ಬೆಂಗಳೂರು: ಹಳೇ ವೈಷಮ್ಯ ಹಿನ್ನೆಲೆ ರೌಡಿಶೀಟರ್‌ನನ್ನು ಅಪರಿಹರಿಸಿದ್ದ ದುಷ್ಕರ್ಮಿಗಳು ಆತನನ್ನು ಕೊಲೆಗೈದು ಗಾರ್ವೇಬಾವಿ ಪಾಳ್ಯದದಲ್ಲಿ ಎಸೆದು ಪರಾರಿಯಾಗಿದ್ದಾರೆ.
ಬೊಮ್ಮನಹಳ್ಳಿ ಹಾಗೂ ಬೇಗೂರು ಠಾಣೆ ರೌಡಿಶೀಟರ್ ಸುನೀಲ್ ಕೊಲೆಯಾದ ರೌಡಿಶೀಟರ್. ಕೃತ್ಯದ ಹಿಂದೆ ಶ್ರೀಧರ್ ಎಂಬಾತನ ಕೈವಾಡದ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾಾರೆ.
ರೂಪೇನ ಅಗ್ರಹಾರ ನಿವಾಸಿಯಾಗಿದ್ದ ಸುನೀಲ್ ವಿರುದ್ಧ ಕೊಲೆ, ಕೊಲೆಗೆ ಯತ್ನ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಹಳೇ ದ್ವೇಷದಿಂದಾಗಿ ಎದುರಾಳಿ ತಂಡದ ಶ್ರೀಧರ್ ಹಾಗೂ ಆತನ ಸಹಚರರು ಕೊಲೆ ಮಾಡಿರುವ ಅನುಮಾನವಿದೆ ಎಂದು ಬೇಗೂರು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.