ETV Bharat / state

ಬೆಂಗಳೂರು ಹಬ್ಬ ಆಯೋಜನೆ, 10ಲಕ್ಷ ಉದ್ಯೋಗ ಸೃಷ್ಟಿ: ಹೊಸ ಪ್ರವಾಸೋದ್ಯಮ ನೀತಿಯ ಹೈಲೈಟ್ಸ್ ಹೀಗಿದೆ

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಸಿಎಂ ಬಿ.ಎಸ್​. ಯಡಿಯೂರಪ್ಪ ಅವರು ಕರ್ನಾಟಕ ರಾಜ್ಯ ನೂತನ ಪ್ರವಾಸೋದ್ಯಮ ನೀತಿ 2020-2025ನ್ನು ಬಿಡುಗಡೆ ಮಾಡಿದರು. ಈ ನೂತನ ಪ್ರವಾಸೋದ್ಯಮ ನೀತಿಯಿಂದ ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ. ದೇಶದಲ್ಲೇ ಕರ್ನಾಟಕ ಪ್ರವಾಸೋದ್ಯಮ ವಲಯದಲ್ಲಿ ಮುಂಚೂಣಿಯಲ್ಲಿ ನಿಲ್ಲಲಿದೆ ಎಂಬ ಆಶಯ ವ್ಯಕ್ತಪಡಿಸಿದರು.

ನೂತನ ಪ್ರವಾಸೋದ್ಯಮ ನೀತಿ ಬಿಡುಗಡೆ
ನೂತನ ಪ್ರವಾಸೋದ್ಯಮ ನೀತಿ ಬಿಡುಗಡೆ
author img

By

Published : Sep 27, 2020, 6:21 PM IST

Updated : Sep 27, 2020, 6:41 PM IST

ಬೆಂಗಳೂರು: ಸಿಎಂ ಬಿ.ಎಸ್​​. ಯಡಿಯೂರಪ್ಪ ಕರ್ನಾಟಕ ರಾಜ್ಯ ನೂತನ ಪ್ರವಾಸೋದ್ಯಮ ನೀತಿ 2020-2025ನ್ನು ಬಿಡುಗಡೆ ಮಾಡಿದರು.

ವಿಧಾನಸೌಧದ ಸಮ್ಮೇಳನ‌ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿ ಮುಂದಿನ ಐದು ವರ್ಷಗಳಿಗೆ ಪ್ರವಾಸೋದ್ಯಮ, ಪ್ರವಾಸೋದ್ಯಮ ಅಭಿವೃದ್ಧಿ, ಉತ್ತೇಜಿಸುವ ಬಗ್ಗೆ ನೀತಿ ರೂಪಿಸಲಾಗಿದೆ ಎಂದರು.

ಬಳಿಕ‌ ಮಾತನಾಡಿದ ಸಿಎಂ, ರಾಜ್ಯದಲ್ಲಿ ಹಲವು ಪ್ರವಾಸಿ ತಾಣಗಳಿವೆ. ಉದ್ಯಾನ, ವನ್ಯಜೀವಿ ಅಭಯಾರಣ್ಯ ಎಲ್ಲವೂ ಇವೆ. ಒಟ್ಟು ಅಭಿವೃದ್ಧಿಯ ನೀತಿಯನ್ನು ರೂಪಿಸಿದ್ದೇವೆ. ಮುಂದಿನ ಐದು ವರ್ಷದ ಕಾರ್ಯಕ್ರಮ ರೂಪಿಸಿದ್ದೇವೆ. ವಿವಿಧ ಕಾರ್ಯಕ್ರಮಗಳನ್ನು ತರುತ್ತಿದ್ದೇವೆ. ಪ್ರವಾಸೋಧ್ಯಮದಲ್ಲಿ ಹೂಡಿಕೆಗೂ ಅವಕಾಶ ನೀಡ್ತೇವೆ. ಹೆಚ್ಚಿನ ಮೂಲಸೌಲಭ್ಯಗಳನ್ನ ಒದಗಿಸುತ್ತೇವೆ ಎಂದರು.

ಕರ್ನಾಟಕ ರಾಜ್ಯ ನೂತನ ಪ್ರವಾಸೋದ್ಯಮ ನೀತಿ 2020-2025ನ್ನು ಬಿಡುಗಡೆ

ಪ್ರವಾಸೋದ್ಯಮ ಭೂ-ಬ್ಯಾಂಕ್:

ಇದೇ ವೇಳೆ ಕರ್ನಾಟಕ ನೂತನ ಪ್ರವಾಸೋದ್ಯಮ ನೀತಿಯ ಬಗ್ಗೆ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ವಿವರಿಸುತ್ತಾ, ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿ ಮೂಲಸೌಕರ್ಯಗಳನ್ನು ಕಲ್ಪಿಸಲು ಖಾಸಗಿ ಉದ್ಯಮಿಗಳನ್ನು ಉತ್ತೇಜಿಸಲು ಪ್ರವಾಸೋದ್ಯಮ ಭೂ-ಬ್ಯಾಂಕ್ ಸ್ಥಾಪಿಸುವುದಾಗಿ ತಿಳಿಸಿದರು.

ಪ್ರವಾಸೋದ್ಯಮದಲ್ಲಿ ರಾಜ್ಯ ದೇಶದಲ್ಲಿಯೇ ಮೂರನೇ ಸ್ಥಾನದಲ್ಲಿದೆ. ವಿಶ್ವಮಟ್ಟದಲ್ಲಿ ಐದನೇ ಸ್ಥಾನದಲ್ಲಿದೆ. ಪ್ರವಾಸೋದ್ಯಮದಲ್ಲಿ ರಾಜ್ಯ ಉತ್ತಮ ಸ್ಥಾನದಲ್ಲಿದೆ. ಹಂಪಿ, ಪಟ್ಟದಕಲ್ಲು,ಅಭಯಾರಣ್ಯಗಳನ್ನ ಹೊಂದಿದ್ದೇವೆ. 320 ಕಿ.ಮೀ. ಸಮುದ್ರ ತೀರವಿದೆ. ಜೋಗ ಸೇರಿ 34 ಜಲಪಾತಗಳು ನಮ್ಮಲ್ಲಿವೆ. ವಿಭಿನ್ನ ಆಚಾರ, ಆಹಾರ ಸಂಸ್ಕೃತಿ ರಾಜ್ಯದಲ್ಲಿದೆ. ಇದೆಲ್ಲವನ್ನೂ ವಿಶ್ವಮಟ್ಟಕ್ಕೆ ಪರಿಚಯಿಸಬೇಕಿದೆ. ಹೀಗಾಗಿ ಈ ಹೊಸ ನೀತಿಯನ್ನ ತಂದಿದ್ದೇವೆ ಎಂದರು.

ಬೆಂಗಳೂರು ಕೇಂದ್ರೀಕೃತವಾಗಿ ತಿಂಗಳುಗಳ ಕಾಲ ಬೆಂಗಳೂರು ಹಬ್ಬವನ್ನು ಆಯೋಜನೆ‌ ಮಾಡುವ ಚಿಂತನೆ ಇದೆ. ಅಂತಾರಾಷ್ಟ್ರೀಯ ವಾರ್ಷಿಕ‌ ವೇಳಾ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ವಿವಿಧ ಪ್ರಮುಖ ಜಾತ್ರೆಗಳನ್ನೂ ಅಂತಾರಾಷ್ಟ್ರೀಯ ಕ್ಯಾಲೆಂಡರ್​​ನಲ್ಲಿ ಹಾಕಲಾಗುತ್ತದೆ. ಕಂಬಳ, ಕುಸ್ತಿ ಮತ್ತು ಎತ್ತಿನ ಗಾಡಿ ಓಟವನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ಆಕರ್ಷಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ನೂತನ ಪ್ರವಾಸೋದ್ಯಮ ನೀತಿಯ ಹೈಲೈಟ್ಸ್:

- 500 ಕೋಟಿ ರೂ. ಪ್ರೋತ್ಸಾಹ, ಸಹಾಯಧನ, ರಿಯಾಯತಿಗಳನ್ನು ನೀಡುವ ಮೂಲಕ ರೂ. 5000 ಕೋಟಿ ರೂ. ನೇರ ಬಂಡವಾಳ ಆಕರ್ಷಣೆಗೆ ಒತ್ತು.

- ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಉದ್ಯೋಗವಕಾಶಗಳ ಸೃಷ್ಟಿ.

-ಪ್ರವಾಸೋದ್ಯಮ ವಲಯವು ರಾಜ್ಯದ GSDPಗೆ ಶೇ.14,8ರಷ್ಟು ನೀಡುತ್ತಿದ್ದು, ಇದನ್ನು ಮುಂದಿನ ಐದು ವರ್ಷಗಳಲ್ಲಿ ಶೇ.20 ರಷ್ಟು ಏರಿಸಲು ಯೋಜನೆ ರೂಪಿಸಲಾಗಿದೆ.

- ಕೃಷಿ ಪ್ರವಾಸೋದ್ಯಮದ ಮೂಲಕ ಕೃಷಿಕರಿಗೆ ನೆರವು. ಪ್ರವಾಸಿಗಳಿಗೆ ಕೃಷಿಯ ಬಗ್ಗೆ ಅರಿವು ಮೂಡಿಸಿ ಮನೆಯ ಆಹಾರ ವೈವಿಧ್ಯತೆ ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಅಭಿವೃದ್ಧಿ.

- ಪ್ರವಾಸೋದ್ಯಮ ಅಭಿವೃದ್ಧಿಯನ್ನು ಐದು A ಗ್ರೇಡ್​​​ಗಳಾದ Attraction, Accommodation, Accessibility, Amenities ಮತ್ತು Activities ಆಯಾಮಗಳಿಂದ ಪೂರಕ ಅಭಿವೃದ್ಧಿಗೆ ಒತ್ತು.

- ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕರ್ನಾಟಕವನ್ನು ಉತ್ತೇಜಿಸಲು 360° ಮಾರುಕಟ್ಟೆ ತಂತ್ರ, ಪ್ರವಾಸೋದ್ಯಮ ಪ್ರಚಾರಕ್ಕಾಗಿ ವಾರ್ಷಿಕ ವೇಳಾಪಟ್ಟಿ.

- ಪ್ರವಾಸಿ ತಾಣಗಳ ಪೂರಕ ಸಮಗ್ರ ಅಭಿವೃದ್ಧಿಗೆ ಒತ್ತು ಅಧ್ಯಯನ ಯೋಚನೆ-ಯೋಜನೆಗೆ ಒತ್ತು (Comprehensive - Development plan)

- ರಾಜ್ಯದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಅನಾವರಣಗೊಳಿಸಲು ಸಾವಿರಾರು ಪಾರಂಪರಿಕ ತಾಣಗಳನ್ನು ಗುರುತಿಸಿ, ಅಭಿವೃದ್ಧಿ ಪಡಿಸಲು ಸಂರಕ್ಷಣಾ ಕಾರ್ಯಕ್ರಮ ಜಾರಿ.

-ಜಾಗತಿಕ ಪ್ರವಾಸೋದ್ಯಮ ಹೂಡಿಕೆದಾರರ ಸಭೆ ಏರ್ಪಡಿಸಲು ಕ್ರಮ.

ಐದು ವರ್ಷದ ಖಾಸಗಿ ಹೂಡಿಕೆ ಸಾಧ್ಯತೆ:

Adventure Tourism Project- 133 ಕೋಟಿ.

Caravan Park Project- 67 ಕೋಟಿ ರೂ.

Hotel Project-Budget- 333 ಕೋಟಿ ರೂ.

Hotel Project Premium- 1667 ಕೋಟಿ ರೂ.

Houseboat Project- 33 ಕೋಟಿ ರೂ.

Wayside Amenities- 333 ಕೋಟಿ ರೂ.

Wellness Centers- 133 ಕೋಟಿ ರೂ.

Last Updated : Sep 27, 2020, 6:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.