ETV Bharat / state

ಕೋಲಾರದಲ್ಲಿ ಆಮ್ಲಜನಕ, ಬೆಡ್ ಸಮಸ್ಯೆ ಆದರೆ ಅಧಿಕಾರಿಗಳೇ ಹೊಣೆ: ಡಿಸಿಎಂ ಅಶ್ವತ್ಥ ನಾರಾಯಣ

author img

By

Published : May 4, 2021, 4:02 PM IST

ಬೆಂಗಳೂರಿನಲ್ಲಿ‌ ಆಮ್ಲಜನಕ, ಬೆಡ್ ಸಮಸ್ಯೆ ಸವಾಲಾಗಿದೆ. ಕಲಬುರಗಿ, ಮೈಸೂರು, ಮಂಗಳೂರು ಸೇರಿದಂತೆ ಕೋವಿಡ್ ಪ್ರಕರಣ ಹೆಚ್ಚಿರುವ ಕಡೆ ಸವಾಲು, ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸೋ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ashwath-narayan
ಡಿಸಿಎಂ ಅಶ್ವತ್ಥ್ ನಾರಾಯಣ್‌

ಬೆಂಗಳೂರು: ಕೋಲಾರದಲ್ಲಿ ಬೆಡ್, ಆಕ್ಸಿಜನ್ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು. ತೊಂದರೆಯಾದರೆ ಅಧಿಕಾರಿಗಳೇ ನೇರ ಹೊಣೆ ಎಂದು ಖಡಕ್ ವಾರ್ನಿಂಗ್ ನೀಡಲಾಗಿದೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ಸ್ಪಷ್ಟಪಡಿಸಿದ್ದಾರೆ.

ಸರ್ಕಾರಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‌ 1912 ಸಹಾಯವಾಣಿ ಉತ್ತಮವಾಗಿ ಕೆಲಸ ಮಾಡುತ್ತಿಲ್ಲ. ಹೆಲ್ಪ್​ಲೈನ್​ ಯಶಸ್ವಿಯಾಗಿ ನಡೆಯಲು ಸರ್ವಪ್ರಯತ್ನ ಆಗಬೇಕು. ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಅದನ್ನು ಸರಿಪಡಿಸಲು ಎರಡು ದಿನದ ಗಡುವನ್ನು ನೀಡಿದ್ದೇನೆ. ತಕ್ಷಣವೇ ಅದನ್ನು ಸರಿಪಡಿಸುವ ಕೆಲಸವಾಗಬೇಕು. ಅದೇ ರೀತಿ ಹಾಸಿಗೆ ಹಂಚಿಕೆಯಲ್ಲಿ ಯಾರ ಹಸ್ತಕ್ಷೇಪವೂ ಇರಬಾರದು ಎಂದರು.

ಸ್ವಯಂಚಾಲಿತವಾಗಿ ಕೋವಿಡ್ ಸೋಂಕಿತರಿಗೆ ಹಾಸಿಗೆ ಹಂಚಿಕೆಯಾಗಬೇಕು. ಬೆಡ್ ಹಂಚಿಕೆಗೆ ಪಾರದರ್ಶಕ ವ್ಯವಸ್ಥೆಯಾಗಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಎರಡು ದಿನದಲ್ಲಿ ಎಲ್ಲ ಸರಿಯಾಗಬೇಕು. ಯಾವ ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇದೆ ಎನ್ನುವುದನ್ನು ಆನ್​ಲೈನ್​ನಲ್ಲಿ ತೋರಿಸುತ್ತಿರಬೇಕು. ಸ್ವಯಂಚಾಲಿತವಾಗಿ ಬೆಡ್​ ಹಂಚಿಕೆಯಾಗಬೇಕು ಹಾಗೂ ವಿವಿಧ ಹಂತದಲ್ಲಿ ಮಾಹಿತಿ ಹಂಚಿಕೆಯಾಗಲು ವಿವಿಧ ಆ್ಯಪ್​​ಗಳಿವೆ. ಆ ಎಲ್ಲಾ ಆ್ಯಪ್​​ಗಳನ್ನು ಇಂಡೆಕ್ಸ್ ಇಂಟಿಗ್ರೇಟ್ ಮಾಡಲು ತಿಳಿಸಲಾಗಿದೆ ಎಂದು ವಿವರಿಸಿದರು.

ಡಿಸಿಎಂ ಅಶ್ವತ್ಥ ನಾರಾಯಣ

ಕೋಲಾರದಲ್ಲಿ 700 ಆಕ್ಸಿಜನ್ ಬೆಡ್ ಇದ್ದು, ಅದರಲ್ಲಿ 197 ಐಸಿಯು ಇದೆ. 700 ಆಮ್ಲಜನಕ ರಹಿತ ಬೆಡ್ ಸೇರಿ ಒಟ್ಟು 1400 ಬೆಡ್​ಗಳಿವೆ. ಜಿಲ್ಲೆಯಲ್ಲಿ 3600 ಆಕ್ಟೀವ್ ಕೇಸ್ ಇವೆ. ನಿನ್ನೆ‌ 622 ಕೇಸ್ ಬಂದಿದೆ. ಶೇ. 10ರಷ್ಟು ಜನರಿಗೆ ಮಾತ್ರ ಆಸ್ಪತ್ರೆ ಬೇಕು. 3600 ಜನರಲ್ಲಿ 3000 ಜನ ಹೋಂ ಐಸೋಲೇಷನ್​ನಲ್ಲಿ ಇದ್ದಾರೆ. ನಮ್ಮ ಅಂಕಿ-ಅಂಶದ ಪ್ರಕಾರ, ಕೋಲಾರದಲ್ಲಿ ಬೆಡ್ ಕೊರತೆ ಇಲ್ಲ. ಇನ್ನು ಬೇಡಿಕೆ‌ ಬಂದರೂ ಅದನ್ನು ಈಡೇರಿಸುವ ದಿಕ್ಕಿನಲ್ಲಿ ಕನಿಷ್ಠ 300 ಆಕ್ಸಿಜನ್ ಬೆಡ್​ಗಳನ್ನು ಹೊಸದಾಗಿ ವ್ಯವಸ್ಥೆ ಮಾಡಲಿದ್ದೇವೆ. 150 ಐಸಿಯು ಬೆಡ್ ಹೆಚ್ಚಿಸಲಿದ್ದೇವೆ. ಯಾವ ಸಮಸ್ಯೆ ಇಲ್ಲದೆ ಕೊರೊನಾ ನಿರ್ವಹಣೆ ಮಾಡಲಿದ್ದೇವೆ ಎಂದರು.

ಜಿಲ್ಲೆಯಲ್ಲಿ ಆಮ್ಲಜನಕದ ಕೊರತೆ ಇಲ್ಲ. ಆದರೂ ಮಂದಿನ ದಿನದಲ್ಲಿ ಆಕ್ಸಿಜನ್ ಕೊರತೆ ಆಗದಂತೆ ಕ್ರಮಕ್ಕೆ ಮುಂದಾಗಿದ್ದೇವೆ. 6 ಕೇಲ್ ಆಕ್ಸಿಜನ್ ಸ್ಟೋರೇಜ್​​ಅನ್ನು ಎಸ್ಎಂಆರ್ ಆಸ್ಪತ್ರೆಯಲ್ಲಿ ಅಳವಡಿಕೆ ಮಾಡುತ್ತಿದ್ದೇವೆ. 1000 ಲೀಟರ್​​ ಆಮ್ಲಜನಕ ಉತ್ಪಾದಕ ಘಟಕವನ್ನು ಕೇಂದ್ರ ಸರ್ಕಾರ ಕೊಡುತ್ತಿದೆ. ಅದನ್ನೂ ಅಳವಡಿಸಲಿದ್ದೇವೆ. ಆ ಮೂಲಕ ಕೋಲಾರ ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಸಂಬಂಧ ಸಮಗ್ರವಾಗಿ ಎಲ್ಲ ಸಮಸ್ಯೆ ಪರಿಹರಿಸುವ ಕೆಲಸ ಆಗಲಿದೆ ಎಂದು ಭರವಸೆ ನೀಡಿದರು.

ಬೆಂಗಳೂರಿನಲ್ಲಿ‌ ಆಮ್ಲಜನಕ, ಬೆಡ್ ಸಮಸ್ಯೆ ಸವಾಲಾಗಿದೆ. ಕಲಬುರಗಿ, ಮೈಸೂರು, ಮಂಗಳೂರು ಸೇರಿದಂತೆ ಕೋವಿಡ್ ಪ್ರಕರಣ ಹೆಚ್ಚಿರುವ ಕಡೆ ಸವಾಲು, ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸೋ ಕೆಲಸವನ್ನು ಸರ್ಕಾರ ಮಾಡಲಿದೆ ಎಂದರು.

ಆರೋಗ್ಯ ‌ಸಚಿವರ ವೈಫಲ್ಯ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿಎಂ, ಇದರಲ್ಲಿ ಸುಧಾಕರ್ ಒಬ್ಬರನ್ನೇ ದೂಷಿಸಲಾಗದು. ಎಲ್ಲರೂ ಹೊಣೆಯಾಗಬೇಕು. ಇನ್ನು‌ ಕೆಲ‌ ಕಡೆ ಅಕ್ಸಿಜನ್ ಕೊರತೆಯಾಗಿದೆ. ಇದನ್ನ ಬೇಗ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಓದಿ: ಕಾಳಸಂತೆಯಲ್ಲಿ ರೆಮ್​ಡಿಸಿವಿರ್ ಮಾರಾಟಕ್ಕೆ ಸಿಎಂ ಗರಂ: ತನಿಖೆ ನಡೆಸಿ ಕ್ರಮದ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.