ETV Bharat / state

ಕರುನಾಡಲ್ಲಿ ವರುಣಾರ್ಭಟ: ಕೊಚ್ಚಿ ಹೋದ ರಸ್ತೆಗಳು, ಸೇತುವೆಗಳೆಷ್ಟು ಗೊತ್ತಾ? - ಪ್ರವಾಹ ಅವಘಡ

ರಾಜ್ಯದಲ್ಲಿ ವರುಣಾರ್ಭಟಕ್ಕೆ ಲಕ್ಷಾಂತರ ಮಂದಿ ಮನೆ ಮಠ ಕಳೆದುಕೊಂಡು, ಸಂತ್ರಸ್ತರಾಗಿದ್ದರೆ, ಸುಮಾರು 40ಕ್ಕೂ ಹೆಚ್ಚು ಮಂದಿ ಜಲಪ್ರಳಯಕ್ಕೆ ಬಲಿಯಾಗಿದ್ದಾರೆ. ಕಳೆದ ಒಂದು ವಾರದಿಂದ ಬೊಬ್ಬಿರಿಯುತ್ತಿರುವ ಮಳೆಗೆ ಗುಡ್ಡ ಕುಸಿತಗಳಾಗಿ ಹಲವು ರಸ್ತೆಗಳು, ಸೇತುವೆಗಳು ಕೊಚ್ಚಿ ಹೋಗಿವೆ.

ರಾಜ್ಯ ಪ್ರವಾಹ
author img

By

Published : Aug 12, 2019, 5:01 PM IST

ಬೆಂಗಳೂರು: ರಾಜ್ಯದಲ್ಲಿ ವರುಣ ಬೊಬ್ಬಿರಿದು ಅಬ್ಬರಿಸುತ್ತಿದ್ದು, ಜಲ ಪ್ರವಾಹವನ್ನೇ ಸೃಷ್ಟಿಸಿದ್ದಾನೆ. ಈ ಜಲಾಘಾತಕ್ಕೆ ಜನರು ಪರದಾಡುತ್ತಿದ್ದರೆ, ಇತ್ತ ರಸ್ತೆಗಳೇ ಪ್ರವಾಹಕ್ಕೆ ಕೊಚ್ಚಿಹೋಗಿವೆ. ಕರಾವಳಿ ಕರ್ನಾಟಕ, ಮಲೆನಾಡು, ಕೊಡಗು ಹಾಗೂ ಉತ್ತರ ಕರ್ನಾಟಕದ ಕೆಲ‌ ಭಾಗಗಳಲ್ಲಿ ಸಂಪರ್ಕ ಕಡಿತವಾಗಿದೆ.

bridge damage
ರಸ್ತೆ ಸಂಚಾರ ಬಂದ್​

ವರುಣಾರ್ಭಟಕ್ಕೆ ಲಕ್ಷಾಂತರ ಮಂದಿ ಮನೆ ಮಠ ಕಳೆದುಕೊಂಡು, ಸಂತ್ರಸ್ತರಾಗಿದ್ದರೆ, ಸುಮಾರು 40ಕ್ಕೂ ಹೆಚ್ಚು ಮಂದಿ ಜಲಪ್ರಳಯಕ್ಕೆ ಬಲಿಯಾಗಿದ್ದಾರೆ. ಕಳೆದ ಒಂದು ವಾರದಿಂದ ಬೊಬ್ಬಿರಿಯುತ್ತಿರುವ ಮಳೆಗೆ ಗುಡ್ಡ ಕುಸಿತಗಳಾಗಿ ಹಲವು ರಸ್ತೆಗಳು, ಸೇತುವೆಗಳು ಕೊಚ್ಚಿ ಹೋಗಿವೆ. ಅದರಲ್ಲೂ ಬೆಳಗಾವಿ, ಮಲೆನಾಡು ಪ್ರದೇಶದಲ್ಲಿ ರಸ್ತೆಗಳು ಕೊಚ್ಚಿ ಹೋಗಿದ್ದು, ಹಲವು ಭಾಗಗಳಿಗೆ ಸಂಪರ್ಕವೇ ಸಾಧ್ಯವಾಗದಂತಾಗಿದೆ.

ಮಳೆಯ ಆರ್ಭಟಕ್ಕೆ ಹಲವು ರಾಜ್ಯ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಕೊಚ್ಚಿ ಹೋಗಿ, ಸಂಪರ್ಕವೇ ದುಸ್ತರವಾಗಿದೆ. ಅದರ ಜೊತೆಗೆ ಸೇತುವೆಗಳೂ ಪ್ರವಾಹದ ರಭಸಕ್ಕೆ ನಾಮಾವಶೇಷಗೊಂಡಿದೆ. ಪ್ರಾಥಮಿಕ ವರದಿ ಪ್ರಕಾರ ಹಲವು ಕಡೆ ರಸ್ತೆಗಳು ಪ್ರವಾಹ ಹಾಗೂ ಗುಡ್ಡ ಕುಸಿತದಿಂದ ಹಾನಿಗೊಳಗಾಗಿವೆ.

ರಾಜ್ಯದಲ್ಲಿ ವರುಣಾರ್ಭಟ

ಎನ್​ಹೆಚ್ 66, ಎನ್​ಹೆಚ್ 275, ಎನ್​ಹೆಚ್ 75, ಎನ್​ಹೆಚ್ 73, ಎಸ್​​ಹೆಚ್ 91 ಸೇರಿಂದಂತೆ ಹಲವು ಜಿಲ್ಲಾ ಸಂಪರ್ಕ ರಸ್ತೆಗಳು ಮಳೆಯ ಅಬ್ಬರಕ್ಕೆ ಕೊಚ್ಚಿ ಹೋಗಿವೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪ್ರವಾಹ ಪೀಡಿತ ಭಾಗಗಳಲ್ಲಿ ರಸ್ತೆಗಳು ಹಾಗೂ ಸೇತುವೆ ಹಾನಿಯ ಪರಿಶೀಲನೆ ನಡೆಸುತ್ತಿದ್ದು, ಅಂತಿಮ ವರದಿ ಇನ್ನಷ್ಟೇ ಸಿದ್ಧವಾಗಬೇಕಾಗಿದೆ.

ಪ್ರವಾಹಕ್ಕೆ ಕೊಚ್ಚಿ ಹೋದ ರಸ್ತೆ, ಸೇತುವೆಗಳೆಷ್ಟು?:

  • ಹಾನಿಯಾದ ಒಟ್ಟು ರಸ್ತೆಗಳು 2,520 ಕಿ.ಮೀ.
  • ಕೊಚ್ಚಿ ಹೋದ ಒಟ್ಟು ಸೇತುವೆ 546
  • ಬೆಳಗಾವಿ ರಸ್ತೆ ಹಾನಿ 1,420 ಕಿ.ಮೀ.
  • ಬೆಳಗಾವಿ ಸೇತುವೆ ಹಾನಿ 214
  • ಧಾರವಾಡ ರಸ್ತೆ ಹಾನಿ 422 ಕಿ.ಮೀ.
  • ಧಾರವಾಡ ಸೇತುವೆ ಹಾನಿ 48
  • ಕೊಡಗು ರಸ್ತೆ ಹಾನಿ 420 ಕಿ.ಮೀ.
  • ಚಿಕ್ಕಮಗಳೂರು ರಸ್ತೆ ಹಾನಿ 189 ಕಿ.ಮೀ.
  • ದಕ್ಷಿಣ ಕನ್ನಡ ರಸ್ತೆ ಹಾನಿ 210 ಕಿ.ಮೀ.
  • ಅಂದಾಜು ಒಟ್ಟು ಹಾನಿ 1,460 ಕೋಟಿ ರೂ.
  • ಬ್ಲಾಕ್ ಆಗಿರುವ ಲೋಕೋಪಯೋಗಿ ರಸ್ತೆ 252

Intro:GggBody:KN_BNG_01_FLOOD_ROADBRIDGEDAMAGE_SCRIPT_7201951

ವರುಣಾರ್ಭಟ: ರಾಜ್ಯದಲ್ಲಿ ಕೊಚ್ಚಿ ಹೋದ ರಸ್ತೆಗಳು, ಸೇತುವೆಗಳೆಷ್ಟು ಗೊತ್ತಾ?

ಬೆಂಗಳೂರು: ರಾಜ್ಯದಲ್ಲಿ ವರುಣ ಬೊಬ್ಬಿರಿದು ಅಬ್ಬರಿಸುತ್ತಿದ್ದು, ಜಲಪ್ರವಾಹವನ್ನೇ ಸೃಷ್ಟಿಸಿದ್ದಾನೆ. ಈ ಜಲಾಘತಕ್ಕೆ ಜನರು ಪರದಾಡುತ್ತಿದ್ದರೆ, ಇತ್ತ ರಸ್ತೆಗಳೇ ಪ್ರವಾಹಕ್ಕೆ ಕೊಚ್ಚಿಹೋಗಿದ್ದು, ಕರಾವಳಿ ಕರ್ನಾಟಕ, ಮಲೆನಾಡು, ಕೊಡಗು ಹಾಗೂ ಉತ್ತರ ಕರ್ನಾಟಕದ ಕೆಲ‌ ಭಾಗಗಳಿಗೆ ಸಂಪರ್ಕವೇ ಕಡಿತವಾಗಿದೆ.

ವರುಣಾರ್ಭಟಕ್ಕೆ ಕರುನಾಡು ತತ್ತರಿಸಿ ಹೋಗಿದೆ. ಮಳೆಯ ಅಬ್ಬರಕ್ಕೆ ಅರ್ಧ ಕರುನಾಡೇ ಜಲಪ್ರಳಯಕ್ಕೆ ತುತ್ತಾಗಿದೆ. ಈ ವರುಣಾಘಾತಕ್ಕೆ ಲಕ್ಷಾಂತರ ಮಂದಿ ಮನೆ ಮಠ ಕಳೆದುಕೊಂಡು, ಸಂತ್ರಸ್ತರಾಗಿದ್ದರೆ, ಸುಮಾರು 40ಕ್ಕೂ ಹೆಚ್ಚು ಮಂದಿ ಜಲಪ್ರಳಯಕ್ಕೆ ಬಲಿಯಾಗಿದ್ದಾರೆ. ಕಳೆದ ಒಂದು ವಾರದಿಂದ ಬೊಬ್ಬಿರಿಯುತ್ತಿರುವ ಮಳೆಗೆ ಗುಡ್ಡ ಕುಸಿತಗಳಾಗಿ ಹಲವು ರಸ್ತೆಗಳು, ಸೇತುವೆಗಳು ಕೊಚ್ಚಿ ಹೋಗಿವೆ. ಅದರಲ್ಲೂ ಬೆಳಗಾವಿ, ಮಲೆನಾಡು ಪ್ರದೇಶದಲ್ಲಿ ರಸ್ತೆಗಳು ಕೊಚ್ಚಿ ಹೋಗಿದ್ದು, ಹಲವು ಭಾಗಗಳಿಗೆ ಸಂಪರ್ಕವೇ ಸಾಧ್ಯವಾಗದಂತಾಗಿದೆ.

ಮಳೆಯ ಆರ್ಭಟಕ್ಕೆ ಹಲವು ರಾಜ್ಯ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಕೊಚ್ಚಿ ಹೋಗಿ, ಸಂಪರ್ಕವೇ ದುಸ್ತರವಾಗಿ ಹೋಗಿದೆ. ಅದರ ಜತೆಗೆ ಸೇತುವೆಗಳೂ ಪ್ರವಾಹದ ರಭಸಕ್ಕೆ ನಾಮವಶೇಷಗೊಂಡಿದೆ. ಪ್ರಾಥಮಿಕ ವರದಿ ಪ್ರಕಾರ ಹಲವು ಕಡೆ ರಸ್ತೆಗಳು ಪ್ರವಾಹ ಹಾಗೂ ಗುಡ್ಡ ಕುಸಿತದಿಂದ ಹಾನಿಗೊಳಗಾಗಿವೆ.

ಅದರ ಪ್ರಕಾರ ಎನ್ಎಚ್ 66, ಎನ್ಎಚ್ 275, ಎನ್ಎಚ್ 75, ಎನ್ಎಚ್ 73, ಎಸ್ಎಚ್ 91 ಸೇರಿಂದಂತೆ ಹಲವು ಜಿಲ್ಲಾ ಸಂಪರ್ಕ ರಸ್ತೆಗಳು ಮಳೆಯ ಅಬ್ಬರಕ್ಕೆ ಕೊಚ್ಚಿ ಹೋಗಿವೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪ್ರವಾಹ ಪೀಡಿತ ಭಾಗಗಳಲ್ಲಿ ರಸ್ತೆಗಳು ಹಾಗೂ ಸೇತುವೆ ಹಾನಿಯ ಪರಿಶೀಲನೆ ನಡೆಸುತ್ತಿದ್ದು, ಅಂತಿಮ ವರದಿ ಇನ್ನಷ್ಟೇ ಸಿದ್ಧವಾಗಬೇಕಾಗಿದೆ.

ಪ್ರವಾಹಕ್ಕೆ ಕೊಚ್ಚಿ ಹೋದ ರಸ್ತೆ, ಸೇತುವೆಗಳೆಷ್ಟು?:

ಒಟ್ಟು ರಸ್ತೆಗಳು ಹಾನಿಗೀಡು 2,520 ಕಿ.ಮೀ.

ಕೊಚ್ಚಿ ಹೋದ ಒಟ್ಟು ಸೇತುವೆ 546

ಬೆಳಗಾವಿ ರಸ್ತೆ ಹಾನಿ 1,420 ಕಿ.ಮೀ.

ಬೆಳಗಾವಿ ಸೇತುವೆ ಹಾನಿ 214

ಧಾರವಾಡ ರಸ್ತೆ ಹಾನಿ 422 ಕಿ.ಮೀ.

ಧಾರವಾಡ ಸೇತುವೆ ಹಾನಿ 48

ಕೊಡಗು ರಸ್ತೆ ಹಾನಿ 420 ಕಿ.ಮೀ.

ಚಿಕ್ಕಮಗಳೂರು ರಸ್ತೆ ಹಾನಿ 189 ಕಿ.ಮೀ.

ದಕ್ಷಿಣ ಕನ್ನಡ ರಸ್ತೆ ಹಾನಿ 210 ಕಿ.ಮೀ.

ಅಂದಾಜು ಒಟ್ಟು ಹಾನಿ 1,460 ಕೋಟಿ ರೂ.

ಬ್ಲಾಕ್ ಆಗಿರುವ ಲೋಕೋಪಯೋಗಿ ರಸ್ತೆ 252Conclusion:Gggg
ETV Bharat Logo

Copyright © 2025 Ushodaya Enterprises Pvt. Ltd., All Rights Reserved.