ಬೆಂಗಳೂರು: ಜೂನ್ 18ರಂದು ದ್ವಿತೀಯ ಪಿಯುಸಿ ಇಂಗ್ಲಿಷ್ ವಾರ್ಷಿಕ ಪರೀಕ್ಷೆ ನಡೆಯಲಿದೆ. ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿನಿಲಯ ವಾಸಿಯಾಗಿದ್ದ ವಿದ್ಯಾರ್ಥಿಗಳು ಮತ್ತು ವಲಸೆ ಕಾರ್ಮಿಕರ ಮಕ್ಕಳಿಗೆ ಕೊರೊನಾ ಹಿನ್ನೆಲೆಯಲ್ಲಿ ತಮಗೆ ಸನಿಹವಾಗುವ ಪರೀಕ್ಷಾ ಕೇಂದ್ರಗಳಲ್ಲೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.
ಈ ಕುರಿತು ನೋಂದಾಯಿಸಿದ ವಿದ್ಯಾರ್ಥಿಗಳ ಹೆಸರು ಹಾಗೂ ಅವರು ಪರೀಕ್ಷೆ ಬರೆಯಲು ಇಚ್ಛಿಸುವ ಜಿಲ್ಲೆಯನ್ನು ನಮೂದಿಸಿ ಪಟ್ಟಿಯನ್ನು ತಯಾರಿಸಲಾಗಿದೆ.
ಈ ಕುರಿತಾದ ಮಾಹಿತಿ Www.PUC.kar.nic.in ನಲ್ಲಿ ನೋಡಬಹುದಾಗಿದೆ.
1) ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಆಯ್ಕೆ ಮಾಡಿಕೊಂಡ ಜಿಲ್ಲೆಯ ತಾತ್ಕಾಲಿಕ ಪಟ್ಟಿ ಜೂನ್ 3ರಂದು ಪ್ರಕಟಣೆ ಮಾಡಲಾಗುತ್ತೆ.
2) ಸಂಬಂಧಿಸಿದ ಕಾಲೇಜುಗಳ ಮೂಲಕ ತಿದ್ದುಪಡಿ ಮಾಡಲು ಜೂನ್ 3 ರಿಂದ 5 ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಅಂತಿಮ ಪಟ್ಟಿಯಲ್ಲಿ ವಿದ್ಯಾರ್ಥಿಗಳು ತಮ್ಮ ಹೆಸರಿನ ಪುಟವನ್ನು ಡೌನ್ಲೋಡ್ ಮಾಡಿಕೊಂಡು, ಹಂಚಿಕೆಯಾದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ ಹಾಜರಾಗಬಹುದಾಗಿದೆ. ಹೊರರಾಜ್ಯದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಆಯ್ಕೆಮಾಡಿಕೊಂಡ ಜಿಲ್ಲೆಯ ತಾತ್ಕಾಲಿಕ ಪಟ್ಟಿ ಜೂನ್ 5ರಂದು ಬಿಡುಗಡೆ ಮಾಡಲಾಗುತ್ತದೆ. ಸಂಬಂಧಿಸಿದ ಕಾಲೇಜುಗಳ ಮೂಲಕ ತಿದ್ದುಪಡಿ ಮಾಡಲು ಜೂನ್ 6ರವರಗೆ ಅವಕಾಶವಿದೆ. ಪರೀಕ್ಷಾ ಕೇಂದ್ರಗಳನ್ನು ಹಂಚಿಕೆ ಮಾಡಲಾದ ಅಂತಿಮ ಪಟ್ಟಿಯನ್ನು ಜೂನ್ 7ರಂದು ಪ್ರಕಟ ಮಾಡಲಾಗುತ್ತೆ.