ETV Bharat / state

ಕುಣಿಗಲ್ ಗಿರಿ ಕ್ಲಬ್​ನಲ್ಲೇ ಪಾರ್ಟಿ ಮಾಡೋದು ಯಾಕೆ ? ಇದರ ಹಿಂದಿನ ಉದ್ದೇಶ ಏನ್ ​ಗೊತ್ತಾ?

ಕೋರಮಂಗಲದಲ್ಲಿರುವ ಕ್ಲಬ್​ವೊಂದರಲ್ಲಿ ಅಡಗಿ ಕುಳಿತ್ತಿದ್ದ ಕುಣಿಗಲ್ ಗಿರಿ ಹಾಗೂ ಆತನ ಗ್ಯಾಂಗ್​ನ್ನು ಪೊಲೀಸರು ಸೋಮವಾರವೇ ಬಂಧಿಸಿದ್ದರು. ಈತ ತಾನು ಅಡಗಿಕೊಳಿತುಕೊಂಡಿದ್ದ ಕ್ಲಬ್​ನಲ್ಲಿ ದರೋಡೆ ಮಾಡುವ ಪ್ಲಾನ್​ ಹಾಕಿಕೊಂಡಿದ್ದ ಎಂಬ ಮಾಹಿತಿ ತನಿಖೆ ವೇಳೆ ಹೊರ ಹಾಕಿದ್ದಾನೆ.

ಕುಣಿಗಲ್ ಗಿರಿ
author img

By

Published : Jul 17, 2019, 7:08 PM IST

Updated : Jul 17, 2019, 8:12 PM IST

ಬೆಂಗಳೂರು: ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ನಟೋರಿಯಸ್ ಎಂದೇ ಕುಖ್ಯಾತಿಯಾಗಿರುವ ಕುಣಿಗಲ್ ಗಿರಿಯನ್ನು ಕೋರಮಂಗಲ ಪೊಲೀಸರು ಬಂಧಿಸಿ ನಡೆಸಿದ ವಿಚಾರಣೆಯಲ್ಲಿ ತಾನು ಅಡಗಿಕೊಂಡಿದ್ದ ಕ್ಲಬ್​ನಲ್ಲಿ ದರೋಡೆ ಮಾಡಲು ಸ್ಕೆಚ್ ಹಾಕಿದ್ದ ಎಂಬ ಮಾಹಿತಿ ತನಿಖೆಯಿಂದ ಬಯಲಾಗಿದೆ.

ಕ್ಲಬ್​​ಗಳಲ್ಲಿ ಪಾರ್ಟಿ ಮಾಡೋದೆ ದರೋಡೆಗಾಗಿ:
ಕೋರಮಂಗಲದಲ್ಲಿರುವ ಕ್ಲಬ್​ನಲ್ಲಿ ಕುಣಿಗಲ್ ಗಿರಿ ಹಾಗೂ ಆತನ ಗ್ಯಾಂಗ್ ಇದೆ ಎಂಬ ಖಚಿತ ಮಾಹಿತಿ ಮೇರೆಗೆ ಕೋರಮಂಗಲ ಪೊಲೀಸರು ಸೋಮವಾರ ಕ್ಲಬ್​ ಮೇಲೆ ದಾಳಿ ನಡೆಸಿ ಕುಣಿಗಲ್ ಗಿರಿ ಆತನ ಸಹಚರರಾದ ಹೇಮಂತ್, ಭರತ್, ಗಂಗಾಧರ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಈ ಕ್ಲಬ್​ನಲ್ಲಿ ಡರೋಡೆ ಸಂಚು ರೂಪಿಸಿದ್ದು, ಮಾರಕಾಸ್ತ್ರಗಳನ್ನು ವೊಕ್ಸೊ ವ್ಯಾಗನ್ ಕಾರಿನಲ್ಲಿಟ್ಟು ನಾಲ್ವರು ಕ್ಲಬ್​ಗೆ ಬಂದಿದ್ದೆವು . ಸಮಯ ನೋಡಿ ದರೋಡೆಗೆ ಮಾಡಲು ಪ್ಲಾನ್ ಮಾಡಿಕೊಂಡಿದ್ದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Bangalore
ಕುಣಿಗಲ್ ಗಿರಿಯ ಸಹಚರರು

ಕುಣಿಗಲ್ ಗಿರಿ ಕ್ಲಬ್​ನಲ್ಲಿ ಇರುವ ಮಾಹಿತಿ ಪಡೆದು ಪೊಲೀಸರು ಎದುರಾದಾಗ ತಾನೊಬ್ಬ ಸಮಾಜ ಸೇವಕ, ರಾಜಕೀಯ ಮುಖಂಡರೊಂದಿಗೂ ಗುರುತಿಸಿಕೊಂಡಿದ್ದೇನೆ. ಎಲ್ಲ ಬಿಟ್ಟು ಬಿಟ್ಟಿದ್ದೀನಿ ಸ್ನೇಹಿತರ ಜೊತೆ ಪಾರ್ಟಿ ಮಾಡಲು ಬಂದಿದ್ದೆ ಅಷ್ಟೆ ಎಂದು ಹೇಳಿ ನುಣುಚಿಕೊಳ್ಳಲು ಪ್ರಯತ್ನಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಸದ್ಯ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರುವ ಗಿರಿ ಕ್ಲಬ್, ಪಬ್​ಗಳನ್ನು ಗುರಿಯಾಗಿಸಿಕೊಂಡು ದರೋಡೆ ಮಾಡಲು‌ ಮುಂದಾಗಿದ್ದು, ಇದೇ ಮೊದಲೇನಲ್ಲ. 2012ರಲ್ಲಿ ತನ್ನ ಪಟಾಲಂ ಜೊತೆ ಸೇರಿ ನಗರದ ಕಂಟ್ರಿ ಕ್ಲಬ್​ನಲ್ಲಿ 7 ಕೋಟಿ ರೂ.ದರೋಡೆ ಮಾಡಿ ಹಣದ ಸಮೇತ ಸಿಕ್ಕಿಬಿದ್ದು 2 ವರ್ಷ ಜೈಲು ಶಿಕ್ಷೆ ಅನುಭವಿಸಿ ಹೊರ ಬಂದಿದ್ದನು. ಬಳಿಕ 2014 ರಲ್ಲಿ ಸ್ಯಾಟಲೈಟ್ ಕ್ಲಬ್​ಗೆ ನುಗ್ಗಿ 30 ಲಕ್ಷ ದರೋಡೆ ಮಾಡಿ ಸಹಚರರೊಂದಿಗೆ ನೆರೆಯ ಆಂಧ್ರದ ಹಿಂದೂಪುರದ ಬಳಿ ಅವಿತು ಕುಳಿತಿದ್ದವನನ್ನ ಪೊಲೀಸರು ಬಂಧಿಸಿ ಕರೆ ತಂದಿದ್ದರು. ಈ ಪ್ರಕರಣದಲ್ಲಿ ಮೂರೂವರೆ ವರ್ಷ ಸಜೆ ಅನುಭವಿಸಿದ್ದ ಗಿರಿ ಕಳೆದ ವರ್ಷವಷ್ಟೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದ.

ಅಲ್ಲಿಂದೀಚೆಗೆ ಕೊಂಚ ಸೈಲೆಂಟಾಗಿದ್ದ ಗಿರಿಗೆ ಪರೇಡ್ ನೆಡೆಸಿದ್ದ ಸಿಸಿಬಿ ಪೊಲೀಸರು ಬಾಲ ಬಿಚ್ಚದಂತೆ ವಾರ್ನಿಂಗ್ ನೀಡಿದ್ದರು‌‌. ಆದರೂ ಇತ್ತೀಚೆಗೆ ಕೆಲ ವೇಶ್ಯಾವಾಟಿಕೆ ಅಡ್ಡೆಗಳಲ್ಲಿ ಯುವತಿಯರಿಗೆ ಲೈಂಗಿಕ ಪ್ರಚೋದನೆ ನೀಡಿ ಹಿಂಸಿಸುವುದು ಸೇರಿದಂತೆ ಧಮಕಿ ಆರೋಪಗಳು ಈತನ ಮೇಲೆ ಮತ್ತೆ ಕೇಳಿ ಬಂದಿದ್ದವು. ಆದ್ದರಿಂದ ಕಳೆದ ತಿಂಗಳ 16 ರಂದು ರೆಸಿಡೆನ್ಸಿ ರಸ್ತೆಯ ಡ್ಯಾನ್ಸ್ ಬಾರೊಂದರಲ್ಲಿ 266 ಯುವತಿಯರನ್ನ ಕರೆಸಿ ತನ್ನ ಸಹಚರರೊಂದಿಗೆ ಲಕ್ಷುರಿಯಾಗಿ ಬರ್ತ್ ಡೇ ಪಾರ್ಟಿ ಮಾಡುತ್ತಿದ್ದಾನೆ ಎಂದು ಮಾಹಿತಿ ಪಡೆದಿದ್ದ ಸಿಸಿಬಿ ಪೊಲೀಸರು ದಾಳಿ ನೆಡೆಸಿದ್ದರು. ಆಗಲೂ ಪೊಲೀಸರ ಕೈಗೆ ಸಿಗದೇ ಎಸ್ಕೇಪ್ ಆಗಿದ್ದ ಗಿರಿ ಕೊನೆಗೂ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡು ಮತ್ತೆ ಕಂಬಿ ಹಿಂದೆ ಸೇರಿದ್ದಾನೆ.

Intro:Body:ಕುಣಿಗಲ್ ಗಿರಿ ಕ್ಲಬ್ ನಲ್ಲೇ ಪಾರ್ಟಿ ಮಾಡೋದು ಯಾಕೆ ? ಇದರ ಹಿಂದಿನ ಉದ್ದೇಶವಾದರೂ ಏನು?.

ಬೆಂಗಳೂರು: ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ನಟೋರಿಯಸ್ ಎಂದೇ ಕುಖ್ಯಾತಿಯಾಗಿರುವ ಕುಣಿಗಲ್ ಗಿರಿಯನ್ನು ಕೋರಮಂಗಲ ಪೊಲೀಸರು ಬಂಧಿಸಿ ನಡೆಸಿದ ವಿಚಾರಣೆಯಲ್ಲಿ ತಾನು ಅಡಗಿಕೊಂಡಿದ್ದ ಕ್ಲಬ್ ನಲ್ಲಿ ಡಕಾಯಿತಿ ಮಾಡಲು ಸ್ಕೆಚ್ ಹಾಕಿದ್ದ ಎಂಬ ಮಾಹಿತಿ ಬಯಲಾಗಿದೆ.
ಕೋರಮಂಗಲದಲ್ಲಿ ಕ್ಲಬ್ ಗೆ ಕುಣಿಗಲ್ ಗಿರಿ ಹಾಗೂ ಆತನ ಗ್ಯಾಂಗ್ ಮದ್ಯ ಸೇವಿಸುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕಳೆದ ಸೋಮವಾರ ರಾತ್ರಿ ಕೋರಮಂಗಲ ಪೊಲೀಸರು ದಾಳಿ ನಡೆಸಿ ಕುಣಿಗಲ್ ಗಿರಿ ಈತನ ಸಹಚರರಾದ ಹೇಮಂತ್, ಭರತ್, ಗಂಗಾಧರ್ ಸೇರಿದಂತೆ ನಾಲ್ವರನ್ನು ಬಂಧಿಸಿತ್ತು. ವಿಚಾರಣೆ ವೇಳೆ ಕ್ಲಬ್ ನಲ್ಲಿ ಕ್ಲಬ್ ನಲ್ಲಿ ಡರೋಡೆ ಸಂಚು ರೂಪಿಸಿದ್ದೆವು. ಹೀಗಾಗಿಯೇ ಮಾರಕಾಸ್ತ್ರಗಳನ್ನು ವೊಕ್ಸೊ ವ್ಯಾಗನ್ ಕಾರಿನಲ್ಲಿಟ್ಟು ನಾಲ್ವರು ಕ್ಲಬ್ ಗೆ ಬಂದಿದ್ದೇವು. ಸಮಯ ನೋಡಿ ದರೋಡೆಗೆ ಮಾಡಲು ಪ್ಲಾನ್ ಮಾಡಿಕೊಂಡಿದ್ದೇವು ಎಂದು ಆರೋಪಿಗಳು ಬಾಯ್ಬಿಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಕುಣಿಗಲ್ ಗಿರಿ ಕ್ಲಬ್ ನಲ್ಲಿ ಇರೋ ಮಾಹಿತಿ ಪಡೆದಿದ್ದ ಪೊಲೀಸರು ಎದುರಾಗುತ್ತಿದ್ದಂತೆ ತಾನೊಬ್ಬ ಸಮಾಜ ಸೇವಕ, ರಾಜಕೀಯ ಮುಖಂಡರೊಂದಿಗೂ ಗುರುತಿಸಿಕೊಂಡಿದ್ದೇನೆ. ಎಲ್ಲಾ ಬಿಟ್ಟುಬಿಟ್ಟಿದ್ದೀನಿ ಸ್ನೇಹಿತರ ಜೊತೆ ಪಾರ್ಟಿ ಮಾಡಲು ಬಂದಿದ್ದೆ ಅಷ್ಟೆ ಎಂದು ಹೇಳಿ ನುಣುಚಿಕೊಳ್ಳಲು ಪ್ರಯತ್ನಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಸದ್ಯ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರುವ ಗಿರಿ ಕ್ಲಬ್, ಪಬ್ ಗಳನ್ನು ಗುರಿಯಾಗಿಸಿಕೊಂಡು ಡಕಾಯಿತಿ ಮಾಡಲು‌ ಮುಂದಾಗಿದ್ದು ಇದೇ ಮೊದಲೇನಲ್ಲ. 2012ರಲ್ಲಿ ತನ್ನ ಪಟಾಲಂ ಜೊತೆ ಸೇರಿ ನಗರದ ಕಂಟ್ರಿ ಕ್ಲಬ್ ನಲ್ಲಿ 7 ಕೋಟಿ ರೂ.ದರೋಡೆ ಮಾಡಿ ಹಣದ ಸಮೇತ ಸಿಕ್ಕಿಬಿದ್ದು 2 ವರ್ಷ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ದ.
ಬಳಿಕ 2014 ರಲ್ಲಿ ಸ್ಯಾಟಲೈಟ್ ಕ್ಲಬ್ ಗೆ ನುಗ್ಗಿ 30 ಲಕ್ಷ ದರೋಡೆ ಮಾಡಿ ಸಹಚರರೊಂದಿಗೆ ನೆರೆಯ ಆಂಧ್ರದ ಹಿಂದೂಪುರದ ಬಳಿ ಅವಿತು ಕುಳಿತಿದ್ದವನನ್ನ ಪೊಲೀಸರು ಬಂಧಿಸಿ ಕರೆತಂದಿದ್ದರು. ಈ ಪ್ರಕರಣದಲ್ಲಿ ಮೂರೂವರೆ ವರ್ಷ ಸಜೆ ಅನುಭವಿಸಿದ್ದ ಗಿರಿ ಕಳೆದ ವರ್ಷವಷ್ಟೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದ.
ಅಲ್ಲಿಂದೀಚೆಗೆ ಕೊಂಚ ಸೈಲೆಂಟಾಗಿದ್ದ ಗಿರಿಗೆ ಚುನಾವಣಾ ಸಂದರ್ಭದಲ್ಲಿ ಪರೇಡ್ ನೆಡೆಸಿದ್ದ ಸಿಸಿಬಿ ಪೊಲೀಸರು ಬಾಲ ಬಿಚ್ಚದಂತೆ ವಾರ್ನಿಂಗ್ ನೀಡಿದ್ದರು‌‌. ಆದರೂ ಸಹ ಇತ್ತೀಚಿಗೆ ಕೆಲ ವೇಶ್ಯಾವಾಟಿಕೆ ಅಡ್ಡೆಗಳಲ್ಲಿ ಯುವತಿಯರಿಗೆ ಲೈಂಗಿಕ ಪ್ರಚೋದನೆ ನೀಡಿ ಹಿಂಸಿಸುವುದು ಸೇರಿದಂತೆ ಧಮಕಿ ಆರೋಪಗಳು ಈತನ ಮೇಲೆ ಮತ್ತೆ ಕೇಳಿ ಬಂದಿದ್ದವು. ಆದ್ದರಿಂದ ಕಳೆದ ತಿಂಗಳ 16 ರಂದು ರೆಸಿಡೆನ್ಸಿ ರಸ್ತೆಯ ಡ್ಯಾನ್ಸ್ ಬಾರೊಂದರಲ್ಲಿ 266 ಯುವತಿಯರನ್ನ ಕರೆಸಿ ತನ್ನ ಸಹಚರರೊಂದಿಗೆ ಲಕ್ಷುರಿಯಾಗಿ ಬರ್ತ್ ಡೇ ಪಾರ್ಟಿ ಮಾಡುತ್ತಿದ್ದಾನೆ ಎಂದು ಮಾಹಿತಿ ಪಡೆದಿದ್ದ ಸಿಸಿಬಿ ಪೊಲೀಸರು ದಾಳಿ ನೆಡೆಸಿದ್ದರು. ಆಗಲೂ ಪೊಲೀಸರ ಕೈಗೆ ಸಿಗದೆ ಎಸ್ಕೇಪ್ ಆಗಿದ್ದ ಗಿರಿ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡು ಮತ್ತೆ ಕಂಬಿ ಹಿಂದೆ ಸೇರಿದ್ದಾನೆ.

Conclusion:
Last Updated : Jul 17, 2019, 8:12 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.