ETV Bharat / state

ಎನ್‌ಎಸ್‌ಯುಐ ಕರೆ ನೀಡಿದ್ದ ಕಾಲೇಜು ಬಂದ್​ಗೆ ಮಿಶ್ರ ಪ್ರತಿಕ್ರಿಯೆ - student protest in bengaluru

ಬೆಂಗಳೂರು ಸೇರಿದಂತೆ ಹಲವು ಜಿಲ್ಲಾ ಕೇಂದ್ರಗಳ ಕಾಲೇಜುಗಳ ಬಳಿ ಜಮಾಯಿಸಿದ ಎನ್​ಎಸ್​ಯುಐ ವಿದ್ಯಾರ್ಥಿಗಳ ಸಂಘಟನೆಯ ಸದಸ್ಯರು ಪ್ರವೇಶ ದ್ವಾರಗಳಿಗೆ ಬೀಗ ಜಡಿದು ಪ್ರತಿಭಟಿಸಿದರು.

Protest on various educational issues of students
ರಾಜ್ಯದ ಕಾಲೇಜು ವಿದ್ಯಾರ್ಥಿಗಳು ವಿವಿಧ ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದಂತೆ ಎದುರಿಸುತ್ತಿರುವ ಸಮಸ್ಯೆಗಳ ಕಡೆ ಸರ್ಕಾರ ಹಾಗೂ ಜನತೆಯ ಗಮನ ಸೆಳೆಯಲು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್‌ಎಸ್‌ಯುಐ) ಇಂದು ಕರೆ ನೀಡಿದ್ದ ಕಾಲೇಜು ಬಂದ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ
author img

By

Published : Dec 17, 2022, 11:01 PM IST

ವಿದ್ಯಾರ್ಥಿಗಳ ವಿವಿಧ ಶೈಕ್ಷಣಿಕ ಸಮಸ್ಯೆಗಳ ಕುರಿತು ಪ್ರತಿಭಟನೆ

ಬೆಂಗಳೂರು: ರಾಜ್ಯದ ಕಾಲೇಜು ವಿದ್ಯಾರ್ಥಿಗಳು ವಿವಿಧ ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದಂತೆ ಎದುರಿಸುತ್ತಿರುವ ಸಮಸ್ಯೆಗಳ ಕಡೆ ಸರ್ಕಾರ ಹಾಗೂ ಜನತೆಯ ಗಮನ ಸೆಳೆಯಲು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್‌ಎಸ್‌ಯುಐ) ಇಂದು ಕರೆ ನೀಡಿದ್ದ ಕಾಲೇಜು ಬಂದ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಶನಿವಾರ ಮುಂಜಾನೆಯೇ ಬೆಂಗಳೂರು ಸೇರಿದಂತೆ ಹಲವು ಜಿಲ್ಲಾ ಕೇಂದ್ರಗಳ ಕಾಲೇಜುಗಳ ಬಳಿ ಜಮಾಯಿಸಿದ ಎನ್​ಎಸ್​ಯುಐ
ವಿದ್ಯಾರ್ಥಿಗಳ ಸಂಘಟನೆಯ ಸದಸ್ಯರು ಪ್ರವೇಶ ದ್ವಾರಗಳಿಗೆ ಬೀಗ ಜಡಿದು ಪ್ರತಿಭಟಿಸಿದರು. ಆನಂತರ, ಎಲ್ಲ ಕಾಲೇಜಿನಲ್ಲಿ ಮಾಹಿತಿಯ ಕರಪತ್ರ ಹಂಚಿದರು.

ಕೆಲ ಕಾಲೇಜುಗಳಲ್ಲಿ ಇಂಟರ್ನಲ್‌ ಪರೀಕ್ಷೆ ನಡೆಯುತ್ತಿದೆ. ಇನ್ನು ಕೆಲವು ಕಾಲೇಜಿನಲ್ಲಿ ವಿವಿಧ ಕಾರ್ಯಕ್ರಮ, ಕಾರ್ಯಾಗಾರ ಇತ್ಯಾದಿ ಹಮ್ಮಿಕೊಳ್ಳಲಾಗಿತ್ತು. ಹೀಗಾಗಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಯಾವುದೇ ಸಮಸ್ಯೆ ಆಗಬಾರದು ಎಂಬ ಉದ್ದೇಶದಿಂದ ಕಾಲೇಜು ಬಂದ್‌ ಮಾಡಿಲ್ಲ ಎಂದು ಹೋರಾಟಗಾರರು ತಿಳಿಸಿದರು.

ಹಲವು ಕಾಲೇಜುಗಳು ಬಂದ್ ನಲ್ಲಿ ಭಾಗಿ: ಬೆಂಗಳೂರಿನ ಮಹಾರಾಣಿ ಕಾಲೇಜು, ಬಸವನಗುಡಿ ನ್ಯಾಷನಲ್ ಕಾಲೇಜು, ಬೆಂಗಳೂರು ವಿವಿ ಕ್ಯಾಂಪಸ್, ಸೆಂಟ್ರಲ್ ಕಾಲೇಜು ಸೇರಿದಂತೆ ರಾಜ್ಯದ ಹಲವು ಸರ್ಕಾರಿ ಅನುದಾನಿತ ಹಾಗೂ ಸಂಯೋಜಿತ ಕಾಲೇಜೀನ ವಿದ್ಯಾರ್ಥಿಗಳು ಬಂದ್​ನಲ್ಲಿ ಭಾಗಿಯಾಗಿದ್ದರು.

ಶಿಕ್ಷಣದ ವ್ಯಾಪಾರೀಕರಣಕ್ಕೆ ಮುಂದಾದ ಸರ್ಕಾರಗಳು: ಎನ್ಎಸ್​ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಮಾತನಾಡಿ, ಶಿಕ್ಷಣದ ಖಾಸಗೀಕರಣ ಹಾಗೂ ವ್ಯಾಪಾರೀಕರಣಕ್ಕೆ ಮುಂದಾಗಿರುವ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು, ಸಕಾಲದಲ್ಲಿ ಫಲಿತಾಂಶಗಳ ಘೋಷಣೆಯೂ ಸೇರಿದಂತೆ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಕಡೆಗೆ ಗಮನವನ್ನೇ ಹರಿಸುತ್ತಿಲ್ಲ ಎಂದು ಆರೋಪಿಸಿದರು.

ಆರು ತಿಂಗಳಾದರೂ ಪ್ರಕಟಗೊಳ್ಳದ ಫಲಿತಾಂಶ: ಪರೀಕ್ಷೆಗಳು ಮುಗಿದು ಆರು ತಿಂಗಳು ಕಳೆದರೂ ಇನ್ನೂ ಫಲಿತಾಂಶ ಪ್ರಕಟಗೊಳ್ಳದೇ ವಿದ್ಯಾರ್ಥಿಗಳು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಕೆಲವು ಕಡೆ ಉತ್ತರ ಪತ್ರಿಕೆಗಳ ಮೌಲ್ಯಮಾಪನವೇ ನಡೆದಿಲ್ಲ. ಹಿಂದೆಲ್ಲಾ ಪರೀಕ್ಷೆಗಳ ಫಲಿತಾಂಶಗಳು ನಿಗದಿತ ದಿನಕ್ಕಿಂತ ಮೊದಲೇ ಪ್ರಕಟಗೊಳ್ಳುತಿದ್ದವು. ಕೆಲವೊಮ್ಮೆ ಸ್ವಲ್ಪ ವಿಳಂಬವಾದರೂ ಪ್ರಕಟಗೊಳ್ಳುತಿದ್ದವು. ಆದರೆ ಈ ಬಾರಿ ಫಲಿತಾಂಶ ಬರುವ ಲಕ್ಷಣವೇ ಕಾಣಿಸುವುದಿಲ್ಲ ಎಂದು ಕಿಡಿಕಾರಿದರು.

ವಿದ್ಯಾರ್ಥಿ ವೇತನವಿಲ್ಲ: ಮತ್ತೊಂದು ಕಡೆ ವರ್ಷಕ್ಕೂ ಅಧಿಕ ಸಮಯದಿಂದ ಯಾವುದೇ ವಿದ್ಯಾರ್ಥಿ ವೇತನವನ್ನು ನೀಡುತಿಲ್ಲ. ಇದರಿಂದ ಅದನ್ನೇ ನಂಬಿ ಕಾಲೇಜು ಶಿಕ್ಷಣಕ್ಕೆ ಬಂದಿರುವ ವಿದ್ಯಾರ್ಥಿಗಳು ಕಾಲೇಜು ಶುಲ್ಕ ಕಟ್ಟಲೂ ಪರದಾಡುವಂತಾಗಿದೆ. ಸರ್ಕಾರಿ ಶಾಲೆಗಳಲ್ಲೂ ಶುಲ್ಕವನ್ನು ಹೆಚ್ಚಿಸಲಾಗಿದೆ. ಕೊರೊನಾ ನಂತರದ ದಿನಗಳಲ್ಲಿ ವಿದ್ಯಾರ್ಥಿ ಸಮೂಹಕ್ಕೆ ಸಾಕಷ್ಟು ತೊಂದರೆ ಎದುರಾಗಿದೆ. ಇವನ್ನು ಪರಿಹರಿಸಲು ಒತ್ತಾಯಿಸಿದ್ದರೂ ಸರ್ಕಾರಗಳು ಮೀನ ಮೇಷ ಎಣಿಸುತ್ತಿವೆ ಎಂದು ದೂರಿದರು.

ಇದನ್ನೂ ಓದಿ:ಬೆಂಗಳೂರು: ಬಾವಿಗೆ ಗ್ರಿಲ್ ಅಳವಡಿಸುವಾಗ ಆಯುತಪ್ಪಿ ಬಿದ್ದು ವ್ಯಕ್ತಿ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.