ETV Bharat / state

ಭಾರತ್ ಬಂದ್ ಬೆಂಗಳೂರಿನಲ್ಲಿ ಫ್ಲಾಪ್; ಬಸ್​, ಆಟೋ, ಜನ ಎಂದಿನಂತೆ ಸಂಚಾರ

author img

By

Published : Mar 26, 2021, 11:04 AM IST

Updated : Mar 26, 2021, 12:03 PM IST

ಬೆಂಗಳೂರಿನಲ್ಲಿ ಭಾರತ್ ಬಂದ್ ಎಫೆಕ್ಟ್​ ಇಲ್ಲದಂತೆ ಕಾಣುತ್ತಿದೆ. ನಗರದಲ್ಲಿ ಎಂದಿನಂತೆ ಬಸ್​ಗಳು ಮತ್ತು ಆಟೋಗಳು ಸಂಚಾರ ನಡೆಸಿವೆ.

No Bharat bundh effect, No Bharat bundh effect in Bangalore, Bharat bundh, Bharat bundh 2021, Bharat bundh 2021 news, ಭಾರತ್​ ಬಂದ್​ ಎಫೆಕ್ಟ್​ ಇಲ್ಲ, ಬೆಂಗಳೂರಿನಲ್ಲಿ ಭಾರತ್​ ಬಂದ್​ ಎಫೆಕ್ಟ್​ ಇಲ್ಲ, ಭಾರತ್​ ಬಂದ್​, ಭಾರತ್​ ಬಂದ್​ 2021, ಭಾರತ್​ ಬಂದ್​ 2021 ಸುದ್ದಿ,
ಬಸ್​, ಆಟೋ, ಜನ ಎಂದಿನಂತೆ ಸಂಚಾರ

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಯನ್ನ ಹಿಂಪಡೆಯುವಂತೆ ಆಗ್ರಹಿಸಿ ರೈತ ಸಂಘಟನೆ ಭಾರತ್ ಬಂದ್​ಗೆ ಕರೆ ನೀಡಿದೆ. ಆದರೆ, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಬಂದ್​ ಎಫೆಕ್ಟ್​ ಕಾಣುತ್ತಿಲ್ಲ.

ಹೌದು, ರಾಷ್ಟ್ರದಾದ್ಯಂತ ನೀಡಿರುವ ಬಂದ್​ ಬಿಸಿ ಬೆಂಗಳೂರಿಗೂ ತಗಲು ಸಾಧ್ಯತೆ ಇತ್ತು. ಆದ್ರೆ ಅಂತಹ ಪ್ರಸಂಗ ನಗರದಲ್ಲಿ ನಡೆದಿಲ್ಲ. ಏಕೆಂದ್ರೆ ಸಾರ್ವಜನಿಕ ವಲಯದಿಂದ ಬಂದ್​ಗೆ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ.

ಬಸ್​, ಆಟೋ, ಜನ ಎಂದಿನಂತೆ ಸಂಚಾರ

ಬೆಂಗಳೂರಿನ ಹೃದಯ ಭಾಗವಾಗಿರುವ ಮೆಜೆಸ್ಟಿಕ್​ನ ಬಿಎಂಟಿಸಿ ನಿಲ್ದಾಣ, ಕೆಎಸ್​ಆರ್​ಟಿಸಿ ನಿಲ್ದಾಣದಲ್ಲಿ ಬಸ್​​ಗಳು ಎಂದಿನಂತೆ ಸಂಚಾರಿಸುತ್ತಿದ್ದಾವೆ. ಹಾಗೇ ನಮ್ಮ ಮೆಟ್ರೋ ಹಾಗೂ ಆಟೋ ಸೇವೆಗಳಲ್ಲಿ ಯಾವುದೇ ವ್ಯತ್ಯಯವಿರದ ಕಾರಣ, ಜನರು ತಮ್ಮ ದೈನಂದಿನ ಚಟುವಟಿಕೆಯಲ್ಲಿ ತೊಡಗಿದ್ದಾರೆ.

ಟೌನ್​ಹಾಲ್ ಬಳಿ ಪ್ರತಿಭಟನಾಕಾರರ ಬಂಧನ...

ರಾಷ್ಟ್ರೀಯ ಕಿಸಾನ್ ಮೋರ್ಚಾ ಭಾರತ್ ಬಂದ್​ಗೆ ಕರೆ ನೀಡಿರುವ ಹಿನ್ನೆಲೆ, ಪ್ರತಿಭಟನೆಗೆ ಆಗಮಿಸಿದ ಸರ್ವ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರನ್ನು ಪ್ರತಿಭಟನೆಗೆ ಮುನ್ನವೇ ಬಂಧಿಸಿದ್ದಾರೆ. ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ಹಾಗೂ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಭಾರತ್ ಬಂದ್ ಪ್ರತಿಭಟನೆಗೆ ಇಲ್ಲಾ ಯಾವುದೇ ಅನುಮತಿ...

ನಗರದ ಟೌನ್ ಹಾಲ್​ನಲ್ಲಿ ಯಾವುದೇ ಪ್ರತಿಭಟನೆಗೆ ಅವಕಾಶ ನೀಡಿಲ್ಲ. ಹೀಗಾಗಿ ಪ್ರತಿಭಟನೆ ಮಾಡಿದರೆ ವಶಕ್ಕೆ ಪಡೆಯಬೇಕೆಂದು ನಗರ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ. ಈಗಾಗಲೇ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮೂವರು ರೈತರನ್ನು ಬಂಧಿಸಿದ್ದಾರೆ. ಪ್ರತಿಭಟನೆ, ಜಾಥ ಯಾವುದಕ್ಕೂ ಪರ್ಮಿಷನ್ ಇಲ್ಲ. ಪ್ರತಿಭಟನೆ ಮಾಡಿದರೆ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಎಫ್ ಐಆರ್ ದಾಖಲು ಮಾಡಲಾಗುತ್ತದೆ.

ರೈತಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು...

ರಾಜ್ಯದ ರೈತ ಸಂಘಟನೆ, ಹಸಿರು ಸೇನೆ, ಕಾರ್ಮಿಕ ಸಂಘಟನೆ ಸೇರಿದಂತೆ ಐಕ್ಯ ಹೋರಾಟದ ವಿವಿಧ ಸಂಘಟಮೆಯ ಕಾರ್ಯಕರ್ತರನ್ನು ಪ್ರತಿಭಟನೆಗೆ ಅವಕಾಶ ನೀಡದೆ ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ.

ಪ್ರತಿಭಟನಾಕಾರರಿಗಿಂತ ನೂರಾರು ಸಂಖ್ಯೆಯಲ್ಲಿ ಇರುವ ಪೊಲೀಸರು ತಂಡತಂಡವಾಗಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುತ್ತಿದ್ದಾರೆ.‌ ಟೌನ್​ಹಾಲ್​ನಲ್ಲಿ ಈ ಹಿಂದೆ ನಿಗದಿ ಮಾಡಿದ್ದ ಕಾಯ್ದೆಗಳ ಶವಯಾತ್ರೆ ಮೆರವಣಿಗೆ ಕೂಡಾ ನಡೆಯುವುದು ಅನುಮಾನ ಆಗಿದೆ.

ರೈತಮುಖಂಡ, ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಪ್ರತಿಭಟನೆ ಹತ್ತಿಕ್ಕುವಂತದ್ದು ಸರ್ಕಾರದ ಒಂದು ಮಾರ್ಗ ಆಗಿಬಿಟ್ಟಿದೆ. ಭಾರತ ದೇಶದಲ್ಲಿ ಪೆಟ್ರೋಲ್, ಡೀಸೆಲ್, ಗ್ಯಾಸ್, ಅಗತ್ಯ ವಸ್ತುಗಳ ಬೆಲೆ ದುಪ್ಪಟ್ಟಾಗಿದೆ. ಈ ಸಮಸ್ಯೆಗೆ ಪರಿಹಾರ ಹುಡುಕಿ, ಸರಿಮಾಡುವ ದಿಕ್ಕಿನಲ್ಲಿ ಸರ್ಕಾರದ ವೈಫಲ್ಯ ಮುಚ್ಚಿಡಲು ಪ್ರತಿಭಟನಾಕಾರರನ್ನು ಬಂಧಿಸಲಾಗ್ತಿದೆ. ಇದು ತುಂಬಾ ನಾಚಿಕೆಗೇಡಿನ ನಡವಳಿಕೆ. ಇದನ್ನು ಖಂಡಿಸ್ತೇವೆ ಎಂದರು.

Last Updated : Mar 26, 2021, 12:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.