ETV Bharat / state

ಡಿ.ಜೆ ಹಳ್ಳಿ ಘಟನೆ ಮೇಲೆ ಎನ್​​ಐಎ ಕಣ್ಣು: ಬಂಧಿತ ಎಸ್​​​​ಡಿಪಿಐ ಯವಕರನ್ನು ವಶಕ್ಕೆ ಪಡೆಯಲು ಪ್ಲಾನ್

ಡಿ.ಜೆ ಹಳ್ಳಿ ಘಟನೆಯಲ್ಲಿ ಎಸ್​​ಡಿಪಿಐ ಪಾತ್ರ ಇರುವ ಕಾರಣ ಬಂಧಿತ ಎಸ್​​ಡಿಪಿಐ ಆರೋಪಿಗಳನ್ನು ಎನ್​​ಐಎ ವಶಕ್ಕೆ ಪಡೆದು ತನಿಖೆ ನಡೆಸಲಿದೆ ಎಂದು ತಿಳಿದು ಬಂದಿದೆ‌.

author img

By

Published : Aug 21, 2020, 3:41 PM IST

Nia
Nia

ಬೆಂಗಳೂರು: ಡಿ.ಜೆ ಹಳ್ಳಿ ಬಳಿ‌ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಸಿಸಿಬಿ ಪೊಲೀಸರ ಜೊತೆಗೆ ಎನ್​​​​ಐಎ ಕೂಡ ತನಿಖೆ ನಡೆಸುತ್ತಿದೆ. ಘಟನೆಯಲ್ಲಿ 40ಕ್ಕೂ ಹೆಚ್ಚು ಎಸ್ ಡಿ ಪಿ ಐ ಕಾರ್ಯಕರ್ತರು ಭಾಗಿಯಾಗಿದ್ದು, ಇವರು ಭಯೋತ್ಪಾದಕ ಸಂಘಟನೆ‌ ಜೊತೆ ‌ನಂಟು ಹೊಂದಿದ್ದಾರೆ ಎನ್ನಲಾಗಿದೆ.

ಹೀಗಾಗಿ‌ ಸದ್ಯಕ್ಕೆ ಎನ್​​​​ಐಎ ತನಿಖೆ ನಡೆಸಲು ನಿರ್ಧಾರ ಮಾಡಿದೆ. ಸಿಸಿಬಿ, ಉಗ್ರ ಸಂಘಟನೆಯ ತನಿಖಾಧಿಕಾರಿಗಳಿಂದ ಎನ್​​​​ಐಎ ಮಾಹಿತಿ ಕಲೆ ಹಾಕಲು ಮುಂದಾಗಿದೆ. ಉಗ್ರ ಸಂಘಟನೆ ಜೊತೆ ಲಿಂಕ್ ಹೊಂದಿರುವ ಸಮೀಯುದ್ದೀನ್ ಹಾಗೂ ಇತರ 40 ಜನರನ್ನು ಸಿಸಿಬಿ ತೀವ್ರ ವಿಚಾರಣೆಗೆ‌ ಒಳಪಡಿಸಿದಾಗ ಭಯೋತ್ಪಾದಕ ಜೊತೆ ಲಿಂಕ್ ಹೊಂದಿರುವುದು ಗೊತ್ತಾಗಿದೆ.

2013 ರಲ್ಲಿ ನಡೆದ ಬಿಜೆಪಿ ಕಚೇರಿ ಸಮೀಪ ಬಾಂಬ್ ಸ್ಫೋಟದಲ್ಲಿ ತಮಿಳುನಾಡು ಮೂಲದ ನಿಷೇಧಿತ ಉಗ್ರಗಾಮಿ ಸಂಘಟನೆ ಅಲ್ ಉಮ್ಮಾ, 2015 ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣ, 2016 ರಲ್ಲಿ ಶಿವಾಜಿನಗರ ಬಳಿ ಆರ್ ಎಸ್‌ ಎಸ್ ಮುಖಂಡ ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಎಸ್​​ಡಿಪಿಐ ಪಾತ್ರ ಬಹಳ ಸ್ಪಷ್ಟವಾಗಿತ್ತು. ಇದೀಗ ಡಿ.ಜೆ ಹಳ್ಳಿ ಘಟನೆಯಲ್ಲಿ ಕೂಡ ಎಸ್ ಡಿಪಿಐ ಪಾತ್ರ ಇರುವ ಕಾರಣ ಬಂಧಿತ ಎಸ್ ಡಿಪಿಐ ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.