ETV Bharat / state

ವಿಧಾನ್​ ಪರಿಷತ್​ ಚುನಾವಣೆ: ಕಾಂಗ್ರೆಸ್​ ಅಭ್ಯರ್ಥಿ ನಜೀರ್ ಅಹಮದ್ ಸಾಲವೆಷ್ಟು ಗೊತ್ತಾ!? - MLC election 2020,

ವಿಧಾನ ಪರಿಷತ್​ ಕಾಂಗ್ರೆಸ್​​ ಅಭ್ಯರ್ಥಿ ನಜೀರ್​ ಅಹಮದ್​ ತಮ್ಮ ಕುಟುಂಬದ ಆಸ್ತಿ ವಿವರವನ್ನು ಪ್ರಕಟಿಸಿದ್ದಾರೆ.

Naseer ahmad property details, Naseer ahmad announced his property details, MLC election, MLC election 2020, MLC election news, MLC election latest news, MLC election update, ನಜೀರ್ ಅಹಮದ್ ಆಸ್ತಿ ವಿವರ, ನಜೀರ್ ಅಹಮದ್ ಆಸ್ತಿ ವಿವರ ಪ್ರಕಟ, ವಿಧಾನ ಪರಿಷತ್​ ಚುನಾವಣೆ, ವಿಧಾನ ಪರಿಷತ್​ ಚುನಾವಣೆ 2020, ವಿಧಾನ ಪರಿಷತ್​ ಚುನಾವಣೆ ಸುದ್ದಿ,
ಆಸ್ತಿ ವಿವರ ಪ್ರಕಟಿಸಿದ ಕಾಂಗ್ರೆಸ್​ ಅಭ್ಯರ್ಥಿ ನಜೀರ್ ಅಹಮದ್
author img

By

Published : Jun 19, 2020, 6:45 AM IST

ಬೆಂಗಳೂರು: ವಿಧಾನ ಪರಿಷತ್ ಸದಸ್ಯತ್ವಕ್ಕೆ ಮರು ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್ ಸದಸ್ಯ ನಜೀರ್ ಅಹಮದ್ ಒಟ್ಟು ಆಸ್ತಿ 37 ಕೋಟಿ ರೂ ಆಗಿದ್ದು, ಸಾಲ 13.5 ಕೋಟಿಯಷ್ಟಿದೆ ಎಂದು ವಿವರ ಸಲ್ಲಿಸಿದ್ದಾರೆ.

ವಿಧಾನ ಪರಿಷತ್ ಅಭ್ಯರ್ಥಿಯಾಗಿ ಕಾಂಗ್ರೆಸ್​ನಿಂದ ನಾಮಪತ್ರ ಸಲ್ಲಿಸಿರುವ ನಜೀರ್​ ಅಹಮದ್​, ಚುನಾವಣಾ ಅಧಿಕಾರಿಗೆ ನೀಡಿದ ಆಸ್ತಿ ವಿವರದಲ್ಲಿ ಈ ಕೆಳಗಿನ ಮಾಹಿತಿ ಬಹಿರಂಗ ಪಡಿಸಿದ್ದಾರೆ.

ಸ್ವಂತ ವಾಹನ ಹೊಂದಿರದ ನಜೀರ್ ಪತ್ನಿಗಿಂತ ಶ್ರೀಮಂತರು ಹಾಗೂ ಸಾಲಗಾರರು ಕೂಡ ಆಗಿದ್ದಾರೆ. ನಜೀರ್ ಅಹಮದ್ ವೈಯಕ್ತಿಕವಾಗಿ ಹೊಂದಿರುವ ಒಟ್ಟು ಆಸ್ತಿ ಮೌಲ್ಯ 24 ಕೋಟಿ ರೂಪಾಯಿ ಆಗಿದೆ. ಇದರಲ್ಲಿ ಒಟ್ಟು ಚರಾಸ್ತಿ 7.39 ಕೋಟಿ ರೂ ಆಗಿದ್ದರೆ, ಸ್ಥಿರಾಸ್ತಿ ಮೌಲ್ಯ 16.70 ಕೋಟಿ ಆಗಿದೆ. ಒಟ್ಟು 4.51 ಲಕ್ಷ ರೂ ಮೌಲ್ಯದ ಚಿನ್ನಾಭರಣ ಹೊಂದಿರುವ ಇವರು ಬರೋಬ್ಬರಿ 13.03 ಕೋಟಿ ರೂ. ಸಾಲ ಪಡೆದಿದ್ದಾರೆ.

ಇನ್ನು ಇವರ ಪತ್ನಿ ಒಟ್ಟು 3.25 ಕೋಟಿ ರೂಪಾಯಿ ಆಸ್ತಿಯ ಒಡತಿಯಾಗಿದ್ದಾರೆ. ಇದರಲ್ಲಿ 30.5 ಲಕ್ಷ ಮೌಲ್ಯದ ಚರಾಸ್ತಿ ಹಾಗೂ 3 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇವರ ಹೆಸರಿನಲ್ಲಿ ಒಟ್ಟು 51 ಸಾವಿರ ರೂಪಾಯಿ ಸಾಲವಿದೆ. ಒಟ್ಟು ಇವರ ಬಳಿ 25 - 35 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಇದೆ. ನಜೀರ್ ಅಹ್ಮದ್ ತಮ್ಮ ಅವಲಂಬಿತರು ಮೂವರ ಹೆಸರಿನಲ್ಲಿಯೂ ತಲಾ 3.35 ಕೋಟಿ ರೂಪಾಯಿ ಅಂತೆ ಒಟ್ಟು 10 ಕೋಟಿ ರೂಪಾಯಿ ಮೊತ್ತದ ಚರಾಸ್ತಿ ಹೊಂದಿದ್ದಾರೆ. ಸ್ವಂತ ಮನೆ ಹಾಗೂ ವಾಹನ ಇಲ್ಲ ಎಂಬ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.