ETV Bharat / state

ನಿಷೇಧಾಜ್ಞೆ ನಡುವೆಯೂ ಎಂಜಿ ರಸ್ತೆಯಲ್ಲಿ ಗರಿಗೆದರುತ್ತಿದೆ ಹೊಸ ವರ್ಷಾಚರಣೆ ಸಂಭ್ರಮ - ಬೆಂಗಳೂರಲ್ಲಿ ಹೊಸ ವರ್ಷಾಚರಣೆ ಸಂಭ್ರಮ

ಬೆಂಗಳೂರಿನ ಕೆಲವೆಡೆ ಹಾಗೂ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಳೆ ಸುರಿದಿದೆ. ಕೆಲವೆಡೆ ತುಂತುರು ಮಳೆ ಆದರೆ ಇನ್ನೂ ಕೆಲವು ಕಡೆ ಸಾಧಾರಣ ಮಳೆ ಆಗಿದೆ. ಇದರಿಂದ ಹೊಸ ವರ್ಷ ಆಚರಣೆಯಲ್ಲಿ ತೊಡಗಿದ್ದ ಮಂದಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಕುರಿತಂತೆ ನಮ್ಮ ಪ್ರತಿನಿಧಿ ಹೆಚ್ಚಿನ ಮಾಹಿತಿ ನೀಡಿದ್ದಾರೆ..

New year celebration preparation going in mg road a
ನಿಷೇಧಾಜ್ಞೆ ನಡುವೆಯೂ ಎಂಜಿ ರಸ್ತೆಯಲ್ಲಿ ಗರಿಗೆದರುತ್ತಿದೆ ಹೊಸ ವರ್ಷಾಚರಣೆ ಸಂಭ್ರಮ
author img

By

Published : Dec 31, 2021, 8:55 PM IST

ಬೆಂಗಳೂರು : ನೈಟ್ ಕರ್ಫ್ಯೂ ಹಾಗೂ ನಿಷೇಧಾಜ್ಞೆ ನಡುವೆಯೂ ನಗರದಲ್ಲಿ ಹೊಸ ವರ್ಷಾಚರಣೆಯ ಸಂಭ್ರಮ ಗರಿಗೆದರುತ್ತಿದೆ. ಪ್ರಮುಖವಾಗಿ ಎಂಜಿ ರಸ್ತೆ ಹಾಗೂ ಬಿಗ್ರೇಡ್ ರೋಡ್​​​​ಗಳಲ್ಲಿ ನಿಧಾನವಾಗಿ ಜನರು ಕ್ಲಬ್, ರೆಸ್ಟೋರೆಂಟ್​ಗಳಿಗೆ ತೆರಳುತ್ತಿದ್ದಾರೆ.

ಇಂದು ಸಂಜೆ ಆರು ಗಂಟೆ ಬಳಿಕ ನಗರದಲ್ಲಿ 144 ಸೆಕ್ಷನ್ ಜಾರಿಯಾಗಲಿದೆ. ನಾಲ್ಕು ಜನರಿಗಿಂತ ಹೆಚ್ಚು ಗುಂಪು ಸೇರುವಂತಿಲ್ಲ. ಸಾರ್ವಜನಿಕ ಪ್ರದೇಶಗಳಲ್ಲಿ ಸಂಭ್ರಮಾಚರಣೆಗೂ ಬ್ರೇಕ್ ಬೀಳಲಿದೆ.

ನಿಷೇಧಾಜ್ಞೆ ನಡುವೆಯೂ ಎಂಜಿ ರಸ್ತೆಯಲ್ಲಿ ಗರಿಗೆದರುತ್ತಿದೆ ಹೊಸ ವರ್ಷಾಚರಣೆಯ ಸಂಭ್ರಮ..

ಮತ್ತೊಂದೆಡೆ ಎಂಜಿ ರೋಡ್​ಗೆ ಜನರು ಆಗಮಿಸುತ್ತಿದ್ದಾರೆ. ರಾತ್ರಿ 10 ಗಂಟೆವರೆಗೂ ಮಾತ್ರ ಜನರು ಓಡಾಡಬಹುದಾಗಿದೆ. ಹೀಗಾಗಿ, ಪಬ್, ಕ್ಲಬ್​​​ಗಳಿಗೆ ಹೋಗುವ ಜನರು ಆನ್​​ಲೈನ್​​ನಲ್ಲಿ ಬುಕ್ ಮಾಡಿಕೊಂಡು ನ್ಯೂ ಇಯರ್ ಬರಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ.

ಇದೇ ವೇಳೆ‌ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಿರಲು ಪೊಲೀಸರು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಬಾಂಬ್‌ ನಿಷ್ಕ್ರಿಯ ದಳ ಹಾಗೂ ಶ್ವಾನದಳ ತಂಡಗಳು ನಿರಂತರವಾಗಿ ಪರಿಶೀಲಿಸುತ್ತಿವೆ.

ನೂರಾರು ಸಂಖ್ಯೆಯಲ್ಲಿ ಸಿಸಿಟಿವಿ ಅಳವಡಿಸುವ ಮೂಲಕ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಮತ್ತೊಂದೆಡೆ ಮಹಿಳೆಯರಿಗೆ ಏನಾದರೂ ತೊಂದರೆ ಉಂಟಾದರೆ ಮಹಿಳಾ ಸುರಕ್ಷಿತ ಪ್ರದೇಶಗಳನ್ನು ನಿರ್ಮಿಸಲಾಗಿದೆ.

ಬೆಂಗಳೂರಿನ ಕೆಲವೆಡೆ ಹಾಗೂ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಳೆ ಸುರಿದಿದೆ. ಕೆಲವೆಡೆ ತುಂತುರು ಮಳೆ ಆದರೆ ಇನ್ನೂ ಕೆಲವು ಕಡೆ ಸಾಧಾರಣ ಮಳೆ ಆಗಿದೆ. ಇದರಿಂದ ಹೊಸ ವರ್ಷ ಆಚರಣೆಯಲ್ಲಿ ತೊಡಗಿದ್ದ ಮಂದಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಕುರಿತಂತೆ ನಮ್ಮ ಪ್ರತಿನಿಧಿ ಹೆಚ್ಚಿನ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮಾಟ-ಮಂತ್ರದ ಪ್ರಭಾವಕ್ಕೊಳಗಾಗಿ 2 ತಿಂಗಳ ಹಿಂದೆ ಮನೆ ತೊರೆದ ಬಾಲಕಿ... ಹುಡುಕಿಕೊಡುವಂತೆ ಪೋಷಕರ ಮನವಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.