ಬೆಂಗಳೂರು: ಭಾರತದಲ್ಲಿ ಕ್ರಾಸ್ ಆಗಿ ಹುಟ್ಟಿರುವವರು ಸಾಕಷ್ಟು ಜನ ಇದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಲವ್ ಜಿಹಾದ್ ಬಗ್ಗೆ ಪ್ರತಿಕ್ರಿಯಿಸುತ್ತಾ, ಬಿಜೆಪಿಯವರು ಈಗ ಲವ್ ಜಿಹಾದ್ ಬಗ್ಗೆ ಮಾತನಾಡುತ್ತಿದ್ದಾರೆ. ಬೇರೆ ಬೇರೆ ಧರ್ಮದವರು ಮದುವೆ ಆಗಬಾರದು ಅಂತಾರೆ. ಹಾಗೆ ಲೆಕ್ಕ ಹಾಕಿದ್ರೆ, ಭಾರತದಲ್ಲಿ ಮೊಘಲರು ಆಳ್ವಿಕೆ ಮಾಡಿದ್ದಾರೆ. ಆಗೆಲ್ಲ ಸಾಕಷ್ಟು ಸಂಬಂಧಗಳು ಬೆಳೆದಿವೆ. ಭಾರತದಲ್ಲಿ ಕ್ರಾಸ್ ಆಗಿ ಹುಟ್ಟಿರುವವರು ಸಾಕಷ್ಟು ಜನ ಇದ್ದಾರೆ ಎಂದಿದ್ದಾರೆ.
ಈಗ ಲವ್ ಜಿಹಾದ್ ಕಾಯಿದೆ ತರುತ್ತೇನೆ ಅನ್ನೋದು ಫೂಲಿಷ್ ಥಿಂಗ್. ಲವ್ ಜಿಹಾದ್ ತಡೆ ಕಾಯ್ದೆ ತರಲು ಕಾನೂನಿನಲ್ಲಿ ಅವಕಾಶ ಇಲ್ಲ. ಅದು ಸಂವಿಧಾನ ಭಾಹಿರವಾಗಿದೆ. ನ್ಯಾಯಾಲಯವೂ ಅಂತರಜಾತಿ ಮದುವೆ ಸಿಂಧು ಎಂದು ಹೇಳಿದೆ. ಹಾಗಿದ್ದಾಗ ಬಿಜೆಪಿ ಕಾನೂನು ತರುವುದರ ಹಿಂದೆ ರಾಜಕೀಯ ಇದೆ ಎಂದು ಕಿಡಿ ಕಾರಿದರು.