ETV Bharat / state

ಮಹಾಘಟಬಂಧನ್ ಸಭೆ: ಹೋಟೆಲ್ ಸುತ್ತ ರಾರಾಜಿಸುತ್ತಿವೆ ರಾಷ್ಟ್ರೀಯ ನಾಯಕರ ಪೋಸ್ಟರ್ಸ್​ - ರಾಷ್ಟ್ರೀಯ ನಾಯಕರ ಪೋಸ್ಟರ್

ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಪಕ್ಷಗಳ ಸಭೆ ಹಿನ್ನೆಲೆ ಹೋಟೆಲ್​ ಸುತ್ತಮುತ್ತಲು ರಾಷ್ಟ್ರೀಯ ನಾಯಕರ ಪೋಸ್ಟರ್​ಗಳು ರಾರಾಜಿಸುತ್ತಿವೆ.

opposition-leaders-meeting-in-bengaluru-poster-of-national-leaders-installed-around-the-hotel
ಮಹಾಘಟಬಂಧನ್ ಸಭೆ: ಹೋಟೆಲ್ ಸುತ್ತ ರಾರಾಜಿಸುತ್ತಿವೆ ರಾಷ್ಟ್ರೀಯ ನಾಯಕರ ಪೋಸ್ಟರ್
author img

By

Published : Jul 18, 2023, 1:11 PM IST

Updated : Jul 18, 2023, 1:56 PM IST

ಮಹಾಘಟಬಂಧನ್ ಸಭೆ: ಹೋಟೆಲ್ ಸುತ್ತ ರಾರಾಜಿಸುತ್ತಿವೆ ರಾಷ್ಟ್ರೀಯ ನಾಯಕರ ಪೋಸ್ಟರ್ಸ್​

ಬೆಂಗಳೂರು : ಮಹಾಘಟಬಂಧನ್ ನಾಯಕರ ಸಭೆ ನಡೆಯುತ್ತಿರುವ ರೇಸ್ ಕೋರ್ಸ್ ರಸ್ತೆಯ ಖಾಸಗಿ ಹೋಟೆಲ್ ಸುತ್ತಮುತ್ತ ರಾಷ್ಟ್ರೀಯ ನಾಯಕರ ಪೋಸ್ಟರ್​ಗಳು ರಾರಾಜಿಸುತ್ತಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನವಿ ಮೇರೆಗೆ ಎರಡನೇ ಸಭೆ ನಗರದ ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟ್ ಎಂಡ್ ಹೋಟೆಲ್​ನಲ್ಲಿ ನಡೆಯುತ್ತಿದೆ.

ಸಭೆಯಲ್ಲಿ ಪಾಲ್ಗೊಂಡಿರುವ ಎಐಸಿಸಿ ಮಾಜಿ ಅಧ್ಯಕ್ಷೆ ಹಾಗೂ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ, ರಾಷ್ಟ್ರೀಯ ನಾಯಕ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಅಭಿಷೇಕ್‌ ಬ್ಯಾನರ್ಜಿ, ಡೆರಿಕ್‌ ಓಬ್ರಿಯಾನ್‌, ಸಿಪಿಐನ ಡಿ.ರಾಜಾ, ಸಿಪಿಐಎಂ ಸೀತಾರಾಂ ಯೆಚೂರಿ, ಎನ್‌ಸಿಪಿ ಶರದ್‌ ಪವಾರ್‌, ಜಿತೇಂದ್ರ ಅಹ್ವಾಡ್‌, ಸುಪ್ರಿಯಾ ಸುಳೆ, ಜೆಡಿಯು ನಿತೀಶ್‌ ಕುಮಾರ್‌, ಸಂಜಯ್‌ ಕುಮಾರ್‌ ಝಾ, ಡಿಎಂಕೆಯ ಎಂ. ಕೆ. ಸ್ಟಾಲಿನ್‌, ಟಿ.ಆರ್‌. ಬಾಲು, ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌, ಜೆಎಂಎಂ ಹೇಮಂತ್‌ ಸೊರೇನ್‌, ಶಿವಸೇನಾ(ಉದ್ಧವ್‌ ಠಾಕ್ರೆ ಬಣ) ಉದ್ಧವ್‌ ಠಾಕ್ರೆ, ಆದಿತ್ಯ ಠಾಕ್ರೆ, ಸಂಜಯ್‌ ರಾವತ್‌, ಆರ್‌ಜೆಡಿ ಲಾಲು ಪ್ರಸಾದ್‌ ಯಾದವ್‌, ತೇಜಸ್ವಿ ಯಾದವ್‌, ಮನೋಜ್‌ ಝಾ, ಸಂಜಯ್‌ ಯಾದವ್‌, ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌, ರಾಮಗೋಪಾಲ್‌, ಜಾವೇದ್‌ ಅಲಿ ಖಾನ್‌, ಆಶಿಶ್‌ ಯಾದವ್‌, ನ್ಯಾಷನಲ್‌ ಕಾನ್ಫರೆನ್ಸ್‌- ಓಮರ್‌ ಅಬ್ದುಲ್ಲಾ, ಪಿಡಿಪಿಯ ಮೆಹಬೂಬಾ ಮುಫ್ತಿ, ಸಿಪಿಐ(ಎಂಎಲ್‌) ದೀಪಂಕರ್‌ ಭಟ್ಟಾಚಾರ್ಯ, ಆರ್‌ಎಲ್‌ಡಿಯ ಜಯಂತ್‌ ಸಿಂಗ್‌ ಚೌದರಿ, ಐಯುಎಂಎಲ್‌ನ ಪಿ. ಕುನಲಿಕುಟ್ಟಿ, ಕೇರಳ ಕಾಂಗ್ರೆಸ್‌(ಎಂ)ನ ಜೋಶ್‌ ಕೆ. ಮಣಿ, ಎಂಡಿಎಂಕೆಯ ವೈಕೋ, ವಿಸಿಕೆಯ ರವಿಕುಮಾರ್‌, ಆರ್‌ಎಸ್‌ಪಿಯ ಎನ್‌. ಕೆ. ಪ್ರೇಮಚಂದ್ರನ್‌, ಕೇರಳ ಕಾಂಗ್ರೆಸ್‌ನ ಪಿ.ಸಿ. ಜೋಸೆಫ್‌, ಕೆಎಂಡಿಕೆಯ ಈಶ್ವರನ್‌, ಎಐಎಫ್‌ಬಿಯ ಜಿ. ದೇವರಾಜನ್‌ ಭಾವಚಿತ್ರಗಳು ಹೋಟೆಲ್ ಮುಂಭಾಗದ ರಸ್ತೆಯ ಇಕ್ಕೆಲಗಳಲ್ಲಿಯೂ ರಾರಾಜಿಸುತ್ತಿದೆ.

ರಾಷ್ಟ್ರೀಯ ನಾಯಕರ ಆಗಮನ ಹಿನ್ನೆಲೆ ಆಂಗ್ಲ ಭಾಷೆ ಹಾಗೂ ಕೆಳಗಡೆ ಹಿಂದಿಯಲ್ಲಿ ಸ್ವಾಗತ ಕೋರುವ ಬರಹಗಳನ್ನು ಬರೆಯಲಾಗಿದೆ. ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಆಗಮಿಸಿ ನಾಯಕರು ಹೋಟೆಲ್​ಗೆ ಆಗಮಿಸುತ್ತಿರುವ ಹಿನ್ನೆಲೆ ಇವರು ಆಗಮಿಸುವ ರಸ್ತೆಯಲ್ಲಿ ಪೋಸ್ಟರ್​ಗಳು ಅಲ್ಲಲ್ಲಿ ಕಾಣಿಸುತ್ತಿವೆ. ಹೋಟೆಲ್ ಮುಂಭಾಗ ಮಾತ್ರ ಬೃಹತ್ ಕಟೌಟ್​ಗಳು ಹಾಗೂ ಬ್ಯಾನರ್​ಗಳು ಕಾಣಸಿಗುತ್ತಿವೆ.

ಈಗಾಗಲೇ ಕನ್ನಡ ಪರ ಕಾರ್ಯಕರ್ತರು ಇಂಗ್ಲಿಷ್ ಹಾಗು ಹಿಂದಿ ಭಾಷೆಯಲ್ಲಿ ರಾರಾಜಿಸುತ್ತಿರುವ ಪೋಸ್ಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಪೋಸ್ಟರ್​ಗಳಿಗೆ ಹಾನಿ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದರು. ನಿನ್ನೆ ಸಂಜೆ ಬಹುತೇಕ ನಾಯಕರು ಆಗಮಿಸಿದ್ದು, ಇಂದು ಬೆಳಗ್ಗೆ ಏನ್​ಸಿಪಿ ಮುಖಂಡ ಶರದ್ ಪವಾರ್ ನಗರಕ್ಕೆ ಆಗಮಿಸಿದ್ದಾರೆ. ಖಾಸಗಿ ಹೋಟೆಲ್​ನಲ್ಲಿ 11 ಗಂಟೆಗೆ ಸಭೆ ಆರಂಭವಾಗಿದ್ದು, ಮಧ್ಯಾಹ್ನ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಮ್ಮಿಕೊಂಡಿರುವ ಔತಣಕೂಟದಲ್ಲಿ ನಾಯಕರು ಪಾಲ್ಗೊಳ್ಳಲಿದ್ದಾರೆ. ಬಳಿಕ ನಾಯಕರು ಸಂಜೆ ನಾಲ್ಕು ಗಂಟೆಯವರೆಗೂ ಸಭೆ ನಡೆಸಿ ತೆರಳಲಿದ್ದಾರೆ. ತೆರಳುವ ಮುನ್ನ ಮಾಧ್ಯಮಗೋಷ್ಟಿ ನಡೆಸಿ ನಾಯಕರು ಸಭೆಯ ನಿರ್ಣಯವನ್ನು ತಿಳಿಸಲಿದ್ದಾರೆ.

ನಿತೀಶ್ ಕುಮಾರ್ ವಿರುದ್ಧ ಪೋಸ್ಟರ್ : 2024ರ ವಿಧಾನಸಭೆ ಚುನಾವಣೆಯಲ್ಲಿ ಎನ್​ಡಿಎ ಮಣಿಸಲು ಕಾರ್ಯತಂತ್ರ ರೂಪಿಸುವ ಉದ್ದೇಶದಿಂದ ರಾಷ್ಟ್ರೀಯ ಪ್ರತಿಪಕ್ಷ ನಾಯಕರು ಬೆಂಗಳೂರಿನಲ್ಲಿ ಸಭೆ ನಡೆಸುತ್ತಿದ್ದರೆ, ಇನ್ನೊಂದೆಡೆ ಸಭೆಯಲ್ಲಿ ಭಾಗಿಯಾಗಿರುವ ಬಿಹಾರ್ ಸಿಎಂ ನಿತೀಶ್ ಕುಮಾರ್ ವಿರುದ್ಧ ಅನಾಮಿಕರು ಪೋಸ್ಟರ್ ಅಭಿಯಾನ ನಡೆಸಿದ್ದಾರೆ.

ಬಿಹಾರದ ಸುಲ್ತಾನ್‌ಗಂಜ್ ಸೇತುವೆ ಕುಸಿತಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೇ ಕಾರಣ ಎಂದು ದೂಷಿಸುವಂತ ಪೋಸ್ಟರ್‌ಗಳು ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ನಿನ್ನೆ ರಾತ್ರಿ ಕಾಣಿಸಿಕೊಂಡಿವೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಪೋಸ್ಟರ್​ಗಳನ್ನು ತೆರವುಗೊಳಿಸುವ ಕಾರ್ಯ ಮಾಡಿದ್ದಾರೆ.

ಮಹಾ ಘಟಬಂಧನ್ ನಾಯಕರು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟ್ ಆಂಡ್ ಹೋಟೆಲ್ ನಲ್ಲಿ ಸಭೆ ನಡೆಸಿದ್ದು, ಇದಕ್ಕೆ ಕಣ್ಣಳತೆ ದೂರದಲ್ಲಿ ಈ ಪೋಸ್ಟರ್ ಗಳು ಕಂಡುಬಂದಿವೆ. 'ಚಾಲುಕ್ಯ ವೃತ್ತ'ದಲ್ಲಿ ಪೋಸ್ಟರ್‌ಗಳು ಕಂಡುಬಂದಿದ್ದು, ಈ ಬಗ್ಗೆ ತಿಳಿದ ತಕ್ಷಣವೇ ಪೊಲೀಸರು ಕಾರ್ಯಪ್ರವೃತ್ತರಾದರು. ಈ ಪೋಸ್ಟರ್‌ಗಳನ್ನು ಯಾರು ಹಾಕಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಒಂದು ಪೋಸ್ಟರ್‌ನಲ್ಲಿ 'ಸುಲ್ತಾನ್‌ಗಂಜ್ ಸೇತುವೆ ಕುಸಿತವು ಬಿಹಾರಕ್ಕೆ ನಿತೀಶ್ ಕುಮಾರ್ ಅವರು ನೀಡಿದ ಕೊಡುಗೆಯಾಗಿದೆ' ಎಂದಿದ್ದು, ಬಿಹಾರದಲ್ಲಿನ ಸೇತುವೆಗಳೇ ಅವರ ಆಳ್ವಿಕೆಯನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ, ಅವರ ನೇತೃತ್ವವನ್ನು ವಿರೋಧ ಪಕ್ಷಗಳು ಹೇಗೆ ತಡೆದುಕೊಳ್ಳಲು ಸಾಧ್ಯ' ಎಂದು ಪ್ರಶ್ನಿಸಿದೆ.

ಮತ್ತೊಂದು ಪೋಸ್ಟರ್‌ನಲ್ಲಿ, 'ಅಸ್ಥಿರ ಪ್ರಧಾನಿ ಅಭ್ಯರ್ಥಿ. ಬೆಂಗಳೂರು ಬಿಹಾರ ಸಿಎಂ ನಿತೀಶ್ ಕುಮಾರ್ ಅವರಿಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಿದೆ. ಸುಲ್ತಾನ್‌ಗಂಜ್ ಸೇತುವೆ ಕುಸಿತಗೊಂಡ ಮೊದಲ ದಿನ ಏಪ್ರಿಲ್ 2022. ಸುಲ್ತಾನ್‌ಗಂಜ್ ಸೇತುವೆ ಕುಸಿತಗೊಂಡ ಎರಡನೇ ದಿನ ಜೂನ್ 2023' ಎಂದು ಹೇಳಲಾಗಿದೆ.

ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಡಿಕೆಶಿ ತಿರುಗೇಟು : ಅಧಿಕಾರಿಗಳ ದುರ್ಬಳಕೆ ವಿಚಾರವಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ನಾನು ಹೆಚ್​ಡಿಕೆಗೆ ಉತ್ತರ ಕೊಡಲು ತಯಾರಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಸರ್ಕಾರ ಇರುತ್ತೆ ಹೋಗುತ್ತೆ. ಪ್ರೋಟೋಕಾಲ್ ಪ್ರಕಾರ ಈ ಕಾರ್ಯಕ್ರಮ ಇರುತ್ತೆ. ಅಲ್ಲಿ ಯಾರು ಇರಬೇಕೋ ಇರ್ತಾರೆ. ಸ್ವೀಕರಿಸೋದಕ್ಕೆ ಕಳಿಸೋದಕ್ಕೆ ಇರ್ತಾರೆ. ನಾನು ಸೇರಿ ಸಚಿವರು ಸಿಎಂಗಳನ್ನು ಬರಮಾಡಿಕೊಂಡಿದ್ದೇವೆ. ಪ್ರೋಟೋಕಾಲ್ ಪ್ರಕಾರ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.

ಇದನ್ನೂ ಓದಿ : ಮಹಾಘಟಬಂಧನ್‌ ನಾಯಕರಿಗೆ ಮಧ್ಯಾಹ್ನ ಡಿಕೆಶಿ, ಸಂಜೆ ಸೋನಿಯಾ ಔತಣಕೂಟ

Last Updated : Jul 18, 2023, 1:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.