ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಬಳಿಕ ಮೊದಲ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇದು ಜನರ ಬಜೆಟ್ ಆಗಿದ್ದು, ಪ್ರತಿ ಭಾರತೀಯರ ಕನಸನ್ನು ಪೂರ್ಣಗೊಳಿಸುತ್ತದೆ. ಇದು 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಬಣ್ಣಿಸಿದ್ದಾರೆ.
ಸಾಮಾನ್ಯವಾಗಿ ಖಜಾನೆಯನ್ನು ತುಂಬಿಕೊಳ್ಳುವ ಗುರಿಯನ್ನು ಬಜೆಟ್ ಹೊಂದಿರುತ್ತದೆ. ಆದರೆ, ಈ ಬಜೆಟ್ ಜನರ ಜೇಬು ಭರ್ತಿ ಮಾಡುವ, ಆದಾಯ ಹೆಚ್ಚಿಸುವ ಗುರಿಯನ್ನು ಹೊಂದಿದ್ದು, ಇದೊಂದು ಜನಪರ ಬಜೆಟ್ ಮಂಡನೆಯಾಗಿದ್ದು, ಈ ಬಜೆಟ್ ಮಂಡಿಸಿದ್ದಕ್ಕೆ ಕೇಂದ್ರ ವಿತ್ತ ಸಚಿವರು ಮತ್ತು ಅವರ ತಂಡಕ್ಕೆ ಧನ್ಯವಾದಗಳು ಎಂದಿದ್ದಾರೆ.
ವಿಕಸಿತ್ ಭಾರತ್ ಬಜೆಟ್ 2025 ಸರ್ಕಾರ 140 ಕೋಟಿ ಜನರ ಆಕಾಂಕ್ಷೆಯನ್ನು ಪೂರೈಸುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಸಾಮಾನ್ಯ ಜನರು ವಿಕಸಿತ ಭಾರತದ ಚಾಲಕರಾಗಲಿದ್ದಾರೆ. ಬಜೆಟ್ನಲ್ಲಿ ಗಿಗ್ ವರ್ಕರಗಳ ಕಲ್ಯಾಣಕ್ಕೆ ಕ್ರಮ ಕೈಗೊಳ್ಳುವ ಕಾರ್ಮಿಕರ ಗೌರವ ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ಬಜೆಟ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದ ಪ್ರಧಾನಿ, ಜನರ ಈ ಬಜೆಟ್ ಜನರ ಉಳಿತಾಯ ಮತ್ತು ಹೂಡಿಕೆಯನ್ನು ಉತ್ತೇಜಿಸುತ್ತದೆ, ಯುವ ಜನರಿಗೆ ಅನೇಕ ವಲಯಗಳನ್ನು ಮುಕ್ತವಾಗಿಸಿದೆ. ಈ ಬಜೆಟ್ ಬಲ ದ್ವಿಗುಣಗೊಂಡಿದ್ದು, ಉಳಿತಾಮ ಹೂಡಿಕೆ, ಬಳಕೆ ಮತ್ತು ಬೆಳವಣಿಗೆ ತ್ವರಿತಗತಿಯಲ್ಲಿ ಸಾಗಲಿದೆ. ಈ ಬಜೆಟ್ನಲ್ಲಿ ಜನರ ಜೀವನಮಟ್ಟದ ಸುಧಾರಣೆ ಇದೆ. ನ್ಯೂಕ್ಲಿಯರ್ ಎನರ್ಜಿಯಲ್ಲಿ ಖಾಸಗಿ ಸಂಸ್ಥೆಗಳ ಭಾಗಿತ್ವ ಸೇರಿಸಲಾಗಿದೆ.
ಉತ್ಪಾದನಾ ವಲಯದಲ್ಲಿನ ಬಜೆಟ್ ಕ್ರಮಗಳು ಭಾರತದ ಉತ್ಪಾದನೆಯನ್ನು ದೇಶದ ಮಟ್ಟದಲ್ಲಿ ಮಿಂಚುವಂತೆ ಮಾಡುತ್ತದೆ. ರೈತರಿಗಾಗಿ ಬಜೆಟ್‌ನ ಘೋಷಣೆಗಳು ಕೃಷಿ ವಲಯ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುತ್ತದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಮೋದಿ 3.0 ಬಜೆಟ್: ಯಾವ್ಯಾವ ಇಲಾಖೆಗೆ ಎಷ್ಟು ಅನುದಾನ ಇಲ್ಲಿದೆ ಮಾಹಿತಿ!