ಬೆಂಗಳೂರು: ಜೂನ್ 14ರಿಂದ ಲಾಕ್ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಹಳ್ಳಿಗಳಿಂದ ಸಿಲಿಕಾನ್ ಸಿಟಿಯತ್ತ ಜನ ವಾಪಸ್ ಬರುತ್ತಿದ್ದಾರೆ. ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ತಮ್ಮ ಊರುಗಳಿಂದ ನಗರಕ್ಕೆ ವಾಪಸಾಗುತ್ತಿದ್ದಾರೆ.
ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಈಗಾಗಲೇ ರಾಜ್ಯ ಸರ್ಕಾರ ಖಾಸಗಿ ಕಂಪನಿಗಳಿಗೆ ಕೆಲಸ ಮಾಡಲು ಅವಕಾಶ ಕೊಟ್ಟಿರುವ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳು ಹಾಗೂ ಬೇರೆ ರಾಜ್ಯಗಳಿಂದ ನಗರಕ್ಕೆ ಕಾರ್ಮಿಕರು ವಾಪಸಾಗುತ್ತಿದ್ದಾರೆ.
ರಾಜಧಾನಿಯಲ್ಲಿ ಅನ್ಲಾಕ್ ವಾತಾವರಣ: ಗಂಟುಮೂಟೆ ಸಮೇತವಾಗಿ ಆಗಮಿಸುತ್ತಿರುವ ಕಾರ್ಮಿಕರು ಬೆಂಗಳೂರಿನಲ್ಲಿ ಕೆಲಸವಿಲ್ಲದೆ ಊರು ಸೇರಿದ್ದರು. ಲಾಕ್ಡೌನ್ ಸಡಿಲಿಕೆ ಆಗುತ್ತಿದಂತೆ ಮತ್ತೆ ಬೆಂಗಳೂರಿನ ಕಡೆ ಜನರು ಮುಖ ಮಾಡುತ್ತಿದ್ದಾರೆ.
ಟೆಸ್ಟಿಂಗ್ ಮಾನಿಟರಿಂಗ್ ಕಷ್ಟ: ಬೆಂಗಳೂರಿಗೆ ಬರೋ ಜನರಿಗೆ ಸೋಮವಾರದಿಂದ ಟೆಸ್ಟಿಂಗ್ ಕಡ್ಡಾಯ ಮಾಡಿ ಬಿಬಿಎಂಪಿ ಯೋಜನೆ ರೂಪಿಸಿದೆ. ಆದರೆ ಅನ್ಲಾಕ್ಗೂ ಮುಂಚೆ ಜನ ಆಗಮಿಸುತ್ತಿರೋದರಿಂದ ಮಾನಿಟರಿಂಗ್ ಕಷ್ಟವಾಗಿದೆ.