ಬೆಂಗಳೂರು: ನಗರದ ಮಡಿವಾಳದಲ್ಲಿ ಪ್ರಾರಂಭಗೊಂಡಿರುವ ರೈಲ್ ಯಾತ್ರಿ ಸಂಸ್ಥೆಯ ಮೊದಲ ಇಂಟರ್‌ಸಿಟಿ ಸ್ಮಾರ್ಟ್ ಬಸ್ ಲೌಂಜ್ ಸಂಸದ ತೇಜಸ್ವಿಸೂರ್ಯ ಉದ್ಘಾಟಿಸಿದರು.
ಇಂಟರ್‌ಸಿಟಿ ಬಸ್ ಪ್ರಯಾಣಿಕರಿಗಾಗಿ ರಚಿಸಲಾಗಿರುವ ಮೊದಲನೆಯ ಬಸ್ ಲೌಂಜ್ ಇದಾಗಿದ್ದು, ಯುವ ವಿದ್ಯಾರ್ಥಿಗಳು, ಉದ್ಯಮಿಗಳು ಹಾಗೂ ವೃತ್ತಿಪರರನ್ನು ಒಳಗೊಂಡಿರುವ ಇಂಟರ್‌ಸಿಟಿ, ಟ್ರಾವೆಲರ್‌ಗಳ ಸುರಕ್ಷತೆ ಮತ್ತು ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ವಿನ್ಯಾಸಗೊಳಿಸಲಾಗಿದೆ.
ರೈಲ್‌ಯಾತ್ರಿ ಇಂಟರ್‌ಸಿಟಿ, ಮಲ್ಟಿ ಮೋಡಲ್ ಇಂಟರ್‌ಸಿಟಿ ಮೊಬಿಲಿಟಿ ವಿಭಾಗದಲ್ಲಿ ಮುಂಚೂಣಿಯಲ್ಲಿದೆ ಮತ್ತು ಇಂಟರ್‌ಸಿಟಿ ಸ್ಮಾರ್ಟ್ ಬಸ್, ಬ್ರಾಂಡೆಡ್ ಬಸ್‌ಗಳ ಮೂಲಕ ಇಂಟರ್‌ಸಿಟಿ ಬಸ್ ಪ್ರಯಾಣವನ್ನು ಕ್ರಾಂತಿಗೊಳಿಸಿದೆ. ಸದ್ಯ ಈ ಬ್ರಾಂಡ್ ದೇಶದ 20 ನಗರಗಳಲ್ಲಿ 65 ಇಂಟರ್‌ಸಿಟಿ ಸ್ಮಾರ್ಟ್ ಬಸ್ ಸಮೂಹವನ್ನು ನಡೆಸುತ್ತಿದ್ದು, ತಿಂಗಳಿಗೆ 50,000 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೇವೆ ನೀಡುತ್ತಿದೆ. ಮುಂದಿನ 6 ತಿಂಗಳಲ್ಲಿ ಇಂಟರ್‌ಸಿಟಿ ಸ್ಮಾರ್ಟ್ ಬಸ್ ದೇಶದಾದ್ಯಂತ 100 ಕ್ಕೂ ಹೆಚ್ಚು ಮಾರ್ಗಗಳಿಗೆ ವಿಸ್ತರಿಸಲಿದೆ.
ಸ್ಮಾರ್ಟ್ ಬಸ್ ಲಾಂಜ್ ಉದ್ಘಾಟನೆಯ ಬಳಿಕ ಸಂಸದ ತೇಜಸ್ವಿ ಸೂರ್ಯ ಮಾತಾನಾಡಿ, ರೈಲ್ ಯಾತ್ರಿ ಇಂಟರ್‌ಸಿಟಿಯ ಈ ಹೊಸ ಸೌಲಭ್ಯ ಒಟ್ಟಾರೆ ಇಂಟರ್‌ಸಿಟಿ ಚಲನಶೀಲತೆಯಲ್ಲಿ ದೊಡ್ಡ ಬದಲಾವಣೆಯ ಸಂಕೇತವಾಗಿದೆ. ಪ್ರಯಾಣಿಕರಿಗೆ ಇದು ಸುರಕ್ಷಿತ ಮತ್ತು ಅನುಕೂಲಕರ ಅನುಭವವನ್ನು ನೀಡಲು ಸಹಾಯ ಮಾಡುತ್ತದೆ ಎಂದರು.
ರೈಲ್‌ಯಾತ್ರಿ ಸಹ ಸಂಸ್ಥಾಪಕ ಕಪಿಲ್ ರೈಜಾಡಾ ಮಾತನಾಡಿ, ಹವಾ ನಿಯಂತ್ರಿತ ಸ್ಮಾರ್ಟ್ ಬಸ್ ಲೌಂಜ್ , ಪ್ರಯಾಣಿಕರಿಗೆ ಸಂಪೂರ್ಣ ವೈ-ಫೈ ಸೌಲಭ್ಯ, ಸಾಕಷ್ಟು ಆರಾಮದಾಯಕ ಸೀಟಿಂಗ್ ಸ್ಥಳ ಮತ್ತು ಚಾರ್ಜಿಂಗ್ ಪಾಯಿಂಟ್‌ಗಳ ಜೊತೆಗೆ ಮೂಲ ಸೌಕರ್ಯಗಳೊಂದಿಗೆ ಶುದ್ಧ ಕುಡಿಯುವ ನೀರು ಹಾಗೂ ಶೌಚಾಲಯಗಳನ್ನು ಒದಗಿಸುತ್ತದೆ. ಪ್ರಯಾಣಿಕರು ತಮ್ಮ ಬಸ್ಸುಗಳನ್ನು ಹತ್ತಲು ಸಹಾಯ ಮಾಡಲು ಸಹಾಯಕರು ಇದ್ದಾರೆ. ಎಲ್ಲ ಬಸ್‌ಗಳಲ್ಲಿ ಆನ್-ಬೋರ್ಡ್ ವಾಶ್‌ರೂಮ್‌ಗಳು, ಪೂರ್ಣ ವೈ-ಫೈ ಸಂಪರ್ಕ, ಸ್ವಯಂಚಾಲಿತ ಪ್ರಯಾಣಿಕರ ಮಾಹಿತಿ ವ್ಯವಸ್ಥೆ ಮತ್ತು ಆನ್-ಬೋರ್ಡ್ ಇನ್ಫೋಟೈನ್‌ಮೆಂಟ್ ಅಳವಡಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಪ್ರತಿ ಬಸ್‌ನಲ್ಲಿ ಸಿಸಿಟಿವಿ ಕ್ಯಾಮೆರಾಗಳು, ಜಿಪಿಎಸ್, ಅತ್ಯಾಧುನಿಕ ಎಐ ಶಕ್ತಗೊಂಡ ಚಾಲಕ ಎಚ್ಚರಿಕೆ ವ್ಯವಸ್ಥೆ ಹಾಗೂ ಚಾಲಕರಿಗೆ ಆಲ್ಕೋಹಾಲ್ ಪರೀಕ್ಷೆಗಳಿವೆ. ಬಸ್ಸುಗಳನ್ನು ಕೇಂದ್ರ ಕಮಾಂಡ್ ಕೇಂದ್ರದಿಂದ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದರು.