ಬೆಂಗಳೂರು: ಪ್ರತಿಯೊಂದಕ್ಕೂ ಆನ್‌ಲೈನ್ ನೆರವು ಪಡೆಯುವ ಮುನ್ನ ಎಚ್ಚರವಿರಲಿ. ಆನ್‌ಲೈನ್‌ನಲ್ಲಿ ಜಾಹೀರಾತು ನೀಡಿ ರೆಫ್ರಿಜರೇಟರ್ ರಿಪೇರಿ ಮಾಡುವ ನೆಪದಲ್ಲಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಅಬ್ದುಲ್ ಸುಭಾನ್ ಬಂಧಿತ ಆರೋಪಿ.
ವ್ಯಕ್ತಿಯೊಬ್ಬರು ತಮ್ಮ ಮನೆಯ ರೆಫ್ರಿಜರೇಟರ್ ರಿಪೇರಿಗಾಗಿ ಗೂಗಲ್ ಜಾಹೀರಾತು ನೋಡಿ ಆರೋಪಿಯನ್ನು ಸಂಪರ್ಕಿಸಿದ್ದರು. ಈ ವೇಳೆ ರೆಫ್ರಿಜಿರೇಟರ್ ಫೋಟೋವನ್ನು ವಾಟ್ಸ್ಆ್ಯಪ್ ಮೂಲಕ ತರಿಸಿಕೊಂಡಿದ್ದ ಆರೋಪಿ, ಗೊತ್ತಿಲ್ಲದಂತಹ ವೈಜ್ಞಾನಿಕ ಉಪಕರಣ ಹಾಳಾಗಿರುವುದಾಗಿ ಹೇಳಿ, ತಾನು ರಿಪೇರಿ ಮಾಡುವುದಾಗಿ ನಂಬಿಸಿದ್ದಾನೆ. ಬಳಿಕ 9 ರಿಂದ 10 ಸಾವಿರ ಹಣ ಪಾವತಿಸುವಂತೆ ಗೂಗಲ್ ಪೇ ಮಾಡಿಸಿಕೊಂಡಿದ್ದಾನೆ. ನಂತರ ಯಾವುದೇ ರಿಪೇರಿ ಮಾಡದೇ, ಕರೆ ಸ್ವೀಕರಿಸದೆ ವಂಚಿಸಿದ್ದಾನೆ ಎಂದು ದೂರು ದಾಖಲಾಗಿದೆ.
ಇದನ್ನೂ ಓದಿ: ಕೊಳ್ಳೇಗಾಲ: ನಕಲಿ ಚಿನ್ನ ಕೊಟ್ಟು ವಂಚಿಸುತ್ತಿದ್ದ ಮಹಿಳೆಯರ ಬಂಧನ, 3 ಪ್ರಕರಣ ಬೆಳಕಿಗೆ
ಇದರಿಂದ ಬೇಸತ್ತ ರೆಫ್ರಿಜಿರೇಟರ್ ಮಾಲೀಕ ಈಶಾನ್ಯ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ, ಕೃತ್ಯಕ್ಕೆ ಬಳಸುತ್ತಿದ್ದ ಎರಡು ಮೊಬೈಲ್, ನಾಲ್ಕು ಸಿಮ್ ಕಾರ್ಡ್ ವಶಕ್ಕೆ ಪಡೆದಿದ್ದಾರೆ.