ETV Bharat / state

'ಸಿದ್ದರಾಮಯ್ಯ ಆಡಳಿತಾವಧಿಯ 14 ಗಂಭೀರ ಪ್ರಕರಣಗಳ ತನಿಖೆ ನಡೆಸಿ' - ಈಟಿವಿ ಭಾರತ ಕನ್ನಡ

ಸಿದ್ದರಾಮಯ್ಯ ಆಡಳಿತದ ಅವಧಿಯಲ್ಲಿದ್ದ ಹಲವು ಗಂಭೀರ ಪ್ರಕರಣಗಳನ್ನು ತನಿಖೆ ನಡೆಸಬೇಕೆಂದು ಬಿಜೆಪಿ ಮುಖಂಡ ಎನ್​.ಆರ್.ರಮೇಶ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

NR Ramesh
ಎನ್​.ಆರ್​ ರಮೇಶ್
author img

By

Published : Jan 24, 2023, 7:29 AM IST

'ಸಿದ್ದರಾಮಯ್ಯ ಕಾಲದ ಪ್ರಕರಣಗಳ ತನಿಖೆ ನಡೆಸಿ'

ಬೆಂಗಳೂರು: "ಮಾಜಿ ಸಿಎಂ ಸಿದ್ದರಾಮಯ್ಯ ಆಡಳಿತ ಅವಧಿಯಲ್ಲಿ ಬಹುಕೋಟಿ ಮೊತ್ತದ ಗಂಭೀರ ಸ್ವರೂಪದ 14 ಪ್ರಕರಣಗಳನ್ನು ಮರು ತನಿಖೆ ನಡೆಸಬೇಕು. ಜೊತೆಗೆ, ರಾಜ್ಯ ಸರ್ಕಾರ ಈ ಕೂಡಲೇ ಸಿಐಡಿ ತನಿಖೆಗೂ ಆದೇಶಿಸಬೇಕು" ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಸರ್ಕಾರವನ್ನು ಒತ್ತಾಯಿಸಿದರು. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.

"2013 ರಿಂದ 2018 ರವರೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತವಿತ್ತು. ಈ ಸಂದರ್ಭದಲ್ಲಿ 121 ಬೃಹತ್ ಹಗರಣಗಳಿಗೆ ಸಂಪೂರ್ಣ ದಾಖಲೆಗಳ ಸಹಿತ ಲೋಕಾಯುಕ್ತದಲ್ಲಿ ಪ್ರತ್ಯೇಕವಾಗಿ ದೂರುಗಳನ್ನು ದಾಖಲಿಸಲಾಗಿತ್ತು. ಆದರೆ ಪ್ರಭಾವಕ್ಕೆ ಒಳಗಾಗಿದ್ದ ಕೆಲ ಅಧಿಕಾರಿಗಳು 14 ಪ್ರಕರಣಗಳನ್ನು ಮುಕ್ತಾಯಗೊಳಿಸಿದ್ದಾರೆ" ಎಂದು ದೂರಿದರು. "ಸಿದ್ದರಾಮಯ್ಯ ಮಾತ್ರವಲ್ಲ, ಆಗಿನ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಕೆ.ಜೆ.ಜಾರ್ಜ್, ಕೃಷ್ಣ ಭೈರೇಗೌಡ, ಯು.ಟಿ.ಖಾದರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ಪ್ರಕರಣಗಳಲ್ಲಿ ಲೋಕಾಯುಕ್ತ ಸಂಸ್ಥೆ, ಎಸಿಬಿಯ ಕೆಲ ಅಧಿಕಾರಿಗಳು, ದೂರುದಾರರಿಂದ ಯಾವುದೇ ಹೇಳಿಕೆಗಳನ್ನು ಪಡೆದುಕೊಳ್ಳದೇ ಏಕಾಏಕಿ ಪ್ರಕರಣಗಳನ್ನು ಮುಕ್ತಾಯಗೊಳಿಸಿದ್ದಾರೆ" ಎಂದು ಆರೋಪಿಸಿದ್ದಾರೆ.

ಆರೋಪಗಳೇನು?: "ಮಳೆ ಆಧಾರಿತ ಕೃಷಿ ಭೂಮಿಗಳನ್ನು ಹೊಂದಿರುವ ಜಮೀನುಗಳಿಗೆ ಉಚಿತವಾಗಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಡುವ ಹೆಸರಿನಲ್ಲಿ 800 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಲೂಟಿ ಮಾಡಿರುವ ಕೃಷಿ ಭಾಗ್ಯ ಹಗರಣ, ಬಿಬಿಎಂಪಿ ವ್ಯಾಪ್ತಿಯಲ್ಲಿ ಒಳ ಡಸ್ಟ್ ಬಿನ್ ಅಳವಡಿಕೆ ಹೆಸರಿನಲ್ಲಿ ನಡೆದಿರುವ 200 ಕೋಟಿ ಹಗರಣ, ಕಾನೂನು ರೀತಿಯಲ್ಲಿ ನಿಗದಿತ ಶುಲ್ಕ ಪಾವತಿಸದೇ 2013 ರಿಂದ 2018 ರ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಎಲ್ಲ ಬಸ್ ಶೆಟರ್​ಗಳನ್ನು ತಮ್ಮ ಸರ್ಕಾರದ ಮತ್ತು ತಮ್ಮ ಪಕ್ಷದ ಪ್ರಚಾರ ಕಾರ್ಯಕ್ಕಾಗಿ ಬಳಸಿಕೊಂಡು 35 ಕೋಟಿ ರೂಪಾಯಿ ಜಾಹೀರಾತು ಶುಲ್ಕ ವಂಚಿಸಿರುವ ಹಗರಣಗಳಿವು" ಎಂದು ಅವರು ಹೇಳಿದರು.

ಲೋಕಾಯುಕ್ತಕ್ಕೆ ದಾಖಲೆ: "ಇಂದಿರಾ ಕ್ಯಾಂಟೀನ್ ಗ್ರಾಹಕರ ಹೆಸರಿನಲ್ಲಿ ಪ್ರತೀ ತಿಂಗಳು ತಲಾ 28 ಕೋಟಿ ರೂಪಾಯಿಗಳಂತೆ 20 ತಿಂಗಳ ಅವಧಿಯಲ್ಲಿ 560 ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತವನ್ನು ವಂಚಿಸಲಾಗಿದೆ. ಪ್ರತಿಯೊಂದು ಇಂದಿರಾ ಕ್ಯಾಂಟೀನ್​ಗಳ ನಿರ್ಮಾಣದ ಹೆಸರಿನಲ್ಲಿ ತಲಾ 20 ಲಕ್ಷ ರೂಪಾಯಿಗಳಂತೆ 175 ಇಂದಿರಾ ಕ್ಯಾಂಟೀನ್​ಗಳ ನಿರ್ಮಾಣದ ಹೆಸರಿನಲ್ಲಿ 35 ಕೋಟಿ ಹಗರಣ, 5,000 ಕೋಟಿಗೂ ಹೆಚ್ಚು ಮೌಲ್ಯದ 7 ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು 65 ವರ್ಷಗಳ ಗುತ್ತಿಗೆ ಪಡೆಯುವ ಹೆಸರಿನಲ್ಲಿ ಕೆ.ಜೆ.ಜಾರ್ಜ್ ರವರ ಎಂಬಾಸ್ಸಿ ಸಂಸ್ಥೆಯ ಮುಖೇನ ಕಬಳಿಸಲು ಹೊರಟಿದ್ದ ಬೃಹತ್ ಸರ್ಕಾರಿ ಭೂ ಕಬಳಿಕೆ ಸಂಚಿನ ಹಗರಣ, ಸರ್ಕಾರಿ ಭೂ ಕಬಳಿಕೆ ಹಗರಣಗಳೂ ಸೇರಿದಂತೆ ಒಟ್ಟು 14 ಹಗರಣಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ ಮಹತ್ವದ ದಾಖಲೆಗಳನ್ನು ಸಲ್ಲಿಸಲಾಗಿದೆ" ಎಂದು ಎನ್‌.ಆರ್‌.ರಮೇಶ್ ಕುಮಾರ್ ತಿಳಿಸಿದ್ದಾರೆ.

ಸಿಐಡಿ ತನಿಖೆಗೆ ಆಗ್ರಹ: ಈ 14 ಪ್ರಕರಣಗಳನ್ನು ಮರು ತನಿಖೆ ನಡೆಸಿದರೆ ಪ್ರಭಾವಿ ವ್ಯಕ್ತಿಗಳ ಹಗರಣ ಬಯಲಿಗೆ ಬರಲಿದೆ. ಹೀಗಾಗಿ, ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಮುಂದಾಗಲಿ. ಲೋಕಾಯುಕ್ತರು ಎಲ್ಲಾ ಹಗರಣಗಳನ್ನು ಮರು ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಭ್ರಷ್ಟಾಚಾರ, ಸಾಧನೆ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ, ದಾಖಲೆಯೊಂದಿಗೆ ಉತ್ತರಿಸುವೆ: ಕಾಂಗ್ರೆಸ್ ಗೆ ಸುಧಾಕರ್ ಸವಾಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.