ETV Bharat / state

ಆಸ್ತಿ ವಿಚಾರಕ್ಕೆ ರಾತ್ರೋರಾತ್ರಿ ಮುಚ್ಚಿದ ಕಂಪನಿ: ಬೀದಿಗೆ ಬಿದ್ದ 60 ನೌಕರರ ಕುಟುಂಬಗಳು - NSP Electronics Limited

ಬೆಂಗಳೂರಿನಲ್ಲಿ ಕಾರ್ಮಿಕರಿಗೆ ಯಾವುದೇ ಕಾರಣ ನೀಡದೆ ರಾತ್ರೋರಾತ್ರಿ ಸಂಸ್ಥೆ ಮುಚ್ಚಿರುವುದರಿಂದ ಸುಮಾರು 25-30 ವರ್ಷಗಳಿಂದ ಕೆಲಸ ಮಾಡುತ್ತಿದ್ದ ನೌಕರರ ಜೀವನ ಅಂತತ್ರವಾಗಿದೆ.

dsd
ಬೀದಿಗೆ ಬಿದ್ದ 60 ನೌಕರರ ಕುಟುಂಬಗಳು
author img

By

Published : Jan 29, 2021, 6:39 PM IST

ಬೆಂಗಳೂರು: ಮಹದೇವಪುರ ಕ್ಷೇತ್ರದ ವಿರೇನಹಳ್ಳಿಯಲ್ಲಿ ಎನ್ಎಸ್​ಪಿ ಎಲೆಕ್ಟ್ರಾನಿಕ್ಸ್ ಲಿಮಿಟೆಡ್​ನಲ್ಲಿ ದಾಯಾದಿಗಳ ಆಸ್ತಿ ಜಗಳದಿಂದ ಸುಮಾರು 60 ನೌಕರರು ಬೀದಿಗೆ ಬಂದ ಘಟನೆ ನಡೆದಿದೆ.

ಬೀದಿಗೆ ಬಿದ್ದ 60 ನೌಕರರ ಕುಟುಂಬಗಳು

ಕಳೆದ ಒಂದು ವರ್ಷದಿಂದ ಲಾಕ್​ಡೌನ್ ಸಮಯದಲ್ಲೂ‌ ಕಾರ್ಮಿಕರಿಗೆ ಸರಿಯಾಗಿ ಸಂಬಳ ನೀಡದೇ ಈಗ ಜನವರಿ 13ರಂದು ಸಂಜೆ ರಾತ್ರೋರಾತ್ರಿ ಕಂಪನಿಯನ್ನು ಮುಚ್ಚಾಲಾಗಿದೆ ಎಂದು ನೋಟಿಸ್ ಅಂಟಿಸಿ ಕಂಪನಿಯ ಮುಂದೆ ಬೌನ್ಸರ್​ಗಳನ್ನು ನೇಮಿಸಲಾಗಿದೆ. ಕಂಪನಿ ಮುಂದೆ ಪ್ರತಿಭಟನೆ ನಡೆಸಿದ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಕಾರ್ಮಿಕ ಅಶ್ವಥ್ ನಾರಾಯಣ ಗೌಡ ಮಾತನಾಡಿ, ಕಾರ್ಮಿಕರಿಗೆ ಯಾವುದೇ ಮಾಹಿತಿ ನೀಡದೆ ರಾತ್ರೋರಾತ್ರಿ ಕಂಪನಿಯನ್ನು ಮುಚ್ಚಿದ್ದಾರೆ. ಕಾರ್ಮಿಕರಿಗೆ ಇಎಸ್ಐ ಹಾಗೂ ಪಿಎಫ್​ ಹಣ ನೀಡುತ್ತಿಲ್ಲ. ಕಳೆದ ಆರೇಳು ತಿಂಗಳಿಂದ ಅರ್ಧ ಸಂಬಳವನ್ನು ನೀಡಿ ಏಕಾಏಕಿ ಕಂಪನಿ ಮುಚ್ಚಿದರೆ ನಮ್ಮ ಗತಿಯೇನು. ಮಕ್ಕಳ ಶಾಲಾ-ಕಾಲೇಜುಗಳ ಶುಲ್ಕ ಕಟ್ಟಬೇಕು. ಈ ಬಗ್ಗೆ ಪೊಲೀಸರಿಗೆ ಹಾಗೂ ಕಾರ್ಮಿಕ ಇಲಾಖೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ನಮಗೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.