ETV Bharat / state

ರ‍್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಗದ್ದಲ.. ಪಾಸಿಟಿವ್‌-ನೆಗೆಟಿವ್‌ ಗೊಂದಲ..

author img

By

Published : Oct 2, 2020, 7:21 PM IST

ಕೊರೊನಾ ವೈರಸ್ ಕುರಿತು ಹೀಗೆ ಎಂದೂ ನಿಖರವಾಗಿ ಹೇಳಲು ಸಾಧ್ಯವಾಗುತ್ತಿಲ್ಲ.‌ ‌ಯಾಕೆಂದರೆ‌ ಕೆಲವರಿಗೆ ರೋಗ ಲಕ್ಷಣಗಳು ಇಲ್ಲದಿದ್ದರೂ ಪಾಸಿಟಿವ್ ಬಂದಿದೆ. ಹಾಗೆಯೇ ಲಕ್ಷಣಗಳು ಇದ್ದರೂ ನೆಗೆಟಿವ್ ಬಂದಿದೆ. ಹೀಗಿರುವಾದ ನೆಗೆಟಿವ್ ವರದಿ ಎಂದು ಸುಮ್ಮನೆ ಇರಬೇಕೇ ಅಥವಾ ಸುಮ್ಮನೆ ಇದ್ದರೆ ಮುಂದಿನ ದಿನಗಳಲ್ಲಿ ದೇಹಕ್ಕೆ ಯಾವ ರೀತಿ ಸಮಸ್ಯೆ ಉಂಟಾಗಬಹುದು ಎಂಬುದರ ಕುರಿತ ಒಂದು ವರದಿ ಇಲ್ಲಿದೆ..

Negative in Rapid Antigen Test
ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಗದ್ದಲ

ಬೆಂಗಳೂರು : ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದ ಕಾರಣ ಟಾಸ್ಕ್​​ಫೋರ್ಸ್‌ ತಂಡವು, ಆ್ಯಂಟಿಜೆನ್ ಟೆಸ್ಟ್ ಮಾಡುವಂತೆ ಸಲಹೆ ನೀಡಿತು. ಸ್ವ್ಯಾಬ್ ಟೆಸ್ಟ್ ಬಳಿಕ ಕೋವಿಡ್ ವರದಿಗಾಗಿ 2-3 ದಿನಗಳ ಕಾಲ ಕಾಯಬೇಕಿತ್ತು.

ಆದರೆ, ಅದೇ ಸಮಯದಲ್ಲಿ ಸೋಂಕಿತರ ಸಂಖ್ಯೆಯೂ ದಿಢೀರ್ ಏರಿಕೆ ಕಂಡಿತು. ಹೀಗಾಗಿ, ಫಲಿತಾಂಶ ವೇಗಕ್ಕೆ ಹಾಗೂ ಬಹುಬೇಗ ಚಿಕಿತ್ಸೆಗೆ ಅಡ್ಡಿಯಾಗಿತ್ತು. ಇದರಿಂದ ಕೊರೊನಾ ಹರಡುವಿಕೆ ನಿಯಂತ್ರಿಸಲು ಪ್ರಾಥಮಿಕ ತಪಾಸಣೆಯಾಗಿ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಶುರು ಮಾಡಲಾಯಿತು.

ಇದರ ನಡುವೆ ಇನ್ನೊಂದು ಮುಖ್ಯ ವಿಚಾರ ಅಂದ್ರೆ, ಕೊರೊನಾ ವೈರಸ್ ಕುರಿತು ಹೀಗೆ ಎಂದೂ ನಿಖರವಾಗಿ ಹೇಳಲು ಸಾಧ್ಯವಾಗುತ್ತಿಲ್ಲ.‌ ಯಾಕೆಂದರೆ‌, ಕೆಲವರಿಗೆ ರೋಗ ಲಕ್ಷಣಗಳು ಇಲ್ಲದಿದ್ದರೂ ಪಾಸಿಟಿವ್ ಬಂದಿದೆ.

ಹಾಗೆಯೇ ಲಕ್ಷಣಗಳು ಇದ್ದರೂ ನೆಗೆಟಿವ್ ಬಂದಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಅಂತಹ ಘಟನೆಗಳು ಹೆಚ್ಚು ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್​​ನಲ್ಲಿ ನಡೆಯುವ ಸಾಧ್ಯತೆಗಳೇ ಹೆಚ್ಚು. ಹೀಗಿದ್ದಾಗ ಒಂದೊಮ್ಮೆ ನೆಗೆಟಿವ್ ಬಂದ್ರೆ ಮುಂದೇನು ಎಂಬ ಪ್ರಶ್ನೆ ಕಾಡುವುದು ಸಹಜ.

ರ‍್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಗದ್ದಲ

ಹೀಗಿರುವಾಗ ಬಹಳಷ್ಟು ತಜ್ಞರು, ರ್ಯಾಪಿಡ್ ಟೆಸ್ಟ್​ನಲ್ಲಿ ನೆಗೆಟಿವ್ ಬಂದರೂ ಮುಂದಿನ ಭಾಗವಾಗಿ ಸ್ವ್ಯಾಬ್ ಪರೀಕ್ಷೆ ಹಾಗೂ ಮತ್ತೊಂದು ಹೆಜ್ಜೆ ಮುಂದೊಗಿ ಸಿಟಿ ಸ್ಕ್ಯಾನಿಂಗ್ ಮಾಡಿಸುವಂತೆಯೇ ಸಲಹೆ ನೀಡಿದ್ದಾರೆ. ಆರ್​​ಟಿಪಿಎಸ್ ಹಾಗೂ ಆ್ಯಂಟಿಜೆನ್​ನಲ್ಲಿ ಫಲಿತಾಂಶ ಎಲ್ಲರಿಗೂ ಶೇ.100ರಷ್ಟು ಸಿಗುವುದಿಲ್ಲ.

ಹೀಗಾಗಿ, ರೋಗ ಲಕ್ಷಣಗಳಿದ್ದು ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಮಾಡಿಸಿದಾಗ ನೆಗೆಟಿವ್ ಬಂದ್ರೆ ಸಿಟಿ ಸ್ಕ್ಯಾನ್ ಮಾಡಿಸಿದ್ರೆ ಉತ್ತಮ. ದೀರ್ಘಕಾಲದ ರೋಗ ಹಾಗೂ ಉಸಿರಾಟದ ತೊಂದರೆ, ಶ್ವಾಸಕೋಶದ ಸಮಸ್ಯೆಯಿಂದ ಬಳಲುವವರು ಈ ಪರೀಕ್ಷೆ ನಂತರವೂ ಸಿಟಿ ಸ್ಕ್ಯಾನ್ ಮಾಡಿಸಬೇಕಿದೆ.

ಶ್ವಾಸಕೋಶದಲ್ಲಿ ಸೋಂಕಿನ ಲಕ್ಷಣ ಇರುವಾಗ ಸಿಟಿ ಸ್ಕ್ಯಾನ್ ಮಾಡಿಸಿದ್ರೆ ಮುಂದೆ ತೀವ್ರತೆ ಹೆಚ್ಚಾಗುವ ಮುನ್ನವೇ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ. ಇದರಿಂದಾಗಿ ಉಸಿರಾಟದ ತೊಂದರೆ ತಪ್ಪಿಸಬಹುದು.

ಕೊರೊನಾ ಲಕ್ಷಣಗಳಾದ ನೆಗಡಿ, ಗಂಟಲು ಕೆರೆತ, ವಾಂತಿ, ಜ್ವರ, ವಾಸನೆ ಹಾಗೂ ರುಚಿ ಗೊತ್ತಾಗದಿರುವುದು. ಈ ಲಕ್ಷಣಗಳಿದ್ದರೂ ಪರೀಕ್ಷೆ ಮಾಡಿಸಿದಾಗ ನೆಗೆಟಿವ್ ಬಂದ್ರೆ ಸಿಟಿ ಸ್ಕ್ಯಾನ್‌ಗೆ ಒಳಗಾಗುವುದು ಒಳಿತು. ಈ ಮೂಲಕ ರೋಗ ಲಕ್ಷಣಗಳನ್ನು ಕಂಡು ಹಿಡಿದು, ಆರಂಭದಲ್ಲೇ ಚಿಕಿತ್ಸೆ ನೀಡಿ ತೀವ್ರತೆ ಹೆಚ್ಚಾಗಿ ಸಾವನ್ನಪ್ಪುವುದನ್ನು ತಪ್ಪಿಸಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.