ETV Bharat / state

ನಾನು ಎಂಬುದನ್ನು ಮರೆತು ನಾವು ಎನ್ನುವ ಭಾವ ಬಂದಾಗ ಎಲ್ಲರೂ ನಮ್ಮವರಾಗುತ್ತಾರೆ: ಸಿಎಂ ಬೊಮ್ಮಾಯಿ

author img

By

Published : Nov 5, 2022, 10:58 AM IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನಿವೃತ್ತ ಐಎಎಸ್‌ ಅಧಿಕಾರಿ ಸಿ ಸೋಮಶೇಖರ್ ಅವರ ಆತ್ಮಕಥನ ನೀನೊಲಿದ ಬದುಕು ಪುಸ್ತಕವನ್ನು ಬಿಡುಗಡೆ ಮಾಡಿದರು.

bommai
ಬಸವರಾಜ ಬೊಮ್ಮಾಯಿ

ಬೆಂಗಳೂರು: ನಾನು ಎಂಬುದನ್ನು ಮರೆತು ನಾವು ಎನ್ನುವ ಭಾವ ಬಂದಾಗ ಎಲ್ಲರೂ ನಮ್ಮವರಾಗುತ್ತಾರೆ. ಆಗ ಜನರ ಪ್ರೀತಿ, ವಿಶ್ವಾಸ ಸಿಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಹಾಗೂ ಸಾಹಿತಿ ಡಾ. ಸಿ ಸೋಮಶೇಖರ ಅವರ ಆತ್ಮಕಥನ 'ನೀನೊಲಿದ ಬದುಕು' ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಎಲ್ಲಿಯವರೆಗೆ ನಾನು ಎನ್ನುವಂತ ಭಾವ ನಮ್ಮಲ್ಲಿ ಇರುತ್ತದೆಯೋ ಅಲ್ಲಿಯವರೆಗೂ ಜನರ ಪ್ರೀತಿ ಸಿಗುವುದಿಲ್ಲ ಎಂದರು.

ನೀನೊಲಿದ ಬದುಕು ಬಿಡುಗಡೆ ಕಾರ್ಯಕ್ರಮ

ಯಾವುದೇ ಸ್ಥಾನಮಾನ ಸಿಗಲಿ ಅಥವಾ ಯಾವುದೇ ಸಂದರ್ಭವಿರಲಿ ಜನರಿಗೆ ಸಹಾಯ ಮಾಡಿದರೆ ಮಾತ್ರ ಕೊನೆಯವರೆಗೂ ಅವರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಲು ಸಾಧ್ಯ. ಆ ವಿಚಾರದಲ್ಲಿ ಸಿ.ಸೋಮಶೇಖರ್ ಅವರು ಬದುಕನ್ನು ಒಲಿಸಿಕೊಂಡಿದ್ದಾರೆ. ಸಂಪೂರ್ಣವಾಗಿ ಬದುಕು ಒಲಿಸಿಕೊಂಡವರು, ಗಳಿಸಿಕೊಂಡವರ ಜೀವನ ಸಾಕ್ಷಾತ್ಕಾರವಾಗುತ್ತದೆ. ತಾಳ್ಮೆ ಇಲ್ಲದ ಮನುಷ್ಯ ಎಂದಿಗೂ ಸಮಾಧಾನದಿಂದ ಇರಲು ಸಾಧ್ಯವಿಲ್ಲ. ಯಾರಿಗೆ ತಾಳ್ಮೆ ಇರುತ್ತದೆಯೋ ಅವರ ಬದುಕು ಕೂಡ ಸುಂದರವಾಗಿರುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಏರ್ ಬಸ್ ಉತ್ಪಾದನಾ ಘಟಕ ಸ್ಥಾಪಿಸಿ: ಫ್ರೆಂಚ್ ಕಂಪೆನಿಗಳಿಗೆ ಸಿಎಂ ಆಹ್ವಾನ

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ.ಶಿವರಾಜ್ ವಿ.ಪಾಟೀಲ್ ಮಾತನಾಡಿ, ಜನರ ಪ್ರೀತಿ, ಅಭಿಮಾನ, ವಿಶ್ವಾಸವೇ ಜೀವನದಲ್ಲಿ ಎಲ್ಲಕ್ಕಿಂತ ದೊಡ್ಡ ಸಂಪತ್ತು. ಆತ್ಮ ಕಥನ ಸ್ವಂತಕ್ಕಾಗಿಯೋ ಸಮಾಜಕ್ಕಾಗಿಯೋ, ಆತ್ಮ ಕಥನದಿಂದ ಆಗಬೇಕಾಗಿರುವ ಕೊಡುಗೆ ಏನು? ಎಂಬುದನ್ನು ವಿಚಾರ ಮಾಡುವ ಅಗತ್ಯವಿದೆ. ಜೀವನದಲ್ಲಿ ಏನಾದರೂ ಸಾಧನೆ ಮಾಡಿದ್ದರೆ, ಕಾಯಕ ಮಾಡಿದ್ದರೆ, ನಾವು ಹೇಗೆ ಬದುಕಿದ್ದೇವೆ, ನಮಗಾಗಿ ನಾವು ಬದುಕಿದ್ದೀವಾ? ಅಥವಾ ಇನ್ನೊಬ್ಬರಿಗಾಗಿ ಬದುಕಿದ್ದೇವಾ ಎಂಬ ಪರಿಶೋಧನೆ ನಡೆಸಿಕೊಳ್ಳುವ ಅವಶ್ಯಕತೆ ಇದೆ. ಆ ವಿಚಾರದಲ್ಲಿ ಸಿ.ಸೋಮಶೇಖರ್ ಅವರ ಪರಿಪೂರ್ಣರಾಗಿದ್ದಾರೆ ಎಂದು ಬಣ್ಣಿಸಿದರು.

ಇದನ್ನೂ ಓದಿ: ಬಂಡವಾಳ ಹೂಡಿಕೆ ಸಮಾವೇಶದಲ್ಲಿ ವಸ್ತು ಪ್ರದರ್ಶನ ವೀಕ್ಷಿಸಿದ ಸಿಎಂ ಬೊಮ್ಮಾಯಿ

ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಸಚಿವರಾದ ಸುನಿಲ್‌ ಕುಮಾರ್, ವಿ. ಸೋಮಣ್ಣ, ಸಾಹಿತಿಗಳಾದ ಚಂದ್ರಶೇಖರ ಕಂಬಾರ, ಮಲ್ಲೇಪುರಂ ವೆಂಕಟೇಶ್, ಸಿ.ಸೋಮಶೇಖರ್ ಹಾಗೂ ಸಪ್ನಾ ಬುಕ್ ಹೌಸ್​ನ ನಿತಿನ್ ಶಾ ಹಾಜರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.