ETV Bharat / state

ಇಬ್ಬರು ವಿಕಲಚೇತನರ ನಡುವೆ ದ್ವೇಷ.. ಓರ್ವನಿಗೆ ಚಾಕುವಿನಿಂದ ಇರಿದು ಕೊಲೆ ಯತ್ನ - ಸಿಸಿಟಿವಿಯಲ್ಲಿ ಕೃತ್ಯ ಸೆರೆ - Murder attempt to Physically handicapped man in bengaluru

ಆನೇಕಲ್ ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ವೈಯಕ್ತಿಕ ದ್ವೇಷದ ಹಿನ್ನೆಲೆ ಮಾಜಿ ತಾಲೂಕು ಪಂಚಾಯತ್​ ಅಧ್ಯಕ್ಷೆ ಮುನಿರತ್ನಮ್ಮರ ಗಂಡ ನಾರಾಯಣಪ್ಪ ಅವರ ಕೊಲೆಗೆ ಮತ್ತೋರ್ವ ವಿಕಲಚೇತನ ಯತ್ನಿಸಿದ ಘಟನೆ ನಡೆದಿದೆ.

ವಿಕಲ ಚೇತನನಿಗೆ ಚಾಕುವಿನಿಂದ ಕೊಲೆ ಯತ್ನ
ವಿಕಲ ಚೇತನನಿಗೆ ಚಾಕುವಿನಿಂದ ಕೊಲೆ ಯತ್ನ
author img

By

Published : Jul 3, 2022, 6:13 PM IST

ಬೆಂಗಳೂರು: ವೈಯಕ್ತಿಕ ದ್ವೇಷದ ಹಿನ್ನೆಲೆ ಮಾಜಿ ತಾಲೂಕು ಪಂಚಾಯತ್​ ಅಧ್ಯಕ್ಷೆ ಮುನಿರತ್ನಮ್ಮರ ಪತಿ ನಾರಾಯಣಪ್ಪ ಅವರ ಮೇಲೆ ಮತ್ತೋರ್ವ ವಿಕಲಚೇತನ ಚಾಕುವಿನಿಂದ ಇರಿಯಲು ಮನೆಗೆ ನುಗ್ಗಿದ ಪ್ರಕರಣ ಆನೇಕಲ್ ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ನಡೆದಿದೆ.

ವಿಕಲ ಚೇತನನಿಗೆ ಚಾಕುವಿನಿಂದ ಕೊಲೆ ಯತ್ನ

ಮಾಯಸಂದ್ರ ಗ್ರಾಮದ ಗರುಡ ಮಂಜು ಕೊಲೆ ಮಾಡಲು ಮನೆಗೆ ನುಗ್ಗಿದ ಆರೋಪಿಯಾಗಿದ್ದಾರೆ. ಮಾಯಸಂದ್ರ-ಹಳೇಹಳ್ಳಿ ಮುಖ್ಯರಸ್ತೆ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ 9:00 ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಬಂದು ಗರುಡ ಮಂಜು ನಾರಾಯಣಪ್ಪ ಅವರ ಮನೆಗೆ ನುಗ್ಗಿ ಚಾಕುವಿನಿಂದ ಕೊಲೆಮಾಡಲು ಯತ್ನಿಸಿದ್ದಾರೆ. ಕೊಲೆ ಪ್ರಯತ್ನ ಮಾಡುತ್ತಿರುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸ್ಥಳೀಯರ ಮಾಹಿತಿಯ ಪ್ರಕಾರ, ಗರುಡ ಮಂಜನಿಗೆ ನಾರಾಯಣಪ್ಪ ಮಾಟ-ಮಂತ್ರ ಮಾಡಿಸಿದ ಆರೋಪದ ಹಿನ್ನೆಲೆ ಹಲ್ಲೆಗೆ ಮುಂದಾಗಿದ್ದಾರಂತೆ. ಅಷ್ಟೇ ಅಲ್ಲದೆ ತಿಗಳ ಸಮುದಾಯದ ವಿಚಾರಕ್ಕೆ ಗಲಾಟೆ ಮಾಡಿಕೊಂಡಿರುವ ಮಾತುಗಳು ಕೇಳಿಬಂದಿವೆ. ಈ ಸಂಬಂಧ ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಓದಿ: ಬೆಂಗಳೂರಿನ ನಿರ್ಜನ ಪ್ರದೇಶದಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆ‌ಯ ಶವ ಪತ್ತೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.