ETV Bharat / state

ಮತದಾರರ ಪಟ್ಟಿಯಿಂದ ಹೆಸರುಗಳು ಮಾಯವಾಗಿದ್ದು ಹೇಗೆ..? ಹೈಕೋರ್ಟ್ ಮೆಟ್ಟಿಲೇರಲು‌ ಬಿಜೆಪಿ ಸಿದ್ಧತೆ

ಅಮೆರಿಕಾ ಸೇರಿದಂತೆ ಇತರೆ ರಾಷ್ಟ್ರಗಳು ಹಾಗೂ ರಾಜ್ಯದಿಂದ ಮತ ಚಲಾಯಿಸಲು ಮತಗಟ್ಟೆಗೆ ಬಂದವರ ಹೆಸರು ಕಾಣೆಯಾದ ಬಗ್ಗೆ ಕೆಂಡಾಮಂಡಲರಾದ ಮಾಜಿ ಡಿಸಿಎಂ ಆರ್​ ಅಶೋಕ್​, ಈ ಬಗ್ಗೆ ಹೈಕೋರ್ಟ್​ಗೆ ಪಿಐಎಲ್​ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಿರುವ ಮಾಜಿ ಡಿಸಿಎಂ ಆರ್​ ಅಶೋಕ್
author img

By

Published : Apr 19, 2019, 5:39 PM IST

ಬೆಂಗಳೂರು: ಯಾವುದೇ ಕೋರಿಕೆ ಇಲ್ಲದೆ, ಮಾಹಿತಿ ನೀಡದೇ ನಗರದ ಮೂರು ಲೋಕಸಭಾ ಕ್ಷೇತ್ರದಲ್ಲಿ ತಲಾ‌ 60 ಸಾವಿರ ಹೆಸರನ್ನು ಮತದಾರರ‌ ಪಟ್ಟಿಯಿಂದ ಡಿಲೀಟ್​ ಮಾಡಲಾಗಿದ್ದು, ಇದರ ಹಿಂದೆ ಮಹಾನಗರ ಪಾಲಿಕೆಯ ಕೈವಾಡವಿದೆ. ಈ ಕುರಿತು ಹೈಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಹೇಳಿದ್ದಾರೆ.

ನಗರದ ಉತ್ತರ, ದಕ್ಷಿಣ ಹಾಗು ಕೇಂದ್ರ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಬಿಎಂಪಿ ಅಧಿಕಾರಿಗಳು ಏಕಾಏಕಿ ತಲಾ 60 ಸಾವಿರ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಡಿಲೀಟ್‌ ಮಾಡಿದ್ದಾರೆ. ಕೆಲವು ಕಡೆ ಪತ್ನಿ ಹೆಸರು ಮಾಯವಾದರೆ, ಇನ್ನೂ ಕೆಲವೆಡೆ ಪತಿಯ ಹೆಸರು ಮತಪಟ್ಟಿಯಲ್ಲಿ ಇರಲಿಲ್ಲ. ಅಮೆರಿಕಾದಿಂದ ಮತ ಚಲಾಯಿಸಲು ಬಂದವರ ಹೆಸರು ಕೂಡ ಪಟ್ಟಿಯಿಂದ ಕಾಣೆಯಾಗಿದೆ. ಅಷ್ಟು ದೂರದಿಂದ ಮತ ಹಾಕಲು ಬಂದವರಿಗೆ ವೋಟ್ ಇಲ್ಲ ಎಂದರೆ ಹೇಗೆ? ಮಣಿಪಾಲ​ದಿಂದ ಮತ ಹಾಕುವುದಕ್ಕೆ ಬಂದವರ ಹೆಸರೂ ಡಿಲೀಟ್‌ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಿರುವ ಮಾಜಿ ಡಿಸಿಎಂ ಆರ್​ ಅಶೋಕ್

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಿದವರ ಹೆಸರುಗಳೂ ಈ ಬಾರಿ ಡಿಲೀಟ್ ಆಗಿವೆ. ಮತದಾರರ ಹೆಸರುಗಳನ್ನು ಕೈಬಿಟ್ಟಿರುವುದಕ್ಕೆ ಕಾರ್ಪೋರೇಶನ್​ ಕಾರಣ. ಒಂದೊಂದು ಕ್ಷೇತ್ರದಲ್ಲಿ ಐವತ್ತು-ಅರವತ್ತು ಸಾವಿರ ಮತದಾರರ ಹೆಸರುಗಳಿಲ್ಲ. ಇದರ ವಿರುದ್ಧ ನಾವು ಹೈಕೋರ್ಟ್‌ಗೆ ಪಿಐಎಲ್​ ಸಲ್ಲಿಸುವ ಬಗ್ಗೆ ಎಲ್ಲಾ ರೀತಿಯ ದಾಖಲೆಗಳನ್ನ ಸಂಗ್ರಹ ಮಾಡುತ್ತಿದ್ದೇವೆ ಎಂದರು.

ಮೊದಲ ಹಂತದ ಚುನಾವಣೆಯಲ್ಲಿ ಕನಿಷ್ಟ 10 ಕ್ಷೇತ್ರಗಳನ್ನ ಗೆಲ್ಲುತ್ತೇವೆ:

ಮೊದಲ ಹಂತದ ಚುನಾವಣೆಯಲ್ಲಿ ಕನಿಷ್ಟ 10 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ. ಈ ಬಾರಿ ವಾತಾವರಣ ಬಿಜೆಪಿ ಪರ ಇದೆ. ಬೆಂಗಳೂರಿನ ನಾಲ್ಕು ಕ್ಷೇತ್ರಗಳನ್ನೂ ಪಕ್ಷ ಗೆಲ್ಲುತ್ತದೆ. ಎರಡನೇ ಹಂತದ ಚುನಾವಣೆಯಲ್ಲಿಯೂ ನಮಗೆ 10 ಸ್ಥಾನ ಖಚಿತ. ರಾಜ್ಯದೆಲ್ಲೆಡೆ ಕನಿಷ್ಠ 22 ಸ್ಥಾನ ಗೆಲ್ಲುವ ಗುರಿ ತಲುಪಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸರ್ಕಾರಕ್ಕೆ ನಾವು ಟೈಂ ಬಾಂಬ್ ಫಿಕ್ಸ್ ಮಾಡಿಲ್ಲ:

ನಾವು ಮೈತ್ರಿ ಸರ್ಕಾರಕ್ಕೆ ಟೈಂ ಬಾಂಬ್ ಫಿಕ್ಸ್ ಮಾಡಿಲ್ಲ. ಅದೆಲ್ಲಾ ಮಾಜಿ ಸಿಎಂ ಸಿದ್ದರಾಮಯ್ಯನವರ ಕೆಲಸ. ಅವರು ಯಾವಾಗ ಬಯಸುತ್ತಾರೋ ಆಗ ಮೈತ್ರಿ ಸರ್ಕಾರ ಪತನ ಆಗುತ್ತದೆ. ಮೈತ್ರಿ ಸರ್ಕಾರ ಬೀಳಿಸಲು ನಾವು ಯಾವುದೇ ಮುಹೂರ್ತ ಫಿಕ್ಸ್ ಮಾಡಿಲ್ಲ. ಆದರೆ, ಸರ್ಕಾರ ಅವರ ಕಚ್ಚಾಟದಿಂದಲೇ ಪತನಗೊಳ್ಳಲಿದೆ ಎಂದರು.

ಕೈಕೊಟ್ಟ ಕರೆಂಟ್​:

ಮಾಜಿ ಡಿಸಿಎಂ ಆರ್.ಅಶೋಕ್ ಸುದ್ದಿಗೋಷ್ಠಿ ನಡೆಸುತ್ತಿದ್ದಾಗ ವಿದ್ಯುತ್ ಪದೇ ಪದೇ ಕೈಕೊಟ್ಟು ಕಣ್ಣಾಮುಚ್ಚಾಲೆ ಆಡಿತು. ಸುದ್ದಿಗೋಷ್ಠಿ ಆರಂಭಗೊಂಡ ಕೆಲ ಹೊತ್ತಿನಲ್ಲೇ ವಿದ್ಯುತ್ ಕೈಕೊಟ್ಟರೆ, ವಿದ್ಯುತ್ ಬರುತ್ತಿದ್ದಂತೆ ಮಾತು ಮುಂದುವರೆಸಿದರು. ಅದಾದ ಕೆಲ ಸಮುಯದ ನಂತರ ಮತ್ತೊಮ್ಮೆ ವಿದ್ಯುತ್ ಹೋಗಿ ಕತ್ತಲೆ ಆವರಿಸಿತು. ಆಗ ಸರ್ಕಾರದ ಕಾಲೆಳೆದ ಅಶೋಕ್, ಇದು ಸರ್ಕಾರದ ತೊಂದರೆ‌. ಪದೇ ಪದೇ ವಿದ್ಯುತ್ ಕೈ ಕೊಡುತ್ತಿರುವುದನ್ನು ನೋಡಿದರೆ ಸರ್ಕಾರಕ್ಕೆ ಸಮಸ್ಯೆ ಇದೆ ಅನ್ನಿಸುತ್ತಿದೆ ಎಂದು ವ್ಯಂಗ್ಯವಾಡಿದರು.

Intro:-ಪ್ರಶಾಂತ್ ಕುಮಾರ್
-
ಮತದಾರರ ಪಟ್ಟಿಯಿಂದ ಹೆಸರುಗಳ ಮಾಸ್ ಡಿಲೀಟ್: ಹೈಕೋರ್ಟ್ ಮೆಟ್ಟಿಲೇರಲು‌ ಸಿದ್ದವಾದ ಬಿಜೆಪಿ

ಬೆಂಗಳೂರು:ಯಾವುದೇ ಕೋರಿಕೆ ಇಲ್ಲದೆ ಮಾಹಿತಿ ನೀಡದೇ ಮೂರು ಲೋಕಸಭಾ ಕ್ಷೇತ್ರದಲ್ಲಿ ತಲಾ‌ 60 ಸಾವಿರ ಹೆಸರನ್ನು ಮತದಾರರ‌ ಪಟ್ಟಿಯಲ್ಲಿ ಡಿಲೀಟ್ ಮಾಡಿದ್ದು ಪಾಲಿಕೆಯ ಕೆಲವರು ಕೈವಾಡವಿದೆ ಇದರ ವಿರುದ್ಧ‌ ಹೈ ಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಹೇಳಿದ್ದಾರೆ.

ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ನಿನ್ನೆ ನಡೆದ ಚುನಾವಣೆಯಲ್ಲಿ‌ ಮತದಾರರು ಉತ್ಸಾಹದಿಂದ ಮತದಾನ ಮಾಡಿದ್ದಾರೆ, ವೃದ್ಧರು, ಮಹಿಳೆಯರು, ಗರ್ಭಿಣಿಯರು, ಯುವ ಜನತೆ ಮತ ಹಾಕಿದ್ದಾರೆ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದರು.

ಮಹಾನಗರದ ಮೂರೂ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ತಲಾ 60 ಸಾವಿರ ಮತದಾರರನ್ನ ಪಟ್ಟಿಯಲ್ಲಿ ಡಿಟೀಲ್ ಮಾಡಿದ್ದಾರೆ ಕೆಲವು ಕಡೆ ಹೆಂಡತಿ ಹೆಸರು ಡಿಲೀಟ್ ಮಾಡಿದ್ದರೆ, ಕೆಲವು ಕಡೆ ಗಂಡನ ಹೆಸರು ಡಿಲೀಟ್ ಮಾಡಿದ್ದಾರೆ ಬಿಬಿಎಂಪಿ ಅಧಿಕಾರಿಗಳು ಏಕಾಏಕಿ ಡಿಲೀಟ್ ಮಾಡಿದ್ದಾರೆ ಅಮೆರಿಕಾದಿಂದ ಮತ ಚಲಾಯಿಸಲು ಬಂದವರ ಹೆಸರು ಕೂಡ ಪಟ್ಟಿಯಲ್ಲಿ ಇರಲಿಲ್ಲ ಅಮೇರಿಕಾದಿಂದ‌ ಬಂದವರಿಗೆ ವೋಟ್ ಇಲ್ಲ ಅಂದರೆ ಹೇಗೆ?ಮಣಿಪಾಲದಿಂದ ಮತ ಹಾಕೋದಕ್ಕೆ ಬಂದವರ ಹೆಸರು ಇಲ್ಲ ಏಕಾಏಕಿ ಲೀಸ್ಟ್ ನಲ್ಲಿ ಡಿಲೀಟ್ ಮಾಡಿದ್ದಾರೆ. ಮಾಸ್ ಆಗಿ ಮತದಾರರ ಹೆಸರುಗಳು ಡಿಲೀಟ್ ಆಗಿವೆ ಕಳೆದ ವಿಧಾನಸಭೆ ಚುನಾವಣೇಲಿ ಮತದಾನ ಮಾಡಿದವರ ಹೆಸರುಗಳು ಡಿಲೀಟ್ ಆಗಿವೆ ದಿಢೀರ್‌ ಆಗಿ ಮತದಾರರ ಹೆಸರುಗಳು ಡಿಲೀಟ್ ಆಗಲು ಕಾರ್ಪೋರೇಶನ್ ಕಾರಣ ಒಂದೊಂದು ಕ್ಷೇತ್ರದಲ್ಲಿ ಐವತ್ತು ಅರವತ್ತು ಸಾವಿರ ಮತದಾರರ ಹೆಸರುಗಳು ಡಿಲೀಟ್ ಆಗಿವೆ
ಇದರ ವಿರುದ್ಧ ನಾವು ಕೋರ್ಟ್ ಗೂ ಹೋಗಲಿದ್ದೇವೆ,ಹೈ ಕೋರ್ಟ್ ಗೆ ಪಿಐ ಎಲ್ ಸಲ್ಲಿಸುವ ಬಗ್ಗೆ ಎಲ್ಲಾ ರೀತಿಯ ದಾಖಲೆಗಳನ್ನ ಸಂಗ್ರಹ ಮಾಡುತ್ತಿದ್ದೇವೆ ಸಾರ್ವಜನಿಕರು ಕೂಡ ನ್ಯಾಯಾಲಯದ ಮೊರೆ ಹೊಗಿದಾಗಿ ಹೇಳಿದ್ದಾರೆ ಎಂದರು.

ನಿನ್ನೆ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಕನಿಷ್ಟ 10 ಕ್ಷೇತ್ರಗಳನ್ನ ಗೆಲ್ಲುತ್ತೇವೆ,ವಾತಾವರಣ ಬಿಜೆಪಿ ಪರ ಇದೆ
ಬೆಂಗಳೂರಿನ ನಾಲ್ಕು ಕ್ಷೇತ್ರಗಳನ್ನ ಬಿಜೆಪಿ ಗೆಲ್ಲುತ್ತದೆ, ಎರಡನೇ ಹಂತದ ಚುನಾವಣೆಯಲ್ಲಿಯೂ ನಮಗೆ 10 ಸ್ಥಾನ ಖಚಿತ ಕನಿಷ್ಠ 22 ಸ್ಥಾನ ಗೆಲ್ಲುವ ಗುರಿ ತಲುಪಲುದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸರ್ಕಾರಕ್ಕೆ ನಾವು ಟೈಂ ಬಾಂಬ್ ಫಿಕ್ಸ್ ಮಾಡಿಲ್ಲ:

ನಾವು ಮೈತ್ರಿ ಸರ್ಕಾರಕ್ಕೆ ಟೈಂ ಬಾಂಬ್ ಫಿಕ್ಸ್ ಮಾಡಿಲ್ಲ.ಟೈಂ ಬಾಂಬ್ ಫಿಕ್ಸ್ ಮಾಡಿರೋದು ಮಾಜಿ ಸಿಎಂ ಸಿದ್ದರಾಮಯ್ಯ.ಅವರು ಯಾವಾಗ ಬಯಸುತ್ತಾರೋ ಆಗ ಬಾಂಬ್ ಸಿಡಿಯುತ್ತದೆ.ಮೈತ್ರಿ ಸರ್ಕಾರ ಪತನ ಆಗುತ್ತದೆ.ಮೈತ್ರಿ ಸರ್ಕಾರ ಬೀಳಿಸಲು ನಾವು ಯಾವುದೇ ಮುಹೂರ್ತ ಫಿಕ್ಸ್ ಮಾಡಿಲ್ಲ.ಆದರೆ ಸರ್ಕಾರ ಅವರ ಕಚ್ಚಾಟದಿಂದಲೇ ಪತನಗೊಳ್ಳಲಿದೆ ಆಗ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದರು.

ಕೈಕೊಟ್ಟ ಕರೆಂಟ್:

ಮಾಜಿ ಡಿಸಿಎಂ ಆರ್.ಅಶೋಕ್ ಸುದ್ದಿಗೋಷ್ಠಿಗೆ ವಿದ್ಯುತ್ ಪದೇ ಪದೇ ಕೈಕೊಟ್ಟು ಕಣ್ಣಾಮುಚ್ಚಾಲೆ ಆಡಿತು.ಮೊದಲು ಸುದ್ದಿಗೋಷ್ಠಿ ಆರಂಭಗೊಂಡ ಕೆಲ ಹೊತ್ತಿನಲ್ಲೇ ವಿದ್ಯುತ್ ಕೈಕೊಟ್ಟಿತು ನಂತರ‌ ಕತ್ತಲಲ್ಲೇ ಕುಳಿತ ಅಶೋಕ್ ವಿದ್ಯುತ್ ಬರುತ್ತಿದ್ದಂತೆ ಮಾತು ಮುಂದುವರೆಸಿದರು ಅದಾದ ಕೆಲ ಸಮುಯದ ನಂತರ ಮತ್ತೊಮ್ಮೆ ವಿದ್ಯುತ್ ಕೈಕೊಟ್ಟಿತು.ಆಗ ಸರ್ಕಾರದ ಕಾಲೆಳೆದ ಅಶೋಕ್ ಇದು ಸರ್ಕಾರದ ತೊಂದರೆ‌ ಪದೇ ಪದೇ ವಿದ್ಯುತ್ ಕೈ ಕೊಡ್ತಾ ಇರೋದು ನೋಡಿದರೆ ಸರ್ಕಾರಕ್ಕೆ ಸಮಸ್ಯೆ ಇದೆ ಅನ್ನಿಸಲಿದೆ ಎಂದರು.Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.