ETV Bharat / state

ಇನ್ಮುಂದೆ ಕರ್ನಾಟಕದಲ್ಲಿ ನೋ ಲಾಕ್​​ಡೌನ್.. ಸಿಎಂ ಬಿಎಸ್​ವೈ ಘೋಷಣೆ - ಸಿಎಂ ಬಿಎಸ್​ವೈ

ಯೂಟ್ಯೂಬ್ ಹಾಗು ಫೇಸ್​​ಬುಕ್ ಲೈವ್ ಮೂಲಕ ಭಾಷಣ ಮಾಡಿದ ಸಿಎಂ ಬಿಎಸ್​ವೈ, ಇನ್ಮುಂದೆ ರಾಜ್ಯದಲ್ಲಿ ಲಾಕ್​ಡೌನ್ ಹೇರಿಕೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು..

Chief Minister BS Yeddyurappa
ಸಿಎಂ ಬಿಎಸ್​ವೈ
author img

By

Published : Jul 21, 2020, 6:22 PM IST

ಬೆಂಗಳೂರು : ಕೊರೊನಾ ತಡೆಗೆ ಲಾಕ್​​ಡೌನ್ ಮಾತ್ರ ಪರಿಹಾರವಲ್ಲ. ಇನ್ಮುಂದೆ ಬೆಂಗಳೂರು ಹಾಗೂ ಕರ್ನಾಟಕದ ಯಾವುದೇ ಭಾಗದಲ್ಲಿ ಲಾಕ್​​ಡೌನ್ ಇರುವುದಿಲ್ಲ. ನಾಡಿನ ಜನರು ನಿರಂತರವಾಗಿ ಅವರ ಕೆಲಸ ಕಾರ್ಯದಲ್ಲಿ ಮುಂದುವರೆಯಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪ್ರಕಟಿಸಿದ್ದಾರೆ.

ಯೂಟ್ಯೂಬ್ ಹಾಗೂ ಫೇಸ್​​ಬುಕ್ ಲೈವ್ ಮೂಲಕ ಭಾಷಣ ಮಾಡಿದ ಸಿಎಂ ಬಿಎಸ್​ವೈ, ಇನ್ಮುಂದೆ ಲಾಕ್​ಡೌನ್ ಹೇರಿಕೆ ಮಾಡುವುದಿಲ್ಲ. ಆದರೆ, ಕಂಟೇನ್​ಮೆಂಟ್​ ಝೋನ್​ಗಳಲ್ಲಿ ಬಿಗಿಯಾದ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ. ಒಂದು ಮನೆಯಿಂದ ಮತ್ತೊಂದು ಮನೆಗೆ ಇಂದು ರಸ್ತೆಯಿಂದ ಮತ್ತೊಂದು ರಸ್ತೆಗೆ ಓಡಾಟ ಮಾಡಲು ಅವಕಾಶ ಕಲ್ಪಿಸುವುದಿಲ್ಲ. ಅಲ್ಲಿ ಮಾತ್ರ ಬಿಗಿಯಾದ ಕ್ರಮ ತೆಗೆದುಕೊಳ್ಳುತ್ತಾರೆ, ಅದಕ್ಕೆ ಸಹಕರಿಸಿ ಎಂದು ಮನವಿ ಮಾಡಿದರು.

ಸಿಎಂ ಬಿಎಸ್​ವೈ ಘೋಷಣೆ

ಎಲ್ಲಾ ಸಚಿವರು, ಶಾಸಕರು, ವೈದ್ಯರು, ನರ್ಸ್​ಗಳು, ಆಶಾ ಕಾರ್ಯಕರ್ತೆಯರು ಪ್ರಾಣದ ಹಂಗು ತೊರೆದು ಕೊರೊನಾ ತಡೆಯಲು ತಮ್ಮ ಜೀವನ ಮುಡುಪಾಗಿಟ್ಟು ಕೆಲಸ ಮಾಡುತ್ತಿದ್ದಾರೆ. ನಿಮಗೋಸ್ಕರ ಜೀವನವನ್ನು ಪಣಕ್ಕಿಟ್ಟು ಕೆಲಸ ಮಾಡುತ್ತಿರುವ ಈ ಸಂದರ್ಭದಲ್ಲಿ ನಾವು ಬದುಕಬೇಕೆಂದ್ರೆ ಅಂತರವನ್ನು ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಪಾಲಿಸಬೇಕು ಎಂದು ಕರೆ ನೀಡಿದರು.

ಕೊರೊನಾ ನಿಯಂತ್ರಣಕ್ಕೆ ತಜ್ಞರು ನೀಡಿರುವ ಸಲಹೆಯಂತೆ 5ಡಿ ಅಳವಡಿಕೆಯಲ್ಲಿ ಈಗಾಗಲೇ ರಾಜ್ಯ ಮುಂಚೂಣಿಯಲ್ಲಿದೆ. ಪ್ರತಿ ಸೋಂಕಿತನ 47 ಸಂಪರ್ಕಿತರನ್ನು ಪರೀಕ್ಷಿಸುವ ಮೂಲಕ ಸಂಪರ್ಕವನ್ನು ಪತ್ತೆ ಮಾಡುವ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಕೊರೊನಾ ಮತ್ತು ಇತರೆ ರೋಗಿಗಳನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳಲು ಇದ್ದ ಎಲ್ಲ ಗೊಂದಲಗಳನ್ನು ಸರಿಪಡಿಸಲಾಗಿದೆ ಎಂದರು.

ಶೇ.80ಕ್ಕೂ ಹೆಚ್ಚು ಸೋಂಕಿತರಲ್ಲಿ ರೋಗ ಲಕ್ಷಣಗಳು ಇಲ್ಲ. ಲಘು ರೋಗ ಲಕ್ಷಣ ಇರುವವರಿಗೆ ಆಸ್ಪತ್ರೆ ಅಗತ್ಯವಿಲ್ಲ. ಇಂತಹವರನ್ನು ಐಸೋಲೇಷನ್ ಅಥವಾ ಕೋವಿಡ್ ಕೇರ್ ಸೆಂಟರ್​ನಲ್ಲಿರಿಸಲಾಗುತ್ತದೆ. ಅದಕ್ಕೆ ಸಹಕಾರ ನೀಡಿ. ಶೇ.5ರಷ್ಟು ಸೋಂಕಿತರಿಗೆ ಮಾತ್ರ ಐಸಿಯು, ವೆಂಟಿಲೇಟರ್ ಅಗತ್ಯ ಎಂದರು. 11,230 ಹಾಸಿಗೆ ಮೀಸಲಿರಿಸಲಾಗಿದೆ.

741 ಬೆಡ್ ಸರ್ಕಾರಿ ಆಸ್ಪತ್ರೆ, 819 ಬೆಡ್ ಸರ್ಕಾರಿ ಮೆಡಿಕಲ್ ಕಾಲೇಜು, 4536 ಬೆಡ್ ಖಾಸಗಿ ಆಸ್ಪತ್ರೆ, 2624 ಬೆಡ್ ಕೋವಿಡ್ ಕೇರ್ ಸೆಂಟರ್​​ಗಳಲ್ಲಿ ಇದ್ದು, ಹಾಸಿಗೆಗಳ ಹಂಚಿಕೆಗೆ ಕೇಂದ್ರೀಕೃತ ವ್ಯವಸ್ಥೆ ಮಾಡಲಾಗಿದೆ. ಹಾಸಿಗೆಗಳ ಲಭ್ಯತೆ ಪಡೆಯಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ರಿಯಲ್-ಟೈಮ್ ಡ್ಯಾಶ್ ಬೋರ್ಡ್ ಸಿದ್ಧಪಡಿಸಲಾಗಿದೆ ಎಂದರು.

ಕೊರೊನಾ ಬಗ್ಗೆ ಜನರು ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರ ಎಲ್ಲ ರೀತಿಯ ಕ್ರಮಕೈಗೊಳ್ಳುತ್ತಿದೆ. ಕೆಲವು ಕಡೆ ಸೋಂಕಿತರು ಆತ್ಮಹತ್ಯೆ ಯತ್ನದಂತಹ ಪ್ರಯತ್ನ ನಡೆಸಿದ್ದು ಕಂಡು ಬರುತ್ತಿವೆ. ಆದರೆ, ಶೇ.98ರಷ್ಟು ಜನ ಗುಣಮುಖರಾಗಿದ್ದಾರೆ. ಆದ್ದರಿಂದ ಆತ್ಮಹತ್ಯೆ ಯತ್ನ ಮಾಡುವುದು ಸರಿಯಲ್ಲ. ಇಂತಹ ದುಸ್ಸಾಹಸಕ್ಕೆ ಕೈ ಹಾಕಬೇಡಿ ಎಂದು ಸಿಎಂ ಮನವಿ ಮಾಡಿದರು.

ಲಾಕ್​ಡೌನ್ ತೆರವುಗೊಳಿಸಿ ಜನಜೀವನ ಸಹಜಗೊಳ್ಳುತ್ತಿದ್ದ ವೇಳೆ ನೆರೆಯ ಮಹಾರಾಷ್ಟ್ರ, ತಮಿಳುನಾಡು ಮುಂತಾದ ಹೆಚ್ಚು ಪ್ರಕರಣಗಳು ಇದ್ದ ರಾಜ್ಯಗಳಿಂದ ಜನರ ಆಗಮನ ಜಾಸ್ತಿ ಆದ ಕಾರಣ, ಬೆಂಗಳೂರು ಹಾಗೂ ಇತರ ಕಡೆಗಳಲ್ಲಿ ಪ್ರಕರಣಗಳು ಹೆಚ್ಚಾಗಿವೆ ಎಂದು ಸೋಂಕು ಹೆಚ್ಚಳಕ್ಕೆ ಕಾರಣ ನೀಡಿದರು.

ಇನ್ನು, ಮುಂದೆ ಕೊರೊನಾ ಪರೀಕ್ಷಾ ವರದಿ ತ್ವರಿತವಾಗಿ ಬರಲಿದೆ. ಮಾದರಿಯನ್ನು ನೀಡಿದ ಒಂದು ದಿನದಲ್ಲಿ ವರದಿ ಬರುವಂತೆ ಕ್ರಮ ಕೈಗೊಳ್ಳಲಾಗಿದೆ. ಖಾಸಗಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಿ ಸಮಸ್ಯೆ ನಿವಾರಿಸಲಾಗಿದೆ. ಎಲ್ಲಾ ಖಾಸಗಿ ಆಸ್ಪತ್ರೆಗಳು ಶೇ.50ರಷ್ಟು ಹಾಸಿಗೆಗಳನ್ನು ಕೊಡಲು ಬೇಕಾದ ತಜ್ಞವೈದ್ಯರ ವ್ಯವಸ್ಥೆ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಕೊರೊನಾ ವಿರುದ್ಧದ ಹೋರಾಟದಲ್ಲಿ ಖಾಸಗಿ ವಲಯ ಕೈ ಜೋಡಿಸಿದೆ. ನಾವು ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕಿದೆ. ಬೆಂಗಳೂರಿನಲ್ಲಿ ಎಂಟು ವಲಯಗಳಲ್ಲಿ ಪ್ರತಿಯೊಬ್ಬರ ಸಚಿವರಿಗೆ ಉಸ್ತುವಾರಿ ನೀಡಲಾಗಿದೆ ಮತ್ತು ಅಧಿಕಾರಿಗಳನ್ನು ಕೊಡಲಾಗಿದೆ. ಸ್ಥಳೀಯ ನಿರ್ವಹಣೆ ಬಲಪಡಿಸಲು ಬೂತ್ ಮಟ್ಟದ ಕಾರ್ಯಪಡೆಯನ್ನು ಬೆಂಗಳೂರಿನಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.

ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಹೆಚ್ಚಾಗಿದೆ. ಅಲ್ಲಿಯ ಜಿಲ್ಲಾಡಳಿತದ ಜೊತೆಗೆ ಮಾತುಕತೆ ನಡೆಸಿದ್ದೇನೆ. ಲಾಕ್​ಡೌನ್ ಬಗ್ಗೆ ಮಾತನಾಡಬೇಡಿ, ನಿಯಮ ಕಟ್ಟುನಿಟ್ಟಾಗಿ ಪಾಲಿಸಿ ಎಂದು ಸೂಚನೆ ನೀಡಿರುವುದಾಗಿ ತಿಳಿಸಿದರು. ಸಂಕಷ್ಟದ ಸಮಯದಲ್ಲಿ ಅನಗತ್ಯ ಟೀಕೆ-ಟಿಪ್ಪಣಿ ಬದಲು ಕೊರೊನಾ ನಿಯಂತ್ರಣಕ್ಕೆ ರಚನಾತ್ಮಕ ಸಲಹೆ ನೀಡಬೇಕು ಎಂದು ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ ಸೇರಿದಂತೆ ಎಲ್ಲ ಮುಖಂಡರಿಗೆ ವಿನಂತಿ ಮಾಡುತ್ತೇನೆ ಎಂದರು.

ಹಾಸಿಗೆಗಳ ಬಾಡಿಗೆ ಬದಲು ಅವುಗಳನ್ನು ಖರೀದಿ ಮಾಡಿದ್ದೇವೆ. ಆದರೆ, ಡಿ ಕೆ ಶಿವಕುಮಾರ್ ನಾವು ಹಾಸಿಗೆಗಳನ್ನು ಹಾಸ್ಟೆಲ್​​ಗೆ ಕೊಡುವ ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ, ಬಳಸಿದ ಹಾಸಿಗೆಯನ್ನು ಬೆಂಕಿಹಾಕಿ ಸುಡಲಾಗುತ್ತದೆ. ಕೇವಲ ಮಂಚಗಳನ್ನು ಮಾತ್ರ ಬೇರೆ ಬೇರೆ ಕಡೆ ಬಳಕೆ ಮಾಡಿಕೊಳ್ಳಲಾಗುತ್ತದೆ. 7.15 ಕೋಟಿಗೆ ಇದೆಲ್ಲಾ ಖರೀದಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಮಾಧ್ಯಮ ಹಾಗೂ ಪ್ರತಿಪಕ್ಷಗಳು ನಮಗೆ ಸಹಕಾರ ಕೊಡುತ್ತಿವೆ. ನಿಮಗೆ ಏನೇ ಮಾಹಿತಿ ಬೇಕಿದ್ದರೂ ಕೇಳಿ, ನಿಮಗೆ 24 ಗಂಟೆಯಲ್ಲಿ ಮಾಹಿತಿ ಒದಗಿಸುವ ಪ್ರಾಮಾಣಿಕ ಪ್ರಯತ್ನ ನಾನು ಮಾಡುತ್ತೇನೆ. ಕೊರೊನಾಗೆ ಸಂಬಂಧಪಟ್ಟ ವಸ್ತುಗಳ ಖರೀದಿ ಮಾಡುವ ಸಂದರ್ಭದಲ್ಲಿ, ಒಂದು ರೂಪಾಯಿ ದುರುಪಯೋಗ ಮಾಡಲು ಅವಕಾಶ ಮಾಡಿಕೊಟ್ಟಿಲ್ಲ. ಯಾರು ಬೇಕಾದರೂ ಬಂದು ದಾಖಲೆಗಳನ್ನು ಪರಿಶೀಲನೆ ಮಾಡಬಹುದು, ನೀವೇನು ಮಾಹಿತಿಗಳನ್ನು ಕೇಳುತ್ತೀರೋ ಆ ಮಾಹಿತಿಗಳನ್ನು ಕೊಡಲು ನಮ್ಮ ಅಧಿಕಾರಿಗಳು ಸಿದ್ಧರಿದ್ದಾರೆ ಎಂದರು.

ಸಿದ್ದರಾಮಯ್ಯ ಹಾಗೂ ಪ್ರತಿಪಕ್ಷದ ನಾಯಕರಲ್ಲಿ ಮನವಿ ಮಾಡುತ್ತೇನೆ. ಯಾವ ಮಾಹಿತಿ ಬೇಕು ಕೇಳಿ ಅದನ್ನು ತಕ್ಷಣ ಒದಗಿಸಲು ನಾವು ಸಿದ್ಧರಿದ್ದೇವೆ. ಯಾವ ಕಾರಣಕ್ಕೂ ನಮ್ಮ ಅಧಿಕಾರಿಗಳು ಅವರಿಗೆ ಸಂಬಂಧಪಟ್ಟ ವಸ್ತುಗಳ ಖರೀದಿ ಮಾಡುವಲ್ಲಿ ಒಂದು ರೂಪಾಯಿ ದುರುಪಯೋಗ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇನೆ ಎಂದರು.

ಪ್ರತಿಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಅವರಿಗೆ ದಾಖಲೆಗಳ ಪರಿಶೀಲನೆ ಮಾಡಲು ಸಂಪೂರ್ಣ ಅಧಿಕಾರ ಇದೆ. ಬನ್ನಿ ದಾಖಲೆಗಳ ಪರಿಶೀಲನೆ ಮಾಡಿ. ಕೊರೊನಾ ಸಂದರ್ಭದಲ್ಲಿ ಪಕ್ಷಭೇದ ಮರೆತು ನಾವೆಲ್ಲ ಒಟ್ಟಾಗಿ ಒಂದಾಗಿ ಇದನ್ನು ಎದುರಿಸಬೇಕಿದೆ. ರಾಜ್ಯದಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿ ಜನ ಸೋಂಕಿನಿಂದ ನರಳುತ್ತಿರುವ ಸಂದರ್ಭದಲ್ಲಿ, ನಮ್ಮ ಹೇಳಿಕೆಗಳು ಕೊರೊನಾ ತಡೆಯಲು ಪೂರಕವಾಗಿರಬೇಕೇ, ಹೊರತು ಜನರಲ್ಲಿ ಗೊಂದಲವಾಗುವಂತೆ ಇರಬಾರದು ಎಂದು ಮನವಿ ಮಾಡಿದರು.

ಮಾಧ್ಯಮದವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕಳೆದ ನಾಲ್ಕು ತಿಂಗಳುಗಳಿಂದ ಮಾಧ್ಯಮದವರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಬೇಕಾದ ಎಲ್ಲಾ ಸಲಹೆ ಸಹಕಾರ ಕೊಡುತ್ತಿದ್ದಾರೆ. ಮಾಧ್ಯಮದವರು ತಮ್ಮ ಕ್ರಿಯಾಶೀಲ ಸಲಹೆಗಳನ್ನು ಸರ್ಕಾರಕ್ಕೆ ನೀಡುವುದರೊಂದಿಗೆ ಇದುವರೆಗೆ ನಿರ್ವಹಿಸಿದ ಪಾತ್ರವನ್ನು, ಬಹಳ ದೊಡ್ಡ ಪ್ರಮಾಣದಲ್ಲಿ ಸಹಕಾರವನ್ನು ಇನ್ನು ಮುಂದೆಯೂ ನೀಡಬೇಕು ಎಂದು ಮನವಿ ಮಾಡುತ್ತಾ, ನಿಮಗೂ ಯಾವುದೇ ಮಾಹಿತಿ ಕೊಡಲು ನಾವು ಸಿದ್ಧ. ನಿಮ್ಮ ಸಹಕಾರ ಇದ್ದಾಗ ಮಾತ್ರ ಈ ಗೊಂದಲ ನಿವಾರಿಸಲು ಸಹಕಾರಿಯಾಗಲಿದೆ ಎಂದರು.

ನಮ್ಮ ಅಧಿಕಾರಿಗಳು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಮಟ್ಟದ ಅಧಿಕಾರಿಗಳು ಶ್ರಮಿಸುತ್ತಿದ್ದು, ಶಕ್ತಿಮೀರಿ ಪ್ರಯತ್ನ ಪಡುತ್ತಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಪ್ರತಿದಿನ ವಿಡಿಯೋ ಸಂವಾದದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ಜಿಲ್ಲಾಧಿಕಾರಿಗಳಿಗೆ ಸಲಹೆ ಕೊಡುವ ಪ್ರಯತ್ನವನ್ನು ನಿತ್ಯ ಮಾಡುತ್ತಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಬಹಳ ಯಶಸ್ವಿಯಾಗಿ ನಡೆಸಿದ್ದೇವೆ. ಯಾವುದೇ ಗೊಂದಲಕ್ಕೆ ಅವಕಾಶ ಕೊಡದೆ ಪ್ರಾಮಾಣಿಕವಾಗಿ ಕೆಲಸ ಮಾಡುವ ಪ್ರಯತ್ನವನ್ನು ಮೊದಲಿನಿಂದಲೂ ಮಾಡಿದ್ದೇನೆ ಎಂದು ಸಿಎಂ ತಿಳಿಸಿದರು.

ನಮ್ಮ ನೆರೆಹೊರೆಯವರು ಕೊರೊನಾದಲ್ಲಿ ಸಿಕ್ಕಿ ನರಳುತ್ತಿದ್ದಾರೆ. ಅವರು ನೆಮ್ಮದಿಯಿಂದ ಬದುಕಲು ಬೇಕಾದ ಎಲ್ಲ ರೀತಿಯ ಸಹಕಾರ ನೀಡಬೇಕು. ಸಂಘ-ಸಂಸ್ಥೆಯವರು ಅನೇಕ ಸಂಸ್ಥೆಯವರು ಕೊರೊನಾ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಆಹಾರವನ್ನು ಹಂಚಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ. ಎಲ್ಲ ರೀತಿಯ ಸಹಕಾರ ಕೊಟ್ಟಿದ್ದಾರೆ ಎಂದು ಸ್ಮರಿಸಿದರು.

ಅಗತ್ಯವಿರುವಷ್ಟು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಬೂತ್ ಮಟ್ಟದಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಬೇಕು ಎನ್ನುವ ಸಿದ್ಧತೆ ಮಾಡುತ್ತಿದ್ದೇವೆ. ಆದಷ್ಟು ಬೇಗ ಆ್ಯಂಬುಲೆನ್ಸ್ ಸ್ಥಳಕ್ಕೆ ಬರುವ ರೀತಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಿಎಂ ಭರವಸೆ ನೀಡಿದರು.

ನಾಳೆಯಿಂದ ಬೆಂಗಳೂರಲ್ಲಿ ಲಾಕ್‌ಡೌನ್‌ ಇಲ್ಲ : ನಾಳೆಯಿಂದ ಬೆಂಗಳೂರಿನಲ್ಲಿ ಲಾಕ್​ಡೌನ್ ಇರುವುದಿಲ್ಲ. ಜನರು ತಮ್ಮ ಕರ್ತವ್ಯದಲ್ಲಿ ತೊಡಗಬೇಕಿದೆ. ಸರ್ಕಾರಕ್ಕೆ ಆರ್ಥಿಕ ಸಂಪನ್ಮೂಲ ಕ್ರೂಢೀಕರಿಸಿ ಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಆದ್ದರಿಂದ ನಾವು ಕೊರೊನಾ ಸನ್ನಿವೇಶ ಎದುರಿಸಲು ಸಿದ್ಧತೆ ಮಾಡಿಕೊಳ್ಳಬೇಕು, ಎಚ್ಚರಿಕೆವಹಿಸಬೇಕು, ಜನರಿಗೆ ರಕ್ಷಣೆ ಕೊಡುವ ಕೆಲಸ ಮಾಡಬೇಕು ಎಂದರು. ಅದೇ ರೀತಿ ಆರ್ಥಿಕ ಸಂಪನ್ಮೂಲ ಕ್ರೂಢೀಕರಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಲು ಮುಂದಾಗಬೇಕಿದೆ ಎಂದು ಸಿಎಂ ಸ್ಪಷ್ಟವಾಗಿ ಲಾಕ್​ಡೌನ್ ಮುಂದುವರಿಕೆ ಇಲ್ಲ ಎಂದು ತಿಳಿಸಿದರು.

ಒಂದು ದಿನವೂ ನಾನು ಮನೆಯಲ್ಲಿ ಕುಳಿತಿಲ್ಲ. ಕೊರೊನಾ ಸಂದರ್ಭದಲ್ಲಿಯೂ ನಿತ್ಯ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತಿದ್ದೇನೆ. ಶಕ್ತಿಮೀರಿ ಪ್ರಾಮಾಣಿಕ ಕೆಲಸ ಮಾಡುತ್ತಿದ್ದೇವೆ. ಅದಕ್ಕೆ ನಾಡಿನ ಜನರ ಸಹಕಾರ ಇದ್ದಾಗ ಮಾತ್ರ, ಕೊರೊನಾ ಎದುರಿಸಲು ಸಾಧ್ಯವಾಗಲಿದೆ. ಹಿರಿಯ ನಾಗರಿಕರು ಮನೆ ಬಿಟ್ಟು ಹೊರಗಡೆ ಬರಬೇಡಿ, ಮಕ್ಕಳು ಕೂಡ ಮನೆಯಲ್ಲಿ ಎಚ್ಚರಿಕೆಯಿಂದ ಇರಲು ಗಮನಕೊಡಿ. ಕೊರೊನಾ ಸೋಂಕಿತರೊಂದಿಗೆ ಸೌಜನ್ಯವಾಗಿ ವರ್ತಿಸಬೇಕೆಂದು ಮನವಿ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.