ETV Bharat / state

ಚಿಂದಿ ಆಯುವವರ ಬದುಕಲ್ಲಿ ಬೆಳಕು ಮೂಡಿಸಲು ಸಹಕಾರ ಸಂಘಗಳ ಶಪಥ

author img

By

Published : Nov 27, 2020, 11:54 AM IST

ಅಸಂಘಟಿತ ಚಿಂದಿ ಆಯುವವರನ್ನು ಬಿಬಿಎಂಪಿ ವ್ಯಾಪ್ತಿಯೊಳಗೆ ಸಂಘಟಿತ ವಲಯದೊಳಗೆ ತರಲು ಸಹಕಾರ ಸಂಘಗಳು ನಿರ್ಧರಿಸಿವೆ. ಹಣಕಾಸಿನ ನೆರವಿನೊಂದಿಗೆ ವಿವಿಧ ಯೋಜನೆಗಳ ಕಾರ್ಯರೂಪಕ್ಕೆ ತರಲು ಮುಂದಾಗಿವೆ. ಈ ಮೂಲಕ ಅವರ ಜೀವನಮಟ್ಟ ಸುಧಾರಿಸುವ ನಿರೀಕ್ಷೆ ಹೊಂದಲಾಗಿದೆ.

ಚಿಂದಿ ಆಯುವವರು
ಚಿಂದಿ ಆಯುವವರು

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಒಣಕಸ ಸಂಗ್ರಹಿಸಲು ಚಿಂದಿ ಆಯುವವರನ್ನು ಬಳಸಿಕೊಳ್ಳಲು ಬಿಬಿಎಂಪಿ ಈಗಾಗಲೇ ನಿರ್ಧರಿಸಿದೆ. ಅಸಂಘಟಿತ ಚಿಂದಿ ಆಯುವವರನ್ನು ಸಂಘಟನೆಯೊಳಗೆ ತರಲು 8 ಸಹಕಾರ ಸಂಘಗಳು ಮುಂದೆ ಬಂದಿದ್ದು, "ಸಾಮೂಹಿಕ ಶಕ್ತಿ" ಹೆಸರಿನ ಯೋಜನೆಯಡಿ ಸ್ವೀಡನ್ ಮೂಲದ ಸಂಸ್ಥೆಯ ಹಣಕಾಸಿನ ನೆರವಿನೊಂದಿಗೆ ಕಾರ್ಯರೂಪಗೊಳಿಸಲು ಮುಂದಾಗಿವೆ.

ಹಸಿರುದಳ, ಬಿಬಿಸಿ ಮೀಡಿಯಾ ಆ್ಯಕ್ಷನ್, ಕೇರ್, ಲೇಬರ್ ನೆಟ್, ಸೇವ್ ದಿ ಚಿಲ್ಡ್ರನ್, ಸೋಷಿಯಲ್ ಆಲ್ಫಾ ಎಂಬ ಸಂಸ್ಥೆಗಳು ಈ ಬಗ್ಗೆ ಪಾಲಿಕೆ ಜೊತೆ ಸಭೆ ನಡೆಸಿ ಚಿಂದಿ ಆಯುವವರ ಅಭಿವೃದ್ಧಿಗೆ ಯೋಜನೆ ರೂಪಿಸಿವೆ.

ಚಿಂದಿ ಆಯುವವರನ್ನು ಸಂಘಟನೆಯೊಳಗೆ ತರಲು ನಿರ್ಧರಿಸಿದ ಸಹಕಾರ ಸಂಘಗಳು

ಕಸ ಸಂಗ್ರಹಕ್ಕೆ 600 ವಾಹನಗಳ ಖರೀದಿಗೆ ಪಾಲಿಕೆ ಮುಂದಾಗಿದ್ದು, 8 ಸಾವಿರ ಚಿಂದಿ ಆಯುವವರಿಗೆ ಐಡಿ ಕಾರ್ಡ್ ಸಹ ಕೊಡಲಾಗಿದೆ.

ಇವುಗಳ ಹೊರತಾಗಿಯೂ ಚಿಂದಿ ಆಯುವವರ ಆರೋಗ್ಯ ಮತ್ತು ಜೀವನಮಟ್ಟ ಸುಧಾರಣೆಗೆ ಒತ್ತು ನೀಡಬೇಕಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಸರ್ಕಾರದ ಸವಲತ್ತುಗಳ ಬಳಕೆ ಕುರಿತು ಜಾಗೃತಗೊಳಿಸಲು ನಾಗರಿಕ ಸಂಸ್ಥೆಗಳ ಸಹಕಾರ ಅಗತ್ಯ ಎಂದು ಪಾಲಿಕೆ ಮನವಿ ಮಾಡಿದೆ.

ಈ ಕುರಿತು ಮಾತನಾಡಿದ ಹಸಿರು ದಳ ಸಂಘಟನೆಯ ನಳಿನಿ ಶೇಖರ್, ಬೇರೆ ಬೇರೆ ಸಂಸ್ಥೆಗಳು ಸೇರಿ ಚಿಂದಿ ಆಯುವವರಿಗೆ ಸಹಾಯ ಮಾಡಲು ನಿರ್ಧರಿಸಿದ್ದೇವೆ. ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಈ ಸಮುದಾಯದ ಜನರ ಜೀವನವೇ ಬದಲಾಗಲಿದೆ. ರಸ್ತೆಯ ಬದುಕಿನಿಂದ ಅಭಿವೃದ್ಧಿಯಾಗಲಿದ್ದಾರೆ ಎಂಬ ನಂಬಿಕೆ ಇದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.