ಬೆಂಗಳೂರು : ಸಾರಿಗೆ ನೌಕರರು ತಮ್ಮ ಬೇಡಿಕೆ ಈಡೇರಿಸಲು ನಡೆಸುತ್ತಿರುವ ಮುಷ್ಕರ ಸದ್ಯ ಮೂರನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಸ್ ಚಾಲನೆಗೆ ಮುಂದಾದ ಡ್ರೈವರ್ಗೆ ತರಾಟೆ ತೆಗೆದುಕೊಂಡ ಘಟನೆ ಸಂಬಂಧ ಇದೀಗ ಪೊಲೀಸರು ಒಂಬತ್ತು ಜನರನ್ನು ಬಂಧನ ಮಾಡಿದ್ದಾರೆ.
ನಿನ್ನೆ ಘಟನೆ ನಡೆದಾಗ ಪಶ್ಚಿಮ ವಿಭಾಗ ಪೊಲೀಸರು ಮಧ್ಯಪ್ರವೇಶ ಮಾಡಿ ಹಲ್ಲೆಗೊಳಗಾದ ಬಸ್ ಚಾಲಕನನ್ನು ರಕ್ಷಣೆ ಕೂಡ ಮಾಡಿದ್ರು. ಘಟನೆ ಹಿನ್ನೆಲೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.
ಸದ್ಯ ಬಸ್ಸು ಬಿಡಲು ಬಿಡದೇ ಗಲಾಟೆ ಮಾಡಿದವರ ಮೇಲೆ ಪ್ರಕರಣ ದಾಖಲಾದ ಕಾರಣ, ಒಟ್ಟು ಒಂಬತ್ತು ಜನ ಬಿಎಂಟಿಸಿ ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಸದ್ಯ ಹಲ್ಲೆ ಹಾಗೂ ಬೆದರಿಕೆ ಹಾಕಿದ ಆರೋಪದಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ:ಖಾಸಗಿ ಚಾಲಕ, ನಿರ್ವಾಹಕರಿಂದ ಬಸ್ ಸಂಚಾರಕ್ಕೆ ಮುಂದಾದ ಬಿಎಂಟಿಸಿ: ಸಾರಿಗೆ ನೌಕರರ ಆಕ್ರೋಶ