನ್ನು ಸೆರೆ ಹಿಡಿದು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಜನರು ಕಾಡಿನ ಬಗ್ಗೆ ಅರ್ಥ ಮಾಡಿಕೊಳ್ಳುತ್ತಿಲ್ಲ. ಈ ಚಿತ್ರಗಳು ಅದನ್ನ ತಿಳಿಸುತ್ತವೆ. ಕಾಡು ಉಳಿಸುವ ಅವಶ್ಯಕತೆ ಇದ್ದು, ಆ ರೀತಿಯ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡಬೇಕಾದ ಅವಶ್ಯಕತೆ ಇದೆ ಎಂದರು.

ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ರೋಷನ್ ಬೇಗ್, ಕಲಾವಿದೆ ರೇಖಾ ಹೆಬ್ಬಾರ್ ರಾವ್ ಮೊದಲಾದವರು ಪಾಲ್ಗೊಂಡಿದ್ದರು.

Intro:ಜನರು ಕಾಡಿನ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇದೆ; ಹಿರಿಯ ನಟ ಸುರೇಶ್ ಹೆಬ್ಳೀಕರ್..

ಬೆಂಗಳೂರು: ಸಾವಿರಾ ಪದಗಳಲ್ಲಿ ಹೇಳುವುದನ್ನ ಒಂದೇ ಒಂದು ಫೋಟೋ ಎಲ್ಲವನ್ನೂ ಹೇಳಿಬಿಡುತ್ತೆ.. ಫೋಟೋಗ್ರಾಫಿಗೆ ಇರೋ ಶಕ್ತಿಯೇ ಅಂತಹದ್ದು.. ಹೀಗಾಗಿಯೇ ಫೋಟೋಗ್ರಾಫಿಯನ್ನೇ ನೆಚ್ಚಿಕೊಂಡ ಶ್ರೀಧರ ತುಮರಿ, ತಮ್ಮ ಕ್ಯಾಮರಾ ದಲ್ಲಿ ಸೆರೆ ಹಿಡಿದ ಛಾಯಾಚಿತ್ರ ಗಳ ಪ್ರದರ್ಶನ ಆಯೋಜನೆ ಮಾಡಿದ್ದಾರೆ.. ಇಂದು ನಗರದ ಚಿತ್ರಕಲಾ ಪರಿಷತ್ ನಲ್ಲಿ ಪ್ರದರ್ಶನವನ್ನ ಹಿರಿಯ ನಟ, ಪರಿಸರ ವಾದಿ ಸುರೇಶ್ ಹೆಬ್ಳೀಕರ್, ಬಿ ಎಸ್ ಶಂಕರ್, ಸೇರಿದಂತೆ ಇತರರು ಉದ್ಘಾಟನೆ ಮಾಡಿದರು.. ಕಾರ್ಯಕ್ರಮಕ್ಕೆ ಮಾಜಿ ಸಚಿವ ರೋಷನ್ ಬೇಗ್, ಕಲಾವಿದೆ ರೇಖಾ ಹೆಬ್ಬಾರ್ ರಾವ್ ಸಾಥ್‌ನೀಡಿದರು..

Body:ಪರಿಸರದ ಕಾಳಜಿ ಹೊಂದಿರುವ ಶ್ರೀಧರ ತಮರಿ, ಮನುಷ್ಯನಿಂದ ಪರಿಸರಕ್ಕೆ ಆಗುತ್ತಿರುವ ಹಾನಿ, ಜೊತೆಗೆ ಅಣುಬಾಂಬ್ ದಾಳಿಗೆ ಒಳಗಾದ ಪ್ರದೇಶದಲ್ಲಿನ‌ ಜನರ ನೋವು- ನರಳಾಟ, ಪ್ರಾಣಿ ಪಕ್ಷಿಗಳ ಮೇಲೆ ಆದ ಪರಿಣಾಮವನ್ನ ಛಾಯಾಚಿತ್ರ ದ ಮೂಲಕ ಬಿಂಬಿಸಿದ್ದಾರೆ.. ಭೂಮಿಯನ್ನೇ ಛಿದ್ರಗೊಳಿಸುವ ಅಘಾತಕಾರಿ ಆವಿಷ್ಕಾರದಿಂದ ಆಗಿರುವ ಹಾಗೂ ಮುಂದೆ ಆಗಬಹುದಾದ ಪರಿಣಾಮದ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಹೇಳಿದ್ದಾರೆ.. ಹೀನ್ನೀರಿನಲ್ಲಿ ಕಂಡು ಬಂದ ಮರದ ತುಂಡುಗಳು ತಮ್ಮ ಮೂಲಸ್ವರೂಪವನ್ನು ಬದಲಿಸಿಕೊಂಡು, ವಿಕಾರಗೊಂಡು ಅಮೂರ್ತ ರೂಪತಾಳಿರುವುದು ಶ್ರೀಧರರ ಅಭಿವ್ಯಕ್ತಿ ಗೆ ಪೂರಕವಾಗಿ ರೂಪಗಳಾಗಿ ಚಿತ್ರಿತಗೊಂಡಿವೆ..‌ವಸ್ತುವಿನ ಒಳತಿರುಳನ್ನು ಗ್ರಹಿಸುವ ಅಮೂರ್ತ ಕಲ್ಪನೆಗಳಿಗೆ ರೂಪುಕೊಟ್ಟು, ಕೇವಲ ಬಾಹ್ಯ ಸೌಂದರ್ಯ ಕ್ಕೆ ಸೀಮಿತವಾಗಿರದೆ ವೈಚಾರಿಕ ಚಿಂತನೆಗೆ ನೂಕುವ ಪರಿಣಾಮಕಾರಿ ದೃಶ್ಯಗಳನ್ನು ಕಲಾತ್ಮಕವಾಗಿ ಸೆರೆಹಿಡಿದಿದ್ದಾರೆ...

ಈ ಛಾಯಾಚಿತ್ರ ಪ್ರದರ್ಶನ ಕುರಿತು ಮಾತಾನಾಡಿದ ಹಿರಿಯ ನಟ ಸುರೇಶ್ ಹಬ್ಬಿಕರ್, ಪಶ್ಚಿಮ ಘಟ್ಟಗಳ ಮರಗಳನ್ನು ಸೆರೆಹಿಡಿದು ಪ್ರದರ್ಶನ ಕ್ಕೆ ಇಟ್ಟಿದ್ದಾರೆ..‌ ಜನರು ಕಾಡಿನ ಬಗ್ಗೆ ಅರ್ಥ ಮಾಡಿಕೊಳ್ಳುತ್ತಿಲ್ಲ..‌ಈ ಚಿತ್ರಗಳು ಅದನ್ನ ತಿಳಿಸುತ್ತೆ ಅಂತ ಹೇಳಿದರು... ಕಾಡು ಉಳಿಸುವುದು ಅವಶ್ಯಕತೆ ಇದ್ದು, ಆ ಕಾರ್ಯವನ್ನ ನಿರಂತರವಾಗಿ ಮಾಡುತ್ತಾ ಇರುತ್ತವೆ ಅಂತ ತಿಳಿಸಿದರು..

Conclusion:ಇನ್ನು ಇಂದಿನಿಂದ ಆರಂಭವಾಗಿರುವ ಈ ಪ್ರದರ್ಶನ ವೂ ಏಪ್ರಿಲ್ 30 ರವರಗೆ ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ನಡೆಯಲಿದೆ.. ಆಸಕ್ತರು ಚಿತ್ರಕಲಾ ಪರಿಷತ್ ಗೆ ಭೇಟಿ ನೀಡಬಹುದು..

KN_BNG_04_24_PHOTO_EXHIBITION_SCRIPT_DEEPA_7201801

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.