ETV Bharat / state

ಕೇಂದ್ರ ಸಚಿವ ಎಚ್​.ಡಿ.ಕುಮಾರಸ್ವಾಮಿ ವಿರುದ್ಧ ಎಫ್ಐಆರ್ ದಾಖಲು - FIR Against H D Kumaraswamy - FIR AGAINST H D KUMARASWAMY

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹಾಗೂ ರಮೇಶ್ ಗೌಡ ಎಂಬವರ ವಿರುದ್ಧ ಮೊದಲು ಎನ್​ಸಿಆರ್ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಎಫ್ಐಆರ್ ಮಾಡಿದ್ದಾರೆ.

Union Minister H D Kumaraswamy
ಕೇಂದ್ರ ಸಚಿವ ಎಚ್​. ಡಿ.ಕುಮಾರಸ್ವಾಮಿ (ETV Bharat)
author img

By ETV Bharat Karnataka Team

Published : Oct 3, 2024, 7:07 PM IST

ಬೆಂಗಳೂರು: 50 ಕೋಟಿ ರೂಪಾಯಿ ಹಣ ನೀಡುವಂತೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ರಮೇಶ್ ಗೌಡ ಎಂಬವರ ವಿರುದ್ಧ ಉದ್ಯಮಿ ವಿಜಯ್ ತಾತಾ ಎಂಬವರು ಇಂದು ನಗರದ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಕುಮಾರಸ್ವಾಮಿ ಹಾಗೂ ರಮೇಶ್ ಗೌಡ ವಿರುದ್ಧ ಎನ್​ಸಿಆರ್ ದಾಖಲಿಸಿಕೊಂಡಿದ್ದ ಪೊಲೀಸರು ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಇದೀಗ ಎಫ್ಐಆರ್ ಮಾಡಿದ್ದಾರೆ. ಎಫ್ಐಆರ್​ನಲ್ಲಿ ಮೊದಲ ಆರೋಪಿ ರಮೇಶ್ ಹಾಗೂ ಎರಡನೇ ಆರೋಪಿಯಾಗಿ ಕುಮಾರಸ್ವಾಮಿ ಅವರನ್ನು ಹೆಸರಿಸಲಾಗಿದೆ.

ದಾಸರಹಳ್ಳಿ ನಿವಾಸಿಯಾಗಿರುವ ದೂರುದಾರ ವಿಜಯ್ ತಾತಾ ರಿಯಲ್ ಎಸ್ಟೇಟ್ ಉದ್ಯಮಿ. 2018ರಿಂದ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ಸದ್ಯ ಪಕ್ಷದ ಸಾಮಾಜಿಕ ಜಾಲತಾಣದ ವಿಭಾಗದ ಉಪಾಧ್ಯಕ್ಷರಾಗಿದ್ದಾರೆ.

ವಿಜಯ್ ತಾತಾ ದೂರಿನ ವಿವರ: "2019ರ ಮಂಡ್ಯ ಲೋಕಸಭಾ ಚುನಾವಣೆ ವೇಳೆ ಜೆಡಿಎಸ್ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳನ್ನು ಕೈಗೊಂಡಿದ್ದು, ಇದಕ್ಕೆ ವೈಯಕ್ತಿಕವಾಗಿ ಕೋಟ್ಯಂತರ ರೂಪಾಯಿ ಹಣವನ್ನೂ ಸಹ ಖರ್ಚು ಮಾಡಿದ್ದೇನೆ. ಮಾಜಿ ಎಂಎಲ್​ಸಿ ರಮೇಶ್ ಗೌಡ ಅವರು ಕಳೆದ ಆಗಸ್ಟ್ 24ರಂದು ಮನೆಗೆ ಬಂದು ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ನೀಡುವುದು ಅಂತಿಮವಾಗಿದೆ ಎಂದು‌ ಪ್ರಸ್ತಾಪಿಸಿ ಕುಮಾರಸ್ವಾಮಿ ಅವರಿಗೆ ಕರೆ ಮಾಡಿಸಿ ಮಾತನಾಡಿದರು."

"ಆಗ ಅವರು 'ಈ ಬಾರಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ನಮಗೆ ಗೆಲುವು ಅನಿವಾರ್ಯ. ಚುನಾವಣಾ ವೆಚ್ಚಕ್ಕಾಗಿ 50 ಕೋಟಿ ರೂಪಾಯಿ ಹಣ ಕೊಡಬೇಕಾಗುತ್ತದೆ' ಎಂದರು. ನಾನು ಕೂಡಲೇ 'ಸರ್ ನನ್ನ ಬಳಿ ಅಷ್ಟೊಂದು ಹಣವಿಲ್ಲ, ನಾನು ನನ್ನ ರಿಯಲ್ ಎಸ್ಟೇಟ್ ಪ್ರಾಜೆಕ್ಟ್‌ಗಳನ್ನು ಕಂಪ್ಲೀಟ್ ಮಾಡಬೇಕು. ಹೀಗಾಗಿ ಪಕ್ಷದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಅಷ್ಟೇ' ಎಂದು ಉತ್ತರಿಸಿದೆ. ನನ್ನ ಮಾತಿನಿಂದ ಕೋಪಗೊಂಡ ಕುಮಾರಸ್ವಾಮಿ ಅವರು 50 ಕೋಟಿ ರೆಡಿ ಮಾಡಿ ಇಲ್ಲದೇ ಹೋದರೇ ನಾನು ಏನು ಮಾಡುತ್ತೀನೋ ಗೊತ್ತಿಲ್ಲ, ನೀವು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುವುದಷ್ಟೇ ಅಲ್ಲ, ಇಲ್ಲಿ ಬದುಕುವುದೇ ಕಷ್ಟವಾಗುತ್ತದೆ ಎಂದು ಬೆದರಿಕೆ ಹಾಕಿ ಫೋನ್ ಕಟ್ ಮಾಡಿದರು."

"ನನ್ನ ಎದುರಲ್ಲೇ ಕುಳಿತಿದ್ದ ರಮೇಶ್ ಗೌಡ ಅವರು 'ಕುಮಾರಣ್ಣ ಹೇಳಿದಂತೆ 50 ಕೋಟಿ ಸಿದ್ಧಪಡಿಸಿಕೊಳ್ಳಿ ಜೊತೆಗೆ ನಾನು ದೇವಾಲಯ ಹಾಗೂ ಶಾಲೆ ಕಟ್ಟಿಸುತ್ತಿದ್ದು, ಅದಕ್ಕಾಗಿ 5ಕೋಟಿ ನೀಡುವಂತೆ ಒತ್ತಾಯಿಸಿದರು. ಈ ಹಣವನ್ನು ನೀಡದಿದ್ದರೆ ನಿಮಗೆ ತೊಂದರೆ ಎದುರಾಗುತ್ತದೆ' ಎಂದು ಧಮ್ಕಿ ಹಾಕಿದರು" ಎಂದು ವಿಜಯ್ ತಾತಾ ದೂರಿನಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ: ಕುಮಾರಸ್ವಾಮಿ ಮಾತನಾಡೋದನ್ನ ದೇವೇಗೌಡ್ರು ಸರಿ ಅಂದ್ರೆ ನಾನೂ ಒಪ್ಪುತ್ತೇನೆ: ಸಚಿವ ಎನ್.ಚಲುವರಾಯಸ್ವಾಮಿ - N CHALUVARAYASWAMY

ETV Bharat Logo

Copyright © 2024 Ushodaya Enterprises Pvt. Ltd., All Rights Reserved.