ಬೆಂಗಳೂರು: 2 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿರುವುದಾಗಿ ಮಹಿಳೆ ವಿರುದ್ಧ ಆರೋಪಿಸಿ ದೂರು ನೀಡಿದ್ದ ಸಂಬಂಧ ಸೇಡಂ ಬಿಜೆಪಿ ಶಾಸಕ ರಾಜ್ ಕುಮಾರ್ ಪಾಟೀಲ್ ತೇಲ್ಕೂರ್ ಪ್ರಕರಣದ ಬಗ್ಗೆ ಮಾಹಿತಿ ಪಡೆಯಲು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ್ದಾರೆ.
ಪೊಲೀಸ್ ಕಮೀಷನರ್ ಕಮಲ್ ಪಂತ್ ಭೇಟಿಗೆ ಮಾಡಲು ಸಾಧ್ಯವಾಗದ ಹಿನ್ನಲೆಯಲ್ಲಿ ವಾಪಸ್ ತೆರಳಿದ್ರು. ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ರಾಜ್ ಕುಮಾರ್ ಪಾಟೀಲ್, ಪೊಲೀಸ್ ಕಮೀಷನರ್ ಭೇಟಿಗೆ ಅವಕಾಶ ಸಿಗಲಿಲ್ಲ. ಅವರು ಮೀಟಿಂಗ್ನಲ್ಲಿದ್ದಾರೆ. ನಾನು ಕೂಡ ಅಪಾಯಿಂಟ್ಮೆಂಟ್ ಕೇಳಿರಲಿಲ್ಲ. ಭೇಟಿ ಆಗದಿದ್ದರೂ ಪರ್ವಾಗಿಲ್ಲ. ನಾನು ನೀಡಿದ ದೂರಿನಲ್ಲಿ ಎಲ್ಲ ಅಂಶಗಳ ಬಗ್ಗೆ ಹೇಳಿದ್ದೇನೆ ಎಂದರು.
ಕಾನೂನು ಏನು ಆದೇಶ ಮಾಡಲಿದೆಯೋ ತಲೆ ಬಾಗಿ ಸ್ವೀಕಾರ ಮಾಡುತ್ತೇನೆ. ನನ್ನ ವಿರುದ್ಧ ಆರೋಪ ಮಾಡಿರುವ ಮಹಿಳೆಗೆ ಉತ್ತರ ಕೊಡಲ್ಲ. ಬೇಕಾದರೆ ಎಫ್ಐಆರ್ ದಾಖಲಿಸಿ ಪೊಲೀಸರು ಅರೆಸ್ಟ್ ಮಾಡಲಿ. ನಾನು ಎಲ್ಲಿಯೂ ಓಡಿ ಹೋಗಿಲ್ಲ. ಯಾರಿಂದಲೂ ಕೂಡ ಒತ್ತಡ ಹಾಕಿಸಿಲ್ಲ. ತನಿಖೆಗೆ ಸಹಕಾರ ಕೊಡ್ತೀನಿ. ಸರ್ಕಾರವಾಗಲಿ, ಮುಖ್ಯಮಂತ್ರಿಗಳಾಗಲೀ ತನಿಖೆಯ ಮೇಲೆ ಪ್ರಭಾವ ಬೀರಲ್ಲ. ನನ್ನ ಕೇಸ್ ಏನಾಗಿದೆಯೋ ತಿಳಿದುಕೊಳ್ಳಲು ಬಂದಿದ್ದೇನೆ ಅಷ್ಟೇ ಎಂದರು.