ETV Bharat / state

ಬೆಂಗಳೂರು ವೃದ್ಧ ದಂಪತಿ ಹತ್ಯೆ ಪ್ರಕರಣ: ಹೆತ್ತವರನ್ನು ಕೊಂದ ಬಳಿಕ ಸೇತುವೆಯಿಂದ ಹಾರಿದ ಮಗ! - ಬೆಂಗಳೂರು ಕ್ರೈಮ್​ ಸುದ್ದಿ

ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ನಡೆದಿದ್ದ ವೃದ್ಧ ದಂಪತಿಯ ಹತ್ಯೆ ಪ್ರಕರಣದ ವಿಚಾರಣೆ ನಡೆದಿದ್ದು, ಪುತ್ರನೇ ಕೊಲೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

murder of elderly couple
ವೃದ್ಧ ದಂಪತಿ ನಿಗೂಢ ಹತ್ಯೆ ಪ್ರಕರಣ
author img

By

Published : Jun 11, 2020, 4:25 PM IST

ಬೆಂಗಳೂರು: ಕಾಮಾಕ್ಷಿಪಾಳ್ಯದಲ್ಲಿ ವಯೋವೃದ್ಧ ದಂಪತಿ ನಿಗೂಢವಾಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸದ್ಯ ಪಶ್ಚಿಮ ವಿಭಾಗದ ಪೊಲೀಸರು ಪ್ರಾಥಮಿಕವಾಗಿ ಆರೋಪಿಯ ಮಾಹಿತಿ ಕಲೆ ಹಾಕ್ತಿದ್ದಾರೆ. ಪ್ರಕರಣದಲ್ಲಿ ಮಗನೇ ಆರೋಪಿ ಅನ್ನೋದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಇದೇ 10 ರಂದು ಬೆಳಗ್ಗೆ ಮೂರು ಗಂಟೆ ಸಮಯದಲ್ಲಿ, ತಂದೆ-ತಾಯಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ ಮಗ ಸಂತೋಷ್, ನಂತರ ಶ್ರೀರಂಗಪಟ್ಟಣಕ್ಕೆ ತೆರಳಿ ಅಲ್ಲಿ ತಂದೆ ತಾಯಿಯ ಪಿಂಡವನ್ನು ನದಿಗೆ ಬಿಟ್ಟಿದ್ದಾನೆ. ಬಳಿಕ ಶ್ರೀರಂಗಪಟ್ಟಣದ ಬ್ರಿಡ್ಜ್​​​​​ನಿಂದ ಕೆಳಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ವೃದ್ಧ ದಂಪತಿ ನಿಗೂಢ ಹತ್ಯೆ ಪ್ರಕರಣ

ತಕ್ಷಣ ಸ್ಥಳೀಯರು ಆತನನ್ನು ಆಸ್ಪತ್ರೆಗೆ ರವಾನಿಸಿದ್ದು, ಸದ್ಯ ಕಾಲು ಮುರಿದ ಕಾರಣ ಚಿಕಿತ್ಸೆಗೊಳಪಡಿಸಲಾಗಿದೆ. ಈ ವಿಚಾರ ತಿಳಿದ ಕಾಮಾಕ್ಷಿ ಪಾಳ್ಯ ಪೊಲೀಸರು ಆರೋಪಿಯನ್ನ ಕರೆತರಲು ಶ್ರೀರಂಗಪಟ್ಟಣಕ್ಕೆ ತೆರಳಿದ್ದಾರೆ.

ಇದನ್ನು ಓದಿ: ಬೆಂಗಳೂರಲ್ಲಿ ವೃದ್ಧ ದಂಪತಿಯ ಕೊಲೆ... ಪುತ್ರನಿಂದಲೇ ದುಷ್ಕೃತ್ಯ ಶಂಕೆ!

ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೃತ್ತಿಯಲ್ಲಿ ಆಡಿಟರ್ ಆಗಿರುವ ಸಂತೋಷ್, ಆರ್ಥಿಕವಾಗಿ ಬಹುತೇಕ ನಷ್ಟಕ್ಕೆ ಒಳಗಾಗಿದ್ದ. ಹೀಗಾಗಿ ತಂದೆ ನರಸಿಂಹರಾಜು ಹಾಗೂ ತಾಯಿ ಸರಸ್ವತಿ ಅವರೊಂದಿಗೆ ಜಗಳ ಮಾಡುತ್ತಿದ್ದ. ಮೊದಲು ತಂದೆ ತಾಯಿಯನ್ನ ಕೊಲೆ ಮಾಡಿ ನಂತರ ತಾನು ಆತ್ಮಹತ್ಯೆಗೆ ಶರಣಾಗಲು ಮುಂದಾಗಿರುವ ವಿಚಾರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ಶ್ರೀರಂಗಪಟ್ಟಣದಿಂದ ಕರೆತಂದ ನಂತರ ಮಾಹಿತಿ ಗೊತ್ತಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.