ETV Bharat / bharat

ಹರಿಯಾಣ: ದಲಿತ ಮುಖಂಡ ತನ್ವರ್ ಕಾಂಗ್ರೆಸ್​ಗೆ ಮರುಸೇರ್ಪಡೆ, ಬಿಜೆಪಿಗೆ ಹಿನ್ನಡೆ - Tanwar Joins Congress - TANWAR JOINS CONGRESS

ಹರಿಯಾಣದ ದಲಿತ ಮುಖಂಡ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ.

ಹರಿಯಾಣ ದಲಿತ ಮುಖಂಡ ತನ್ವರ್ ಕಾಂಗ್ರೆಸ್ ಸೇರ್ಪಡೆ
ಹರಿಯಾಣ ದಲಿತ ಮುಖಂಡ ತನ್ವರ್ ಕಾಂಗ್ರೆಸ್ ಸೇರ್ಪಡೆ (IANS)
author img

By ETV Bharat Karnataka Team

Published : Oct 3, 2024, 7:00 PM IST

ಚಂಡೀಗಢ: ಹರಿಯಾಣ ವಿಧಾನಸಭಾ ಚುನಾವಣೆಗೆ ಕೇವಲ ಎರಡು ದಿನಗಳು ಬಾಕಿ ಇರುವಾಗ ದಲಿತ ನಾಯಕ ಅಶೋಕ್ ತನ್ವರ್ ಅವರು ಗುರುವಾರ ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್ ಸೇರಿದ್ದಾರೆ. ಈ ಮೂಲಕ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದಂತಾಗಿದೆ. ಮಹೇಂದ್ರಗಢ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರ ಸಮ್ಮುಖದಲ್ಲಿ ತನ್ವರ್ ಮತ್ತೆ ಕಾಂಗ್ರೆಸ್​ ಸೇರ್ಪಡೆಯಾದರು.

ತನ್ವರ್ ಅವರ ಪಕ್ಷಾಂತರದಿಂದಾಗಿ ರಾಜ್ಯದ ರಾಜಕೀಯದಲ್ಲಿ ಸಣ್ಣ ಬಿರುಗಾಳಿ ಎದ್ದಿದೆ. ಕಾಂಗ್ರೆಸ್​ ಸೇರ್ಪಡೆಗೆ ಕೆಲವೇ ಗಂಟೆಗಳ ಮುನ್ನ ಅವರು ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿದ್ದರು ಮತ್ತು ಹಠಾತ್ತಾಗಿ ರಾಹುಲ್ ಗಾಂಧಿಯವರ ರ‍್ಯಾಲಿಯಲ್ಲಿ ಕಾಣಿಸಿಕೊಂಡ ಅವರು ಪಕ್ಷ ಸೇರ್ಪಡೆಯಾಗಿದ್ದು ಅಚ್ಚರಿ ಮೂಡಿಸಿದೆ.

ಕಾಂಗ್ರೆಸ್ ತನ್ವರ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ್ದು, ಅವರು ಪಕ್ಷಕ್ಕೆ ಮರಳುವುದರಿಂದ ರಾಜ್ಯದಲ್ಲಿ ದಲಿತರ ಹಕ್ಕುಗಳ ಹೋರಾಟವನ್ನು ಬಲಪಡಿಸುತ್ತದೆ ಎಂದು ಹೇಳಿದೆ.

"ನಮ್ಮ ಹೋರಾಟ ಮತ್ತು ಸಮರ್ಪಣೆಯಿಂದ ಪ್ರಭಾವಿತರಾದ ಹಿರಿಯ ಬಿಜೆಪಿ ನಾಯಕ ಮತ್ತು ಹರಿಯಾಣದ ಪ್ರಚಾರ ಸಮಿತಿಯ ಸದಸ್ಯರೂ ಆಗಿರುವ ತನ್ವರ್ ನಮ್ಮೊಂದಿಗೆ ಸೇರಿಕೊಂಡಿದ್ದಾರೆ. ಅವರಿಗೆ ಕಾಂಗ್ರೆಸ್ ಕುಟುಂಬಕ್ಕೆ ಸ್ವಾಗತ, ಭವಿಷ್ಯಕ್ಕಾಗಿ ಶುಭ ಹಾರೈಕೆಗಳು" ಎಂದು ಕಾಂಗ್ರೆಸ್ ಸಾಮಾಜಿಕ ಮಾಧ್ಯಮ 'ಎಕ್ಸ್'​ನಲ್ಲಿ ಪೋಸ್ಟ್​ ಮಾಡಿದೆ.

ಮಾಜಿ ಸಂಸದ ತನ್ವರ್ ಅವರು ಲೋಕಸಭಾ ಚುನಾವಣೆಯಲ್ಲಿ ಸಿರ್ಸಾದಿಂದ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಕುಮಾರಿ ಸೆಲ್ಜಾ ವಿರುದ್ಧ ಸೋತಿದ್ದರು. ತನ್ವರ್ ಮೂಲಕ ದಲಿತ ಮತದಾರರನ್ನು ಒಟ್ಟುಗೂಡಿಸಲು ಬಿಜೆಪಿ ಪ್ರಯತ್ನಿಸುತ್ತಿತ್ತು.

"ಕಾಂಗ್ರೆಸ್ ತೊರೆದ ನಂತರವೂ ನಾನು ಪಕ್ಷದ ಹಲವಾರು ನಾಯಕರೊಂದಿಗೆ ಸಂಪರ್ಕದಲ್ಲಿದ್ದೆ. ಹಿಂದೆ ಏನಾಯಿತು ಎಂಬುದು ಇತಿಹಾಸ. ಹಿಂದಿನದನ್ನು ಬಿಟ್ಟುಬಿಡಿ" ಎಂದು ತನ್ವರ್ ಕಾಂಗ್ರೆಸ್​ಗೆ ಮರಳಿದ ನಂತರ ಮಾಧ್ಯಮಗಳಿಗೆ ತಿಳಿಸಿದರು.

ಕುತೂಹಲಕಾರಿ ಸಂಗತಿಯೆಂದರೆ, ಇದೇ ತನ್ವರ್​ ಕೆಲವು ದಿನಗಳ ಹಿಂದೆ, ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರ ಪ್ರಸ್ತಾಪವನ್ನು ಮಂಡಿಸಿ ಬಿಜೆಪಿಗೆ ಸೇರುವಂತೆ ಸಿರ್ಸಾ ಸಂಸದೆ ಸೆಲ್ಜಾ ಅವರಿಗೆ ಕೇಳಿಕೊಂಡಿದ್ದರು.

ಬಿಜೆಪಿಗೆ ಸೇರುವ ಮೊದಲು, ತನ್ವರ್ ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರಾಗಿದ್ದರು. ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೊಂದಿಗೆ ಕೈಜೋಡಿಸುವ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ನಿರ್ಧಾರವನ್ನು ವಿರೋಧಿಸಿದ ಅವರು ಪಕ್ಷ ತೊರೆದಿದ್ದರು. ತನ್ವರ್ 2019ರಲ್ಲಿ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದರು. ನಂತರ ಅವರು ನವೆಂಬರ್ 2021ರಲ್ಲಿ ತೃಣಮೂಲ ಕಾಂಗ್ರೆಸ್​ಗೆ ಸೇರಿದ್ದರು ಮತ್ತು ಏಪ್ರಿಲ್ 2022ರಲ್ಲಿ ಎಎಪಿಗೆ ಸೇರಿದರು.

ಇದನ್ನೂ ಓದಿ: ಬಾಲಾಪರಾಧಿ ವಯಸ್ಸು 14ಕ್ಕಿಳಿಸಿ: ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸಲಹೆ - Juvenile Age

ETV Bharat Logo

Copyright © 2025 Ushodaya Enterprises Pvt. Ltd., All Rights Reserved.