ETV Bharat / state

MLC Election: ಮತಪೆಟ್ಟಿಗೆ ಸೇರಿದ ಅಭ್ಯರ್ಥಿಗಳ ಭವಿಷ್ಯ.. ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ? - ವಿಧಾನ ಪರಿಷತ್‍ ಚುನಾವಣೆ

ಸಿಎಂ
ಸಿಎಂ
author img

By

Published : Dec 10, 2021, 9:25 AM IST

Updated : Dec 10, 2021, 8:36 PM IST

20:22 December 10

ಮಹದೇವಪುರದ ಕ್ಷೇತ್ರದಲ್ಲಿ ಶೇ.100 ರಷ್ಟು ಮತದಾನ

  • ಬೆಂಗಳೂರು: ಮಹದೇವಪುರದ ಕ್ಷೇತ್ರದ ವ್ಯಾಪ್ತಿಯಲ್ಲಿ ವಿಧಾನ ಪರಿಷತ್ ಚುನಾವಣೆಯು ಶಾಂತಿಯುತವಾಗಿ ಶೇಕಡಾ 100 ರಷ್ಟು ಮತದಾನ ನಡೆಯಿತು.
  • ಬೆಂಗಳೂರು ಗ್ರಾಮಾಂತರ ಕ್ಷೇತ್ರ ವಿಧಾನ ಪರಿಷತ್ ಚುನಾವಣೆಯಲ್ಲಿ ಶೇಕಡಾ 99.91 ರಷ್ಟು ಮತದಾನವಾಗಿದೆ.
  • ಉತ್ತರ ಕನ್ನಡ: ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗುವ ವಿಧಾನ ಪರಿಷತ್ ಚುನಾವಣಾ ಮತದಾನ ಜಿಲ್ಲೆಯಾದ್ಯಂತ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಜಿಲ್ಲೆಯಲ್ಲಿ ಶೇ.99.73 ರಷ್ಟು ಮತದಾನವಾಗಿದೆ.
  • ಶಿವಮೊಗ್ಗ ಸ್ಥಳೀಯ ಸಂಸ್ಥೆಯ ವಿಧಾನ ಪರಿಷತ್ ಚುನಾವಣೆಯಲ್ಲಿ ಶೇ 99.86 ರಷ್ಟು ಮತದಾನವಾಗಿದೆ.
  • ಕೊಡಗು ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣೆ: ಶೇಕಡಾ 99.70ರಷ್ಟು ಮತದಾನ

19:55 December 10

ಯಾದಗಿರಿ ಜಿಲ್ಲೆಯಲ್ಲಿ ಶೇ.99.72 ರಷ್ಟು ಜನರಿಂದ ಹಕ್ಕು ಚಲಾವಣೆ

  • ಕಲಬುರಗಿ-ಯಾದಗಿರಿ ಕ್ಷೇತ್ರದ ವಿಧಾನ ಪರಿಷತ್​ ಚುನಾವಣೆ
  • ಶೇ.99.72 ರಷ್ಟು ಜನರಿಂದ ಹಕ್ಕು ಚಲಾವಣೆ
  • 2458 ಮತದಾರರಲ್ಲಿ 2451 ಜನರಿಂದ ಮತದಾನ

19:41 December 10

ದಕ್ಷಿಣ ಕನ್ನಡದಲ್ಲಿ ಶೇ.99.55 ರಷ್ಟು ಮತದಾನ

  • ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಚುನಾವಣಾ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆ
  • ಶೇ.99.55 ರಷ್ಟು ಮತದಾನ; 6,040 ಮತದಾರರ ಪೈಕಿ 6,013 ಮಂದಿಯಿಂದ ಹಕ್ಕು ಚಲಾವಣೆ
  • ಉಡುಪಿ ಜಿಲ್ಲೆಯ ಬೈಂದೂರು, ಹೆಬ್ರಿ, ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದರೆ, ಬಂಟ್ವಾಳ, ಕಡಬ ಸೇರಿದಂತೆ 5 ತಾಲೂಕುಗಳಲ್ಲಿ ಶೇ.100 ರಷ್ಟು ವೋಟಿಂಗ್​​
  • ಮಂಗಳೂರಿನ ಪಾಂಡೇಶ್ವರದ ರೊಸಾರಿಯೊ ಪಿಯು-ಡಿಗ್ರಿ ಕಾಲೇಜಿನಲ್ಲಿ ಡಿ.14 ರಂದು ಮತ ಎಣಿಕೆ

19:15 December 10

ಮೇಲ್ಮನೆಗೆ ಮತದಾನ ಮಾಡದ 7 ಮಂದಿ: ಚಾಮರಾಜನಗರದಲ್ಲಿ 99.69% ವೋಟಿಂಗ್

  • ವಿಧಾನ ಪರಿಷತ್​ ಚುನಾವಣೆಗೆ ಚಾಮರಾಜನಗರದಲ್ಲಿ ಶೇ. 99.69ರಷ್ಟು ಮತದಾನ
  • 7 ಮಂದಿ ಹೊರತುಪಡಿಸಿ ಎಲ್ಲರೂ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ
  • 2275 ಮತದಾರರಲ್ಲಿ 2268 ಮತದಾನ ಮಾಡಿದ್ದಾರೆ

19:09 December 10

ವಿಜಯಪುರ-ಬಾಗಲಕೋಟೆಯಲ್ಲಿ ಶೇ.99.86 ರಷ್ಟು ವೋಟಿಂಗ್​​

  • ವಿಜಯಪುರ-ಬಾಗಲಕೋಟೆ ಎಂಎಲ್​​​ಸಿ ಚುನಾವಣೆ
  • ಒಟ್ಟು ಶೇ.99.86 ರಷ್ಟು ಮತದಾನ
  • ವಿಜಯಪುರದಲ್ಲಿ ಹಕ್ಕು ಚಲಾಯಿಸಿದ 3931 ಮತದಾರರು
  • ಬಾಗಲಕೋಟೆಯಲ್ಲಿ 3432 ಜನರಿಂದ ವೋಟಿಂಗ್​​
  • ಡಿಸೆಂಬರ್ 14 ರಂದು‌ ಮತ ಎಣಿಕೆ ಹಾಗೂ ಫಲಿತಾಂಶ‌ ಪ್ರಕಟವಾಗಲಿದೆ

19:02 December 10

ಮಂಡ್ಯದಲ್ಲಿ ಶೇ.99.85 ರಷ್ಟು ಮತದಾನ

  • ಮಂಡ್ಯದಲ್ಲಿ ಶಾಂತಿಯುತ ಮತದಾನ
  • ಹಕ್ಕು ಚಲಾಯಿಸಿದ ಶೇ.99.85 ರಷ್ಟು ಮತದಾರರು
  • 4024 ಮತದಾರರ ಪೈಕಿ 4018 ಮಂದಿಯಿಂದ ಮತದಾನ
  • ಕೆ.ಆರ್.ಪೇಟೆ ಪುರಸಭೆಯಲ್ಲಿ ಸಚಿವ ನಾರಾಯಣ್ ಗೌಡ ವೋಟಿಂಗ್​​
  • ನಗರಸಭೆಯಲ್ಲಿ ಸಂಸದೆ ಸುಮಲತಾ, ಶಾಸಕ ಎಂ.ಶ್ರೀನಿವಾಸ್ ಹಕ್ಕು ಚಲಾವಣೆ

18:23 December 10

ಪರಿಷತ್​ ಚುನಾವಣೆ - ಬೆಳಗಾವಿಯಲ್ಲಿ ಶೇ.99.97, ಧಾರವಾಡದಲ್ಲಿ ಶೇ.99.63 ರಷ್ಟು ಮತದಾನ

  • ಬೆಳಗಾವಿ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ
  • ಜಿಲ್ಲೆಯಲ್ಲಿ ಶೇಕಡ 99.97ರಷ್ಟು ಮತದಾನ
  • 8849 ಮತದಾರರ ಪೈಕಿ 8846 ಮತದಾರರಿಂದ ಹಕ್ಕು ಚಲಾವಣೆ
  • ಧಾರವಾಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಲ್ಲಿ ಒಟ್ಟು ಶೇ.99.63 ರಷ್ಟು ವೋಟಿಂಗ್​
  • ಈ ಪೈಕಿ ಹುಬ್ಬಳ್ಳಿ-ಧಾರವಾಡದಲ್ಲಿ ಶೇ.99.31, ಹಾವೇರಿ‌- ಶೇ.99.85 & ಗದಗದಲ್ಲಿ ಶೇ.99.59 ಮತದಾನ

17:09 December 10

ಟೀಕಾಕಾರರಿಗೆ ಗೆಲುವಿನ ಮೂಲಕ ಉತ್ತರ ನೀಡುತ್ತೇನೆ: ಸೂರಜ್ ರೇವಣ್ಣ

ಸೂರಜ್ ರೇವಣ್
ಸೂರಜ್ ರೇವಣ್
  • ವಿಧಾನ ಪರಿಷತ್​​ಗೆ ನನ್ನ ಸ್ಪರ್ಧೆ ಅನಿರೀಕ್ಷಿತವಾಗಿದ್ದು
  • ಟೀಕೆ ಮಾಡುವವರಿಗೆ ಗೆಲುವಿನ ಮೂಲಕ ಉತ್ತರ ನೀಡುತ್ತೇನೆ
  • ಮೈಸೂರಿನಲ್ಲಿ ಹಾಸನ ಕ್ಷೇತ್ರದ ಅಭ್ಯರ್ಥಿ ಸೂರಜ್ ರೇವಣ್ಣ ಹೇಳಿಕೆ

16:56 December 10

ಶಿರಸಿಯಲ್ಲಿ ಕಾಗೇರಿ, ಹೆಗಡೆಯಿಂದ ಮತ ಚಲಾವಣೆ

ಕಾಗೇರಿ, ಹೆಗಡೆಯಿಂದ ಮತ ಚಲಾವಣೆ
ಕಾಗೇರಿ, ಹೆಗಡೆಯಿಂದ ಮತ ಚಲಾವಣೆ
  • ಶಿರಸಿಯಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಕಾಗೇರಿ, ಸಂಸದ ಅನಂತಕುಮಾರ್ ಹೆಗಡೆಯಿಂದ ಮತ ಚಲಾವಣೆ
  • ಸಂಸದರು ಬಂದಾಗ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಕೈ ಕುಲುಕಿದ್ದು ವಿಶೇಷವಾಗಿತ್ತು
  • ಬಿಜೆಪಿಗೆ ಗೆಲುವು ಕಷ್ಟ ಅನ್ನೋ ಪ್ರಶ್ನೆಗೆ, ಹೌದಾ? ಅದ್ರ ಬಗ್ಗೆ ನನಗೆ ಗೊತ್ತಿಲ್ಲ ಎಂದ ಅನಂತಕುಮಾರ್ ಹೆಗಡೆ
  • ಬಿಜೆಪಿ ಚುನಾವಣೆಯಲ್ಲಿ ಗೆಲ್ಲುತ್ತೆ ಎಂದಷ್ಟೇ ಹೇಳಿ ಹೋದ ಸಂಸದರು
  • ಚುನಾವಣೆ ಹೇಗೆ ನಡೆದಿದೆ ಅನ್ನೋದನ್ನ ನಾವು ಆತ್ಮಾವಲೋಕನ ಮಾಡಿಕೊಳ್ಬೇಕು
  • ಇನ್ನಷ್ಟು ಶಕ್ತಿ ಕೊಡಬೇಕಿದ್ರೆ ಇದರ ಸಿಂಹಾವಲೋಕನ ಅಗತ್ಯ
  • ಘನತೆಯನ್ನ ಹೊಂದಿರೋ ವಿಧಾನ ಪರಿಷತ್​​ಗೆ ಆಯ್ಕೆಯಾಗೋರು ಉತ್ತಮ ಕೆಲಸ ಮಾಡ್ಲಿ ಅಂತ ಹಾರೈಸುತ್ತೇನೆ
  • ಚುನಾವಣೆಯಲ್ಲಿ ಹಣದ ಹರಿವಿನ ಬಗ್ಗೆ ಮಾತನಾಡಿದ ಕಾಗೇರಿ

15:55 December 10

ಕಾರ್ಯಕರ್ತರ ಶ್ರಮ- ಸಂಘಟನೆಯ ಶಕ್ತಿ ಮೇಲೆ ಗೆಲ್ತೇನೆ: ಬಿಜೆಪಿ ಅಭ್ಯರ್ಥಿ ಡಿಎಸ್ ಅರುಣ್

ಬಿಜೆಪಿ ಅಭ್ಯರ್ಥಿ ಡಿಎಸ್ ಅರುಣ್
ಬಿಜೆಪಿ ಅಭ್ಯರ್ಥಿ ಡಿಎಸ್ ಅರುಣ್
  • ಹತ್ತು ವಿಧಾನ ಸಭಾ ಕ್ಷೇತ್ರಗಳಲ್ಲಿ ಮೂರು ಬಾರಿ ಪ್ರವಾಸ ಮಾಡಿದ್ದೇನೆ ಎಲ್ಲಾ ಕಡೆಯಲ್ಲು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ
  • ಕಾರ್ಯಕರ್ತರ ಶ್ರಮ ಹಾಗೂ ಸಂಘಟನೆಯ ಶಕ್ತಿ ಮೇಲೆ ಬಾರಿ ಅಂತರದಲ್ಲಿ ಗೆಲವು ಸಾಧಿಸಲಿದ್ದೇನೆ
  • ನಮ್ಮ ಪಕ್ಷದ ಬೆಂಬಲಿತ ಜನಪ್ರತಿನಿಧಿಗಳೆ ಹೆಚ್ಚು ಸಂಖ್ಯೆಯಲ್ಲಿರುವುದರಿಂದ 3,000ಕ್ಕೂ ಹೆಚ್ಚು ಮತ ಪಡೆದು ಗೆಲ್ತೇನೆ
  • ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಡಿಎಸ್ ಅರುಣ್ ವಿಶ್ವಾಸ

15:49 December 10

ಮತದಾನ ಬಹಿಷ್ಕಾರ ಮಾಡಿದ ಏಳು‌ ಜನ ಸದಸ್ಯರಲ್ಲಿ ಐವರಿಂದ ಮತದಾನ

  • ವಿಧಾನ ಪರಿಷತ್​ ಚುನಾವಣೆಗೆ ಮತದಾನ ಬಹಿಷ್ಕಾರ ಮಾಡುವುದಾಗಿ ಘೋಷಿಸಿದ್ದ ನಾಲೂರು ಗ್ರಾ.ಪಂ ಸದಸ್ಯರು
  • ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ನಾಲೂರು ಗ್ರಾಮ
  • ಗ್ರಾಮದ ಅಭಿವೃದ್ದಿಗೆ ಅನುದಾನ ‌ನೀಡದ ಸರ್ಕಾರದ ನೀತಿಯನ್ನು ಖಂಡಿಸಿದ್ದ 7 ಸದಸ್ಯರು
  • ಇವರಲ್ಲಿ ಇಂದು ಐದು ಮಂದಿಯಿಂದ ಮತದಾನ

15:38 December 10

ದಾವಣಗೆರೆಯಲ್ಲಿ ಹಕ್ಕು ಚಲಾವಣೆ ಮಾಡಿದ ಜನ ಪ್ರತಿನಿಧಿಗಳಿವರು..

  • ಟ್ಯಾಕ್ಟರ್​​ನಲ್ಲಿ ಮತಗಟ್ಟೆಗೆ ಬಂದು ವೋಟ್​ ಮಾಡಿದ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ
  • ಪಾಲಿಕೆಯ ಸದಸ್ಯರೊಂದಿಗೆ ಆಗಮಿಸಿ ಹಕ್ಕು ಚಲಾಯಿಸಿದ ಸಂಸದ ಜಿಎಂ ಸಿದ್ದೇಶ್ವರ್
  • ಹಾಲಿ ಪರಿಷತ್ ಸದಸ್ಯರಾದ ತೇಜಸ್ವಿನಿ ಗೌಡ ಹಾಗೂ ಆರ್ ಶಂಕರ್​​ರಿಂದ ಮತದಾನ
  • ಕೈ ಅಭ್ಯರ್ಥಿ ಸೋಮಶೇಖರ್ ಪರ ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ವೋಟ್​

15:31 December 10

ಎಲ್ಲಾ ಕ್ಷೇತ್ರಗಳಲ್ಲೂ ಗೆಲ್ತೇವೆ: ಸಿಎಂ ಬೊಮ್ಮಾಯಿ ವಿಶ್ವಾಸ

  • ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲಾ ಕ್ಷೇತ್ರಗಳಲ್ಲೂ ಗೆಲ್ತೇವೆ
  • ಒಂದೊಂದು ಚುನಾವಣೆ ಅದರದ್ದೆ ಆದಂತ ಮತದಾರರ ಮೇಲೆ ತೀರ್ಮಾನ ಆಗುತ್ತದೆ
  • ಉಪಚುನಾವಣೆ ಇರಲಿ, ವಿಧಾನ ಪರಿಷತ್ ಚುನಾವಣೆ ಇರಲಿ ಅದರ ನೆಲೆಗಟ್ಟಿನ ಮೇಲಾಗುತ್ತೆ
  • ಅವತ್ತಿನ ಸಂದರ್ಭದಲ್ಲಿ ಯಾವ ರಾಜಕೀಯ ಸನ್ನಿವೇಶ ಇರುತ್ತೋ ಆ ನೆಲೆಗಟ್ಟಿನ ಮೇಲೆ ಆಗುತ್ತೆ
  • ಬೆಳಗಾವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ

15:24 December 10

ಫಸ್ಟ್ ರೌಂಡ್‌ನಲ್ಲೇ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸ್ತಾರೆ - ಲಕ್ಷ್ಮಿ ಹೆಬ್ಬಾಳ್ಕರ್​

  • ಬೆಳಗಾವಿಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​ ಹಕ್ಕು ಚಲಾವಣೆ
  • ಪರಿಷತ್ ಚುನಾವಣೆಯಲ್ಲಿ ಸತೀಶ್ ಅಣ್ಣಾ ಜಾರಕಿಹೊಳಿ ನೇತೃತ್ವದಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಿದ್ದೇವೆ
  • ಗೋಕಾಕ, ಅರಬಾವಿ ಸೇರಿ 14 ತಾಲೂಕುಗಳಲ್ಲಿ ಕಾಂಗ್ರೆಸ್ ಪಕ್ಷದ ಮತದಾರರು ಇದ್ದಾರೆ
  • ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವಷ್ಟು ಮತಗಳಿವೆ
  • ನಾನೇ 11 ದಿನಗಳ ಕಾಲ ಚಿಕ್ಕೋಡಿ ಲೋಕಸಭೆಯಲ್ಲಿ ಇದ್ದು ಪ್ರಚಾರ ಮಾಡಿರುವೆ
  • ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪರ ವಾತಾವರಣ ವಿದೆ
  • ಫಸ್ಟ್ ರೌಂಡ್‌ನಲ್ಲೇ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸ್ತಾರೆ
  • ದೇವರ ಆಶೀರ್ವಾದ, ಮತದಾರರ ಆಶೀರ್ವಾದ ಇದೆ
  • ಚುನಾವಣೆ ಅಂದಮೇಲೆ ನಮ್ಮ ನಾಯಕರು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಂದಿದ್ದರು
  • ಮತದಾರರಿಗೆ ಯಾರು ಪರಿಣಾಮ ಬೀರುತ್ತಾರೆ ಅನ್ನೋದು ಮುಖ್ಯ
  • ಹಾನಗಲ್ ವಿಧಾನಸಭೆ ಚುನಾವಣೆ ಫಲಿತಾಂಶ ನಮಗೆ ಇಲ್ಲಿ ನೋಡಲು ಸಿಗಲಿದೆ
  • ಮತದಾನದ ಬಳಿಕ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಹೆಬ್ಬಾಳ್ಕರ್

15:19 December 10

ಧಾರವಾಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಲ್ಲಿ ಒಟ್ಟು ಶೇ.84.06 ರಷ್ಟು ಮತದಾನ

  • ಹಾವೇರಿಯಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಶೇ.88.93ರಷ್ಟು ಮತದಾನ
  • ಧಾರವಾಡದಲ್ಲಿ ಶೇ.68.98 ಹಾಗೂಗದಗದಲ್ಲಿ ಶೇ.92. 93ರಷ್ಟು ವೋಟಿಂಗ್​
  • ಒಟ್ಟು ಧಾರವಾಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಲ್ಲಿ ಶೇ.84.06 ರಷ್ಟು ಮತದಾನ

15:16 December 10

ಸಚಿವ ಎಸ್ ಅಂಗಾರರಿಂದ ಮತ ಚಲಾವಣೆ

ಸಚಿವ ಎಸ್ ಅಂಗಾರರಿಂದ ಮತ ಚಲಾವಣೆ
ಸಚಿವ ಎಸ್ ಅಂಗಾರರಿಂದ ಮತ ಚಲಾವಣೆ
  • ಸುಳ್ಯ ನಗರಸಭೆ ಮತಕೇಂದ್ರದಲ್ಲಿ ಸಚಿವ ಎಸ್ ಅಂಗಾರರಿಂದ ವೋಟಿಂಗ್​
  • ಚನ್ನಕೇಶವ ದೇಗುಲದಲ್ಲಿ ಪೂಜೆ ಸಲ್ಲಿಸಿದ ನಂತರ ಮತ ಚಲಾಯಿಸಿದ ಸಚಿವ
  • ಸುಳ್ಯ,ಕಡಬ ತಾಲೂಕಿನಲ್ಲಿ ಮತದಾನ ಬಹುತೇಕ ಪೂರ್ಣ

15:15 December 10

ಹಕ್ಕು ಚಲಾಯಿಸಿದ ಶೋಭಾ ಕರಂದ್ಲಾಜೆ

  • ಚಿಕ್ಕಮಗಳೂರು ವಿಧಾನ ಪರಿಷತ್ ಚುನಾವಣೆ
  • ಮೂಡಿಗೆರೆ ಪಟ್ಟಣ ಪಂಚಾಯಿತಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತದಾನ
  • ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂಕೆ ಪ್ರಾಣೇಶ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ನಡುವೆ ಪೈಪೋಟಿ
  • ಮಧ್ಯಾಹ್ನ 2 ಗಂಟೆಯವರೆಗೆ 68.18ರಷ್ಟು ಮತದಾನ

14:29 December 10

ಮತದಾನದ ಗುಟ್ಟು ಬಿಟ್ಟು ಕೊಟ್ಟ ಸತೀಶ್ ಜಾರಕಿಹೊಳಿ

  • ಬೆಳಗಾವಿಯಲ್ಲಿ ಮತದಾನದ ಗುಟ್ಟು ಬಿಟ್ಟು ಕೊಟ್ಟ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
  • ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಪರವಾಗಿ ಮತ ಚಲಾವಣೆ ಮಾಡಿದ್ದೇವೆ
  • ಮೊದಲ ಪ್ರಾಶಸ್ತ್ಯ ಮತದಲ್ಲೇ ಗೆಲುತ್ತೇವೆ
  • ಮೂರು ಜನರಲ್ಲಿ ಈಗ ಸ್ಪರ್ಧೆ ಇದ್ದು ಇಬ್ಬರಿಗಿಂತ ಹೆಚ್ಚು ಮತ ನಾವು ಪಡೆಯುತ್ತೇವೆ
  • ಹದಿನೈದು ದಿನಗಳಿಂದ ಜಿಲ್ಲೆಯಲ್ಲಿ ಪ್ರಚಾರ ಮಾಡುತ್ತಿದ್ದೇವೆ
  • ಶಾಸಕರು, ಮಾಜಿ ಶಾಸಕರು ಎಲ್ಲರೂ ಒಮ್ಮತದಿಂದ ಪ್ರಚಾರ ಮಾಡಿದ್ದೇವೆ
  • ಕಾಂಗ್ರೆಸ್ ಗೆಲ್ಲುವಷ್ಟು ಸಂಖ್ಯಾಬಲ ನಮ್ಮಲ್ಲಿದೆ
  • ಮಹಾಂತೇಶ್ ಕವಟಗಿಮಠ ಇಲ್ಲಾ ಲಖನ್ ಜಾರಕಿಹೊಳಿ‌ ಇಬ್ಬರಲ್ಲಿ ಒಬ್ಬರು ಗೆಲ್ಲಬೇಕು
  • ಲಖನ್ ಜಾರಕಿಹೊಳಿ‌ ಆರು ತಿಂಗಳ ಹಿಂದೆ ನಮ್ಮ ಪಕ್ಷದಲ್ಲಿ ಇದ್ರೂ, ಈಗ ಇಲ್ಲ
  • ರಮೇಶ್ ಜಾರಕಿಹೊಳಿ‌ ಅವರ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ
  • ಇಬ್ಬರು ಮೂರು ಜನ ಲಖನ್ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ
  • ಲಖನ್ ಜಾರಕಿಹೊಳಿ‌ ಎನೇ ಇದ್ರೂ ಬಿಜೆಪಿ ಬಿ ಟೀಮ್
  • ಗೋಕಾಕ್, ಅರಭಾವಿಯಲ್ಲಿ ಸ್ವಯಂ ಆಗಿ ಮೊದಲ ಬಾರಿ ಮತದಾನ ಮಾಡುತ್ತಿದ್ದಾರೆ
  • ಇದೇ ನಮ್ಮ ಮೊದಲ ಗೆಲುವು ಎಂದ ಸತೀಶ್ ಜಾರಕಿಹೊಳಿ‌

14:24 December 10

16 ಸ್ಥಾನಗಳಲ್ಲಿ ನಾವು ಗೆಲ್ತೇವೆ: ಸಚಿವ ಕೆ.ಎಸ್ ಈಶ್ವರಪ್ಪ

ಸಚಿವ ಕೆ.ಎಸ್ ಈಶ್ವರಪ್ಪ
ಸಚಿವ ಕೆ.ಎಸ್ ಈಶ್ವರಪ್ಪ
  • ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ಮತದಾನ
  • ಪರಿಷತ್ ಚುನಾವಣೆಯಲ್ಲಿ 16 ಸ್ಥಾನ ಗೆಲ್ಲುತ್ತೇವೆ ಎಂದ ಸಚಿವರು
  • ನಮ್ಮ ಅಭ್ಯರ್ಥಿ ಡಿ.ಎಸ್ ಅರುಣ್ ಅತ್ಯಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ
  • ವಿಶ್ವಾಸ ವ್ಯಕ್ತಪಡಿಸಿದ ಈಶ್ವರಪ್ಪ

14:18 December 10

ಬಿಜೆಪಿ ಪಕ್ಷದವರಿಗೆ ಬದ್ಧತೆ-ಶಕ್ತಿ ಇಲ್ಲ ಎಂಬುದು ಚುನಾವಣೆಯಲ್ಲಿ ಸಾಬೀತಾಗತ್ತೆ: ಡಿಕೆಶಿ

  • ಬೆಂಗಳೂರು ಗ್ರಾಮಾಂತರ ಎಂಎಲ್​​ಸಿ ಚುನಾವಣೆ
  • ರಾಮನಗರ ಜಿಲ್ಲೆ ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತದಾನ
  • ಡಿಕೆಶಿಗೆ ಸಾಥ್​ ನೀಡಿದ ನಗರಸಭಾ ಸದಸ್ಯರು
  • ಈ ಬಾರಿ ಚುನಾವಣೆಯಲ್ಲಿ ನಮ್ಮ ನಿರೀಕ್ಷೆಗೂ ಹೆಚ್ಚು ಸ್ಥಾನ ಬರಲಿದೆ
  • ಕಾಂಗ್ರೆಸ್ ಪಕ್ಷದ ಜೊತೆ ಜನತೆ ಇದ್ದಾರೆಂಬುದಕ್ಕೆ ಈ ಚುನಾವಣೆಯ ಫಲಿತಾಂಶದಿಂದ ಗೊತ್ತಾಗುತ್ತೆ
  • ಬಿಜೆಪಿ ಪಕ್ಷದವರಿಗೆ ಬದ್ಧತೆ ಹಾಗೂ ಶಕ್ತಿ ಎರಡು ಕೂಡ ಇಲ್ಲ ಎಂಬುದು ಈ ಚುನಾವಣೆಯಲ್ಲಿ ಸಾಬೀತಾಗತ್ತೆ
  • ವೋಟ್​ ಮಾಡಿದ ಬಳಿಕ ಡಿಕೆಶಿ ಹೇಳಿಕೆ

14:06 December 10

ಸಿದ್ದು ಎಲ್ಲಿ ನಿಂತ್ರೂ ಗೆಲ್ತಾರೆ, ಚಾಮರಾಜನಗರಕ್ಕೆ ಬಂದ್ರೆ ಕ್ಷೇತ್ರ ಬಿಟ್ಟು ಕೊಡುವೆ: ಶಾಸಕ ಪುಟ್ಟರಂಗಶೆಟ್ಟಿ

ಶಾಸಕ ಪುಟ್ಟರಂಗಶೆಟ್ಟಿ
ಶಾಸಕ ಪುಟ್ಟರಂಗಶೆಟ್ಟಿ ಮತದಾನ
  • ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲಿ ನಿಂತರೂ ಗೆಲ್ತಾರೆ
  • ವಿಧಾನಸಭಾ ಚುನಾವಣೆಗೆ ಚಾಮರಾಜನಗರಕ್ಕೆ ಬಂದರೆ ನನ್ನ ಕ್ಷೇತ್ರ ಬಿಟ್ಟು ಕೊಡುತ್ತೇನೆ
  • ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಜಿಲ್ಲೆಯ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನ ಕೊಟ್ಟಿದ್ದಾರೆ
  • ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಸ್ಪರ್ಧಿಸುವಂತೆ ಆಹ್ವಾನ ನೀಡುವೆ
  • ಮೈಸೂರು-ಚಾಮರಾಜನಗರ ಪರಿಷತ್​ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ತಿಮ್ಮಯ್ಯ ಗೆಲ್ಲಲಿದ್ದಾರೆ
  • ವೋಟ್​ ಮಾಡಿದ ಬಳಿಕ ಕೈ ಶಾಸಕ ಸಿ‌.ಪುಟ್ಟರಂಗಶೆಟ್ಟಿ ಮಾತು

14:06 December 10

ಮೈಸೂರು-ಚಾಮರಾಜನಗರದಲ್ಲಿ ಶೇ.45ರಷ್ಟು ಮತದಾನ

  • ಮೈಸೂರು-ಚಾಮರಾಜನಗರ ಪರಿಷತ್ ಚುನಾವಣೆ
  • ಬೆಳಗ್ಗೆ 8 ರಿಂದ ಮಧ್ಯಾಹ್ನ 1 ರವರೆಗೆ ಶೇ.45ರಷ್ಟು ಮತದಾನ
  • ಈವರೆಗೆ 1030 ಮತದಾರರಿಂದ ವೋಟಿಂಗ್​​
  • ಚಾಮರಾಜನಗರ ತಾಲೂಕಿನಲ್ಲಿ ಶೇ. 40.87, ಗುಂಡ್ಲುಪೇಟೆಯಲ್ಲಿ ಶೇ.55.85
  • ಯಳಂದೂರಿನಲ್ಲಿ ಶೇ. 42.44, ಕೊಳ್ಳೆಗಾಲದಲ್ಲಿ ಶೇ.16.72 ಹಾಗೂ ಹನೂರು ತಾಲೂಕಿಲ್ಲಿ ಶೇ.63.7 ರಷ್ಟು ಮತದಾನ

13:52 December 10

ಶಾಸಕ ರಮೇಶ್ ಜಾರಕಿಹೊಳಿಯಿಂದ ಮತದಾನ

  • ಹಕ್ಕು ಚಲಾವಣೆ ಮಾಡಿದ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ
  • ಗೋಕಾಕ ನಗರಸಭೆ ಕಾರ್ಯಾಲಯದ ಮತಗಟ್ಟೆಯಲ್ಲಿ ಮತದಾನ

13:46 December 10

ಪಕ್ಷೇತರರಿಂದ ಯಾವುದೇ ನಷ್ಟವಿಲ್ಲ, ಬಿಜೆಪಿ ಗೆಲುವು ನಿಶ್ಚಿತ: ಶೆಟ್ಟರ್ ವಿಶ್ವಾಸ

ಮಾಜಿ ಸಿಎಂ ಜಗದೀಶ್ ಶೆಟ್ಟರ್
ಮತ ಚಲಾಯಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್
  • ಭಾರತೀಯ ಜನತಾ ಪಕ್ಷಕ್ಕೆ ಪಕ್ಷೇತರ ಅಭ್ಯರ್ಥಿಗಳಿಂದ ಯಾವುದೇ ಹಾನಿಯಾಗುವುದಿಲ್ಲ
  • ಪರಿಷತ್ ಚುನಾವಣೆಯಲ್ಲಿ 15ಕ್ಕೂ ಹೆಚ್ಚು ಸ್ಥಾನವನ್ನು ಬಿಜೆಪಿ ಗೆಲ್ಲಲಿದೆ
  • ಧಾರವಾಡ, ಗದಗ, ಹಾವೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರದೀಪ ಶೆಟ್ಟರ್ ಪ್ರಚಂಡ ಬಹುಮತ ಪಡೆದು ಗೆಲ್ತಾರೆ
  • ಹುಬ್ಬಳ್ಳಿಯಲ್ಲಿ ಮತ ಚಲಾಯಿಸಿದ ಬಳಿಕ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ

13:35 December 10

ಸತೀಶ್ ಜಾರಕಿಹೊಳಿ‌, ಲಕ್ಷ್ಮಿ ಹೆಬ್ಬಾಳ್ಕರ್ ಮತದಾನ

  • ಬೆಳಗಾವಿ ವಿಧಾನ ಪರಿಷತ್ ದ್ವಿಸದಸ್ಯ ಸ್ಥಾನಕ್ಕೆ ಚುನಾವಣೆ
  • ಕೆಪಿಸಿಸಿ ‌ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತದಾನ
  • 13 ಜನ ಪಾಲಿಕೆ ಸದಸ್ಯರ ಜೊತೆಗೆ ಮಹಾನಗರ ಪಾಲಿಕೆಯಲ್ಲಿ ವೋಟ್ ಮಾಡಿದ ಕೈ ನಾಯಕರು
  • ಮತದಾನಕ್ಕೂ ಮುನ್ನ ಸತೀಶ್ ಜಾರಕಿಹೊಳಿ‌ ಕಾಲಿಗೆ ನಮಸ್ಕರಿಸಿದ ಲಕ್ಷ್ಮಿ ಹೆಬ್ಬಾಳ್ಕರ್
  • ಅಕ್ಕಪಕ್ಕದಲ್ಲಿ ಕುಳಿತು ಕೆಲಹೊತ್ತು ಚರ್ಚೆ

13:33 December 10

ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವರು, ಶಾಸಕರಿಂದ ಹಕ್ಕು ಚಲಾವಣೆ

  • ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್​​ರಿಂದ ಮತದಾನ
  • ಶಾಸಕರುಗಳಾದ ಅರವಿಂದ ಬೆಲ್ಲದ್, ಅಮೃತ ದೇಸಾಯಿ, ವಿ.ಎಸ್.ಸಂಕನೂರ, ಅಭ್ಯರ್ಥಿ ಪ್ರದೀಪ್ ಶೆಟ್ಟರ್​ರಿಂದ ಹಕ್ಕು ಚಲಾವಣೆ
  • ಹುಬ್ಬಳ್ಳಿ ಪಾಲಿಕೆ ಕಚೇರಿಯ ಮತಗಟ್ಟೆ 144ರಲ್ಲಿ ವೋಟಿಂಗ್​​

13:27 December 10

ಮತಗಟ್ಟೆಗೆ ಧಾರವಾಡ ಡಿಸಿ ಭೇಟಿ

ಮತಗಟ್ಟೆಗೆ ಧಾರವಾಡ ಡಿಸಿ ಭೇಟಿ
ಮತಗಟ್ಟೆಗೆ ಧಾರವಾಡ ಡಿಸಿ ಭೇಟಿ
  • ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ
  • ಮತಗಟ್ಟೆಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಭೇಟಿ ಭೇಟಿ
  • ಧಾರವಾಡ ತಾಲೂಕಿನ ಮನಸೂರ ಗ್ರಾಮದ ಮತಗಟ್ಟೆಗೆ ಬಂದು ಪರಿಶೀಲನೆ
  • ಯಾವುದೇ ಅಹಿತರಕ ಘಟನೆಗಳು ನಡೆದಿಲ್ಲ
  • ಶಾಂತಿಯುತವಾಗಿ ಮತದಾನ ನಡೆಯುತ್ತಿದೆ
  • ಎಲ್ಲರು ಆದಷ್ಟು ಬೇಗ ಆಗಮಿಸಿ ಮತ ಚಲಾಯಿಸುವಂತೆ ಡಿಸಿ ಮನವಿ

13:21 December 10

ಮುಹೂರ್ತ ನೋಡಿ ಮತ ಚಲಾಯಿಸಿದ ಬಿಜೆಪಿ ಅಭ್ಯರ್ಥಿ

  • ಬೆಳಗಾವಿ ಜಿಲ್ಲೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ದ್ವಿಸದಸ್ಯ ಸ್ಥಾನಕ್ಕೆ ಮತದಾನ
  • ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠರಿಂದ ಹಕ್ಕು ಚಲಾವಣೆ
  • ಸಮಯ ನೋಡಿಕೊಂಡು ಮತಚಲಾಯಿಸಿದ ಬಿಜೆಪಿ ಅಭ್ಯರ್ಥಿ
  • ಮಧ್ಯಾಹ್ನ 12 ಗಂಟೆ ಒಂದು ನಿಮಿಷ ಆಗುವವರೆಗೂ ಮತಗಟ್ಟೆಯಲ್ಲಿ ಕಾದು ಕುಳಿತಿದ್ದ ಮಹಾಂತೇಶ

13:16 December 10

ಜೆಡಿಎಸ್ ಗೊಂದಲದಿಂದ ಬಿಜೆಪಿಗೆ ಲಾಭ - ಶಾಸಕ ಜ್ಯೋತಿ ಗಣೇಶ್

  • ತುಮಕೂರಿನಲ್ಲಿ ಬಿಜೆಪಿ ಶಾಸಕ ಜ್ಯೋತಿ ಗಣೇಶ್​ರಿಂದ ಮತದಾನ
  • ಕೊನೇ ಕ್ಷಣದಲ್ಲಿ ಜೆಡಿಎಸ್ ಪಕ್ಷದಲ್ಲಿ ತುಂಬಾ ಗೊಂದಲ ಉಂಟಾಗಿದೆ
  • ಅವರ ಗೊಂದಲ ಬಿಜೆಪಿಗೆ ಲಾಭವಾಗಲಿದೆ
  • ಕುಮಾರಸ್ವಾಮಿ ಅವರು ಪ್ರಚಾರಕ್ಕೆ ಬರುತ್ತೇನೆ ಎಂದು ಬಂದಿಲ್ಲ
  • ಅಂದುಕೊಂಡಷ್ಟು ಸ್ಟ್ರಾಂಗ್ ಅವರು ಆಗಿಲ್ಲ
  • ಹಾಗಂತ ಅವರ ಮುಖಂಡರೇ ಹೇಳುತ್ತಾರೆ
  • ಆರಂಭದಲ್ಲಿ ಇದ್ದಂತಹ ಹುರುಪು ಕೊನೇ ಎರಡು ದಿನದಲ್ಲಿ ಜೆಡಿಎಸ್​​​ನಲ್ಲಿ ಇರಲಿಲ್ಲ
  • ಶಾಸಕ ಜ್ಯೋತಿ ಗಣೇಶ್ ಹೇಳಿಕೆ

13:08 December 10

ಕುಷ್ಟಗಿ ತಾಲೂಕಿನ 15 ಗ್ರಾ.ಪಂ.ಗಳಲ್ಲಿ ಶೇ.100 ರಷ್ಟು ಮತದಾನ

  • ಕುಷ್ಟಗಿ ತಾಲೂಕಿನಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆ
  • 36 ಗ್ರಾಮ ಪಂಚಾಯತಿಗಳ ಪೈಕಿ 15ರಲ್ಲಿ ಶೇ.100 ರಷ್ಟು ಮತದಾನ
  • ಕುಷ್ಟಗಿ ಪುರಸಭೆಯ ಮತಗಟ್ಟೆಯಲ್ಲಿ ಶಾಸಕ ಸೇರಿದಂತೆ 17 ಜನ ಹಕ್ಕು ಚಲಾಯಿಸಿದ್ದಾರೆ

13:01 December 10

ನಾನು ಬಿಜೆಪಿ ಅಭ್ಯರ್ಥಿಗೆ ಮತಹಾಕಿದ್ದೇನೆ - ಸಂಸದ ಬಸವರಾಜ್

  • ನಾನು ಬಿಜೆಪಿ ಅಭ್ಯರ್ಥಿಗೆ ಮತಹಾಕಿದ್ದೇನೆ
  • ಆರೋಗ್ಯದಲ್ಲಿನ ಏರುಪೇರಿನಿಂದ ಕ್ಷೇತ್ರದಲ್ಲಿ ಜಾಸ್ತಿ ಓಡಾಡಲು ಆಗಿಲ್ಲ
  • ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ ಎಂಬ ವಿಶ್ವಾಸ ಇದೆ
  • ಪಕ್ಷದ ವಿಚಾರ ಬಂದಾಗ ಪಕ್ಷದ ಚಿಹ್ನೆಗೆ ಮತಹಾಕಬೇಕು
  • ತುಮಕೂರಿನಲ್ಲಿ ಸಂಸದ ಜಿ.ಎಸ್.ಬಸವರಾಜ್ ಹೇಳಿಕೆ

12:47 December 10

ಸಂಸದ ಮುನಿಸ್ವಾಮಿ-ಶಾಸಕ ಶ್ರೀನಿವಾಸಗೌಡರಿಂದ ಮತದಾನ

  • ತಮ್ಮ ಹಕ್ಕು ಚಲಾಯಿಸಿದ ಸಂಸದ ಮುನಿಸ್ವಾಮಿ ಹಾಗೂ ಶಾಸಕ ಶ್ರೀನಿವಾಸಗೌಡ
  • ಕೋಲಾರ ನಗರಸಭೆಯಲ್ಲಿ ವೋಟಿಂಗ್​​
  • ಮತದಾನ ಮಾಡೋದು ಹೇಗೆ ಎಂದು ಸಿಬ್ಬಂದಿಯಿಂದ ಹೇಳಿಸಿಕೊಂಡ ಶ್ರೀನಿವಾಸಗೌಡ

12:41 December 10

ಮತಗಟ್ಟೆಯಲ್ಲಿ ಮೊಬೈಲ್ ಬಳಕೆ: ಚುನಾವಣಾಧಿಕಾರಿಗಳು ಗರಂ

  • ಕೋಲಾರ ನಗರಸಭೆ ಮತಗಟ್ಟೆಯಲ್ಲಿ ಮೊಬೈಲ್ ಬಳಕೆ
  • ನಗರಸಭೆ ಆಯುಕ್ತರು ಹಾಗೂ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡ ಚುನಾವಣಾಧಿಕಾರಿಗಳು
  • ಮತದಾನ ಮಾಡುವ ವೇಳೆ ಮೊಬೈಲ್​ ಬಳಸಿದ ಮತದಾರನ ವಿರುದ್ದ ಕ್ರಮಕ್ಕೆ ಸೂಚಿಸಿದ ಡಿಸಿ ಸೆಲ್ವಮಣಿ

12:34 December 10

17 ಜನ ಕಾಂಗ್ರೆಸ್ ಸದಸ್ಯರ ಜೊತೆ ಆಗಮಿಸಿ ಶಾಸಕಿ ಖನೀಜ್ ಫಾತೀಮಾ ವೋಟ್​

ಶಾಸಕಿ ಖನೀಜ್ ಫಾತೀಮಾ ವೋಟ್​
ಶಾಸಕಿ ಖನೀಜ್ ಫಾತೀಮಾರಿಂದ ವೋಟಿಂಗ್​
  • ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಖನೀಜ್ ಫಾತೀಮಾರಿಂದ ಹಕ್ಕು ಚಲಾವಣೆ
  • 17 ಜನ ಕಾಂಗ್ರೆಸ್ ಪಾಲಿಕೆ ಸದಸ್ಯರ ಜೊತೆ ಆಗಮಿಸಿ ವೋಟ್​ ಮಾಡಿದ ಶಾಸಕಿ

12:29 December 10

ಕೊಳ್ಳೇಗಾಲ ಶಾಸಕ ಎನ್.ಮಹೇಶ್​ರಿಂದ ಮತದಾನ

ಕೊಳ್ಳೇಗಾಲ ಶಾಸಕ ಎನ್.ಮಹೇಶ್​ರಿಂದ ಮತದಾನ
ಕೊಳ್ಳೇಗಾಲ ಶಾಸಕ ಎನ್.ಮಹೇಶ್​ರಿಂದ ಮತದಾನ
  • ಮೈಸೂರು-ಚಾಮರಾಜನಗರ ವಿಧಾನ ಪರಿಷತ್ ಚುನಾವಣೆ
  • ನಗರಸಭಾ ಕಚೇರಿಯಲ್ಲಿ ಕೊಳ್ಳೇಗಾಲ ಶಾಸಕ ಎನ್.ಮಹೇಶ್​ರಿಂದ ಮತದಾನ
  • ಬಿಜೆಪಿ ಅಭ್ಯಥಿ೯ ರಘು ಕೌಟಿಲ್ಯ ಪ್ರಥಮ ಪ್ರಾಶಸ್ತ್ಯದ ಮತಗಳಿಂದ ಜಯಳಿಸುತ್ತಾರೆಂದ ಶಾಸಕ

12:21 December 10

ನನ್ನ ವಿವೇಚನೆಗೆ ತಕ್ಕಂತೆ ಮತ ಹಾಕಿದ್ದೇನೆ: ಸಭಾಪತಿ ಬಸವರಾಜ್ ಹೊರಟ್ಟಿ

ಸಭಾಪತಿ ಬಸವರಾಜ್ ಹೊರಟ್ಟಿ
ಸಭಾಪತಿ ಬಸವರಾಜ್ ಹೊರಟ್ಟಿ ಮತದಾನ
  • ಮತದಾನ ಮಾಡಿದ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ
  • ಹುಬ್ಬಳ್ಳಿ ಮಹಾನಗರ ಪಾಲಿಕೆ ಮತಗಟ್ಟೆಯಲ್ಲಿ ವೋಟಿಂಗ್​
  • ಒಂದಕ್ಕಿಂತ ಹೆಚ್ಚು ಮತ ಹಾಕುವ ಅವಕಾಶ ಕೆಲವೇ ಚುನಾವಣೆಗೆ ಇರುತ್ತೆ
  • ಈ ಚುನಾವಣೆಯಲ್ಲಿ 5 ಜನರಿಗೆ ಪ್ರಾಶಸ್ಥ್ಯದ ಮತ ಹಾಕಬಹುದು
  • ನಾನು ನನ್ನ ವಿವೇಚನೆಗೆ ತಕ್ಕಂತೆ ಮತ ಹಾಕಿದ್ದೇನೆ ಎಂದ ಹೊರಟ್ಟಿ

12:15 December 10

ಪುತ್ತೂರಿನಲ್ಲಿ ಬಿರುಸಿನ ಮತದಾನ: ಹಕ್ಕು ಚಲಾಯಿಸಿದ ಶಾಸಕ ಸಂಜೀವ ಮಠಂದೂರು

ಪುತ್ತೂರಿನಲ್ಲಿ ಬಿರುಸಿನ ಮತದಾನ
ಪುತ್ತೂರಿನಲ್ಲಿ ಬಿರುಸಿನ ಮತದಾನ
  • ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರ ಆಯ್ಕೆಗಾಗಿ ಚುನಾವಣೆ
  • ಪುತ್ತೂರು ತಾಲೂಕಿನಲ್ಲಿ ಬೆಳಗ್ಗಿನಿಂದಲೇ ಬಿರುಸಿನ ಮತದಾನ
  • ನಗರಸಭೆಯಲ್ಲಿ ಹಕ್ಕು ಚಲಾಯಿಸಿದ ಶಾಸಕ ಸಂಜೀವ ಮಠಂದೂರು
  • ಬಿಜೆಪಿ ಬೆಂಬಲಿತ ಸದಸ್ಯರೊಂದಿಗೆ ಆಗಮಿಸಿ ಮತದಾನ
  • 15ಕ್ಕೂ ಅಧಿಕ ಸ್ಥಾನದಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಪಡೆಯತ್ತೆ
  • ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಇತರ ಪಕ್ಷಗಳಿಂದಲೂ ಮತ ಲಭ್ಯವಾಗಲಿದೆ
  • ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದು ನಿರೀಕ್ಷೆಗೂ ಮೀರಿ ಗೆಲುವು ಪಡೆಯಲಿದ್ದಾರೆ ಎಂದ ಶಾಸಕ
  • 22 ಗ್ರಾಪಂಗಳ 343 ಸದಸ್ಯರು, ನಗರಸಭೆಯ 31 ಮಂದಿ ಹಾಗೂ ಶಾಸಕಕರು ಸೇರಿ ಪುತ್ತೂರಿನಲ್ಲಿ ಒಟ್ಟು 375 ಮತದಾರರು
  • 23 ಮತದಾನ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

11:59 December 10

  • ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ, ಸತೀಶ್ ಜಾರಕಿಹೊಳಿ ಮುಖಾಮುಖಿ
  • ಬೆಳಗಾವಿ ಜಿಲ್ಲೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ದ್ವಿಸದಸ್ಯ ಸ್ಥಾನಕ್ಕೆ ಮತದಾನ
  • ಮತದಾನಕ್ಕೆ ಆಗಮಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
  • ಬೆಳಗಾವಿ ಮಹಾನಗರ ಪಾಲಿಕೆ ಕಚೇರಿಯಲ್ಲಿಯ ಮತಗಟ್ಟೆಗೆ ಆಗಮನ
  • ಸತೀಶ್ ಜಾರಕಿಹೊಳಿ ಆಗಮಿಸಿದ ಬಳಿಕ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಆಗಮನ
  • ಉಭಯ ಕುಶಲೋಪರಿ ವಿಚಾರಿಸಿದ ನಾಯಕರು
  • ವೋಟಿಂಗ್ ಮಾಡಿ ಬಂದ್ರಾ ಎಂದು ಸತೀಶ್ ಜಾರಕಿಹೊಳಿ ಕೇಳಿದ ಮಹಾಂತೇಶ ಕವಟಗಿಮಠ
  • ನಮ್ಮ ಎಂಎಲ್‌ಎ ಮೇಡಂ ಬರಬೇಕು ಕಾಯ್ತಿದ್ದೀವಿ ಎಂದ ಸತೀಶ್ ಜಾರಕಿಹೊಳಿ
  • ಸತೀಶ್ ಜಾರಕಿಹೊಳಿ ಭೇಟಿಯಾಗಿ ಮತದಾನಕ್ಕೆ ತೆರಳಿದ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ

11:41 December 10

  • ಮತದಾನದ ನಂತರ ಶಿಗ್ಗಾಂವಿ ನಿವಾಸದಲ್ಲಿ ಸಾರ್ವಜನಿಕರಿಂದ ಮನವಿ ಸ್ವೀಕರಿಸಿ, ಬೆಳಗಾವಿಯತ್ತ ಪ್ರಯಾಣ ಬೆಳೆಸಿದ ಸಿಎಂ
  • ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದಲ್ಲಿರೋ ನಿವಾಸ
  • ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಮತದಾನಕ್ಕೆ ಆಗಮಿಸಿದ್ದ ಸಿಎಂ
  • ಪಟ್ಟಣದ ತಾಲೂಕು ಪಂಚಾಯ್ತಿ ಕಚೇರಿಯಲ್ಲಿ ಮತ ಚಲಾಯಿಸಿ, ತಮ್ಮ ನಿವಾಸಕ್ಕೆ ಆಗಮಿಸಿದ್ದ ಸಿಎಂ

11:29 December 10

  • ವಿಧಾನ ಪರಿಷತ್ ಚುನಾವಣೆ ಹಿನ್ನಲೆ, ಚಿಕ್ಕಮಗಳೂರಿನಲ್ಲಿ ಮತದಾನ ಪ್ರಕ್ರಿಯೆ ಆರಂಭ
  • ಚಿಕ್ಕಮಗಳೂರು ಜಿಲ್ಲೆಯಲ್ಲಿ 230 ಮತಗಟ್ಟೆಗಳಲ್ಲಿ ಮತದಾನ
  • 3 ಪುರಸಭೆ, 4 ಪಟ್ಟಣ ಪಂಚಾಯಿತಿ, 223 ಗ್ರಾಮ ಪಂಚಾಯಿತಿಗಳಲ್ಲಿ ಮತದಾನ
  • 1142 ಪುರುಷರು, 1275 ಮಹಿಳೆಯರು ಸೇರಿದಂತೆ 2417 ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ

11:29 December 10

  • ರಾಯಚೂರು-ಕೊಪ್ಪಳ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್​ಗೆ ಚುನಾವಣೆ
  • ಬೆಳಗ್ಗಿನಿಂದ ನೀರಸ ಮತದಾನ ಪ್ರಕ್ರಿಯೆ
  • ಸುಗಮ ಮತದಾನಕ್ಕೆ ಜಿಲ್ಲಾಡಳಿತ ಸಕಲ ವ್ಯವಸ್ಥೆ ಕೈಗೊಂಡಿದೆ
  • ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 181 ಮತಗಟ್ಟೆಗಳು ಹಾಗೂ ಕೊಪ್ಪಳ ಜಿಲ್ಲೆಯಲ್ಲಿ 157 ಮತಗಟ್ಟೆಗಳು ಸೇರಿದಂತೆ ಒಟ್ಟು 336 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ

11:28 December 10

  • ಮೈಸೂರು: ಬಿರುಸಿನಿಂದ ನಡೆಯತ್ತಿದೆ ಮತದಾನ
  • ಸಂದೇಶ್‌ ನಾಗರಾಜ್, ಶ್ರೀಕಂಠೇಗೌಡರಿಂದ ಹಕ್ಕು ಚಲಾವಣೆ
  • ಮೈಸೂರು ಪಾಲಿಕೆ ಮತಗಟ್ಟೆಗೆ ತೆರಳಿ ಮತದಾನ
  • ನಾನು ಕಾಂಗ್ರೆಸ್, ಬಿಜೆಪಿಯನ್ನೇ‌ ಬೆಂಬಲಿಸಿರುವುದು
  • ಮೈಸೂರಿನಲ್ಲಿ ಎರಡು ಸ್ಥಾನಗಳಿವೆ, ಕಾಂಗ್ರೆಸ್ ಬಿಜೆಪಿಗೆ ಬೆಂಬಲಿಸಿದ್ದೇನೆ
  • ಇದರಲ್ಲಿ ಯಾವುದೇ ಮುಚ್ಚು ಮರೆ ಇಲ್ಲ
  • ಮತದಾನ ನಂತರ ಸಂದೇಶ್ ನಾಗರಾಜ್ ಹೇಳಿಕೆ

11:28 December 10

  • ಕೊಪ್ಪಳ: ಸಚಿವ ಹಾಲಪ್ಪ ಆಚಾರ್​ರಿಂದ ಮತದಾನ
  • ಜಿಲ್ಲೆಯ ಯಲಬುರ್ಗಾ ಪಟ್ಟಣ ಪಂಚಾಯತ್ ನಲ್ಲಿನ ಮತಗಟ್ಟೆಯಲ್ಲಿ ಮತದಾನ
  • ಕೊಪ್ಪಳ- ರಾಯಚೂರು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ
  • ಇಲ್ಲಿ ಮೇಲ್ವರ್ಗ ,ಕೇಳ್ವರ್ಗದವರು ಎಂಬ ಬೇಧವಿಲ್ಲ
  • ಕ್ಷೇತ್ರದಲ್ಲಿ ಇಬ್ಬರು ಜೆಡಿಎಸ್ ಶಾಸಕರಿದ್ದಾರೆ,ಅವರು ಕಾಂಗ್ರೆಸ್ ಗೆ ಬೆಂಬಲ ಘೋಷಿಸಿರಬಹುದು
  • ನಮ್ಮ ಅಭ್ಯರ್ಥಿ ವಿಶ್ವನಾಥ ಬನಹಟ್ಟಿ ಬಿಜೆಪಿಯ ರಾಜ್ಯ ಸಂಘಟನೆಯಲ್ಲಿದ್ದವರು, ಅವರು ಗೆಲ್ಲಲಿದ್ದಾರೆ
  • ಮತದಾನ ಮಾಡಿದ ಬಳಿಕ ಮಾತನಾಡಿದ ಆಚಾರ್​

11:28 December 10

  • ಶಿಕಾರಿಪುರದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ತಮ್ಮ ಪುತ್ರ ಸಂಸದ‌ ಬಿ.ವೈ.ರಾಘವೇಂದ್ರ ರವರ ಜೊತೆ ಬಂದು ಮತದಾನ
  • ಮತದಾನಕ್ಕೂ ಮುನ್ನ ಮನೆಯಲ್ಲಿ ದೇವರಿಗೆ ಪೊಜೆ ಸಲ್ಲಿಸಿದ್ದ ಮಾಜಿ ಸಿಎಂ
  • ತಮ್ಮ ಮನೆಗೆ ಬಂದ ಬಿಜೆಪಿ ಅಭ್ಯರ್ಥಿ ಡಿ.ಎಸ್.ಅರುಣ್ ರವರಿಗೆ ಆರ್ಶಿವಾದ ನೀಡಿ,ನಂತರ ತಮ್ಮ ಆರಾಧ್ಯ ದೈವ ಹುಚ್ಚರಾಯ ಸ್ವಾಮಿಗೆ ವಿಶೇಷ ಪೊಜೆ ಸಲ್ಲಿಸಿದ್ದರು
  • ಸೊರಬ ಶಾಸಕ ಕುಮಾರ ಬಂಗಾರಪ್ಪನವರಿಂದ ಸೊರಬ ಪುರಸಭೆಯಲ್ಲಿ ಮತದಾನ
  • ಸಾಗರದಲ್ಲಿ ಹರತಾಳು ಹಾಲಪ್ಪನವರಿಂದ ಮತದಾನ

11:28 December 10

ಧಾರವಾಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ 10 ಗಂಟೆಯವರೆಗೆ ಆದ ಮತದಾನದ ವಿವರ:

  • ಧಾರವಾಡ ಜಿಲ್ಲೆ -4.44%
  • ಹಾವೇರಿ‌ ಜಿಲ್ಲೆ-6.66%
  • ಗದಗ ಜಿಲ್ಲೆ- 7.98%
  • ಒಟ್ಟು - ಶೇ.6.37 ರಷ್ಟು ಮತದಾನವಾಗಿದೆ

11:01 December 10

  • ಶಿಗ್ಗಾಂವಿ ತಾಲೂಕು ಪಂಚಾಯ್ತಿ ಕಚೇರಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮತದಾನ
  • ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದಲ್ಲಿರೋ ತಾಲೂಕು ಪಂಚಾಯ್ತಿ ಕಚೇರಿ
  • ಧಾರವಾಡ ವಿಧಾನ ಪರಿಷತ್ ನ ದ್ವಿಸದಸ್ಯ ಸ್ಥಾನಕ್ಕೆ ನಡಿತಿರೋ ಚುನಾವಣೆ
  • ನಾವು ಸ್ಪರ್ಧೆ ಮಾಡಿದ ಕಡೆಗಳಲೆಲ್ಲಾ ಉತ್ತಮವಾದ ವಾತಾವರಣವಿದೆ
  • ಬಿಪಿನ್ ರಾವತ್ ಸಾವನ್ನ ಸಂಭ್ರಮಿಸಿದವರ ಮೇಲೆ ಕಠಿಣ ಕ್ರಮಕ್ಕೆ ಅಧಿಕಾರಿಗಳ ಮೇಲೆ ಸೂಚನೆ ನೀಡಿದ್ದೇನೆ
  • ಇಡೀ ದೇಶವೇ ರಾವತ್ ಸಾವಿಗೆ ಕಂಬನಿ‌‌ ಮಿಡಿಯುತ್ತಿದೆ
  • ಮಕ್ಕಳಿಗೆ ಲಸಿಕೆ ಹಾಕೋ ಬಗ್ಗೆ ಕೇಂದ್ರದ ಪರಿಣಿತರ ತಂಡ ನಿರ್ಧಾರ ಮಾಡುತ್ತದೆ
  • ಕೇರಳದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರೋ ವಿಚಾರ ಈಗಾಗಲೆ ಆ ಬಗ್ಗೆ ಸಭೆ ನಡೆಸಿದ್ದೇನೆ
  • ಮತ ಚಲಾವಣೆ ನಂತರ ಸಿಎಂ ಬೊಮ್ಮಾಯಿ ಹೇಳಿಕೆ

11:01 December 10

  • ಬಿರುಸಿನಿಂದ ಸಾಗಿದ ಮತದಾನ ಪ್ರಕ್ರಿಯೆ
  • ಸಭಾಪತಿ ಬಸವರಾಜ ಹೊರಟ್ಟಿ ಮತ ಚಲಾವಣೆ
  • ಹುಬ್ಬಳ್ಳಿಯ ಪಾಲಿಕೆ ಕಚೇರಿಯ ಮತಗಟ್ಟೆ ಸಂಖ್ಯೆ 144 ರಲ್ಲಿ ಮತದಾನ

11:01 December 10

  • ಬೆಳಗಾವಿಯ ಖಾನಾಪುರ ಪಟ್ಟಣ ಪಂಚಾಯಿತಿಯಲ್ಲಿ ಮತ ಚಲಾಯಿಸಿದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್
  • ಹಕ್ಕು ಚಲಾಯಿಸಿ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿದ ಅಂಜಲಿ

10:50 December 10

ಸರತಿ ಸಾಲಲ್ಲಿ ನಿಂತು ಮತಚಲಾಯಿಸಿ ಸರಳತೆ ಮೆರೆದ ಶಾಸಕ

  • ಗಂಗಾವತಿ: ರಾಯಚೂರು-ಕೊಪ್ಪಳ ಜಿಲ್ಲೆಯ ಸ್ಥಳೀಯ ಜನಪ್ರತಿನಿಧಿಗಳ ವಿಧಾನ ಪರಿಷತ್ ಕ್ಷೇತ್ರದ ಚುನಾವಣೆ
  • ಮತದಾರರೊಂದಿಗೆ ಸರತಿ ಸಾಲಲ್ಲಿ ನಿಂತ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ
  • ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜಿನ ಆವರಣದಲ್ಲಿರುವ ಪ್ರೌಢ ಶಾಲಾ ವಿಭಾಗದಲ್ಲಿ ತೆರೆಯಲಾಗಿದ್ದ ಮತಗಟ್ಟೆಯಲ್ಲಿ ಮತದಾನ
  • ಮತದಾರರೊಂದಿಗೆ ಸರತಿ ಸಾಲಲ್ಲಿ ನಿಂತು ಮತಚಲಾಯಿಸಿ ಸರಳತೆ ಮೆರೆದ ಶಾಸಕ

10:50 December 10

ಆಂಬ್ಯುಲೆನ್ಸ್ ಮೂಲಕ ಬಂದು ಮತ ಚಲಾವಣೆ

ಆಂಬ್ಯುಲೆನ್ಸ್ ಮೂಲಕ ಬಂದು ಮತ ಚಲಾವಣೆ
  • ಆಂಬ್ಯುಲೆನ್ಸ್ ಮೂಲಕ ಬಂದು ಮತ ಚಲಾವಣೆ
  • ಆನೇಕಲ್ ತಾಲೂಕಿನಲ್ಲಿ ವಿಧಾನ ಪರಿಷತ್ ಮತದಾನ ಕೇಂದ್ರದಲ್ಲಿ ಘಟನೆ
  • ಬೊಮ್ಮಸಂದ್ರ ಪುರಸಭೆಯ ವಾರ್ಡ್ ನಂ1ರ ಪುರಸಭೆ ಸದಸ್ಯೆ ನಜ್ಮಾ ಪಾರೂಕ್​ರಿಂದ ಮತದಾನ
  • ಕಳೆದ ರಾತ್ರಿ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆ ಸೇರಿದ್ದ ಸದಸ್ಯೆ

10:38 December 10

ಕೇಸರಿ ಶಾಲು, ಪೇಟ ತೊಟ್ಟು ಮತದಾನ

ಕೇಸರಿ ಶಾಲು, ಪೇಟ ತೊಟ್ಟು ಮತದಾನ
ಕೇಸರಿ ಶಾಲು, ಪೇಟ ತೊಟ್ಟು ಮತದಾನ
  • ಆನೇಕಲ್ ತಾಲೂಕಿನ ಮರಸೂರು ಗ್ರಾಮ ಪಂಚಾಯ್ತಿಯಲ್ಲಿ ಮತದಾನ
  • ಕೇಸರಿ ಶಾಲು ಹಾಗೂ ಪೇಟ ತೊಟ್ಟು ಮತದಾನ ಮಾಡಿದ ಬಿಜೆಪಿ ಸದಸ್ಯರು
  • ಮರಸೂರು ಗ್ರಾಮ ಪಂಚಾಯತಿ ಕಚೇರಿಯ ಮತ ಕೇಂದ್ರದಲ್ಲಿ ಮತದಾನಕ್ಕೆ ಅವಕಾಶ
  • ಬಿಜೆಪಿ ಅಭ್ಯರ್ಥಿ ಗೋಪಿನಾಥ ರೆಡ್ಡಿ ಪರ ಜೈಕಾರ ಹಾಕಿದ ಸದಸ್ಯರು

10:33 December 10

  • ದಾವಣಗೆರೆ: ಜಿಲ್ಲೆಯಲ್ಲಿ ಮತದಾನ ಪ್ರಕ್ರಿಯೆ ಆರಂಭ
  • ಸಾಕಷ್ಟು ಗ್ರಾಮ ಪಂ‌.ಸದಸ್ಯರು, ಅಧ್ಯಕ್ಷ, ಉಪಾಧ್ಯಕ್ಷರು ಮತದಾನ ಮಾಡುತ್ತಿದ್ದಾರೆ
  • ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಮತದಾನಕ್ಕೆ ಸಕಲ ಸಿದ್ಧತೆ ನಡೆಸಲಾಗಿದೆ
  • ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಸಂಸದ ಜಿಎಂ ಸಿದ್ದೇಶ್ವರ್, ಮತದಾನ ಮಾಡಲಿದ್ದಾರೆ‌

10:32 December 10

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು
  • ಮಂಗಳೂರು: ದ.ಕ.ಜಿಲ್ಲೆ ಮತ್ತು ಉಡುಪಿ‌ಜಿಲ್ಲೆಯನ್ನು ಒಳಗೊಂಡ ಸ್ಥಳೀಯಾಡಳಿತದ ರಾಜ್ಯ ವಿಧಾನ ಪರಿಷತ್ ನ ದ್ವಿಸದಸ್ಯತ್ವದ ಚುನಾವಣೆಗೆ ಮತದಾನ
  • ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿಯಿಂದ ಮತ ಚಲಾವಣೆ
  • ಅತೀ ಹೆಚ್ಚು ಮತಗಳ ಅಂತರದಿಂದ ಬಿಜೆಪಿಯ ಅಭ್ಯರ್ಥಿಯಾಗಿ ಕೋಟ ಶ್ರೀನಿವಾಸ ಪೂಜಾರಿಯವರು ಆಯ್ಕೆಯಾಗಲಿದ್ದಾರೆ
  • ಇಡೀ ಜಿಲ್ಲೆಯಲ್ಲಿ ವಾತಾವರಣ ಬಿಜೆಪಿ ಪರವಾಗಿದೆ
  • ಅತೀ ಹೆಚ್ಚು ಸದಸ್ಯರು ನಮ್ಮ ಪಕ್ಷದಲ್ಲಿದ್ದಾರೆ. ಹಾಗಾಗಿ ಮೊದಲ ಪ್ರಾಶಸ್ತ್ಯದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಗೆಲುವು ಸಾಧಿಸಲಿದ್ದಾರೆ ಎಂದ ಕಟೀಲು,

ಒಟ್ಟು 6040 ಮತದಾರರು

  • ದ.ಕ.ಜಿಲ್ಲೆಯಲ್ಲಿ 231 ಹಾಗೂ ಉಡುಪಿ ಜಿಲ್ಲೆಯಲ್ಲಿ158 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ
  • ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಒಟ್ಟು 6040 ಮತದಾರರಿದ್ದಾರೆ
  • 2916 ಪುರುಷ ಮತದಾರರು ಹಾಗೂ 3124 ಮಹಿಳಾ ಮತದಾರರಿದ್ದಾರೆ
  • ದ.ಕ.ಜಿಲ್ಲೆಯ 223 ಗ್ರಾಪಂಗಳಲ್ಲಿ 3290 ಚುನಾಯಿತ ಸದಸ್ಯರಿದ್ದಾರೆ‌
  • ಮಂಗಳೂರು ಮನಪಾದ 68 ಸದಸ್ಯರು, 2 ನಗರಸಭೆಯ 64 ಸದಸ್ಯರು, 2 ಪುರಸಭೆಯ62 ಸದಸ್ಯರು, 3 ಪಟ್ಟಣ ಪಂಚಾಯತ್ ನ 51 ಸದಸ್ಯರಿದ್ದಾರೆ
  • ಉಡುಪಿ ಜಿಲ್ಲಯ 154 ಗ್ರಾಪಂಗಳಲ್ಲಿ 2387 ಚುನಾಯಿತ ಸದಸ್ಯರಿದ್ದಾರೆ‌
  • 1 ನಗರ ಸಭೆಯ 41ಸದಸ್ಯರು, 2 ಪುರಸಭೆಯ 58 ಸದಸ್ಯರು ಹಾಗೂ ಒಂದು ಪಪಂನ 19 ಸದಸ್ಯರು ಮತದಾನ ಚಲಾಯಿಸಲಿದ್ದಾರೆ

10:24 December 10

ಬಿಜೆಪಿ ಸದಸ್ಯರು ಪಕ್ಷದ ಚಿನ್ನೆಯ ಶಲ್ಯ ಹೊದ್ದು ಬಂದಿದ್ದಕ್ಕೆ ಗರಂ ಆಗಿ ಮಾತಿನ ಚಕಮಕಿ

10:20 December 10

ಶಾಸಕ ಪುಟ್ಟರಂಗಶೆಟ್ಟಿ
ಶಾಸಕ ಪುಟ್ಟರಂಗಶೆಟ್ಟಿ
  • ಬಿಜೆಪಿ ಚಿಹ್ನೆ ಪ್ರದರ್ಶನಕ್ಕೆ ಶಾಸಕ ಪುಟ್ಟರಂಗಶೆಟ್ಟಿ ಗರಂ
  • ಚಾಮರಾಜನಗರ: ಮೈಸೂರು- ಚಾಮರಾಜನಗರ ವಿಧಾನ ಪರಿಷತ್ ಕ್ಷೇತ್ರಕ್ಕೆ ಬಿರುಸಿನ ಮತದಾನ
  • ಮತದಾನ ಮಾಡಲು ಚಾಮರಾಜನಗರ ನಗರಸಭೆ ಮತಗಟ್ಟೆಗೆ ಆಗಮಿಸಿದ ಕೈ ಶಾಸಕ ಪುಟ್ಟರಂಗಶೆಟ್ಟಿ
  • ಬಿಜೆಪಿ ಸದಸ್ಯರು ಪಕ್ಷದ ಚಿನ್ನೆಯ ಶಲ್ಯ ಹೊದ್ದು ಬಂದಿದ್ದಕ್ಕೆ ಗರಂ ಆಗಿ ಮಾತಿನ ಚಕಮಕಿ
  • ನೀವು ಇಲ್ಲಿ ಮತದಾನ ಮಾಡಬೇಕು, ಪ್ರಚಾರವನ್ನಲ್ಲ, ಬಿಜೆಪಿ ಚಿಹ್ನೆಯನ್ನೇಕೆ ಪ್ರದರ್ಶನ ಮಾಡುತ್ತಿದ್ದೀರಿ ಎಂದು ಗರಂ
  • ತಾವೇನು ಪ್ರಚಾರ ಮಾಡುತ್ತಿಲ್ಲ, ಮತದಾನ ಮಾಡಿ ತೆರಳುತ್ತೇವೆ ಎಂದ ಬಿಜೆಪಿಗರು

ಮಹಿಳಾ ಮತದಾರರೇ ಅಧಿಕ:

  • ಜಿಲ್ಲೆಯಲ್ಲಿ ಒಟ್ಟು 139 ಗ್ರಾಮ ಪಂಚಾಯ್ತಿಗಳಿದ್ದು, 5 ನಗರ ಸ್ಥಳೀಯ ಸಂಸ್ಥೆಗಳು ಸೇರಿದಂತೆ ಒಟ್ಟು 2269 ಮತದಾರರಿದ್ದಾರೆ.
  • 1082 ಪುರುಷ ಹಾಗೂ 1187 ಮಹಿಳಾ ಮತದಾರರಿದ್ದಾರೆ.
  • ಅನಕ್ಷರಸ್ಥರು, ಅಂಧರ ಪರವಾಗಿ ಮತ ಚಲಾಯಿಸುವ 44 ಮಂದಿ ಪ್ರಾಕ್ಸಿ ವೋಟರ್ಸ್ ಜಿಲ್ಲೆಯಲ್ಲಿದ್ದು ಹನೂರು ತಾಲೂಕಲ್ಲೇ 21 ಮಂದಿ ಈ ಬದಲಿ ಮತದಾರರಿದ್ದಾರೆ

10:17 December 10

ಮೈಸೂರು- ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದ ಚುನಾವಣೆ

ಮತ ಚಲಾವಣೆ ಮಾಡಿಸ ಪ್ರತಾಪ್​ ಸಿಂಹ
ಮತ ಚಲಾವಣೆ ಮಾಡಿಸ ಪ್ರತಾಪ್​ ಸಿಂಹ
  • ವಿಧಾನ ಪರಿಷತ್ ಚುನಾವಣೆಯಲ್ಲಿ ಮೈಸೂರು- ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದ ಚುನಾವಣೆಗೆ ಮತದಾನ ಆರಂಭ
  • ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ 6771 ಮತದಾರರಿದ್ದಾರೆ.ಒಟ್ಟು 393 ಮತಗಟ್ಟೆಗಳನ್ನು ತೆರೆಯಲಾಗಿದೆ
  • ಬಿಜೆಪಿ ಅಭ್ಯರ್ಥಿ ಆರ್.ರಘು, ಕಾಂಗ್ರೆಸ್ ನಿಂದ ಡಾ.ಡಿ.ತಿಮ್ಮಯ್ಯ, ಜೆಡಿಎಸ್ ನಿಂದ ಸಿ.ಎನ್.ಮಂಜೇಗೌಡ, ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಹಾಗೂ ಮೂವರು ಪಕ್ಷೇತರರು ಸೇರಿದಂತೆ ಒಟ್ಟು ಏಳು ಮಂದಿ ಕಣದಲ್ಲಿದ್ದಾರೆ
  • ಎರಡು ಜಿಲ್ಲೆಯಲ್ಲಿ ಮತಗಟ್ಟೆ ಅಧಿಕಾರಿಗಳು ಮತದಾನ ಅಧಿಕಾರಿಗಳು, ಮೈಕ್ರೋ ಅಬ್ಸರ್ವರ್ ಸೇರಿದಂತೆ 1809 ಸಿಬ್ಬಂದಿಯನ್ನು ನೇಮಿಸಲಾಗಿದೆ
  • ಮತದಾನದ ನಂತರ ಮತಪೆಟ್ಟೆಗೆಗಳನ್ನು ನಗರದ ಮಹಾರಾಣಿ ಕಾಲೇಜಿನಲ್ಲಿ ಭದ್ರಪಡಿಸಲಾಗುತ್ತದೆ

10:16 December 10

ಮತಗಟ್ಟೆಗೆ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್​ ಭೇಟಿ

  • ಹಾವೇರಿ ತಾಲೂಕು ಪಂಚಾಯ್ತಿಯಲ್ಲಿರೋ ಮತಗಟ್ಟೆಗೆ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್​ ಭೇಟಿ
  • ಧಾರವಾಡ ವಿಧಾನ ಪರಿಷತ್​​ನ ದ್ವಿಸದಸ್ಯ ಸ್ಥಾನಕ್ಕೆ ಚುನಾವಣೆ
  • ಮತಗಟ್ಟೆಗೆ ಭೇಟಿ ನೀಡಿ, ವ್ಯವಸ್ಥೆ ಪರಿಶೀಲಿಸಿದ ಅಭ್ಯರ್ಥಿ
  • ಸಲೀಂ ಅಹ್ಮದ್​ ಭೇಟಿ ವೇಳೆ ಹಾಜರಿದ್ದ ಕಾಂಗ್ರೆಸ್ ನಗರಸಭೆ ಸದಸ್ಯರು
  • ಪರಿಷತ್ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ತಮಗೆ ಆಶೀರ್ವಾದ ಮಾಡಲಿದ್ದಾರೆ‌.
  • ರಾಜ್ಯದಲ್ಲಿ ಹದಿನಾಲ್ಕಕ್ಕೂ ಅಧಿಕ ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದ ಸಲೀಂ
  • ಧಾರವಾಡ ದ್ವಿಸದಸ್ಯ ಸ್ಥಾನಕ್ಕೆ ನಡೆಯುತ್ತಿದೆ ಚುನಾವಣೆ
  • ಹಾವೇರಿ ಜಿಲ್ಲೆಯ 230 ಮತಗಟ್ಟೆಗಳಲ್ಲಿ ಮತದಾನ
  • ಜಿಲ್ಲೆಯಲ್ಲಿ 1649 ಪುರುಷ‌, 1720 ಮಹಿಳಾ ಮತದಾರರು ಸೇರಿದಂತೆ ಹಕ್ಕು 3369 ಮತದಾರರಿಂದ ಹಕ್ಕು ಚಲಾವಣೆ

10:07 December 10

  • ಸಚಿವ ಈಶ್ವರಪ್ಪ ಬಿಜೆಪಿಯ ಪಾಲಿಕೆ ಸದಸ್ಯರುಗಳು ಸೇರಿದಂತೆ ಇಬ್ಬರು ಎಂಎಲ್​ಗಗಳ‌‌ ಜೊತೆ ಪಾಲಿಕೆಯಲ್ಲಿಯೇ ಮತದಾನ ಮಾಡಲಿದ್ದಾರೆ
  • ಶಿಕಾರಿಪುರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಸಂಸದ ರಾಘವೇಂದ್ರ ರವರು ತಮ್ಮ ಪುರಸಭಾ ಸದಸ್ಯರೊಂದಿಗೆ ಮತದಾನ ಮಾಡಲಿದ್ದಾರೆ
  • ಸೊರಬದ ಶಾಸಕ ಕುಮಾರ ಬಂಗಾರಪ್ಪ, ತಮ್ಮ ಹುಟ್ಟೂರು ಕುಬಟೂರಿನಲ್ಲಿ ಮತದಾನ ಮಾಡಲಿದ್ದಾರೆ
  • ಸಾಗರ ಶಾಸಕ ಹಾರತಾಳು ಹಾಲಪ್ಪ ತಮ್ಮ ಹುಟ್ಟೂರು ಹಾರತಾಳುವಿನಲ್ಲಿ ಮತದಾನ ಮಾಡಲಿದ್ದಾರೆ
  • ಗೃಹ ಸಚಿವ ಅರಗ ಜ್ಞಾನೇಂದ್ರ ಆರಗ ಗ್ರಾಮದಲ್ಲಿ ಮತದಾನ ಮಾಡಲಿದ್ದಾರೆ
  • ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಶಿವಮೊಗ್ಗದಲ್ಲಿ ಮತದಾನ ಮಾಡಲಿದ್ದಾರೆ
  • ಭದ್ರಾವತಿ ಕಾಂಗ್ರೆಸ್ ಶಾಸಕ ಸಂಗಮೇಶ್ ರವರು ಭದ್ರಾವತಿ ನಗರಸಭೆಯಲ್ಲಿ ಮತದಾನ ಮಾಡಲಿದ್ದಾರೆ

10:07 December 10

ಗೆಲುವು ನನ್ನದೇ ಅಂತರವಷ್ಟೇ ತಿಳಿಯಬೇಕಿದೆ...

  • ಶಿವಮೊಗ್ಗ: ಗೆಲುವು ನನ್ನದೇ ಎಂದು ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್ ಅಭ್ಯರ್ಥಿ ಆರ್.ಪ್ರಸನ್ನ ಕುಮಾರ್
  • ಮಹಾನಗರ ಪಾಲಿಕೆಯಲ್ಲಿ ಬೂತ್ ​ನಂಬರ್ 218 ರಲ್ಲಿ ಮತ ಚಲಾಯಿಸಿದ ಪ್ರಸನ್ನ ಕುಮಾರ್
  • ನಾನು ಚುನಾವಣೆ ಪ್ರಕ್ರಿಯೆ ಪ್ರಾರಂಭವಾದಾಗಿನಿಂದಲೂ ಸಹ ಸಿದ್ಧತೆಯಲ್ಲಿದ್ದೇನೆ
  • ಎಲ್ಲಾ ಕಡೆ ಪ್ರಚಾರ ನಡೆಸಿ, ಸಭೆಗಳ ಮೂಲಕ ಮತಯಾಚನೆ ಮಾಡಿದ್ದೇನೆ

10:03 December 10

  • ಕಲಬುರಗಿ ತಾಲೂಕು ಪಂಚಾಯತ್ ಕಚೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ್ ಹಾಗೂ ಸಂಸದ ಉಮೇಶ್ ಜಾಧವ್​ರಿಂದ ಮತದಾನ
  • ಕಳೆದ ಬಾರಿ 800 ಮತಗಳಿಂದ ಗೆದ್ದಿದ್ದು, ಈ ಬಾರಿ 1600ಕ್ಕಿಂತ ಅಧಿಕ ಮತಗಳಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಜಾಧವ್​

10:03 December 10

ಅಮರೇಗೌಡ ಪಾಟೀಲ ಬಯ್ಯಾಪೂರರಿಂದ ಮತ ಚಲಾವಣೆ

  • ಕುಷ್ಟಗಿ: ಪುರಸಭೆ ಮತಗಟ್ಟೆಯಲ್ಲಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರರಿಂದ ಮತ ಚಲಾವಣೆ
  • ಮತಗಟ್ಟೆ ಸಂಖೆ 264 ರಲ್ಲಿ ತಮ್ಮ ಹಕ್ಕು ಚಲಾಯಿಸಿದ ಶಾಸಕ
  • ಮತಗಟ್ಟೆ ಪ್ರವೇಶಿಸುವ ಮತದಾರರಿಗೆ ಸ್ಕ್ರೀನಿಂಗ್​ ಪರೀಕ್ಷೆ
  • ಕುಷ್ಟಗಿ ತಾಲೂಕಿನ 36 ಮತಗಟ್ಟೆಯಲ್ಲಿ ಮಂದಗತಿಯಲ್ಲಿ ಮತದಾನ ಪ್ರಕ್ರಿಯೆ ಆರಂಭ

09:47 December 10

ಕಣ್ಣೀರು ಹಾಕಿದ ಮಂಜು

  • ಮಂಡ್ಯದಲ್ಲಿ ಮತದಾನ ಆರಂಭದ ವೇಳೆ ಅಭ್ಯರ್ಥಿ ಬೂಕಹಳ್ಳಿ ಮಂಜು ಕಣ್ಣೀರು
  • ಮತದಾರ ನನ್ನ ಕೈ ಬಿಡಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತ ಅಭ್ಯರ್ಥಿ
  • ಬಿಜೆಪಿ ಮೈತ್ರಿಯಾಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ
  • ನಿನ್ನೆ ಸಂಜೆ 4 ಗಂಟೆವರೆಗೂ ಎಲ್ಲವೂ ಚೆನ್ನಾಗಿತ್ತು, 4 ಗಂಟೆಯ ಬಳಿಕ ಎಲ್ಲವೂ ಬದಲಾವಣೆಯಾಗಿದೆ
  • ಒಂದು ವರ್ಷದ ಹೋರಾಟ ನೀರಿನಲ್ಲಿ ಹೋಮ ಮಾಡಿದಂತೆ ಮಾಡ್ತಾ ಇದ್ದಾರೆ ಎಂದು ಕಣ್ಣೀರು ಹಾಕಿದ ಮಂಜು

09:45 December 10

ಪಾಲಿಕೆ ಸದಸ್ಯರಿಂದ ಮತದಾನ

  • ಹುಬ್ಬಳ್ಳಿಯ ಮಹಾನಗರ ಪಾಲಿಕೆಯಲ್ಲಿ ಚುನಾವಣೆ ಪ್ರಕ್ರಿಯೆ
  • ನೂತನವಾಗಿ ಆಯ್ಕೆಯಾದ ಮಹಾನಗರ ಪಾಲಿಕೆ ಸದಸ್ಯರಿಂದ ಮತದಾನ
  • ಕೇಂದ್ರ ಸಚಿವ ‌ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರಿದಂತೆ ಬಿಜೆಪಿ ಪಾಲಿಕೆ ಸದಸ್ಯರಿಂದ ಮತದಾನ
  • 11 ಗಂಟೆ ಸುಮಾರಿಗೆ ಒಗ್ಗಟ್ಟಾಗಿ ಆಗಮಿಸಿ ಮಹಾನಗರ ಪಾಲಿಕೆಯಲ್ಲಿನ ಮತಗಟ್ಟೆಯಲ್ಲಿ ಮತಚಲಾಯಿಸಲಿರುವ ನಾಯಕರು
  • ಮತದಾನದ ವೇಳೆ, ಮಾಸ್ಕ್, ಸಾಮಾಜಿಕ ಅಂತರ ಪಾಲನೆ
  • ಮತಗಟ್ಟೆ ಸಂಖ್ಯೆ 144 ರಲ್ಲಿ ಮತದಾನ ಮಾಡುತ್ತಿರುವ ಪಾಲಿಕೆ ಸದಸ್ಯರು

09:32 December 10

  • ವಿಶೇಷ ಪೂಜೆ ಸಲ್ಲಿಸಿದ ಸಚಿವ ಕೆ.ಎಸ್ ಈಶ್ವರಪ್ಪ
  • ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನಗರದ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆ
  • ಮಹಾನಗರ ಪಾಲಿಕೆ ಸದಸ್ಯರೊಂದಿಗೆ ಆಗಮಿಸಿದ ಸಚಿವ ಕೆ.ಎಸ್ ಈಶ್ವರಪ್ಪ
  • ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ,ಉಪ ಮೇಯರ್ ಗನ್ನಿ ಶಂಕರ್ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು, ಪಕ್ಷದ ಮುಖಂಡರು ಭಾಗಿ

09:28 December 10

ದೇವರ ಮೊರೆ ಹೋದ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ

  • ಬೆಳಗಾವಿಯಲ್ಲಿ ಎರಡು ಸ್ಥಾನಗಳಿಗೆ ಪರಿಷತ್ ಚುನಾವಣೆಗೆ ಇಂದು ಮತದಾನ
  • ಬೆಳ್ಳಂಬೆಳಿಗ್ಗೆ ದೇವರ ಮೊರೆ ಹೋದ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ
  • ಚಿಕ್ಕೋಡಿಯ ಹುದ್ದಾರ ಗಲ್ಲಿಯ ರವಿವಾರಪೇಟೆಯಲ್ಲಿರುವ ದುರದಡೇಶ್ವರ ಮಠಕ್ಕೆ ಕವಟಗಿಮಠ ಭೇಟಿ
  • ಬಳಿಕ ಹಾಲಟ್ಟಿ ಲಕ್ಷ್ಮೀ ದೇವಿಯ ಆಶೀರ್ವಾದ ಪಡೆದ ಕವಟಗಿಮಠ

09:27 December 10

ಅವಳಿ ಜಿಲ್ಲೆಗಳಲ್ಲಿ ಮತದಾನ ಆರಂಭ

ಅವಳಿ ಜಿಲ್ಲೆಗಳಲ್ಲಿ ಮತದಾನ ಆರಂಭ
ಅವಳಿ ಜಿಲ್ಲೆಗಳಲ್ಲಿ ಮತದಾನ ಆರಂಭ
  • ವಿಜಯಪುರ- ಬಾಗಲಕೋಟೆ ಪರಿಷತ್ ಚುನಾವಣೆ
  • ಅವಳಿ ಜಿಲ್ಲೆಗಳಲ್ಲಿ ಮತದಾನ ಆರಂಭ
  • ಹಕ್ಕು ಚಲಾಯಿಸಲು ಆಗಮಿಸುತ್ತಿರುವ ಸ್ಥಳೀಯ ಜನಪ್ರತಿನಿಧಿಗಳು
  • ಅವಳಿ ಜಿಲ್ಲೆಯ 3536 ಪುರುಷ, 3852 ಮಹಿಳಾ ಮತದಾರರು ಸೇರಿ ಒಟ್ಟು 7390 ಮತದಾರರು ಮತ ಚಲಾಯಿಸಲಿದ್ದಾರೆ
  • ವಿಜಯಪುರ ಜಿಲ್ಲೆಯಲ್ಲಿ 208 ಬಾಗಲಕೋಟೆ ಜಿಲ್ಲೆಯ 203 ಮತಗಟ್ಟೆಗಳಲ್ಲಿ‌ ನಡೆಯಲಿರೋ ಮತದಾನ
  • ಬಿಗಿ ಭದ್ರತೆಗಾಗಿ ವಿಜಯಪುರ ಜಿಲ್ಲೆಯಲ್ಲಿ 811 ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ 307 ಪೊಲೀಸ್ ಅಧಿಕಾರಿ, ಸಿಬ್ಬಂದಿ ನೇಮಕ
  • ಅವಳಿ ಜಿಲ್ಲೆಯಲ್ಲಿ 80 ಅತೀ ಸೂಕ್ಷ್ಮ, 156 ಸೂಕ್ಷ್ಮ, 175 ಸಾಧಾರಣ ಮತಗಟ್ಟೆಗಳಲ್ಲಿ ಆರಂಭವಾಗಿರೋ ಮತದಾನ

09:25 December 10

ಬೂತ್ ಏಜೆಂಟ್ ಆಗ್ತೀನಿ ಎಂದಿದ್ದ ಸತೀಶ್ ಜಾರಕಿಹೊಳಿ

  • ಬೆಳಗಾವಿಯಲ್ಲಿ ಜಿದ್ದಾಜಿದ್ದಿನ ವಿಧಾನ ಪರಿಷತ್ ಚುನಾವಣೆಗೆ ಮತದಾನ
  • ಅಣ್ಣ ರಮೇಶ್ ಜಾರಕಿಹೊಳಿ ಕ್ಷೇತ್ರದಲ್ಲಿ ತಮ್ಮ ಸತೀಶ್ ಜಾರಕಿಹೊಳಿ ಮೊಕ್ಕಾಂ
  • ಗುಜನಾಳ ಗ್ರಾಮ ಪಂಚಾಯತಿ ಬಳಿ ಮೊಕ್ಕಾಂ ಹೂಡಿದ ಸತೀಶ ಜಾರಕಿಹೊಳಿ
  • ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಗುಜನಾಳ ಗ್ರಾಮ
  • ಸತೀಶ್ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ
  • ಗುಜನಾಳ ಮತಗಟ್ಟೆಯಲ್ಲಿ ಬೂತ್ ಏಜೆಂಟ್ ಆಗ್ತೀನಿ ಎಂದಿದ್ದ ಸತೀಶ್ ಜಾರಕಿಹೊಳಿ
  • ಶಾಸಕರಿಗೆ ಬೂತ್ ಎಜೆಂಟ್ ಆಗಲು ಅವಕಾಶ ಇರದ ಹಿನ್ನೆಲೆ ಬೂತ್ ಹೊರಗೆ ಮೊಕ್ಕಾಂ ಹೂಡಿದ ಸತೀಶ್ ಜಾರಕಿಹೊಳಿ
  • ಗೋಕಾಕ್ ತಾಲೂಕಿನಲ್ಲಿ ಚುನಾವಣೆ ಅಕ್ರಮದ‌ ಶಂಕೆ ಹಿನ್ನೆಲೆ ಬೂತ್ ಏಜೆಂಟ್ ಆಗೋದಾಗಿ ಮೊದಲೇ ಘೋಷಣೆ ಮಾಡಿದ್ದ ಸತೀಶ ಜಾರಕಿಹೊಳಿ

09:24 December 10

ಹಕ್ಕು ಚಲಾಯಿಸಿದ ಸಂಸದೆ, ನಗರ ಶಾಸಕರು

  • ಬೆಳಗಾವಿ ಪರಿಷತ್ ಚುನಾವಣೆ ಮತದಾನ ಆರಂಭ
  • ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನಾಯಕರಿಂದ ಮತದಾನ
  • ಹಕ್ಕು ಚಲಾಯಿಸಿದ ಸಂಸದೆ, ನಗರ ಶಾಸಕರು
  • ಸಂಸದೆ ಮಂಗಲ ಅಂಗಡಿ, ಶಾಸಕರಾದ ಅಭಯ ಪಾಟೀಲ, ಅನಿಲ್ ಬೆನಕೆಯಿಂದ ಮತದಾನ
  • ಪಾಲಿಕೆ ಬಿಜೆಪಿ ಸದಸ್ಯರ ಜೊತೆಗೆ ಆಗಮಿಸಿ ಮತದಾನ

09:11 December 10

ವಿಧಾನ ಪರಿಷತ್‍ ಚುನಾವಣೆ: ಮತದಾನ ಆರಂಭ

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ನ 25 ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಇಂದು ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದ್ದು, ಮೂರು ಪಕ್ಷಗಳ ಘಟಾನುಘಟಿ ನಾಯಕರು ಚುನಾವಣಾ ಕ್ಷೇತ್ರಗಳಿಂದ ಹೊರಬಂದಿದ್ದು, ತಮ್ಮ ಅಭ್ಯರ್ಥಿಗಳ ಗೆಲುವಿಗೆ ಹಾತೊರೆಯುತ್ತಿದ್ದಾರೆ.

25 ಕ್ಷೇತ್ರಗಳಲ್ಲಿ ಒಟ್ಟು 90 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 89 ಮಂದಿ ಪುರುಷ ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, ಚಿಕ್ಕಮಗಳೂರು ಕ್ಷೇತ್ರದಿಂದ ಒಬ್ಬ ಮಹಿಳಾ ಅಭ್ಯರ್ಥಿ ಮಾತ್ರ ಕಣದಲ್ಲಿರುವುದು ಈ ಬಾರಿಯ ಚುನಾವಣೆಯ ವಿಶೇಷ. ಕಾಂಗ್ರೆಸ್ ಅಭ್ಯರ್ಥಿ ಎ.ವಿ.ಗಾಯತ್ರಿ ಶಾಂತೇಗೌಡ ಚಿಕ್ಕಮಗಳೂರಿನಿಂದ ಸ್ಪರ್ಧಿಸಿದ್ದಾರೆ.

ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ, ಜೆಡಿಎಸ್‍ 6 ಕ್ಷೇತ್ರಗಳಲ್ಲಿ ಮಾತ್ರ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇನ್ನು ಆಮ್ ಆದ್ಮಿ ಪಕ್ಷ 3 ಕ್ಷೇತ್ರಗಳಲ್ಲಿ, ಕನ್ನಡ ಚಳವಳಿ ವಾಟಾಳ್ ಪಕ್ಷ 1, ಕರ್ನಾಟಕ ರಾಷ್ಟ್ರ ಸಮಿತಿ 1, ಜನಹಿತ ಪಕ್ಷ 1, ಜೆಡಿಯು 1, ಜನತಾ ಪಾರ್ಟಿ 2, ಎಸ್​​ಡಿಪಿಐ 1, ಪಕ್ಷೇತರರು 33 ಅಭ್ಯರ್ಥಿಗಳು ಸೇರಿ ಒಟ್ಟು 90 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

25 ಕ್ಷೇತ್ರಗಳ ಚುನಾವಣೆಗೆ 6,073 ಮತಗಟ್ಟೆಗಳನ್ನು ತೆರೆಯಲಾಗುತ್ತದೆ. ಪುರುಷರು 47,368 ಹಾಗೂ 51,474 ಮಹಿಳೆಯರು ಮತ್ತು ಇತರ 3 ಮಂದಿ ಸೇರಿದಂತೆ ಒಟ್ಟು 98,846 ಸದಸ್ಯರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ. ಚುನಾವಣೆಗೆ 7073 ಪಿಆರ್‌ಒಗಳು, 9344 ಪಿಒಗಳು ಹಾಗೂ 6648 ಮೈಕ್ರೋ ಅಬ್ಸರ್ವರ್​ಗಳನ್ನು ನಿಯೋಜಿಸಲಾಗಿದೆ.

Last Updated : Dec 10, 2021, 8:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.