ETV Bharat / state

ಎಸ್​​ಎಸ್​​ಎಲ್​​ಸಿ ವಿದ್ಯಾರ್ಥಿಗಳಿಗೆ ಹೊಸ ಆನ್​​ಲೈನ್ ಕಾರ್ಯಕ್ರಮ, ಗೆದ್ದರೆ ಟ್ಯಾಬ್ ಬಹುಮಾನ

ವಿದ್ಯಾವಿನ್ ಸಂಸ್ಥೆ ಪ್ರತಿಭಾನ್ವೇಷಣೆಗೆ ಮುಂದಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬೆನ್ನು ತಟ್ಟುವ ಕಾರ್ಯ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಆ್ಯಪ್ ಮೂಲಕ ಶಿಕ್ಷಣ ನೀಡಲು ಮುಂದಾಗಿದ್ದಾರೆ. ಉತ್ತಮವಾಗಿ ಮುಂದುವರಿಯಲಿ..

author img

By

Published : Dec 2, 2020, 6:46 PM IST

Updated : Dec 2, 2020, 6:59 PM IST

new-online-program-for-sslc-students-news
ಎಸ್​​ಎಸ್​​ಎಲ್​​ಸಿ ವಿದ್ಯಾರ್ಥಿಗಳಿಗೆ ಹೊಸ ಆನ್​​ಲೈನ್ ಕಾರ್ಯಕ್ರಮ

ಬೆಂಗಳೂರು : ಕನ್ನಡ ಮತ್ತು ಆಂಗ್ಲ ಮಾಧ್ಯಮದ ಎಸ್​​ಎಸ್​​ಎಲ್​ಸಿ ವಿದ್ಯಾರ್ಥಿಗಳಿಗೆ ವಿದ್ಯಾವಿನ್ ಎಂಬ ಶೈಕ್ಷಣಿಕ ಆ್ಯಪ್ ವಿದ್ಯಾಸಂಸ್ಥೆ ಹೊಸ ಕಾರ್ಯಕ್ರಮ ಜಾರಿಗೆ ತಂದಿದೆ.

ಆನ್​​​​ಲೈನ್ ಶಿಕ್ಷಣ ಜಾರಿಯಲ್ಲಿರುವುದರಿಂದ ಉತ್ತೇಜನ ನೀಡುವ ಉದ್ದೇಶದಿಂದ ಎರಡು ತಿಂಗಳ ಅಭಿಯಾನ ಆರಂಭಿಸಿದೆ. ಇಂದು ಶಿಕ್ಷಣ ಸಚಿವ ಸುರೇಶ್‌ಕುಮಾರ್, ಈ ಅಭಿಯಾನದ ಟೋಲ್ ಫ್ರೀ ನಂಬರ್ ಲೋಕಾರ್ಪಣೆಗೊಳಿಸಿದ್ದಾರೆ. 1800 5724 920 ಸಂಖ್ಯೆಗೆ ಮಿಸ್ ಕಾಲ್ ಕೊಟ್ಟರೆ ಪ್ರಶ್ನೆಗಳು ಬರಲಿದೆ.

ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ್ರೆ ಬಹುಮಾನ ಗೆಲ್ಲುವ ಅವಕಾಶವಿದೆ. ಬಹುಮಾನವಾಗಿ ಜಿಲ್ಲೆಯ ಪ್ರತಿಭಾವಂತ ಅದೃಷ್ಟಶಾಲಿಗೆ ಟ್ಯಾಬ್ ಹಾಗೂ ಪ್ರತಿ ಜಿಲ್ಲೆಯ ಮೂವರು ವಿದ್ಯಾರ್ಥಿಗಳಿಗೆ ಉಚಿತ ಆ್ಯಪ್ ಆಧಾರಿತ ಆನ್​​ಲೈನ್ ಶಿಕ್ಷಣ ಹಾಗೂ ಡಿಜಿಟಲ್ ಪ್ರಮಾಣಪತ್ರ ಸಿಗಲಿದೆ.

ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ವಿದ್ಯಾವಿನ್ ಸಂಸ್ಥೆ ಪ್ರತಿಭಾನ್ವೇಷಣೆಗೆ ಮುಂದಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬೆನ್ನು ತಟ್ಟುವ ಕಾರ್ಯ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಆ್ಯಪ್ ಮೂಲಕ ಶಿಕ್ಷಣ ನೀಡಲು ಮುಂದಾಗಿದ್ದಾರೆ. ಉತ್ತಮವಾಗಿ ಮುಂದುವರಿಯಲಿ ಎಂದರು.

ಆ್ಯಪ್ ಆಧಾರಿತ ಶಿಕ್ಷಣ : ವಿದ್ಯಾವಿನ್ ಆ್ಯಪ್ ಆಧಾರಿತ ಆನ್​ಲೈನ್ ಶಿಕ್ಷಣ ಸಂಸ್ಥೆಯಾಗಿದ್ದು, ಆರಂಭಿಕವಾಗಿ ಎಸ್​ಎಸ್​​ಎಲ್​ಸಿಯವರಿಗೆ ಆನ್​​ಲೈನ್ ಶಿಕ್ಷಣ, ಟ್ಯೂಷನ್, ಮೆಂಟರಿಂಗ್ ಮಾಡಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ತಿಳಿಸಿದರು.

ಇದನ್ನೂ ಓದಿ: ಆನ್​ಲೈನ್ ತರಗತಿಗಳಿಗಾಗಿ ಮೊಬೈಲ್ ಗಿಫ್ಟ್ ಮಾಡುತ್ತಿರುವ ವಿದ್ಯಾರ್ಥಿಗಳು...

Last Updated : Dec 2, 2020, 6:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.