ETV Bharat / state

ಕೂಲಿ ಮಾಡುತ್ತೇನೆಯೇ ಹೊರತು ಕಾಂಗ್ರೆಸ್​​​ ಸೇರಲ್ಲ: ಸಚಿವ ಮುನಿರತ್ನ ಖಡಕ್​ ಮಾತು

ಮತದಾರರ ಪಟ್ಟಿ ಡಿಲೀಟ್​ ಮಾಡಿರುವ ವಿಚಾರವಾಗಿ ಡಿಕೆ ಸುರೇಶ್​ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವ ಮುನಿರತ್ನ, ಮತದಾರರ ಪಟ್ಟಿ ಸೇರ್ಪಡೆ, ಡಿಲೀಟ್ ನಿಮ್ಮ ರೂಡಿ, ನನ್ನದಲ್ಲ ನಿಮಗೆ ಅಂತಹ ಅಭ್ಯಾಸಗಳಿವೆ ಎಂದು ಸುರೇಶ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

KN_BNG_
ಸಚಿವ ಮುನಿರತ್ನ
author img

By

Published : Dec 7, 2022, 7:37 PM IST

ಬೆಂಗಳೂರು: ಎಲ್ಲಿ ಮತದಾರರ ಪಟ್ಟಿ ಡಿಲೀಟ್ ಆಗಿರುವುದು, ಸೇರ್ಪಡೆ ಆಗಿರುವುದೆಂದು ಸರಿಯಾದ ಮಾಹಿತಿ ಕೊಡಿ ಸಂಸದ ಡಿ.ಕೆ.ಸುರೇಶ್ ಅವರೇ, ಸಂಸದ ಸ್ಥಾನಕ್ಕೆ ಘನತೆ ತರುವಂತೆ ಮಾತನಾಡಿ ಎಂದು ತೋಟಗಾರಿಕೆ ಸಚಿವ ಮುನಿರತ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಕಾಸಸೌಧದಲ್ಲಿ ಇಂದು ತುರ್ತು ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ನಿಮ್ಮ ಜೊತೆ ನಾನು ಇದ್ದಾಗ ಯಾವುದೂ ಸೇರ್ಪಡೆ, ಡಿಲೀಟ್ ಆಗಿರಲಿಲ್ಲ. ನಿಮ್ಮ ಜೊತೆ ಇದ್ದಾಗ ನಾನು ಬಹಳ ಪವಿತ್ರವಾಗಿದ್ದೆ, ಈಗ ಅಪವಿತ್ರನಾಗಿದ್ದೇನಾ ಎಂದು ಡಿ.ಕೆ.ಸುರೇಶ್ ಅವರಿಗೆ ಮುನಿರತ್ನ ತಿರುಗೇಟು ನೀಡಿದ್ದಾರೆ.

ಡಿಕೆ ಸುರೇಶ್​ ಹೇಳಿಕೆಗೆ ಸಚಿವ ಮುನಿರತ್ನ ಪ್ರತಿಕ್ರಿಯೆ

ನಾನು ಅಂತಹ ಕೀಳು ರಾಜಕಾರಣ ಮಾಡಲ್ಲ. ಡಿ.ಕೆ.ಸುರೇಶ್​ ಮೊದಲು ಕ್ಷೇತ್ರಕ್ಕೆ ಕೊಟ್ಟಿರುವ ಕೆಲಸದ ಮಾಹಿತಿ ಕೊಡಲಿ. ಮತದಾರರ ಪಟ್ಟಿ ಡಿಲೀಟ್ ಮಾಡುವಷ್ಟು ಕೀಳು ಮಟ್ಟ ನನ್ನದಲ್ಲ. ತೇಜೋವಧೆ ಮಾಡಿ ಗೆಲ್ತೀನಿ ಅನ್ನೋದನ್ನು ಬಿಟ್ಟುಬಿಡಿ. ಬನ್ನಿ ಜನರ ಮುಂದೆ ಹೋಗೋಣ ಎಂದು ಸವಾಲು ಹಾಕಿದ ಸಚಿವರು, ಮತದಾರರ ಪಟ್ಟಿ ಸೇರ್ಪಡೆ, ಡಿಲೀಟ್ ನಿಮ್ಮ ರೂಡಿ, ನನ್ನದಲ್ಲ. ನಿಮಗೆ ಅಂತಹ ಅಭ್ಯಾಸಗಳಿವೆ. ಎಂಪಿ ಅಂತಾ ಬಾಯಿಗೆ ಬಂದಂತೆ ಮಾತನಾಡುವುದಲ್ಲ. ಸಣ್ಣತನದ ರಾಜಕೀಯ ಬಿಟ್ಟು ಜೀವನ ಮಾಡಿ ಎಂದು ಸಚಿವ ಮುನಿರತ್ನ ವಾಗ್ದಾಳಿ ನಡೆಸಿದರು.

ಬಹಿರಂಗ ಸವಾಲು: ಮಲ್ಲೇಶ್ವರಂನಲ್ಲಿ ನನ್ನದು ಐದನೇ ತಲೆಮಾರು, ಸ್ವಲ್ಪ ಗೊತ್ತಿರಲಿ. ನಿಮಗೆ ಗೊತ್ತಿರದಿದ್ದರೆ ನಿಮ್ಮ ಅಣ್ಣನನ್ನು ಕೇಳಿ. ನಿಮಗಿಂತ ಮೊದಲೇ ಅವರು ಬೆಂಗಳೂರಿಗೆ ಬಂದಿದ್ದಾರೆ. ನಾನು ಮಲ್ಲೇಶ್ವರದಲ್ಲೇ ಹುಟ್ಟಿದ್ದು, ಚುನಾವಣೆಗೆ ನಾಮಪತ್ರ ಸಲ್ಲಿಸುತ್ತೇನೆ. ಆದರೆ, ನಾನು ಕ್ಷೇತ್ರದಲ್ಲಿ ಓಡಾಡಲ್ಲ, ಮತಯಾಚನೆ ಮಾಡಲ್ಲ, ನೀವು ಅದೇ ರೀತಿ ಮಾಡಿ, ಜನರ ತೀರ್ಮಾನಕ್ಕೆ ಬಿಡೋಣ. ಯಾರಿಗೆ ಮತ ಹಾಕುತ್ತಾರೆ ನೋಡೊಣ ಎಂದು ಇದೇ ವೇಳೆ ಬಹಿರಂಗ ಸವಾಲು ಕೂಡಾ ಹಾಕಿದರು.

ನಿಮ್ಮ ಇಂತಹ ಮಾತುಗಳಿಂದಲೇ ಕಾಂಗ್ರೆಸ್​​ಗೆ ಇಂದು ಈ ಸ್ಥಿತಿ ಬಂದಿದೆ. 17 ಜನ ಒಟ್ಟಿಗೆ ಪಕ್ಷ ಬಿಟ್ಟಿರುವುದು ಇದೇ ಕಾರಣಕ್ಕೆ.‌ ಬೆಂಗಳೂರು ನಗರಕ್ಕೆ ಇವರ ಕೊಡುಗೆ ಏನಿದೆ? ರಾಜರಾಜೇಶ್ವರಿ ನಗರಕ್ಕೆ ಇವರ ಕೊಡುಗೆ ಏನಿದೆ? ಬೆಂಗಳೂರು ಹಾಳು ಮಾಡುವುದಕ್ಕೆ ಬರುತ್ತಿದ್ದಾರೆ. ಇಷ್ಟು ಸಣ್ಣ ಜನ ಅಂತಾ ನನಗೆ ಗೊತ್ತಿರಲಿಲ್ಲ ಎಂದು ಡಿ.ಕೆ.ಸುರೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಏನು ಇವರೇ ಬಹಳ ಶುದ್ಧ ಇರುವ ರೀತಿಯಲ್ಲಿ ಮಾತನಾಡುತ್ತಾರೆ. ಚುನಾವಣೆ ಹತ್ತಿರ ಬಂದಾಗ ಇದೆಲ್ಲ ಆರಂಭವಾಗುತ್ತದೆ. ಇನ್ನಾದರೂ ಸಣ್ಣತನ ಬಿಟ್ಟು ದೊಡ್ಡತನ ತೋರಿಸಲಿ. ಇವರ ಪವಿತ್ರತೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇವರ ಸಹವಾಸದಿಂದ ಹೊರ ಬಂದು ಬಹಳ ನೆಮ್ಮದಿಯಾಗಿದ್ದೇವೆ ಎಂದರು.

ಕೂಲಿ ಮಾಡುತ್ತೇನೆ ಹೊರತು ಕಾಂಗ್ರೆಸ್​ಗೆ ಸೇರಲ್ಲ: ಬಿಜೆಪಿಯಲ್ಲಿ ನಮ್ಮನ್ನು ಬಹಳ ಪ್ರೀತಿಸುತ್ತಿದ್ದಾರೆ. ಬೇಕಾದರೆ ರಾಜಕೀಯ ಬಿಟ್ಟು‌ ಕೂಲಿ ಮಾಡಿಕೊಂಡು ಇರುತ್ತೇನೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ವಾಪಸ್ ಹೋಗಲ್ಲ. ನಾವು ಮತ್ತೆ ಬಂದ್ರೆ ಸಾಕು ಅಂತಾ ಅವರು ಕಾಯುತ್ತಿದ್ದಾರೆ ಎಂದು ಹೇಳಿದರು. ಡಿ.ಕೆ.ಸುರೇಶ್ ಒಡೆದು ಅಳುವ ನೀತಿ ಅನುಸರಿಸುತ್ತಾರೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಇವರ ಆಟ ನಡೆಯಲ್ಲ. ಇವರನ್ನು ರಾಜರಾಜೇಶ್ವರಿನಗರದ ಒಳಗೆ ಬಿಟ್ಟುಕೊಂಡರೆ ಪುಲಿಕೇಶಿನಗರ, ಕೆ.ಜಿ ಹಳ್ಳಿ, ಡಿ.ಜೆ. ಹಳ್ಳಿ ಆಗುತ್ತದೆ.

ನನ್ನ ಕುಟುಂಬ ರಾಜಕಾರಣಕ್ಕೆ ನಾನೇ ಕೊನೆ. ಇವರದ್ದು ಈಗಲೇ ಮೂರು ತಲೆಮಾರಿಗೆ ರಾಜಕೀಯ ಮಾಡುತ್ತಾರೆ ಎಂದು ಡಿಕೆ ಸಹೋದರರ ವಿರುದ್ಧ ವಾಗ್ದಾಳಿ ನಡೆಸಿದರು. ಇನ್ನು ಹೆಚ್​ ವಿಶ್ವನಾಥ್​, ಸಿದ್ದರಾಮಯ್ಯ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಆರೋಗ್ಯ ವಿಚಾರಿಸಲು ಹೋಗಿದ್ದಾಗಿ ಹೆಚ್.ವಿಶ್ವನಾಥ ಸ್ಪಷ್ಟಪಡಿಸಿದ್ದಾರೆ. ಇದರಲ್ಲಿ ಮತ್ಯಾವ ವಿಶೇಷತೆ ಇಲ್ಲ ಎಂದರು.

ಇದನ್ನೂ ಓದಿ: 'ಆರ್‌ಆರ್‌ ನಗರ ಮತದಾರರ ಪಟ್ಟಿಯಲ್ಲಿ ಅಕ್ರಮ': ಚು. ಆಯೋಗಕ್ಕೆ ಕಾಂಗ್ರೆಸ್ ದೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.