ETV Bharat / state

ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ ಬದುಕನ್ನು ಇನ್ನಷ್ಟು ಅಭದ್ರಗೊಳಿಸಿದೆ: ಸಿದ್ದರಾಮಯ್ಯ

ಗೌರವಧನ ಹೆಚ್ಚಿಸಿ, ಸೇವಾ ಸೌಲಭ್ಯ ಒದಗಿಸಿ ಅತಿಥಿ ಉಪನ್ಯಾಸಕರ ಬದುಕಿಗೆ ನೆರವಾಗಬೇಕಾಗಿದ್ದ ಸರ್ಕಾರ ಅವರ ಬದುಕನ್ನು ಅಭದ್ರಗೊಳಿಸಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್​ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.

Siddaramaiah outrage seats BJP govt
ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ
author img

By

Published : Jan 16, 2022, 10:52 PM IST

ಬೆಂಗಳೂರು: ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ ಬದುಕನ್ನ ಇನ್ನಷ್ಟು ಅಭದ್ರಗೊಳಿಸಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

  • ಗೌರವಧನ ಹೆಚ್ಚಿಸಿ, ಸೇವಾ ಸೌಲಭ್ಯ ಒದಗಿಸಿ ಅತಿಥಿ ಉಪನ್ಯಾಸಕರ ಬದುಕಿಗೆ ನೆರವಾಗಬೇಕಾಗಿದ್ದ @BJP4Karnataka ತನ್ನ ತಂತ್ರ-ಕುತಂತ್ರದ ಕ್ರಮಗಳ ಮೂಲಕ ಅವರ ಬದುಕನ್ನು ಇನ್ನಷ್ಟು ಅಭದ್ರಗೊಳಿಸಿ ವಿಶ್ವಾಸದ್ರೋಹ ಎಸಗಿದೆ.#ಅತಿಥಿ_ಉಪನ್ಯಾಸಕರು
    1/5 pic.twitter.com/gJv6ikBWnQ

    — Siddaramaiah (@siddaramaiah) January 16, 2022 " class="align-text-top noRightClick twitterSection" data=" ">

ಟ್ವೀಟ್ ಮೂಲಕ ಅಸಮಾಧಾನ ಹೊರ ಹಾಕಿರುವ ಅವರು, ಗೌರವಧನ ಹೆಚ್ಚಿಸಿ, ಸೇವಾ ಸೌಲಭ್ಯ ಒದಗಿಸಿ ಅತಿಥಿ ಉಪನ್ಯಾಸಕರ ಬದುಕಿಗೆ ನೆರವಾಗಬೇಕಾಗಿದ್ದ ರಾಜ್ಯ ಬಿಜೆಪಿ ಸರ್ಕಾರ ತನ್ನ ತಂತ್ರ-ಕುತಂತ್ರದ ಕ್ರಮಗಳ ಮೂಲಕ ಅವರ ಬದುಕನ್ನು ಇನ್ನಷ್ಟು ಅಭದ್ರಗೊಳಿಸಿ ವಿಶ್ವಾಸದ್ರೋಹ ಎಸಗಿದೆ ಎಂದಿದ್ದಾರೆ.

ಅತಿಥಿ ಉಪನ್ಯಾಸಕರ 8 ಗಂಟೆಯ ತರಗತಿಗಳಿಗೆ ನೀಡುತ್ತಿದ್ದ 11-12 ಸಾವಿರ ಗೌರವಧನವನ್ನು ರೂ.30-32 ಸಾವಿರಕ್ಕೆ ಹೆಚ್ಚಿಸಿರುವ ಬಿಜೆಪಿ ಸರ್ಕಾರ, ಅವರ ತರಗತಿಗಳ ಅವಧಿಯನ್ನು 8 ಗಂಟೆಯಿಂದ 16 ಗಂಟೆಗೆ ಹೆಚ್ಚಿಸಿ ಒಂದು ಕೈಯಲ್ಲಿ ಕೊಟ್ಟಿರುವುದನ್ನು ಇನ್ನೊಂದು ಕೈಯಿಂದ ಕಿತ್ತುಕೊಂಡಿದೆ ಎಂದು ದೂರಿದ್ದಾರೆ.

  • ಅತಿಥಿ ಉಪನ್ಯಾಸಕರ
    8 ಗಂಟೆಯ ತರಗತಿಗಳಿಗೆ ನೀಡುತ್ತಿದ್ದ 11-12 ಸಾವಿರ ಗೌರವಧನವನ್ನ ರೂ.30-32 ಸಾವಿರಕ್ಕೆ ಹೆಚ್ಚಿಸಿರುವ @BJP4Karnataka ಸರ್ಕಾರ,
    ಅವರ ತರಗತಿಗಳ ಅವಧಿಯನ್ನು
    8 ಗಂಟೆಯಿಂದ 16 ಗಂಟೆಗೆ ಹೆಚ್ಚಿಸಿ ಒಂದು ಕೈಯಲ್ಲಿ ಕೊಟ್ಟಿರುವುದನ್ನು ಇನ್ನೊಂದು ಕೈಯಿಂದ ಕಿತ್ತುಕೊಂಡಿದೆ.#ಅತಿಥಿ_ಉಪನ್ಯಾಸಕರು
    2/5 pic.twitter.com/Twsi2W3D83

ಅತಿಥಿ ಉಪನ್ಯಾಸಕರ ಗೌರವಧನವನ್ನು ಹೆಚ್ಚಿಸುವ ಜೊತೆಯಲ್ಲಿ ಅವರ ತರಗತಿಗಳ ಅವಧಿಯನ್ನು ಹೆಚ್ಚಿಸಿ ಅರ್ಧದಷ್ಟು ಅತಿಥಿ ಉಪನ್ಯಾಸಕರನ್ನು ಮನೆಗೆ ಕಳಿಸಲು ಹೊರಟಿರುವುದು ಸ್ಪಷ್ಟವಾಗಿದೆ. ಇದು ನಿರಂತರ ಶೋಷಿತ ಅತಿಥಿ ಉಪನ್ಯಾಸಕರಿಗೆ ಬಗೆದಿರುವ ದ್ರೋಹವಾಗಿದೆ. ಕಾರ್ಯಭಾರವನ್ನು ದುಪ್ಪಟ್ಟುಗೊಳಿಸುವ ನಿರ್ಧಾರದಿಂದಾಗಿ ಸುಮಾರು 14-15 ಸಾವಿರ ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳಲಿದ್ದಾರೆ. ಹೊಸದಾಗಿ ಅತಿಥಿ ಉಪನ್ಯಾಸಕರ ನೇಮಕಾತಿಯ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಚಾಲನೆ ನೀಡಿರುವುದು ಈ ಅನುಮಾನವನ್ನು ಬಲಪಡಿಸಿದೆ ಎಂದಿದ್ದಾರೆ.

  • ಕಾರ್ಯಭಾರವನ್ನು ದುಪ್ಪಟ್ಟು ಗೊಳಿಸುವ ನಿರ್ಧಾರದಿಂದಾಗಿ ಸುಮಾರು 14-15 ಸಾವಿರ ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳಲಿದ್ದಾರೆ.

    ಹೊಸದಾಗಿ ಅತಿಥಿ ಉಪನ್ಯಾಸಕರ ನೇಮಕಾತಿಯ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಚಾಲನೆ ನೀಡಿರುವುದು ಈ ಅನುಮಾನವನ್ನು ಬಲಪಡಿಸಿದೆ.#ಅತಿಥಿ_ಉಪನ್ಯಾಸಕರು
    4/5 pic.twitter.com/eUrbfweuGO

ಅತಿಥಿ ಉಪನ್ಯಾಸಕರ ಗೌರವಧನವನ್ನು ಹೆಚ್ಚಿಸಿರುವ ಬಿಜೆಪಿ ಸರ್ಕಾರ, ಅವರ ಕಾರ್ಯಭಾರದ ಎಂಟು ಗಂಟೆಯ ಅವಧಿಯನ್ನು ಹಿಂದಿನಂತೆಯೇ ಉಳಿಸಬೇಕು. ಈಗಾಗಲೇ ನಿವೃತ್ತಿಗೆ ಸಮೀಪ ಇರುವ ಅತಿಥಿ ಉಪನ್ಯಾಸಕರೂ ಸೇರಿದಂತೆ ಎಲ್ಲರಿಗೂ ಸೇವಾ ಭದ್ರತೆಯನ್ನು ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿಂದು 34,047 ಮಂದಿಗೆ ಕೊರೊನಾ, ಸೋಂಕಿನಿಂದ 13 ಸಾವು: ಪಾಸಿಟಿವಿಟಿ ರೇಟ್​ ಶೇ.19..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.