ETV Bharat / state

ಬೆಂಗಳೂರು: ಮಗು ಕೊಂದು ಡೆತ್‌ನೋಟ್‌ ಬರೆದಿಟ್ಟು ಮಹಿಳೆ ಆತ್ಮಹತ್ಯೆ - ಬೆಂಗಳೂರಿನಲ್ಲಿ ಮಗು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ

ಬೆಂಗಳೂರಿನ ಆರ್.ಆರ್.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಾಯಿಯೊಬ್ಬಳು ತನ್ನ ಮಗುವನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಮಹಿಳೆ
ಆತ್ಮಹತ್ಯೆ ಮಾಡಿಕೊಂಡ ಮಹಿಳೆ
author img

By

Published : Jul 1, 2022, 3:10 PM IST

Updated : Jul 1, 2022, 4:30 PM IST

ಬೆಂಗಳೂರು: ಮಗುವನ್ನು ಕೊಂದು ಮರಣ ಪತ್ರ ಬರೆದಿಟ್ಟು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆರ್. ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

31 ವರ್ಷದ ದೀಪಾ ಹಾಗೂ ಮೂರುವರೆ ವರ್ಷದ ಮಗು ರಿಯಾ ಸಾವನ್ನಪ್ಪಿದವರು. ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಪತಿ ಆದರ್ಶ್ 2017ರಲ್ಲಿ ದೀಪಾ ಅವರನ್ನು ಮದುವೆಯಾಗಿದ್ದರು. ಆರ್.ಆರ್ ನಗರದ ಮಂತ್ರಿ ಅಪಾರ್ಟ್​ಮೆಂಟ್​ನಲ್ಲಿ ದಂಪತಿ ವಾಸವಿದ್ದರು‌.

ಕಳೆದ ಒಂದು ವಾರದಿಂದ ಜ್ವರ ಹಾಗೂ ಹೊಟ್ಟೆ ನೋವಿನಿಂದ ಬಳಲುತಿದ್ದ ದೀಪಾ ಚಿಕಿತ್ಸೆ ಪಡೆಯುತ್ತಿದ್ದರಂತೆ. ಆದರೂ ನೋವು ಕಡಿಮೆಯಾಗಿರಲಿಲ್ಲ.‌ ನಿನ್ನೆ ರಾತ್ರಿ ನಿದ್ರಿಸುತ್ತಿದ್ದ ಮಗುವಿನ ಕುತ್ತಿಗೆಗೆ ವೇಲ್ ಬಿಗಿದು ಹತ್ಯೆ ಮಾಡಿದ್ದಾರೆ. ಬಳಿಕ ತಾನು ಫ್ಯಾನಿಗೆ‌ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ.

ಸಾಯುವ ಮುನ್ನ ಬರೆದ ಡೆತ್ ನೋಟ್‌ನಲ್ಲಿ"Nobody is responsible for it, I just felt life is full of shits. I'm sorry mom and Divya Love you Shona" ಎಂದು ಬರೆದಿಟ್ಟಿದ್ದಾರೆ. ಆರ್.ಆರ್‌.ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು‌‌ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದರು.

ಇದನ್ನೂ ಓದಿ: ರೋಗಿಗಳಿಗಿಂತ ವೈದ್ಯರೇ ಹೆಚ್ಚು ಒತ್ತಡದಲ್ಲಿದ್ದಾರೆ: ಡಾ. ಸಿ. ಎನ್ ಮಂಜುನಾಥ್

Last Updated : Jul 1, 2022, 4:30 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.