IND vs SA 4th T20: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟಿ20 ಸರಣಿಯ ನಾಲ್ಕನೇ ಮತ್ತು ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸುವ ಮೂಲಕ ಸರಣಿ ವಶಪಡಿಸಿಕೊಂಡಿದೆ.
ಜೋಹಾನ್ಸ್ಬರ್ಗ್ನ ವಾಂಡರರ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಟೀಂ ಇಂಡಿಯಾ ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಬ್ಯಾಟಿಂಗ್ ನೆರವಿನಿಂದ 283 ರನ್ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಭಾರತದ ಮಾರಕ ಬೌಲಿಂಗ್ ದಾಳಿಗೆ ಸಿಲುಕಿ 148 ರನ್ಗಳಿಗೆ ಸರ್ವಪತನ ಕಂಡಿತು. ಟ್ರಿಸ್ಟನ್ ಸ್ಟಬ್ಸ್ (43) ಮತ್ತು ಡೆವಿಡ್ ಮಿಲ್ಲರ್ (36), ಜಾನ್ಸೆನ್ (29), ಕೊಯಿಟ್ಝೆ (12) ಹೊರತುಪಡಿಸಿ ಉಳಿದ ಬ್ಯಾಟರ್ಗಳು ಎರಡಂಕಿ ಕಲೆಹಾಕಲು ಸಾಧ್ಯವಾಗದೇ ಪೆವಿಲಿಯನ್ ಸೇರಿದರು. ಇದರಿಂದಾಗಿ ಟೀಂ ಇಂಡಿಯಾ 135 ರನ್ಗಳಿಂದ ಗೆಲುವು ಸಾಧಿಸಿತು.
𝙒𝙄𝙉𝙉𝙀𝙍𝙎!
— BCCI (@BCCI) November 15, 2024
Congratulations to #TeamIndia on winning the #SAvIND T20I series 3⃣-1⃣ 👏👏
Scorecard - https://t.co/b22K7t9imj pic.twitter.com/oiprSZ8aI2
ಭಾರತದ ಪರ ಅರ್ಷದೀಪ್ 3 ವಿಕೆಟ್ ಉರುಳಿಸಿದರೆ, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್ ತಲಾ 2, ಹಾರ್ದಿಕ್ ಪಾಂಡ್ಯ, ಬಿಷ್ಣೋಯಿ, ರಮಣ್ದೀಪ್ ಸಿಂಗ್ ತಲಾ 1 ವಿಕೆಟ್ ಪಡೆದು ಮಿಂಚಿದರು. ಯುವ ಬ್ಯಾಟರ್ ತಿಲಕ್ ವರ್ಮಾ ಅತ್ಯುತ್ತಮ ಪ್ರದರ್ಶನ ತೋರಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದರೊಂದಿಗೆ ಟೀಂ ಇಂಡಿಯಾ ಒಂದೇ ಪಂದ್ಯದಲ್ಲಿ 9 ದಾಖಲೆಗಳನ್ನು ಬರೆದಿದೆ.
9 ದಾಖಲೆ ಬರೆದ ಟೀಂ ಇಂಡಿಯಾ
283 ರನ್- ದಕ್ಷಿಣ ಆಫ್ರಿಕಾ ವಿರುದ್ಧ ಟಿ20ಯಲ್ಲಿ ಅತ್ಯಧಿಕ ಮೊತ್ತ ದಾಖಲಿಸಿದ ಮೊದಲ ತಂಡ. ಮತ್ತು T20I ನಲ್ಲಿ ಭಾರತದ ಎರಡನೇ ಅತಿ ಹೆಚ್ಚು ಸ್ಕೋರ್.
ಬೃಹತ್ ಅಂತರದ ಗೆಲುವು: ದಕ್ಷಿಣ ಆಫ್ರಿಕಾ ವಿರುದ್ಧ 135 ರನ್ಗಳ ಅಂತರದಿಂದ ಗೆಲುವು ಸಾಧಿಸಿದ ಮೊದಲ ತಂಡವಾಗಿ ಟೀಂ ಇಂಡಿಯಾ ದಾಖಲೆ.
A 135-run victory in Johannesburg! #TeamIndia seal the T20I series 3⃣-1⃣ 👏👏
— BCCI (@BCCI) November 15, 2024
Ramandeep Singh with the final wicket as South Africa are all out for 148.
Scorecard - https://t.co/b22K7t9imj#SAvIND pic.twitter.com/AF0i08T99Y
23 ಸಿಕ್ಸರ್ಗಳು: ಭಾರತ ತಂಡ ಟಿ20 ಇನ್ನಿಂಗ್ಸ್ ವೊಂದರಲ್ಲೇ ಅತಿ ಹೆಚ್ಚು ಸಿಕ್ಸರ್‌ಗಳನ್ನು ಹೊಡೆದ ದಾಖಲೆ (23) ಬರೆಯಿತು.
ತಿಲಕ್ ವರ್ಮಾ: ಟಿ20 ಯಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಗಳಿಸಿದ ಎರಡನೇ ಭಾರತೀಯ ಬ್ಯಾಟರ್ ಆಗಿ ದಾಖಲೆ ಬರೆದ ತಿಲಕ್ ವರ್ಮಾ.
4 innings
— BCCI (@BCCI) November 15, 2024
280 runs 🙌
Two outstanding 🔙 to 🔙 T20I Hundreds 💯
Tilak Varma is named the Player of the Series 🥳
Scorecard - https://t.co/b22K7t9imj#TeamIndia | #SAvIND | @TilakV9 pic.twitter.com/JoEED4Z3Ij
ಸಂಜು ಸ್ಯಾಮ್ಸನ್: ಒಂದೇ ವರ್ಷದಲ್ಲಿ ಟಿ20 ಕ್ರಿಕೆಟ್‌ನಲ್ಲಿ 3 ಶತಕ ಗಳಿಸಿದ ಮೊದಲ ಆಟಗಾರನಾಗಿ ಸ್ಯಾಮ್ಸನ್ ದಾಖಲೆ.
ಅತ್ಯಧಿಕ ಪಾಲುದಾರಿಕೆ: ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ನಡುವೆ 210 ರನ್ಗಳ ಜೊತೆಯಾಟ ಆಡಿದ್ದು, ಇದರೊಂದಿಗೆ ಯಾವುದೇ ವಿಕೆಟ್ಗೆ ಭಾರತಕ್ಕಾಗಿ ಇದುವರೆಗಿನ ಅತ್ಯಧಿಕ ಪಾಲುದಾರಿಕೆ ಆಗಿದೆ.
12 ವಿಕೆಟ್: ಈ ಸರಣಿಯಲ್ಲಿ ಕನ್ನಡಿಗ ವರುಣ್ ಚಕ್ರವರ್ತಿ ಒಟ್ಟು 12 ವಿಕೆಟ್ ಪಡೆದು ದಾಖಲೆ ಬರೆದಿದ್ದಾರೆ. ಭಾರತಕ್ಕಾಗಿ ದ್ವಿಪಕ್ಷಿಯ ಟಿ20 ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.
ಮೊದಲ ಜೋಡಿ: ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಟಿ20 ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಪರ ಗರಿಷ್ಠ ಜೊತೆಯಾಟವನ್ನು ಸಾಧಿಸಿದ ಮೊದಲ ಜೋಡಿ ಎನಿಸಿಕೊಂಡರು (86 ಎಸೆತಗಳಲ್ಲಿ 210* ರನ್).
ಅತ್ಯಧಿಕ ಸ್ಕೋರ್: ವಿದೇಶಿ ನೆಲದಲ್ಲಿ ನಡೆದ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಇದೇ ಮೊದಲ ಬಾರಿಗೆ 283 ರನ್ಗಳ ಅತ್ಯಧಿಕ ಸ್ಕೋರ್ ದಾಖಲಿಸಿತು. ಇದರೊಂದಿಗೆ ಭಾರತದ 18 ವರ್ಷಗಳ ಟಿ20 ಕ್ರಿಕೆಟ್ ಇತಿಹಾಸದಲ್ಲೇ ವಿದೇಶಿ ನೆಲದಲ್ಲಿ ಮೊದಲ ಬಾರಿಗೆ ದೊಡ್ಡ ಮೊತ್ತ ಕಲೆ ಹಾಕಿತು.