ಬೆಂಗಳೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ನಗರದ ಹೊಂಬೇಗೌಡನಗರದ ಆಟದ ಮೈದಾನದಲ್ಲಿ, 2,500ಕ್ಕೂ ಹೆಚ್ಚು ಯೋಗಪಟುಗಳು ಏಕಕಾಲಕ್ಕೆ ಯೋಗಾಸನ ಮಾಡಿದರು. ಚಿಕ್ಕಪೇಟೆ ಶಾಸಕ ಉದಯ ಗರುಡಾಚಾರ್, ಐಎಎಸ್ ಅಧಿಕಾರಿ ಶ್ರೀ ಕುಮಾರ್ ನಾಯಕ್, ಗರುಡಾ ಫೌಂಡೇಷನ್ ಸಂಸ್ಥಾಪಕಿ ಮೇದಿನಿ ಗರುಡಾಚಾರ್, ಅರಣ್ಯ ಅಭಿವೃದ್ಧಿ ನಿಗಮ ನಿರ್ದೇಶಕಿ ಶ್ರೀಮತಿ ಭಾಗ್ಯವತಿ ಅಮರೇಶ್ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಶಾಸಕರಾದ ಉದಯ ಗರುಚಾರ್ ಮಾತನಾಡಿ, ಯೋಗ ಬಲ್ಲವನಿಗೆ ರೋಗ ಬರುವುದಿಲ್ಲ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಮಾವಳ್ಳಿ, ವಿ.ವಿ.ಪುರಂ ವಾರ್ಡ್ನಲ್ಲಿ ಯೋಗ ಕೇಂದ್ರ ಉದ್ಘಾಟನೆ ಮಾಡಲಾಗುತ್ತಿದೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಪ್ರತಿ ವಾರ್ಡ್ನಲ್ಲಿ ಯೋಗ ಕೇಂದ್ರ ಆರಂಭಿಸಲಾಗುವುದು. ಯೋಗಯುತ, ರೋಗ ಮುಕ್ತ ಸಮಾಜಕ್ಕೆ ಎಲ್ಲರು ಶ್ರಮಿಸೋಣ ಎಂದು ಹೇಳಿದರು.
ಅರಣ್ಯ ಅಭಿವೃದ್ಧಿ ನಿಗಮ ನಿರ್ದೇಶಕಿ ಭಾಗ್ಯವತಿ ಅಮರೇಶ್ ಮಾತನಾಡಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಹೊಂಬೇಗೌಡನಗರ ವಾರ್ಡ್ನಲ್ಲಿ ಹಬ್ಬದ ರೀತಿಯಲ್ಲಿ ಅಚರಿಸಲಾಗುತ್ತಿದೆ. ವಿಶ್ವದ ಬಲಿಷ್ಠ ಪ್ರಧಾನಿ ನರೇಂದ್ರ ಮೋದಿ ಯೋಗಕ್ಕೆ ವಿಶ್ವ ಮಾನ್ಯತೆ ತಂದು ಕೊಟ್ಟಿದ್ದಾರೆ ಎಂದು ಬಣ್ಣಿಸಿದರು.
ಇದನ್ನೂ ಓದಿ: ಐತಿಹಾಸಿಕ ಸ್ಮಾರಕ ಗೋಲಗುಮ್ಮಟ ಆವರಣದಲ್ಲಿ ಯೋಗ ದಿನಾಚರಣೆ