ETV Bharat / state

ಚಾಮರಾಜಪೇಟೆಯಲ್ಲಿ ಕೊಲೆ : ಹಣಕ್ಕಾಗಿ ಮನೆ ಮಾಲೀಕನನ್ನು ಮರ್ಡರ್​ ಮಾಡಿದ್ನಾ ಕೆಲಸಗಾರ?

ಚಾಮರಾಜಪೇಟೆಯ ಕಿಂಗ್ಸ್ ಎನ್ಕ್ಲೇವ್ ಅಪಾರ್ಟ್​ಮೆಂಟ್​ನಲ್ಲಿ ಜಿಗುರಾಜ್ ಎಂಬುವರ ಕೊಲೆಯಾಗಿದೆ. ಹಣಕ್ಕಾಗಿ ಜಿಗುರಾಜ್​ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಬಿಜೋರಾಮ್ ಎಂಬಾತನ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ..

Worker who murdered a homeowner for money
ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್
author img

By

Published : May 25, 2022, 3:15 PM IST

Updated : May 25, 2022, 4:18 PM IST

ಬೆಂಗಳೂರು : ನಗರದ ಚಾಮರಾಜಪೇಟೆಯಲ್ಲಿ ತಡರಾತ್ರಿ 80 ವರ್ಷದ ಜಿಗುರಾಜ್ ಎಂಬುವರನ್ನು ಕೊಲೆ ಮಾಡಲಾಗಿದೆ. ಚಾಮರಾಜಪೇಟೆಯ ಕಿಂಗ್ಸ್ ಎನ್ಕ್ಲೇವ್ ಅಪಾರ್ಟ್​ಮೆಂಟ್​ನಲ್ಲಿ ಈ ಘಟನೆ ನಡೆದಿದೆ. ಜಿಗುರಾಜ್​ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಬಿಜೋರಾಮ್ ಎಂಬಾತನ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಜಿಗುರಾಜ್ ಕೈ-ಕಾಲು ಕಟ್ಟಿ, ಕುತ್ತಿಗೆ ಹಿಸುಕಿ ಕೊಲೆ ಮಾಡಲಾಗಿದೆ ಎನ್ನಲಾಗ್ತಿದೆ.

ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್

ಕೊಲೆ ಮಾಡಿ ಮನೆಯಲ್ಲಿದ್ದ ಹಣ ಮತ್ತು ಚಿನ್ನಾಭರಣ ದೋಚಿ ಕೆಲಸಗಾರ ಪರಾರಿಯಾಗಿದ್ದಾನೆ. ತಡರಾತ್ರಿ 11:30ಕ್ಕೆ ಘಟನೆ ನಡೆದಿರುವ ಸಾಧ್ಯತೆಯಿದೆ‌.‌ ನಿನ್ನೆ ರಾತ್ರಿ 12 ಗಂಟೆಗೆ ಸರ್ವೆಂಟ್ ಅಪಾರ್ಟ್​ಮೆಂಟ್​ನಿಂದ ಹೊರ ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜಿಗುರಾಜ್ ದಶಕಗಳಿಂದ ಮಾರ್ಕೆಟ್​ನಲ್ಲಿ ಹೋಲ್‌ಸೆಲ್ ಎಲೆಕ್ಟ್ರಾನಿಕ್ ಶಾಪ್ ಇಟ್ಟುಕೊಂಡಿದ್ದರು. ಮಕ್ಕಳು ಔಟ್ ಆಫ್ ಸ್ಟೇಷನ್ ಹೋಗಿದ್ದ ವೇಳೆ ಹಂತಕ ಈ ಕೃತ್ಯವೆಸಗಿದ್ದಾನೆ.

ಬುಧವಾರ ಬೆಳಗ್ಗೆ ಮೊಮ್ಮಗ ಶಾಪ್ ಒಪನ್​ಗೆ ಕೀ ಪಡೆಯಲು ಬಂದಾಗ ಘಟನೆ ಬೆಳಕಿಗೆ ಬಂದಿದೆ. ಇತ್ತ ಪ್ರಕರಣ ದಾಖಲಾಗ್ತಿದ್ದಂತೆ ಸ್ಥಳಕ್ಕೆ ಹಿರಿಯ ಪಶ್ಚಿಮ ವಲಯ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ. ಈಗಾಗಲೇ ಮೂರು ತಂಡಗಳನ್ನು ರಚನೆ ಮಾಡಿದ್ದು, ಹಂತಕನ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಸಾರಿ, ಸಾರಿ ಎಂದು ಗೀಚಿದ್ದ ಯುವಕರ ಚಹರೆ ಪತ್ತೆ: ಡಿಸಿಪಿ ಡಾ.ಸಂಜೀವ್​ ಪಾಟೀಲ್​

Last Updated : May 25, 2022, 4:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.