ಬೆಂಗಳೂರು/ಬೆಳಗಾವಿ: ಪ್ರಮುಖ ನಗರಗಳು ಸೇರಿದಂತೆ ರಾಜ್ಯಾದ್ಯಂತ ಹೊಸ ವರ್ಷಾಚರಣೆ ಅದ್ಧೂರಿಯಾಗಿ ನಡೆಯುತ್ತಿದೆ. ಬೆಂಗಳೂರಿನ ಎಂಜಿ ರೋಡ್, ಬಿಗ್ರೇಡ್ ರೋಡ್ ಝಗಮಗಿಸುತ್ತಿದೆ. ಹಾಗೆಯೇ ಕುಂದಾನಗರಿ ಬೆಳಗಾವಿಯಲ್ಲೂ ಸಹ ಸಂಭ್ರಮ ರಂಗೇರಿದೆ. ಹಲವೆಡೆ ಯುವಕ, ಯುವತಿಯರು ಹೆಜ್ಜೆ ಹಾಡುಗಳಿಗೆ ಸಖತ್ ಡ್ಯಾನ್ಸ್ ಮಾಡುತ್ತಿದ್ದಾರೆ.
![new-year-celebration-in-karnataka](https://etvbharatimages.akamaized.net/etvbharat/prod-images/17364533_thuws.png)
ಬೆಂಗಳೂರಿನಲ್ಲಿಯೂ ಸಹ ವಿವಿಧ ಭಾಗಗಳಿಂದ ಸಾವಿರಾರು ಜನರು ಆಗಮಿಸುತ್ತಿರುವುದರಿಂದ ನಗರದ ಸುತ್ತಮುತ್ತ ಟ್ರಾಫಿಕ್ ಜಾಮ್ ಆಗಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸಪಡುವಂತಾಗಿದೆ.
ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿಯೂ ಹೊಸ ವರ್ಷದ ಆಚರಣೆ ಸಾಕಷ್ಟು ಮೆರಗು ಪಡೆದಿದೆ. ಮಕ್ಕಳು ಹಾಗೂ ದಂಪತಿಗಳು ಡ್ಯಾನ್ಸ್ ಮಾಡುವ ಮೂಲಕ ಸಂಭ್ರಮಿಸಿದರು. ವಿಶೇಷವಾಗಿ ನವಜೋಡಿಗಳು ಸಂಭ್ರಮದಿಂದ ಕುಣಿದು ಕುಪ್ಪಳಿಸುವ ಮೂಲಕ ಹೊಸ ವರ್ಷ ಸ್ವಾಗತಿಸುತ್ತಿದ್ಧಾರೆ.
ಇದನ್ನೂ ಓದಿ: 2023: ವಿಶ್ವದಲ್ಲೇ ಮೊದಲು ಹೊಸ ವರ್ಷ ಅದ್ಧೂರಿಯಾಗಿ ಬರಮಾಡಿಕೊಂಡ ನ್ಯೂಜಿಲೆಂಡ್