ETV Bharat / state

ವಿದ್ಯುತ್ ಬಸ್ ಖರೀದಿ ಇಲ್ಲ, ಗುತ್ತಿಗೆ ಆಧಾರದಲ್ಲಿ ಪ್ರಾಯೋಗಿಕ ಸಂಚಾರವಷ್ಟೇ.. ಸಾರಿಗೆ ಸಚಿವ ಲಕ್ಷ್ಮಣ ಸವದಿ - ಡಿಸಿಎಂ ಲಕ್ಷ್ಮಣ ಸವದಿ

ಖಾಸಗಿಯವರು ವಿದ್ಯುತ್ ಕಾರು, ಬಸ್​, ಖರೀದಿ ಮಾಡಿದಲ್ಲಿ ರಸ್ತೆ ತೆರಿಗೆ ಸಂಪೂರ್ಣ ಮನ್ನಾ ಮಾಡಲಾಗುತ್ತದೆ. ಚಾರ್ಚಿಂಗ್ ಪಾಯಿಂಟ್ ಮಾಡಿದವರಿಗೆ 10 ಲಕ್ಷ ಸಬ್ಸಿಡಿ ನೀಡಲಿದ್ದೇವೆ. ಪ್ರಾಯೋಗಿಕವಾಗಿ ಇದನ್ನು ಕೈಗೆತ್ತಿಕೊಳ್ಳುತ್ತಿದ್ದು, ಸಫಲವಾದಲ್ಲಿ ನಾಲ್ಕೂ ನಿಗಮದ ಬೇರೆ ನಗರದಲ್ಲೂ ಅನುಷ್ಠಾನಕ್ಕೆ ತರಲಿದ್ದೇವೆ..

ಸವದಿ
ಸವದಿ
author img

By

Published : Feb 5, 2021, 2:13 PM IST

ಬೆಂಗಳೂರು : ವಿದ್ಯುತ್ ಬಸ್ ಖರೀದಿ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿಲ್ಲ. ಕೇವಲ ಗುತ್ತಿಗೆ ಆಧಾರದಲ್ಲಿ ವಿದ್ಯುತ್ ಬಸ್​ಗಳ ಪ್ರಾಯೋಗಿಕ ಸಂಚಾರಕ್ಕೆ ಮುಂದಾಗಿದ್ದೇವೆ. ಅದರ ಫಲಿತಾಂಶ ನೋಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಮಹಾಂತೇಶ್ ಕವಠಗಿಮಠ ಪ್ರಶ್ನೆಗೆ ಉತ್ತರಿಸಿದ ಸಾರಿಗೆ ಸಚಿವರೂ ಆದ ಸವದಿ, ವಿದ್ಯುತ್ ಬಸ್ ಖರೀದಿ ಮಾಡುವ ಪ್ರಸ್ತಾಪ ನಮ್ಮ ಮುಂದಿಲ್ಲ. ಈ ಬಗ್ಗೆ ಮುಂದಿನ ದಿನದಲ್ಲಿ ಚಿಂತನೆ ಮಾಡಲಿದ್ದೇವೆ. ಆದರೆ, ಮಾಲಿನ್ಯ ವಿಪರೀತ ಇರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಕೂಡ ಇದೆ. ‌

ಹಾಗಾಗಿ, ಕೇಂದ್ರ ಸರ್ಕಾರ ಒಂದು ಬಸ್​​​ಗೆ 55 ಲಕ್ಷ ಸಬ್ಸಿಡಿ ಕೊಡುತ್ತಿದೆ. ಪ್ರಾಯೋಗಿಕವಾಗಿ 300 ಬಸ್ ಓಡಿಸಲು ಅನುಮತಿ ಕೊಡಲಾಗಿದೆ. ಆದರೆ, ನಾವು ಬಸ್ ಖರೀದಿ ಮಾಡುತ್ತಿಲ್ಲ. ಕಿಲೋಮೀಟರ್ ಆಧಾರದಲ್ಲಿ ಬಸ್ ಗುತ್ತಿಗೆ ಪಡೆಯಲಿದ್ದೇವೆ. ಇದಕ್ಕಾಗಿ ಟೆಂಡರ್ ಕರೆದಿದ್ದು, ಹೆಚ್ಚು ದರ ನಮೂದು ಮಾಡಿದ ಕಾರಣ ನಾಲ್ಕು ಬಾರಿ ತಿರಸ್ಕರಿಸಿದ್ದೇವೆ.

ಈಗ ಐದನೇ ಬಾರಿಗೆ ಕರೆದಿದ್ದೇವೆ. ಮುಂದಿನ ತಿಂಗಳಿನಲ್ಲಿ 300 ಬಸ್ ಗುತ್ತಿಗೆ ಪಡೆಯಲಿದ್ದೇವೆ. ಟಾಟಾ, ಲೈಲ್ಯಾಂಡ್, ಜೈ ಭಾರತ್ ಸೇರಿ ಐದಾರು ಕಂಪನಿ ಮುಂದೆ ಬಂದಿವೆ. 48 -50 ರೂ.ಕಿಮೀ‌ಗೆ ಬಂದಲ್ಲಿ ಟೆಂಡರ್ ಕೊಡಲಿದ್ದೇವೆ ಎಂದರು.

ಖಾಸಗಿಯವರು ವಿದ್ಯುತ್ ಕಾರು, ಬಸ್​, ಖರೀದಿ ಮಾಡಿದಲ್ಲಿ ರಸ್ತೆ ತೆರಿಗೆ ಸಂಪೂರ್ಣ ಮನ್ನಾ ಮಾಡಲಾಗುತ್ತದೆ. ಚಾರ್ಚಿಂಗ್ ಪಾಯಿಂಟ್ ಮಾಡಿದವರಿಗೆ 10 ಲಕ್ಷ ಸಬ್ಸಿಡಿ ನೀಡಲಿದ್ದೇವೆ. ಪ್ರಾಯೋಗಿಕವಾಗಿ ಇದನ್ನು ಕೈಗೆತ್ತಿಕೊಳ್ಳುತ್ತಿದ್ದು, ಸಫಲವಾದಲ್ಲಿ ನಾಲ್ಕೂ ನಿಗಮದ ಬೇರೆ ನಗರದಲ್ಲೂ ಅನುಷ್ಠಾನಕ್ಕೆ ತರಲಿದ್ದೇವೆ ಎಂದರು.

ರಾಜ್ಯದಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ವಿದ್ಯುತ್ ವಾಹನ ಖರೀದಿಗೆ ಒತ್ತು ನೀಡಲಿದ್ದೇವೆ. ಟೆಸ್ಲಾ ಎನ್ನುವ ಕಾರು ಕಂಪನಿ ಬೆಂಗಳೂರಿನಲ್ಲಿ ಜಾಗ ಆಯ್ಕೆ ಮಾಡಿಕೊಂಡಿದೆ. ಬ್ಯಾಟರಿ ಇಲ್ಲೇ ಉತ್ಪಾದನೆ ಮಾಡುವುದಾಗಿ ಹೇಳಿದ್ದಾರೆ. ಇದರಿಂದ ಭವಿಷ್ಯದಲ್ಲಿ ರಾಜ್ಯಕ್ಕೆ ಒಳ್ಳೆಯದಾಗಲಿದೆ ಎಂದರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.